ವಾಯ್ಸ್ ಕೆನೆಕ್ಟ್,to ಬ್ಲೂಟೂಥ್; ಟಿವಿಎಸ್ NTORQ 125 ಸ್ಕೂಟರ್ ಬಿಡುಗಡೆ!

By Suvarna NewsFirst Published Jul 8, 2021, 7:51 PM IST
Highlights
  • 125ಸಿಸಿ  ಎಂಜಿನ್ ವಿಭಾಗದಲ್ಲಿ  10 PSಗಿಂತ ಅಧಿಕ ಪವರ್ ನೀಡುವ ಏಕೈಕ ಸ್ಕೂಟರ್
  •  ಸ್ಕೂಟರ್ ಜತೆ ಧ್ವನಿ ಆದೇಶಗಳ ಮೂಲಕ ಸಂಪರ್ಕ ಸಾಧಿಸಲು ಸಾಧ್ಯ
  • ನ್ಯಾವಿಗೇಷನ್ ಸೇರಿದಂತೆ ಹಲವು ವಿಶೇಷತೆಗಳು 

ಬೆಂಗಳೂರು(ಜು.08):  ಟಿವಿಎಸ್ ಮೋಟಾರ್ ಭಾರತದಲ್ಲಿ ಅತ್ಯಾಧುನಿಕ  NTORQ 125 Race XP ಸ್ಕೂಟರ್ ಬಿಡುಗಡೆ ಮಾಡಿದೆ.  ಆಕರ್ಷಕ ವಿನ್ಯಾಸ, ಅತ್ಯಾಧುನಿಕ ತಂತ್ರಜ್ಞಾನ, ಕನೆಕ್ಟಿವಿಟಿ ಪ್ಲಾಟ್‌ಫಾರ್ಮ್, ವಾಯ್ಸ್ ರೆಕಗ್ನಿಶನ್, ಮೋಡ್ ಬದಲಾವಣೆ, ನ್ಯಾವಿಗೇಷನ್ ಸೇರಿದಂತೆ ಹಲವು ವಿಶೇಷತೆಗಳು ಈ ಸ್ಕೂಟರ್‌ನಲ್ಲಿದೆ. ನೂತನ ಸ್ಕೂಟರ್ ಬೆಲೆ 83,275 ರೂಪಾಯಿ(ಎಕ್ಸ್ ಶೋ ರೂಂ).

ಇರಾಕ್‌ನಲ್ಲಿ ಶೋರೂಮ್ ತೆರೆದ ಟಿವಿಎಸ್ ಮೋಟಾರ್.

ಭಾರತದ ದ್ವಿಚಕ್ರ ಉದ್ಯಮದ ವೇಗವರ್ಧನೆಯ ಮತ್ತು ಸಂಪರ್ಕಿತ ಸಂಚಾರ ವ್ಯವಸ್ಥೆಗೆ ನಾಂದಿ ಹಾಡಿದೆ. 125ಸಿಸಿ  ಎಂಜಿನ್ ವಿಭಾಗದಲ್ಲಿ  10 PSಗಿಂತ ಅಧಿಕ ಪವರ್ ನೀಡುವ ಏಕೈಕ ಸ್ಕೂಟರ್ ಎನಿಸಿದೆ. ಶಕ್ತಿ ಸರಬರಾಜನ್ನು ವಿಸ್ತೃತಗೊಳಿಸಲಾಗಿದ್ದು, ಗ್ಯಾಸ್ ಫ್ಲೋ ಡೈನಾಮಿಕ್ಸ್‌ನಲ್ಲಿ ಗಣನೀಯ ಸುಧಾರಣೆ ಇದಕ್ಕೆ ಕಾರಣ. ಹೊಸ ಡ್ಯುಯಲ್ ರೈಡ್ ಮೋಡ್‌ಗಳು ಸವಾರರ ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿ ವೇಗ ಪಡೆಯಲು ಅನುವು ಮಾಡಿಕೊಡಲಿದೆ. 

ಹತ್ತು ಹಲವು ವಿಶೇಷತೆಯ TVS Ntorq 125 ಸೂಪರ್ ಸ್ಕ್ವಾಡ್ ಎಡಿಶನ್ ಸ್ಕೂಟರ್ 

ತಂತ್ರಜ್ಞಾನ
ಟಿವಿಎಸ್  NTORQ 125 Race XP ಕನೆಕ್ಟಿವಿಟಿಯಿಂದ ಸುಸಜ್ಜಿತವಾಗಿದೆ. ಇದು ವಿನೂತನ ಬ್ಲೂಟೂಥ್ ಚಾಲಿತ ತಂತ್ರಜ್ಞಾನ ಸಂಯೋಜಿತವಾಗಿದೆ. ಎಲ್ಲ ಆ್ಯಂಡ್ರಾಯ್ಡ್ ಮತ್ತು IOS ಪ್ಲಾಟ್‌ಫಾರಂಗಳಲ್ಲಿ ಲಭ್ಯವಿದೆ.  ಧ್ವನಿ ಸಹಾಯ ವಿಶೇಷತೆಯು ಈ ಸಂವಾದಾತ್ಮಕ ಅನುಭವವನ್ನು ವಿಸ್ತೃತಗೊಳಿಸುತ್ತದೆ. ಇದರಿಂದಾಗಿ ಗ್ರಾಹಕರು ತಮ್ಮ ಸ್ಕೂಟರ್ ಜತೆ ಧ್ವನಿ ಆದೇಶಗಳ ಮೂಲಕ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ.

ಈ ಆ್ಯಪ್ ಇದೀಗ 15 ಕ್ಕೂ ಹೆಚ್ಚು ಬಗೆಯ ಧ್ವನಿ ಆದೇಶಗಳನ್ನು ಸ್ವೀಕರಿಸುತ್ತದೆ. ಇದರಲ್ಲಿ ನ್ಯಾವಿಗೇಷನ್ ವ್ಯವಸ್ಥೆಗೆ ಚಾಲನೆ ನೀಡುವ ಹಾಗೂ ಬ್ಲೂಟೂಥ್ ಸಂಪರ್ಕಿತ  ಮೋಡ್ ಬದಲಾವಣೆಯೂ ಸೇರಿದೆ.  ಇದರ ಜೊತೆಗೆ ಗ್ರಾಹಕರ ಸವಾರಿ ಶೈಲಿಯನ್ನು ಪೂರೈಸುವ ರೈಡ್ ಮೋಡ್ ಆಧಾರಿತ ಲೈವ್ ಡ್ಯಾಶ್‌ಬೋರ್ಡ್ ಹೊಂದಿದೆ. ಬೈಕ್‌ನ ಓವರ್‌ವ್ಯೂ ಸೆಕ್ಷನ್. ಕ್ಷಮತೆ ಮಾನದಂಡಗಳ ಹಲವು ಗ್ರಾಫಿಕಲ್ ಅಭಿವ್ಯಕ್ತಿಯ ಸೇರ್ಪಡೆಯೊಂದಿಗೆ ಮಹತ್ವದ ಅಪ್‌ಡೇಟ್ ಹೊಂದಿದೆ. ನ್ಯಾವಿಗೇಷನ್ ಕಾರ್ಯವು ಇದೀಗ ಸೇವ್ ಅಡ್ರೆಸ್ ಕಾರ್ಯವನ್ನೂ ಒಳಗೊಂಡಿದ್ದು, ನಿಯತವಾದ ಮಾರ್ಗಗಳಲ್ಲಿ ಸುಲಭ ನ್ಯಾವಿಗೇಷನ್ ವ್ಯವಸ್ಥೆಗೆ ಇದು ಅನುವು ಮಾಡಿಕೊಡುತ್ತದೆ.

click me!