ಹಲವು ಹೊಸ ಹೊಸ ಎಲೆಕ್ಟ್ರಿಕ್ ವಾಹನಗಳು ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿವೆ. ಈ ಸಾಲಿಗೆ ಹೈದ್ರಾಬಾದ್ ಮೂಲದ ಗ್ರಾವ್ಟನ್ ಕಂಪನಿಯ ಕ್ವಾಂಟಾ ಇವಿ ದ್ವಿಚಕ್ರವಾಹನ ಹೊಸದಾಗಿ ಸೇರಿದೆ. ಈ ಬೈಕ್‌ಗೆ ಬೇಕಾಗುವ ಬಹುತೇಕ ಬಿಡಿ ಭಾಗಗಳನ್ನು ಭಾರತದಲ್ಲೇ ವಿನ್ಯಾಸ ಮಾಡಿದವುಗಳನ್ನು ಬಳಸಿಕೊಳ್ಳಲಾಗಿದೆ. ಕಂಪನಿಯು ಆರಂಭಿಕ ಬೆಲೆಯಾಗಿ 99,000 ರೂ.ಗೆ ಮಾರಾಟ ಮಾಡುತ್ತಿದೆ.
ದೇಶದಲ್ಲೀಗ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ಆಟೋ ಕಂಪನಿಗಳು ಮತ್ತು ಸ್ಟಾರ್ಟ್‌ಅಪ್‌ಗಳು ಹೊಸ ಹೊಸ ಬ್ಯಾಟರಿ ಚಾಲಿತ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಈ ಸಾಲಿಗೆ ಹೈದ್ರಾಬಾದ್ ಮೂಲದ ಸ್ಟಾರ್ಟ್‌ಅಪ್ ಇವಿ ಬ್ರ್ಯಾಂಡ್ ಗ್ರಾವ್ಟನ್ ಸೇರ್ಪಡೆಯಾಗುತ್ತಿದೆ.
ಗ್ರ್ಯಾವ್ಟನ್ ತನ್ನ ಮೊದಲ ಎಲ್ಲ ಹೊಸ ಕ್ರಾಂತಿಕಾರಿ ಎಲೆಕ್ಟ್ರಿಕ್ ಬೈಕು “ಕ್ವಾಂಟಾ” ವನ್ನು ಪರಿಚಯಾತ್ಮಕ 99,000 ರೂ. ಬೆಲೆಗೆ ಭಾರತೀಯ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ದೇಶದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರವಾಹನ ವಿಭಾಗದಲ್ಲಿ ಭಾರೀ ಬೇಡಿಕೆ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ಉತ್ಪಾದಕರು ಎಲೆಕ್ಟ್ರಿಕ್ ವಾಹನ ಉತ್ಪಾದನೆಯಲ್ಲಿ ತೊಡಗಿದ್ದಾರೆ. 2016ರಿಂದಲೇ ಇವಿ ಮೇಲೆ ಗಮನ ಕೇಂದ್ರೀಕರಿಸಿದ್ದ ಗ್ರಾವ್ಟನ್, ಮೇಡ್ ಫಾರ್ ಇಂಡಿಯಾ ಪರಿಕಲ್ಪನೆಯಡಿ ಕ್ವಾಂಟಾ ದ್ವಿಚಕ್ರವಾಹವನ್ನು ರೂಪಿಸಿದೆ.
undefined
ಎಲೆಕ್ಟ್ರಿಕ್ ಕಾರ್ ಖರೀದಿಗೆ 1.50 ಲಕ್ಷ ರೂ.ವರೆಗೆ ಸಬ್ಸಿಡಿ, ನೋಂದಣಿ ಫ್ರೀ!
ಕಂಪನಿಯು ಪರಿಚಯಾತ್ಮಕ ಬೆಲೆಯಾಗಿ ಕ್ವಾಂಟಾ ಎಲೆಕ್ಟ್ರಿಕ್ ದ್ವಿಚಕ್ರವಾಹನವನ್ನು 99,000 ರೂ.ಗೆ ಮಾರಾಟ ಮಾಡುತ್ತಿದೆ. ಬಳಿಕ ಇದು ಹೆಚ್ಚಾಗಬಹುದು. ಆದರೆ, ಒಮ್ಮೆ ಸಂಸ್ಥೆಯ ಎಫ್ಇಎಂಇನೊಂದಿಗೆ ಸಂಯೋಜಿತಗೊಂಡರೆ ಮತ್ತೆ 99,000 ರೂ.ಗೆ ಮಾರಾಟ ಮಾಡಲಿದೆ. ಅಂದರೆ, ಆಗ ಸಬ್ಸಿಡಿ ದೊರೆಯಲಿದೆ.
ಸಾಮಾನ್ಯವಾಗಿ ಎಲೆಕ್ಟ್ರಿಕ್ ದ್ವಿಚಕ್ರವಾಹನಕ್ಕೆ ಬೇಕಾಗುವ ಬಿಡಿ ಭಾಗಗಳನ್ನು ಬೇರೆ ದೇಶಗಳನ್ನು ತರಿಸಿಕೊಳ್ಳಲಾಗುತ್ತದೆ. ಆದರೆ, ಆತ್ಮನಿರ್ಭರ ಅಥವಾ ಸ್ವಾಲಂಬನೆ ತತ್ವದಿಂದ ಪೇರೇಪಿತರಾಗಿರುವ ಗ್ರಾವ್ಟನ್, ಕ್ವಾಂಟಾ ಉತ್ಪಾದನೆಗೆ ಬೇಕಿರುವ ಬಿಡಿಭಾಗಗಳನ್ನು ದೇಶಿಯವಾಗಿ ವಿನ್ಯಾಸಗೊಳಿಸಲಾದವನ್ನೇ ಬಳಸಿಕೊಳ್ಳಲಾಗಿದೆ. ಆ ಮೂಲಕ ಭಾರತದಲ್ಲಿ ಉತ್ಪಾದಿಸುಲಾಗುವ ಹೆಚ್ಚಿ ಪ್ರಮಾಣದ ಬಿಡಿ ಭಾಗಗಳನ್ನು ಬಳಸಿಕೊಳ್ಳುತ್ತಿರುವ ದೇಶದ ಇವಿಗಳಲ್ಲೂ ಇದು ಒಂದಾಗಿದೆ. ಕ್ವಾಂಟಾ ವೈಶಿಷ್ಟ್ಯ-ಭರಿತ ಮತ್ತು ಕಾರ್ಯಕ್ಷಮತೆ-ಚಾಲಿತ ವಾಹನದ ಪರಿಪೂರ್ಣ ಮಿಶ್ರಣವಾಗಿದ್ದು, ಇದು ನಗರ ಮತ್ತು ಗ್ರಾಮೀಣ ಭಾರತದ ಹೃದಯಗಳನ್ನು ಗೆಲ್ಲಲು ಸಜ್ಜಾಗಿದೆ.
ಕ್ವಾಂಟಾ ಲಾಂಚ್ ಮಾಡಿ ಮಾತನಾಡಿದ ಗ್ರಾವ್ಟನ್ ಮೋಟರ್ಸ್‌ನ ಸ್ಥಾಪಕ ಮತ್ತು ಸಿಇಒ ಪರಶುರಾಮ್ ಪಕಾ ಅವರು, ನಮ್ಮ ಮೊದಲ ಇವಿ ಬೈಕ್ ಕ್ವಾಂಟಾ ಬಿಡುಗಡೆ ಮೂಲಕ ನನ್ನ ಕನಸು ನಿಜವಾಗಿದೆ. ಈಗ ಬಿಡುಗಡೆ ಮಾಡಿರುವ ಕ್ವಾಂಟಾ ಎಲ್ಲ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಯಂಗ್ ಬೈಕರ್ಸ್‌ಗೆ ಅಗತ್ಯವಾಗಿರುವ ಸ್ಪೋರ್ಟ್ಸ್ ಕೆಟಗರಿಯಲ್ಲೂ ಶೀಘ್ರವೇ ನಾವು ದ್ವಿಚಕ್ರವಾಹನದೊಂದಿಗೆ ಬರಲಿದ್ದೇವೆ ಎಂದು ತಿಳಿಸಿದರು.
ಭಾರತೀಯ ಮಾರುಕಟ್ಟೆಗೆ HOP Leo, HOP Lyf ಸ್ಕೂಟರ್‌ಗಳು ಬಿಡುಗಡೆ
ಭಾರತೀಯ ರಸ್ತೆಗಳಿಗೆ ಒಗ್ಗುವಂಥ ಹಾಗೂ ಸುಸ್ಥಿರ ಸಂಚಾರ ಸಂಪರ್ಕಕ್ಕೆ ಪರಿಹಾರವನ್ನು ಕಂಡುಹಿಡಿಯುವ ಭಾಗವಾಗಿ ಈ ಎಲೆಕ್ಟ್ರಿಕ್ ವಾಹನಗಳ ನಿರ್ಮಾಣದ ಹಿಂದಿರುವ ಸಿದ್ಧಾಂತವಾಗಿದೆ. ಹಾಗಾಗಿಯೇ, ಕ್ವಾಂಟಾ ಕಳ್ಳತನ ಮತ್ತು ಅಪಘಾತದಿಂದ ಬ್ಯಾಟರಿ ವಿಭಾಗಕ್ಕೆ ಸುರಕ್ಷತೆಯನ್ನು ನೀಡಲು ವಿನ್ಯಾಸಗೊಳಿಸಲಾದ ವಿಶ್ವದ ಮೊದಲ ರಿಬ್ ಕೇಜ್ಡ್ ಚಾಸಿಸ್‌ನೊಂದಿಗೆ ಬರುತ್ತದೆ.
ಚಾಸಿಸ್ ಜ್ಯಾಮಿತಿ ಮತ್ತು ಉತ್ತಮವಾದ ಟ್ಯೂನ್ಡ್ ಸಸ್ಪೆನ್ಷನ್ ವಾಹನವನ್ನು ನಗರದ ಸಂಚಾರದಲ್ಲಿ ಮತ್ತು ಸುಸಜ್ಜಿತ ರಸ್ತೆ ಪರಿಸ್ಥಿತಿಗಳಲ್ಲೂ ಸುಲಭವಾಗಿ ಮತ್ತು ಆರಾಮವಾಗಿ ನಡೆಸಲು ಸಹಾಯ ಮಾಡುತ್ತದೆ, ಇದರಿಂದಾಗಿ ಸವಾರನಿಗೆ ಸಂತೋಷದಾಯಕ ಅನುಭವ ಮತ್ತು ಕ್ವಾಂಟಾದ ಆಹ್ಲಾದಕರ ಕಾರ್ಯಕ್ಷಮತೆಯನ್ನು ನೀಡುತ್ತದೆ. ಈ ಫೀಚರ್‌ಗಳಿಂದಾಗಿ ಕ್ವಾಂಟಾ ಇತರ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳಿಗಿಂತಲೂ ಭಿನ್ನವಾಗಿ ನಿಲ್ಲುತ್ತದೆ.
ಈ ದ್ವಿಚಕ್ರವಾಹನದಲ್ಲಿ 3 ಕೆಡಬ್ಲೂ ಪ್ರೊಪ್ರೈಟರಿ ಬಿಎಲ್ಇಡಿಸ ಮೋಟಾರ್ ಇದ್ದು, ಇದನ್ನು ದೇಶೀಯವಾಗಿ ತಯಾರಿಸಲಾಗಿದೆ. ಈ ಮೆಕಾನಿಕಲ್ ನಷ್ಟವನ್ನು ಕಡಿಮೆ ಮಾಡುತ್ತದೆ ಮತ್ತು ದಕ್ಷತೆಯನ್ನು ಹೆಚ್ಚಿಸುತ್ತದೆ. ಗರಿಷ್ಠ ವೇಗದ ಮಿತಿಯನ್ನು ಪ್ರತಿ ಕಿಲೋ ಮೀಟರ್ 70 ಸಾಧಿಸುವುದು ಮಾತ್ರವಲ್ಲದೇ, ಯಾವುದೇ ಕಚ್ಚಾ ರಸ್ತೆ ಮತ್ತು ಯಾವುದೇ ಪರಿಸ್ಥಿತಿಯಲ್ಲೂ ಬೈಕ್ ಚಕ್ರಗಳಿಗೆ 170 ಎನ್ಎಂ ಟಾರ್ಕ್ ಪವರ್ ಒದಗಿಸುತ್ತದೆ.
2025ರ ಹೊತ್ತಿಗೆ ಟಾಟಾದಿಂದ 10 ಹೊಸ ಎಲೆಕ್ಟ್ರಿಕ್ ವಾಹನಗಳು!...
ಗ್ರಾವ್ಟನ್ ಮೋಟಾರ್ಸ್‌ನ ಕ್ವಾಂಟಾ 3 ಕಿಲೋವ್ಯಾಟ್ ಲಿ-ಅಯಾನ್ ಡಿಟ್ಯಾಚೇಬಲ್ ಬ್ಯಾಟರಿಯಿಂದ ಶಕ್ತಿಯನ್ನು ಪಡೆದುಕೊಳ್ಳುತ್ತದೆ. ಒಮ್ಮೆ ಬ್ಯಾಟರಿಯನ್ನು ಚಾರ್ಜ್ ಮಾಡಿದರೆ ಗರಿಷ್ಠ 150 ಕಿ.ಮೀ.ವರೆಗೂ ನೀವು ದ್ವಿಚಕ್ರವಾಹನವನ್ನು ಓಡಿಸಬಹುದಾಗಿದೆ. ಹಲವು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಈ ಕ್ವಾಂಟಾ ಇವಿ ದ್ವಿಚಕ್ರವಾಹನಗಳಲ್ಲೇ ವಿಶೇಷವಾಗಿದೆ.