ಹೋಂಡಾ ಶೈನ್ ಬೇಕ್ ಖರೀದಿ ಮೇಲೆ ಶೇ.5ರವರೆಗೂ ಕ್ಯಾಶ್‌ಬ್ಯಾಕ್ ಆಫರ್

By Suvarna NewsFirst Published May 17, 2021, 5:30 PM IST
Highlights

ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೋಂಡಾ ಕಂಪನಿಯ ಹೋಂಡಾ ಶೈನ್‌ ಮೋಟಾರ್ ಸೈಕಲ್‌ಗೆ ಭಾರಿ ಬೇಡಿಕೆ ಇದೆ. 125 ಸಿಸಿ ಸೆಗ್ಮೆಂಟ್‌ನಲ್ಲಿ ಈ ದ್ವಿಚಕ್ರವಾಹನ ಅದ್ಭುತ ಪ್ರದರ್ಶನ ತೋರುತ್ತಿದೆ. ಹೋಂಡಾ ಕಂಪನಿಯ ಈ ಮೋಟಾರ್ ಸೈಕಲ್ ಖರೀದಿ ಮೇಲೆ ಶೇ.5ರಷ್ಟು ಕ್ಯಾಶ್ ಬ್ಯಾಕ್ ಆಫರ್ ಘೋಷಿಸಿದೆ.

ಹೋಂಡಾ ಶೈನ್ ಮೋಟಾರ್‌ಸೈಕಲ್ ಹೋಂಡಾ 2ವ್ಹೀಲರ್ ಕಂಪನಿಯ ಅತ್ಯಂತ ಜನಪ್ರಿಯ ಬೈಕ್. ಭಾರತೀಯ ಮಾರುಕಟ್ಟೆಯಲ್ಲಿ ಈ ಹೋಂಡಾ ಶೈನ್‌ಗೆ ತನ್ನದೇ ಆಗ್ರಾ ಗ್ರಾಹಕ ವಲಯ ಸೃಷ್ಟಿಯಾಗಿದೆ. ಹಾಗಾಗಿ, ಬೇಡಿಕೆಯೂ ಕುಂದಿಲ್ಲ.  ಕಂಪನಿ ಈಗ ಈ ಹೋಂಡಾ ಶೈನ್ ಮೋಟಾರ್ ಸೈಕಲ್ ಖರೀದಿ ಮೇಲೆ ಕ್ಯಾಶ್ ಬ್ಯಾಕ್ ಆಫರ್ ಘೋಷಿಸಿದೆ.

ಹೋಂಡಾ 2ವ್ಹೀಲರ್ ಕಂಪನಿಯು ಈ ಹಿಂದೆಯೂ ತನ್ನ ಇತರ ಸ್ಕೂಟರ್ ಮತ್ತು ಮೋಟಾರ್ ಸೈಕಲ್‌ಗಳ ಖರೀದಿ ಮೇಲೆ ಆಫರ್ ಘೋಷಿಸಿತ್ತು. ಇದೀಗ ಆ ಸಾಲಿಗೆ ಹೋಂಡಾ ಶೈನ್ ಸೇರಿದೆ.

ಈ ಟ್ರಾಕ್ಟರ್‌ಗೆ ಕ್ಲಚ್ಚೂ ಇಲ್ಲ, ಗಿಯರ್ ಇಲ್ಲ: ದೇಶದ ಮೊದಲ ಸಂಪೂರ್ಣ ಆಟೋಮ್ಯಾಟಿಕ್ ಹೈಬ್ರಿಡ್ ಟ್ರಾಕ್ಟರ್!

ಈ ಮೊದಲು ಕಂಪನಿ ಆಕ್ಟಿವಾ 6ಜಿ, ಗ್ರೇಜಿಯಾ 125 ಮತ್ತು ಡಿಯೋ ಬಿಎಸ್6 ಸ್ಕೂಟರ್ ಮೇಲೆ ಆಫರ್ಸ್ ಅನೌನ್ಸ್ ಮಾಡಿತ್ತು. ಹೋಂಡಾ ಶೈನ್ 125 ಮೋಟಾರ್ ಸೈಕಲ್‌ ಮೇಲೆ ಶೇ.5ರಷ್ಟು ಕ್ಯಾಶ್ ಬ್ಯಾಕ್ ನೀಡುತ್ತಿದೆ.

ಹೋಂಡಾ ಶೈನ್ ಖರೀದಿಸಲು ಇಚ್ಚಿಸುವವರಿಗೆ ಇದು ಸಕಾಲ. 125 ಸೆಗ್ಮೆಂಟ್‌ನಲ್ಲಿ ಭಾರಿ ಪ್ರಸಿದ್ಧಿಯಾಗಿರುವ ಹೋಂಡಾ ಶೈನ್ ಖರೀದಿ ಮೇಲೆ ಕಂಪನಿ ಶೇ.5ರಷ್ಟು ಆಫರ್ ಘೋಷಿಸಿದೆ. ಅಂದರೆ, ಗ್ರಾಹಕರಿಗ ಹೆಚ್ಚು ಕಡಿಮೆ 3,500 ರೂಪಾಯಿವರೆಗೂ ಉಳಿತಾಯವಾಗುತ್ತದೆ. ಆದರೆ, ಈ ಆಫರ್ ಎಲ್ಲ ಗ್ರಾಹಕರಿಗೂ ಸಿಗುವುದಿಲ್ಲ ಎಂಬುದನ್ನು ಗಮನಿಸಬೇಕು.

ಈ ಮೊದಲ ಈ ಆಫರ್ ಇಎಂಐ ಮೂಲಕ ಖರೀದಿಸಿದವರಿಗೆ ಮಾತ್ರವೇ ಸಿಗುತ್ತಿತ್ತು. ಎಸ್‌ಬಿಐ ಕ್ರೆಡಿಟ್ ಕಾರ್ಡ್‌ದಾರರು ಮಾತ್ರ ಕ್ಯಾಶ್‌ಬ್ಯಾಕ್ ಪಡೆಯಬಹುದು ಮತ್ತು ಈ ಕೊಡುಗೆಗೆ ಅರ್ಹತೆ ಪಡೆಯಲು ಕನಿಷ್ಠ ವಹಿವಾಟು 40,000ರೂ.ವರೆಗೂ ಇರಬೇಕು. ಈ ಆಫರ್ ಮೇ 1ರಿಂದ ಜೂನ್ 30, 2021 ರವರೆಗೆ ಮಾತ್ರವೇ ಇರಲಿದೆ.

125 ಸಿಸಿ ಮೋಟಾರ್ ಸೈಕಲ್ ಸೆಗ್ಮೆಂಟ್‌ನಲ್ಲಿ ಹೋಂಡಾ ಕಂಪನಿಯ ಶೈನ್ ಬೈಕ್ ಹೆಚ್ಚು ಮಾರಾಟವನ್ನು ಕಾಣುತ್ತಿದೆ.  2006ರಲ್ಲಿ ಮೊದಲ ಬಾರಿಗೆ ಪ್ರಾರಂಭವಾದಾಗಿನಿಂದ ಶೈನ್ 90 ಲಕ್ಷ ಮಾರಾಟದ ಮೈಲಿಗಲ್ಲನ್ನು ಮುಟ್ಟಿದೆ ಎಂದು 2020ರ ಆರಂಭದಲ್ಲಿ ಹೋಂಡಾ ಕಂಪನಿ ಘೋಷಿಸಿತ್ತು.

ಏಪ್ರಿಲಿಯಾ ಎಸ್ಎಕ್ಸ್ಆರ್ 125 ಸ್ಕೂಟರ್ ಬಿಡುಗಡೆ, ಬುಕ್ಕಿಂಗ್ ಆರಂಭ

ಹೋಂಡಾದ ಪ್ರಕಾರ, ಶೈನ್ ಮೋಟಾರ್ ಸೈಕಲ್ ಹಲವಾರು ದಶಕಗಳಿಂದ ಮಾರಾಟದಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗುತ್ತಿದೆ. ಮೊದಲ ಬಿಡುಗಡೆಯಾದ ಎರಡು ವರ್ಷಗಳಲ್ಲಿ, ಇದು ಹೆಚ್ಚು ಮಾರಾಟವಾದ 125 ಸಿಸಿ ಮೋಟಾರ್ ಸೈಕಲ್ ಎಂದು ಗುರುತಿಸಿಕೊಂಡಿತ್ತು. ಹೋಂಡಾದ ಹೆಗ್ಗಳಿಕೆ ಎಂದರೆ ಬಿಡುಗಡೆಯಾದ ಮೊದಲ 54 ತಿಂಗಳಲ್ಲೇ 10 ಲಕ್ಷ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು.

ಬಿಎಸ್ 6 ನಿಯಮಗಳ ಅನುಷ್ಠಾನದ ಹಿನ್ನೆಲೆಯಲ್ಲಿ ಕಂಪನಿ ಹೋಂಡಾ ಸೈನ್ ಬೈಕ್ ಅನ್ನು ಕೂಡ ಬಿಎಸ್ 6 ನಿಯಮಗಳಡಿಯಲ್ಲಿ ರೂಪಿಸಿ ಬಿಡುಗಡೆ ಮಾಡಿದೆ. ಸದ್ಯ ಈ ಶೈನ್ ಬಿಎಸ್6 ಗ್ರಾಹಕರಿಗೆ ಎರಡು ವೆರಿಯೆಂಟ್‌ಗಳಲ್ಲಿ ಮಾರಾಟಕ್ಕೆ ಸಿಗುತ್ತಿದೆ.  ಡ್ರಮ್ ಮತ್ತು ಡಿಸ್ಕ್ ಬ್ರೇಕ್ ವೆರಿಯೆಂಟ್‌ಗಳಿವೆ. ಈ ಪೈಕಿ ಬೇಸ್ ಡ್ರಮ್ ಟ್ರಿಮ್ ವೆರಿಯೆಂಟ್ ಹೋಂಡಾ ಶೈನ್ ಬೆಲೆ 71,550 ರೂ.(ಎಕ್ಸ್ ಶೋರೂಮ್). ಅದೇ ರೀತಿ ಹೆಚ್ಚು ವಿಶೇಷತೆಯುಳ್ಳ ಡಿಸ್ಕ್ ಬ್ರೆಕ್ ವೆರಿಯೆಂಟ್ ಬೆಲೆ 76346 ರೂಪಾಯಿಯಾಗಿದೆ.

ಹೋಂಡಾ ಶೈನ್ ಬಿಎಸ್ 6 ಮೋಟಾರ್ ಸೈಕಲ್‌ನಲ್ಲಿ ಸಿಂಗಲ್ ಸಿಲಿಂಡರ್ 124 ಸಿಸಿ ಎಂಜಿನ್ ಇದೆ. ಈ ಎಂಜಿನ್ 7500 ಆರ್‌ಪಿಎಂನಲ್ಲಿ ಗರಿಷ್ಠ 10.59 ಬಿಎಚ್‌ಪಿ ಪವರ್ ಉತ್ಪಾದಿಸಿದರೆ, ಗರಿಷ್ಠ 6000 ಆರ್‌ಪಿಎಂನಲ್ಲಿ 11 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 125 ಸಿಸಿ ಸೆಗ್ಮೆಂಟ್‌ನಲ್ಲಿ ಹೋಂಡಾ ಶೈನ್ ಪವರ್ ಫುಲ್ ಮೋಟಾರ್ ಸೈಕಲ್ ಎನಿಸಿಕೊಂಡಿದೆ.

ಶೀಘ್ರವೇ ಹೊಸ 2021 ಮಹಿಂದ್ರಾ ಬೊಲೆರೋ ಬಿಡುಗಡೆ ಸಾಧ್ಯತೆ

click me!