ಎಥರ್ ಎಲೆಕ್ಟ್ರಿಕ್ ಸ್ಕೂಟರ್‌ಗೆ 25,000 ರೂ ಡಿಸ್ಕೌಂಟ್, ಹಬ್ಬದ ಆಫರ್‍‌ನಲ್ಲಿ ಕಡಿಮೆ ಬೆಲೆಗೆ ಇವಿ!

Published : Oct 10, 2024, 03:36 PM IST
ಎಥರ್ ಎಲೆಕ್ಟ್ರಿಕ್ ಸ್ಕೂಟರ್‌ಗೆ 25,000 ರೂ ಡಿಸ್ಕೌಂಟ್, ಹಬ್ಬದ ಆಫರ್‍‌ನಲ್ಲಿ ಕಡಿಮೆ ಬೆಲೆಗೆ ಇವಿ!

ಸಾರಾಂಶ

ಗ್ರಾಹಕರ ವಿಶ್ವಾಸ, ಉತ್ತಮ ಪರ್ಫಾಮೆನ್ಸ್, ಮೈಲೇಜ್ ರೇಂಜ್ ಮೂಲಕ ಗಮನಸೆಳೆದಿರುವ ಬೆಂಗಳೂರು ಮೂಲದ ಏಥರ್ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಹಬ್ಬದ ವಿಶೇಷ ರಿಯಾಯಿತಿ ಘೋಷಿಸಲಾಗಿದೆ. ಹಬ್ಬದ ಆಫರ್‌ನಲ್ಲಿ ಎಥರ್ ಸ್ಕೂಟರ್ ಖರೀದಿಸಿದರೆ 25,000 ರೂಪಾಯಿ ವರೆಗೆ ರಿಯಾಯಿತಿ ಸಿಗಲಿದೆ.

ಬೆಂಗಳೂರು(ಅ.10) ಹಬ್ಬದ ಸಂಭ್ರಮ ಹೆಚ್ಚಿಸಲು ಹಲವು ಕಂಪನಿಗಳು ತಮ್ಮ ವಾಹನಗಳ ಮೇಲೆ ಡಿಸ್ಕೌಂಟ್ ಘೋಷಿಸಿದೆ. ಇದೀಗ ಎಥರ್ ಎನರ್ಜಿ ಹಬ್ಬದ ವಿಶೇಷ ಆಫರ್ ಘೋಷಿಸಿದೆ. ಹಬ್ಬದ ಆಫರ್ ಮೂಲಕ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಗರಿಷ್ಠ 25,000 ರೂಪಾಯಿವರೆಗೆ ರಿಯಾಯಿತಿ ಸಿಗಲಿದೆ.  ಎಥರ್  450X ಹಾಗೂ 450 ಅಪೆಕ್ಸ್ ಸ್ಕೂಟರ್‌ಗೆ ಈ ವಿಶೇಷ ಡಿಸ್ಕೌಂಟ್  ಆಫರ್ ಅನ್ವಯವಾಗಲಿದೆ. ಜನರ ವಿಶ್ವಾಸಗಳಿಸಿರುವ ಎಥರ್ ಡಿಸ್ಕೌಂಟ್ ಆಫರ್ ಘೋಷಣೆ ಇದೀಗ ಸ್ಕೂಟರ್ ಖರೀದಿಗೆ ಮುಂದಾಗಿರುವ ಗ್ರಾಹಕರ ಹಬ್ಬದ ಸಂಭ್ರಮ ಇಮ್ಮಡಿಗೊಳಿಸಿದೆ.

ಎಥರ್  450X ಹಾಗೂ 450 ಅಪೆಕ್ಸ್ ಸ್ಕೂಟರ್ ಮೇಲೆ ಘೋಷಿಸಿರುವ ಗರಿಷ್ಠ 25,000 ರೂಪಾಯಿ ವರೆಗಿನ ಡಿಸ್ಕೌಂಟ್ ಆಫರ್‌, ನಗದು ರಿಯಾಯಿತಿ, ಬ್ಯಾಟರಿ ವಾರೆಂಟಿ, ಉಚಿತ ಎಥರ್ ಗ್ರಿಡ್ ಚಾರ್ಜಿಂಗ್,  ಕ್ಯಾಶ್ ಬ್ಯಾಕ್ ಕೊಡುಗೆಗಳು ಒಳಗೊಂಡಿದೆ.  

ಫೋನ್ ಕಾಲ್, ಮ್ಯೂಸಿಕ್, ಆಟೊ ವೇರ್ ಡಿಟೆಕ್ಟ್ ತಂತ್ರಜ್ಞಾನದ ಏಥರ್ ಸ್ಮಾರ್ಟ್ ಹೆಲ್ಮೆಟ್ ಲಾಂಚ್!

 ಎಥರ್ 450X ನಲ್ಲಿ ವಿಶೇಷ ಹಬ್ಬದ ಕೊಡುಗೆಗಳು
ಎಥರ್ 450X ಮಾಡೆಲ್‌ಗಳನ್ನು ಖರೀದಿಸುವ ಗ್ರಾಹಕರು, ಪ್ರೊ ಪ್ಯಾಕ್ ಜೊತೆಗೆ, ₹15,000 ಮೌಲ್ಯದ ಗ್ಯಾರೆಂಟಿ ಪ್ರಯೋಜನಗಳನ್ನು ಪಡೆಯತ್ತಾರೆ.

ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 8-ವರ್ಷದ ವಿಸ್ತೃತ ಬ್ಯಾಟರಿ ಖಾತರಿ ( ಇಬಿಡಬ್ಲ್ಯು).
ಒಂದು ವರ್ಷಕ್ಕೆ ಉಚಿತ ಎಥರ್ ಗ್ರಿಡ್ ಶುಲ್ಕ ₹5,000 ವರೆಗೆ ಸಿಗಲಿದೆ
ಸ್ಕೂಟರ್ ಖರೀದಿಯ ಮೇಲೆ 5,000 ರೂಪಾಯಿ ಫ್ಲಾಟ್ ನಗದು ರಿಯಾಯಿತಿ.
ಈ ಗ್ಯಾರೆಂಟಿ ಸೌಲಭ್ಯದ ಜೊತೆಗೆ, ಗ್ರಾಹಕರು ಆಯ್ದ ಕ್ರೆಡಿಟ್ ಕಾರ್ಡ್ ಇಎಂಐ ವಹಿವಾಟುಗಳಲ್ಲಿ ₹10,000 ವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು, ಒಟ್ಟು ಪ್ರಯೋಜನಗಳನ್ನು ₹25,000 ವರೆಗೆ  ಪಡೆಯಬಹುದು.

ಹೊಸ ಏಥರ್ ರಿಝ್ತಾ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್, ಬೆಲೆ ಕೇವಲ 1,09,999 ರೂಪಾಯಿ!

450  ಅಪೆಕ್ಸ್ ನಲ್ಲಿ ವಿಶೇಷ ಕೊಡುಗೆಗಳು
ಈ ಬಾರಿ ಹಬ್ಬದ ಸಂದರ್ಭದಲ್ಲಿ ಎಥರ್ ಅಪೆಕ್ಸ್ ಸ್ಕೂಟರ್ 450X ರೀತಿಯಲ್ಲೇ ₹25,000 ಮೌಲ್ಯದ ಒಟ್ಟು ಪ್ರಯೋಜನ ನೀಡಲಾಗಿದೆ.  ಎಥರ್ ನ 450 ಸರಣಿಯ ಸ್ಕೂಟರ್‌ಗಳು ಕಾರ್ಯಕ್ಷಮತೆ, ತಂತ್ರಜ್ಞಾನ ಮತ್ತು ವಿಶ್ವಾಸಾರ್ಹತೆಯನ್ನು ಸಂಯೋಜಿಸುತ್ತವೆ. 2.9 kWh ಬ್ಯಾಟರಿಯೊಂದಿಗೆ 450X ಮತ್ತು 3.7 kWh ಬ್ಯಾಟರಿಯೊಂದಿಗೆ 450X ಕ್ರಮವಾಗಿ 111km ಮತ್ತು 150km  ಐಡಿಸಿ ಶ್ರೇಣಿಯನ್ನು ನೀಡುತ್ತದೆ ಮತ್ತು 90Km/h ಗರಿಷ್ಠ ವೇಗವನ್ನು ನೀಡುತ್ತದೆ. 450 ಅಪೆಕ್ಸ್ 157 ಕಿಮೀಗಳ  ಐಡಿಸಿ ಶ್ರೇಣಿಯನ್ನು ಮತ್ತು 100km/h ಗರಿಷ್ಠ ವೇಗವನ್ನು ನೀಡುತ್ತದೆ. ಸ್ಕೂಟರ್‌ಗಳು A ಅಟೋ ಹೋಲ್ಡ್™,  ಫಾಲ್‌ ಸೇಫ್‌ ™, ಮತ್ತು ಗೂಗಲ್‌ ಮ್ಯಾಪ್ಸ್‌  ಪ್ಲಾಟ್‌ಫಾರ್ಮ್ ಏಕೀಕರಣದೊಂದಿಗೆ 17.7cm (7”) ಟಿಎಫ್‌ಟಿ ಟಚ್‌ಸ್ಕ್ರೀನ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿವೆ. ಇದರ ಜೊತೆಗೆ, ಡ್ಯಾಶ್‌ಬೋರ್ಡ್‌ನಲ್ಲಿ  ವಾಟ್ಸ್‌ ಅಪ್‌  ಅಧಿಸೂಚನೆಗಳಂತಹ ವೈಶಿಷ್ಟ್ಯಗಳು ರೈಡರ್‌ನ ಸಂಪರ್ಕವನ್ನು ಹೆಚ್ಚಿಸುತ್ತವೆ. ಟೋ ಮತ್ತು ಥೆಫ್ಟ್ ಅಧಿಸೂಚನೆಗಳು ಮತ್ತು ಫೈಂಡ್ ಮೈ ಸ್ಕೂಟರ್ ಸೌಲಭ್ಯಗಳು ಒಟ್ಟಾರೆ ತಡೆರಹಿತ ಸವಾರಿ ಅನುಭವವನ್ನು ಮತ್ತಷ್ಟು ಖಚಿತಪಡಿಸುತ್ತದೆ. ಇದಲ್ಲದೆ, 450 ಅಪೆಕ್ಸ್ ಮ್ಯಾಜಿಕ್ ಟ್ವಿಸ್ಟ್ TM ವೈಶಿಷ್ಟ್ಯದೊಂದಿಗೆ ಬರುತ್ತದೆ, ಇದು ಅದೇ ಥ್ರೊಟಲ್ ಅನ್ನು ಬಳಸಿಕೊಂಡು ವೇಗಗೊಳಿಸಲು ಮತ್ತು ನಿಧಾನಗೊಳಿಸಲು ನಿಮಗೆ ಅನುಮತಿಸುತ್ತದೆ.
 

PREV
Read more Articles on
click me!

Recommended Stories

Hero Splendor ಬೈಕ್‌ಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳು
ಭರ್ಜರಿಯಾಗಿ ಮರಳಿದ ಭಾರತದ ಕೈನೆಟಿಕ್, ಕೇವಲ 1,000 ರೂಗೆ ಬುಕ್ ಮಾಡಿ ಎಲೆಕ್ಟ್ರಿಕ್ ಸ್ಕೂಟರ್