ಕೇವಲ 59,880 ರೂಗೆ ಟಿವಿಎಸ್ ರೆಡಿಯಾನ್, ಅತೀ ಕಡಿಮೆ ಬೆಲೆಗೆ 70 ಕಿ.ಮಿ ಮೈಲೇಜ್ ಬೈಕ್!

By Chethan KumarFirst Published Oct 7, 2024, 4:20 PM IST
Highlights

ಹಬ್ಬದ ಸೀಸನ್‌ನಲ್ಲಿ ಈಗಾಗಲೇ ಹಲವು ಬೈಕ್ ಮೇಲೆ ಭರ್ಜರಿ ಆಫರ್ ಲಭ್ಯವಿದೆ. ಇದರ ನಡುವೆ ಟಿವಿಎಸ್ ಇದೀಗ ಅತೀ ಕಡಿಮೆ ಬೆಲೆಗೆ ಟೆವಿಎಸ್ ರೆಡಿಯಾನ್ ಬೈಕ್ ನೀಡುತ್ತಿದೆ. ಹೊಸ ಬ್ಲಾಕ್ ಎಡಿಶನ್ ಬೈಕ್ 70 ಕಿ.ಮೀ ಮೈಲೇಜ್ ನೀಡಲಿದೆ.

ಚೆನ್ನೈ(ಅ.07) ಟಿವಿಎಸ್ ಭಾರತದಲ್ಲಿ ಹಲವು ರೇಂಜ್ ಬೈಕ್ ಹಾಗೂ ಸ್ಕೂಟರ್ ಮೂಲಕ ಜನಪ್ರಿಯ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. ಟಿವಿಎಸ್ ಅಪಾಚೆ ಸೇರಿದಂತೆ ಗರಿಷ್ಠ ಮಾರಾಟ ದಾಖಲೆ ಬರೆದ ಬೈಕ್ ಗ್ರಾಹಕರ ನೆಚ್ಚಿನ ದ್ವಿಚಕ್ರವಾಹನವಾಗಿದೆ. ಕೆಲ ವರ್ಷಗಳ ಹಿಂದೆ ಟಿವಿಎಸ್ ಹೀರೋ ಸ್ಪ್ಲೆಂಡರ್ ಬೈಕ್‌ಗೆ ಪ್ರತಿಸ್ಪರ್ಧಿಯಾಗಿ ಟಿವಿಎಸ್ ರೆಡಿಯಾನ್ ಬೈಕ್ ಬಿಡುಗಡೆ ಮಾಡಿದೆ. ಬಳಿಕ ಹಲವು ಅಪ್‌ಡೇಟ್ ಮೂಲಕ ಟಿವಿಎಸ್ ರೆಡಿಯಾನ್ ಜನಪ್ರಿಯತೆ ಗಳಿಸಿಕೊಂಡಿದೆ. ಇದೀಗ ಗ್ರಾಹಕರಿಗಾಗಿ ಹೊಸ ಬ್ಲಾಕ್ ಎಡಿಶನ್ ಬೈಕ್ ಬಿಡುಗಡೆ ಮಾಡಿದೆ. ವಿಶೇಷ  ಅಂದರೆ ಇದರ ಬೆಲೆ ಕೇವಲ 59,880 ರೂಪಾಯಿ(ಎಕ್ಸ್ ಶೋ ರೂಂ) ಮಾತ್ರ.

ಟಿವಿಎಸ್ ರೆಡಿಯಾನ್ ಆಲ್ ಬ್ಲಾಕ್ 110 ಸಿಸಿ ಬೈಕ್ ಇದೀಗ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಇದೇ ಬೈಕ್ ದೆಹಲಿಯಲ್ಲಿ ಖರೀದಿಸಿದರೆ ಹೆಚ್ಚುವರಿಯಾಗಿ 2,525 ರೂಪಾಯಿ ಕಡಿತ ಗೊಳ್ಳಲಿದೆ. ಕರ್ನಾಟಕ ಸೇರಿದಂತೆ ದೇಶದ ಇತರೆಡೆ 59,880 ರೂಪಾಯಿಗೆ ರೆಡಿಯಾನ್ ಬೈಕ್ ಲಭ್ಯವಿದೆ. ಹಬ್ಬದ ಸಂಭ್ರಮದ ನಡುವೆ ಟಿವಿಎಸ್ ಇದೀಗ ಜನಸಾಮಾನ್ಯರ ಕೈಗೆಟುಕುವಂತೆ ಬೈಕ್ ಬಿಡುಗಡೆ ಮಾಡಿದ್ದು, ನಿರೀಕ್ಷೆಯಂತೆ ಬೇಡಿಕೆಯೂ ಹೆಚ್ಚಾಗಿದೆ.

Latest Videos

ಟಿವಿಎಸ್ iQube ಎಲೆಕ್ಟ್ರಿಕ್ ಸ್ಕೂಟರ್ ಮೇಲೆ 27,000 ರೂ ಡಿಸ್ಕೌಂಟ್, ಇದು ಹಬ್ಬದ ಆಫರ್!

ಟಿವಿಎಸ್ ರೆಡಿಯಾನ್ ವಿಶೇಷತೆ ಅಂದರೆ ಒಂದು ಲೀಟರ್ ಪೆಟ್ರೋಲ್‌ಗೆ ಬರೋಬ್ಬರಿ 70 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇಂದಿನ ದುಬಾರಿ ಪೆಟ್ರೋಲ್ ಬೆಲೆಗೆ ಗರಿಷ್ಠ ಮೈಲೇಜ್ ಬೈಕ್ ನೆರವಾಗುತ್ತದೆ. ಜೊತೆಗೆ ಸಂಪೂರ್ಣ ಬ್ಲಾಕ್ ಥೀಮ್ ಟಿವಿಎಸ್ ರೆಡಿಯಾನ್ ಅತ್ಯಂತ ಆಕರ್ಷಕವಾಗಿದೆ.  ಇದರ ಎಂಜಿನ್‌ ಕಂಚಿನ ಬಣ್ಣದಿಂದ ಹೊಳೆಯುತ್ತಿದೆ. ಇದು ಬೈಕ್ ಅಂದ ಮತ್ತಷ್ಟು ಹೆಚ್ಚಿಸಿದೆ. ಇಷ್ಟೇ ಅಲ್ಲ ಎಂಜಿನ್ ಬಾಳಿಕೆಯನ್ನೂ ಹೆಚ್ಚು ಮಾಡಲಿದೆ.

ಟಿವಿಎಸ್ ರೆಡಿಯಾನ್ ಬೈಕ್ 109.7 ಸಿಸಿ ಎಂಜಿನ್ ಹೊಂದಿದೆ. ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 8.08ಬಿಹೆಚ್‌ಪಿ ಪವರ್ ಹಾಗೂ 8.7 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 4 ಸ್ಪೀಡ್ ಗೇರ್‌ಬಾಕ್ಸ್, ಟೆಲಿಸ್ಕೋಪಿಕ್ ಫೋರ್ಕ್ಸ್, ಟ್ವಿನ್ ಶಾಕ್ಸ್ ಸೇರಿದಂತೆ ಕೆಲ ವಿಶೇಷತೆಗಳನ್ನೂ ಹೊಂದಿದೆ. ಇನ್ನು 10 ಲೀಟರ್ ಪೆಟ್ರೋಲ್ ಸಾಮರ್ಥ್ಯದ ಟ್ಯಾಂಕ್ ಹೊಂದಿದೆ. ಬೈಕ್ ಕರ್ಬ್ ತೂಕ 113 ಕೆಜಿ. 180ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

77,400 ರೂಪಾಯಿಗೆ ಟಿವಿಎಸ್ ಜುಪಿಟರ್ 110, ಹೊಸ ತಂತ್ರಜ್ಞಾನದ ಪ್ರಿಮಿಯಂ ಸ್ಕೂಟರ್!

18 ಇಂಚಿನ್ ಅಲೋಯ್ ವ್ಹೀಲ್, ಸಿಬಿಎಸ್ ಬ್ರೇಕಿಂಗ್ ಸಿಸ್ಟಮ್, ಕಲರ್ ಎಲ್‌ಸಿಡಿ ಸ್ಕ್ರೀನ್, ಯುಎಸ್‌ಬಿ ಚಾರ್ಜಿಂಗ್ ಪಾಯಿಂಟ್ಸ್ ಸೇರಿದಂತೆ ಹಲವು ವೈಶಿಷ್ಠ್ಯಗಳು ಈ ಬೈಕ್‌ನಲ್ಲಿದೆ.
 

click me!