OLA ಎಲೆಕ್ಟ್ರಿಕ್ S1 ಸ್ಕೂಟರ್ ಮೇಲೆ 30 ಸಾವಿರ ಡಿಸ್ಕೌಂಟ್ ಜೊತೆಗೆ 25,000 ಹೆಚ್ಚುವರಿ ಆಫರ್!

By Chethan Kumar  |  First Published Oct 11, 2024, 3:18 PM IST

ಓಲಾ ಎಲೆಕ್ಟ್ರಿಕ್ BOSS 72-hour Rush ಆಫರ್ ಘೋಷಿಸಿದೆ. 25,000 ರೂ ಡಿಸ್ಕೌಂಟ್, 5,000 ರೂ ಎಕ್ಸ್‌ಚೇಂಜ್ ಬೋನಸ್ ಜೊತೆಗೆ 25,000 ರೂ ವರೆಗೆ ಹೆಚ್ಚುವರಿ ಸವಲತ್ತು ಘೋಷಿಸಿದೆ. ಇದರಿಂದ Ola S1 ಸ್ಕೂಟರ್‌ನ್ನು ಈ ಆಫರ್ ಮೂಲಕ ಕೇವಲ 49,999 ರೂ ಬೆಲೆಯಲ್ಲಿ ಲಭ್ಯವಿದೆ.


ಬೆಂಗಳೂರು(ಅ.11)  ಭಾರತದ ಅತೀ ದೊಡ್ಡ ಪ್ಯೂರ್ ಪ್ಲೇ ಎಲೆಕ್ಟ್ರಿಕ್ ವಾಹನ ಕಂಪನಿ ಓಲಾ ಎಲೆಕ್ಟ್ರಿಕ್ ಈ ಹಬ್ಬದ ಆವೃತ್ತಿಯಲ್ಲಿ ಗ್ರಾಹಕರಿಗೆ ಬಂಪರ್ ಆಫರ್ ಘೋಷಿಸಿದೆ. ಬಾಸ್ 72 ಗಂಟೆಗಳ ರಶ್(BOSS 72-hour Rush) ವಿಶೇಷ ಆಫರ್ ಘೋಷಿಸಿರುವ ಓಲಾ ಎಲೆಕ್ಟ್ರಿಕ್ ಅತೀ ಕಡಿಮೆ ಬೆಲೆಗೆ ಸ್ಕೂಟರ್ ನೀಡುತ್ತಿದೆ. ಅಕ್ಟೋಬರ್ 10 ರಿಂದ 12ರ ವರೆಗೆ ಗ್ರಾಹಕರು ಕೇವಲ 49,999 ರೂಪಾಯಿ ಬೆಲೆಯಲ್ಲಿ Ola S1 ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಸಾಧ್ಯವಿದೆ. ವಿಶೇಷ ಅಂದರೆ ಎಸ್1 ಸ್ಕೂಟರ್‌ಗೆ 25,000 ರೂಪಾಯಿ ವರೆಗೆ ಹೆಚ್ಚುವರಿ ಪ್ರಯೋಜನ ಪಡೆಯಲು ಸಾಧ್ಯವಿದೆ.  

S1 X 2kWh ಎಲೆಕ್ಟ್ರಿಕ್ ಸ್ಕೂಟರ್ ಕೇವಲ 49,999 ರೂಪಾಯಿಗೆ(ಪ್ರತಿದಿನ ಸೀಮಿತ ಸ್ಟಾಕ್) ಲಭ್ಯವಿದೆ. ಪ್ರಖ್ಯಾತ S1 Proಗೆ 25,000 ರೂಪಾಯಿ ವರೆಗೆ ರಿಯಾಯಿತಿ ಮತ್ತು ಫ್ಲಾಟ್ 5,000 ರೂಪಾಯಿ ಎಕ್ಸ್‌ಚೇಂಜ್  ಬೋನಸ್ ಲಭ್ಯವಿದೆ. 

Tap to resize

Latest Videos

undefined

ಮೊಬೈಲ್ ಬೆಲೆಯಲ್ಲಿ 250 ಕಿ.ಮಿ ಮೈಲೇಜ್ ರೇಂಜ್ ಓಲಾ ಸ್ಕೂಟರ್ ಲಭ್ಯ!

BOSS 72-ಗಂಟೆಗಳ ರಶ್'ಆಫರ್ ಆಡಿಯಲ್ಲಿ ಓಲಾ ಕಂಪನಿಯು ಈ  ಪ್ರಯೋಜನಗಳನ್ನು ನೀಡುತ್ತಿದೆ:
 BOSS ಬೆಲೆಗಳು: Ola S1 X 2kWh ಕೇವಲ ₹49,999 ರ ಆರಂಭಿಕ ಬೆಲೆಯಲ್ಲಿ (ಪ್ರತಿದಿನ ಸೀಮಿತ ಸ್ಟಾಕ್)
 BOSS ರಿಯಾಯಿತಿಗಳು: S1 ಪೋರ್ಟ್‌ಫೋಲಿಯೊದಲ್ಲಿ ₹25,000 ವರೆಗೆ; ಮತ್ತು S1 Pro ನ ಮೇಲೆ ಹೆಚ್ಚುವರಿ ಫ್ಲಾಟ್ ₹5,000 ವಿನಿಮಯ ಬೋನಸ್ 

25,000 ರೂ ವರೆಗಿನ ಹೆಚ್ಚುವರಿ BOSS ಪ್ರಯೋಜನಗಳು:
 BOSS ವಾರಂಟಿ: ₹7,000 ಮೌಲ್ಯದ ಉಚಿತ 8 ವರ್ಷ/80,000 ಕಿಮೀ ಬ್ಯಾಟರಿ ವಾರಂಟಿ
 BOSS ಫೈನಾನ್ಸ್ ಆಫರ್‌ಗಳು: ಆಯ್ದ ಕ್ರೆಡಿಟ್ ಕಾರ್ಡ್ EMI ಗಳ ಮೇಲೆ ₹5,000 ವರೆಗಿನ ಫೈನಾನ್ಸ್ ಆಫರ್ಗಳು
 BOSS ಪ್ರಯೋಜನಗಳು: ₹6,000 ಮೌಲ್ಯದ ಉಚಿತ MoveOS+ ಅಪ್‌ಗ್ರೇಡ್; ₹7,000 ಮೌಲ್ಯದ ಉಚಿತ ಚಾರ್ಜಿಂಗ್ ಕ್ರೆಡಿಟ್‌ಗಳು

ಓಲಾ ಅಧಿಕೃತ ವೆಬ್‌ಸೈಟ್ ಮೂಲಕ ಸುಲಭವಾಗಿ ಓಲಾ ಸ್ಕೂಟರ್ ಬುಕ್ ಮಾಡಿಕೊಳ್ಳಬಹುದು ವಿಭಿನ್ನ ಶ್ರೇಣಿಯ ಅಗತ್ಯತೆಗಳನ್ನು ಹೊಂದಿದ ಗ್ರಾಹಕರಿಗಾಗಿ  Ola  ಎಲೆಕ್ಟ್ರಿಕ್ ಆಕರ್ಷಕ ಬೆಲೆಯಲ್ಲಿ ಆರು ಕೊಡುಗೆಗಳೊಂದಿಗೆ ವಿಸ್ತಾರವಾದ S1 ಪೋರ್ಟ್‌ಫೋಲಿಯೊವನ್ನು ನೀಡುತ್ತದೆ. ಪ್ರೀಮಿಯಂ ಕೊಡುಗೆಗಳಾದ S1 Pro ಮತ್ತು S1 Air  ಗಳ ಬೆಲೆಗಳು ಕ್ರಮವಾಗಿ ₹1,34,999 ಮತ್ತು ₹1,07,499 ಆಗಿದ್ದರೆ, ಸಾಮೂಹಿಕ ಮಾರುಕಟ್ಟೆ ಕೊಡುಗೆಗಳಲ್ಲಿ S1 X ಪೋರ್ಟ್‌ಫೋಲಿಯೊ (2 kWh, 3 kWh, ಮತ್ತು 4 kWh) ನ ಬೆಲೆಗಳು  ಕ್ರಮವಾಗಿ ₹74,999, ₹87,999 , ಮತ್ತು ₹101,999 ದಷ್ಟಿದೆ.

Ola  ಎಲೆಕ್ಟ್ರಿಕ್ ಇತ್ತೀಚೆಗೆ #HyperService ಅಭಿಯಾನವನ್ನು ಘೋಷಿಸಿತು. ಈ ಅಭಿಯಾನದ ಅಡಿಯಲ್ಲಿ, ಕಂಪನಿಯು ಈ ವರ್ಷದ ಡಿಸೆಂಬರ್ ವೇಳೆಗೆ ತನ್ನ ಸರ್ವಿಸ್ ನೆಟ್‍ವರ್ಕ್ ಅನ್ನು 1,000 ಕೇಂದ್ರಗಳಿಗೆ ದ್ವಿಗುಣಗೊಳಿಸಲು ಯೋಜಿಸಿದೆ. ಹೆಚ್ಚುವರಿಯಾಗಿ, ಇದು ಭಾರತದಾದ್ಯಂತ ತನ್ನ ಮಾರಾಟ ಮತ್ತು ಸೇವಾ ಜಾಲವನ್ನು ವಿಸ್ತರಿಸಲು ನೆಟ್‌ವರ್ಕ್ ಸರ್ವಿಸ್ ಪ್ರೋಗ್ರಾಂ ಘೋಷಿಸಿದೆ. ಕಾರ್ಯಕ್ರಮದ ಭಾಗವಾಗಿ, OLA  ಎಲೆಕ್ಟ್ರಿಕ್ 2025 ರ ಅಂತ್ಯದ ವೇಳೆಗೆ ನೆಟ್‌ವರ್ಕ್ ಅನ್ನು 10,000 ಕ್ಕೆ ಹೆಚ್ಚಿಸಲು ಯೋಜಿಸಿದೆ. ಅಲ್ಲದೆ, OLA  ಎಲೆಕ್ಟ್ರಿಕ್  ಭಾರತದಲ್ಲಿ ಪ್ರತಿಯೊಬ್ಬ ಮೆಕ್ಯಾನಿಕ್  ಇವಿ-ಸಿದ್ಧಗೊಳಿಸಲು 1 ಲಕ್ಷ ಥರ್ಡ್-ಪಾರ್ಟಿ ಮೆಕ್ಯಾನಿಕ್‌ಗಳಿಗೆ ತರಬೇತಿ ನೀಡಲಿದೆ.

ಆಗಸ್ಟ್ 2024 ರಲ್ಲಿನ ತನ್ನ ವಾರ್ಷಿಕ 'ಸಂಕಲ್ಪ್' ಈವೆಂಟ್‌ನಲ್ಲಿ, ಕಂಪನಿಯು Roadster X (2.5 kWh, 3.5 kWh, 4.5 kWh), Roadster (3.5 kWh, 4.5 kWh, 6 kWh) ಮತ್ತು Roadster Pro (8 kWh, 16 kWh) ಗಳನ್ನು ಒಳಗೊಂಡಿರುವ ತನ್ನ ರೋಡ್‌ Roadster ಮೋಟಾರ್‌ಸೈಕಲ್ ಸರಣಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಮೋಟರ್‌ಸೈಕಲ್‌ಗಳು ಹಲವು ವಿಭಾಗ-ಪ್ರಥಮ ತಂತ್ರಜ್ಞಾನ ಮತ್ತು ಕಾರ್ಯಕ್ಷಮತೆಯ ವೈಶಿಷ್ಟ್ಯಗಳನ್ನು ನೀಡುತ್ತವೆ, ಅವುಗಳ ಬೆಲೆಗಳು ಕ್ರಮವಾಗಿ ₹ 74,999, ₹1,04,999 ಮತ್ತು ₹1,99,999 ರಿಂದ ಪ್ರಾರಂಭವಾಗುತ್ತವೆ. 
 

click me!