ಬಿಎಂಡಬ್ಲೂ ಆರ್ 1250 ಜಿಎಸ್, 1250 ಜಿಎಸ್ ಅಡ್ವೆಂಚರ್ ಬೈಕ್‌ ಲಾಂಚ್, ಬೆಲೆ ಎಷ್ಟಿದೆ?

By Suvarna News  |  First Published Jul 10, 2021, 5:46 PM IST

ಪ್ರೀಮಿಯಂ ಬೈಕ್‌ ಉತ್ಪಾದನೆಗೆ ಖ್ಯಾತಿಯಾಗಿರುವ ಬಿಎಂಡಬ್ಲೂ ಹಲವು ಉತ್ಕೃಷ್ಟ ಬೈಕ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಸೈ ಎನಿಸಿಕೊಂಡಿದೆ. ಸವಾರರಿಗೆ ಈ ಬೈಕ್‌ಗಳನ್ನು ಓಡಿಸುವುದೆಂದರೆ ಥ್ರಿಲ್. ಹಾಗಾಗಿಯೇ, ಬಳಕೆದಾರರ ಬೇಡಿಕೆಗೆ ಅನುಗುಣವಾಗಿಯೇ ಪ್ರೀಮಿಯಂ ಮತ್ತು ಅಡ್ವೆಂಚರ್ ಬೈಕ್‌ಗಳನ್ನು ಬಿಎಂಡಬ್ಲೂ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.
 


ಈಗಾಗಲೇ ಬಿಎಂಡಬ್ಲೂ ಆರ್ 1250 ಜಿಎಸ್ ಮತ್ತು ಆರ್ 125 ಜಿಎಸ್ ಅಡ್ವೆಂಚರ್‌ ಬೈಕ್‌ಗಳು ಗ್ರಾಹಕರನ್ನು ಸೆಳೆಯುವುದರಲ್ಲಿ ಯಶಸ್ವಿಯಾಗಿವೆ. ಇದೀಗ ಕಂಪನಿಯು ಭಾರತೀಯ ಮಾರುಕಟ್ಟೆಗೆ ಅಪ್‌ಡೇಟೆಡ್ 2021 ಬಿಎಂಡಬ್ಲೂ ಆರ್ 1250 ಮತ್ತು ಆರ್ 1250 ಜಿಎಸ್ ಅಡ್ವೆಂಚರ್‌ ಬೈಕ್‌ಗಳನ್ನು ಲಾಂಚ್ ಮಾಡಿದೆ. ಹೆಸರಿಗೆ ತಕ್ಕ ಹಾಗೆಯೇ ಈ ಬೈಕ್‌ಗಳ ಬೆಲೆಯೂ ದುಬಾರಿಯಾಗಿರುತ್ತದೆ. ಅದ್ಭತವಾದ ರೈಡಿಂಗ್ ಅನುಭವ ಬೇಕೆಂದರೆ ದುಡ್ಡೂ ಜಾಸ್ತಿ ಕೊಡಲೇ ಬೇಕಾಗುತ್ತದೆ. 

ಹಬ್ಬದ ಸೀಸನ್‌ಗೆ ಮಾರುತಿಯ ಹೊಸ ತಲೆಮಾರಿನ ಸೆಲೆರಿಯೋ ಕಾರ್ ಬಿಡುಗಡೆ?

Tap to resize

Latest Videos

undefined

ಭಾರತೀಯ ಮಾರುಕಟ್ಟೆಯಲ್ಲಿ ಅಪ್‌ಡೇಟೆಡ್ ಬಿಎಂಡಬ್ಲೂ ಆರ್ 1250 ಜಿಎಸ್ ಬೆಲೆ 20.45 ಲಕ್ಷ ರೂಪಾಯಿಯಿಂದ ಆರಂಭವಾದರೆ, ಅಪ್‌ಡೇಟೆಡ್ ಆರ್ 1250 ಜಿಎಸ್ ಅಡ್ವೆಂಚರ್ ಬೆಲೆ 22.44 ಲಕ್ಷ ರೂಪಾಯಿಯಾಗಿದೆ. ಈ ಎರಡೂ ದರಗಳು ಎಕ್ಸ್‌ಶೋರೂಮ್ ಬೆಲೆಯಾಗಿದೆ ಎಂದು ಗಮನದಲ್ಲಿಟ್ಟುಕೊಳ್ಳಬೇಕು. ಆನ್‌ರೋಡ್ ಪ್ರೈಸ್ ವ್ಯತ್ಯಾಸವಾಗಲಿದೆ. ಕಂಪನಿಯು ಈ ಎರಡೂ ಬೈಕ್‌ಗಳನ್ನು ಕಂಪ್ಲೀಟಲೀ-ಬಿಲ್ಟ್ ಅಪ್ ಯುನಿಟ್ಸ್‌ನಲ್ಲಿ ಲಭ್ಯವಾಗುವಂತೆ ಮಾಡಿದೆ.

ಭಾರತದಲ್ಲಿ ಈ ಎರಡೂ ಬೈಕ್‌ಗಳ  ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ. ಈ ಅಪ್‌ಡೇಟೆಡ್ ಬೈಕ್‌ಗಳಲ್ಲಿ ನೀವು ಕಲರ್ ಹಾಗೂ ಹಲವು ಸಾಧನಗಳೂ ಅಪ್‌ಡೇಟ್ ಆಗಿರುವುದನ್ನು ಕಾಣಬಹುದಾಗಿದೆ. ಈ ಹೊಸ ಬೈಕ್‌ಗಳಲ್ಲಿ ನೀವು ಸ್ಟ್ಟಾಂಡರ್ಡ್ ಡೈನಾಮಿಕ್ ಟ್ರಾಕ್ಷನ್ ಕಂಟ್ರೋಲ್, ಇಕೋ ಮೋಡ್, ಬಿಎಂಡಬ್ಲೂ ಇಂಟೆಗ್ರಿಲ್ ಎಬಿಎಸ್ ಪ್ರೋ ಸಿಸ್ಟಮ್ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ನೋಡಬಹುದಾಗಿದೆ.

ಕೋಂಬಿ ಬ್ರೇಕಿಂಗ್ ಎಂಬ ಹೊಸ ಸಿಸ್ಟಮ್‌ನಿಂದಾಗಿ ಬೈಕ್‌ನ ಎರಡೂ ಚಕ್ರಗಳಿಗೆ ಏಕಕಾಲಕ್ಕೆ ಬ್ರೇಕ್ ಅಪ್ಲೈ ಮಾಡಲು ಸಾಧ್ಯವಾಗುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಇದೊಂದು ಮಹತ್ವದ ಹೆಜ್ಜೆಯಾಗಿದೆ. ವಿಭಿನ್ನ ರೈಡಿಂಗ್‌ ಕಂಡಿಷನ್‌ಗಳಿಗೆ ಅನುಗುಣವಾಗಿ ಬ್ರೇಕಿಂಗ್ ಅನ್ನು ಸರಿಹೊಂದಿಸಲು ಇದು ಆರು-ಅಕ್ಷದ ಐಎಂಯು ಜೊತೆಗೆ ಕಾರ್ಯನಿರ್ವಹಿಸುತ್ತದೆ.

ಹೆದ್ದಾರಿಗಳಗುಂಟ 600 ಚಾರ್ಚಿಂಗ್ ಸ್ಟೇಷನ್ ಸ್ಥಾಪಿಸಲು ಪ್ಲ್ಯಾನ್

ಟ್ರಿಪಲ್ ಬ್ಲ್ಯಾಕ್ ಮತ್ತು ಸಾಲಿಡ್ ವೈಟ್ ಬಣ್ಣಗಳಲ್ಲಿ ಹೊಸ ಬೈಕ್‌ಗಳು ಮಾರಾಟಕ್ಕೆಸಿಗಲಿವೆ. ಹೊಸ ಬಿಎಂಡಬ್ಲೂ ಆರ್ 1250 ಜಿಎಸ್ ಅಡ್ವೆಂಚರ್ ಬೈಕ್ ಸ್ಪೋರ್ಟ್‌ ಆಗಿದ್ದು, ಐಸೀ ಗ್ರೇ ಬಣ್ಣದೊಂದಿಗೆ ಟ್ರಿಪಲ್ ಬ್ಲ್ಯಾಕ್ ಕಲರ್‌ಗಳಲ್ಲಿ ಲಭ್ಯವಿದೆ. 40 ವರ್ಷಗಳ ಅಪ್ರತಿಮ ಬಿಎಂಡಬ್ಲೂ ಜಿಎಸ್ ಮೋಟಾರ್‌ಸೈಕಲ್‌ಗಳ ನೆನಪಿಗಾಗಿ ಕಂಪನಿಯು ಭವಿಷ್ಯದಲ್ಲಿ ಬೈಕ್‌ನಲ್ಲಿ 'ಎಡಿಷನ್ 40 ಇಯರ್ಸ್ ಜಿಎಸ್' ಕಪ್ಪು ಮತ್ತು ಹಳದಿ ಬಣ್ಣದ ಕೆಲಸವನ್ನು ಪರಿಚಯಿಸುವ ಸಾಧ್ಯತೆಯಿದೆ. 

ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಈ ಎರಡೂ ಅಪ್‌ಡೇಟ್‌ ಬಿಎಂಡಬ್ಲೂ ಹೊಸ ಬೈಕ್‌ಗಳು ಬ್ಲೂಟೂಥ್ ಸಕ್ರಿಯಗೊಂಡಿರುವ ಟಿಎಫ್‌ಟಿ ಕಲರ್ ಡಿಸ್‌ಪ್ಲೇಗಳನ್ನು ಒಳಗೊಂಡಿವೆ. ಇದರ ಜೊತೆಗೆ ಯುಎಸ್‌ಬಿ ಚಾರ್ಜಿಂಗ್ ಸಾಕೆಟ್ ಕೂಡ ಇರಲಿದೆ. ಈ ಬೈಕ್ ಬ್ರೀಕ್ ಸ್ಟೈಲ್ ಫ್ರಂಟ್ ವಿನ್ಯಾಸವನ್ನು ಹೊಂದಿದ್ರೆ, ಹೆಡ್‌ಲೈಡ್ ವಿನ್ಯಾಸ ಮತ್ತು ಹೊಂದಾಣಿಕೆಯಾಗಬಲ್ಲ ವಿಂಡ್‌ಸ್ಕ್ರೀನ್‌ಗಳು ನಿಮ್ಮ ಗಮನ ಸೆಳೆಯುತ್ತವೆ.

ಬೈಕ್‌ಗಳನ್ನು ಅಡಾಪ್ಟಿವ್ ಕಾರ್ನರಿಂಗ್ ದೀಪಗಳು ಮತ್ತು ನವೀಕರಿಸಿದ ಹಿಲ್ ಸ್ಟಾರ್ಟ್ ಕಂಟ್ರೋಲ್ ಪ್ರೊ ಸಿಸ್ಟಮ್‌ನೊಂದಿಗೆ ನೀಡಲಾಗುವುದು. ಬಿಎಸ್ 6-ಕಂಪ್ಲೈಂಟ್, 1,254 ಸಿಸಿ, ಟ್ವಿನ್-ಸಿಲಿಂಡರ್ ಎಂಜಿನ್‌ನಿಂದ ಬೈಕ್‌ಗಳು ಮೂಲ ಶಕ್ತಿಯನ್ನು 7,750 ಆರ್‌ಪಿಎಂನಲ್ಲಿ 136 ಎಚ್‌ಪಿ ಶಕ್ತಿಯನ್ನು ಮತ್ತು 6,250 ಆರ್‌ಪಿಎಂನಲ್ಲಿ 143 ಎನ್ಎಂ ಟಾರ್ಕ್ ಅನ್ನು ಹೊರಹಾಕುತ್ತವೆ. ಎಂಜಿನ್ ಬಿಎಂಡಬ್ಲ್ಯು ಶಿಫ್ಟ್ ಕ್ಯಾಮ್ ತಂತ್ರಜ್ಞಾನವನ್ನು ಸಹ ಹೊಂದಿದೆ ಮತ್ತು ಇದು 6-ಸ್ಪೀಡ್ ಟ್ರಾನ್ಸ್ಮಿಷನ್ಗೆ ಜೋಡಿಯಾಗಿ ಬರುತ್ತದೆ.

2025ರ ಹೊತ್ತಿಗೆ ಟಾಟಾದಿಂದ 10 ಹೊಸ ಎಲೆಕ್ಟ್ರಿಕ್ ವಾಹನಗಳು!...

ಈ ಎರಡೂ ಬೈಕ್‌ಗಳು ಹೆಚ್ಚು ಶಕ್ತಿಶಾಲಿಯಾಗಿದ್ದು, ಅತ್ಯುತ್ತಮ ರೈಡಿಂಗ್ ಅನುಭವ ಬೇಕು ಎನ್ನುವರಿಗೆ ಈ ಬೈಕ್‌ಗಳು ಹೇಳಿ ಮಾಡಿಸಿದ್ದಾಗಿವೆ. ಲಾಂಗ್ ರೈಡಿಂಗ್, ಆಫ್‌ರೋಡ್ ರೈಡಿಂಗ್‌ನಲ್ಲಿ ಈ ಬೈಕ್‌ಗಳ ಪ್ರದರ್ಶನ ಅತ್ಯುತ್ತಮವಾಗಿರುತ್ತವೆ ಎಂಬುದು ಬಳಕೆದಾರರ ಅನುಭವದ ಮಾತುಗಳಾಗಿವೆ.

click me!