ಬರೋಬ್ಬರಿ 100 ಹಾರ್ನ್, ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ ಬೈಕ್ ಸೀಜ್ ಮಾಡಿದ ಪೊಲೀಸ್

Published : Aug 08, 2026, 09:48 PM IST
Bike Fitted with 100 Horns

ಸಾರಾಂಶ

ವಾಹನಗಳಲ್ಲಿ ಒಂದು ಹಾರ್ನ್ ಕಡ್ಡಾಯ. ಆದರೆ ಇಲ್ಲೊಬ್ಬ ಬೈಕ್‌ಗೆ 100 ಹಾರ್ನ್ ಫಿಕ್ಸ್ ಮಾಡಿದ್ದಾನೆ. ಇದಕ್ಕಾಗಿ ಬೈಕ್ ಮಾಡಿಫೈ ಮಾಡಿದ್ದಾನೆ. ಭಾರಿ ವೈರಲ್ ಆದ ಈ ಬೈಕ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಡೆಹ್ರಡೂನ್ (ಆ.8) ಬೈಕ್ ಸೇರಿದಂತೆ ಯಾವುದೇ ಮಾಹನ ಮಾಡಿಫಿಕೇಶನ್ ಮೋಟಾರು ವಾಹನ ಕಾಯ್ಡೆ ಪ್ರಕಾರ ನಿಯಮ ಬಾಹಿರವಾಗಿದೆ. ಇದರ ನಡುವೆ ಹಲವರು ಕಂಪನಿ ನೀಡಿದ ಆಕ್ಸಸರಿ ಬದಲಾಯಿಸಿ ವಾಹನಗ ಲುಕ್ ಹೆಚ್ಚಿಸುತ್ತಾರೆ. ಹಾರ್ನ್ ಬದಲಿಸುತ್ತಾರೆ. ಹಾರ್ನ್ ವಿಚಾರದಲ್ಲಿ ಕಟ್ಟು ನಿಟ್ಟಿನ ನಿಯಮಗಳಿವೆ. ಕರ್ಕಷ ಹಾರ್ನ್ ಬಳಸುವಂತಿಲ್ಲ. ಆದರೆ ಇಲ್ಲೊಬ್ಬ ಒಂದಲ್ಲ, ಬರೋಬ್ಬರಿ 100 ಹಾರ್ನ್ ಬಳಸಿದ್ದಾನೆ. ಬೈಕ್‌ಗಿಂತ ಹಾರ್ನ್ ದೊಡ್ಡಾಗಿ ಕಾಣುತ್ತಿದೆ. ಈ ಬೈಕ್‌ನ್ನು ಪೊಲೀಸರು ಸೀಝ್ ಮಾಡಿದ್ದಾರೆ.

ಕನ್ವರ್ ಯಾತ್ರೆಯ ಬೈಕ್ ಸೀಝ್

ಉತ್ತರಖಂಡದ ಕನ್ವರ್ ಯಾತ್ರೆಯಲ್ಲಿ ಪ್ರತ್ಯಕ್ಷವಾದ ಈ ಬೈಕ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕನ್ವರ್ ಯಾತ್ರೆ ವೇಳೆ ಮುಂಭಾಗಗಲ್ಲಿ ಹಾರ್ನ್ ಸೌಂಡ್ ಮಾಡುತ್ತಾ ಬೈಕ್ ಮೂಲಕ ತೆರಳಿ ದಾರಿ ಮಾಡುವುದು ಮಾತ್ರವಲ್ಲ, ಯಾತ್ರೆ ಮೂಲಕ ಗಮನಸೆಳೆಯಲು ಈ ಕಸರತ್ತು ಮಾಡಲಾಗಿತ್ತು. ಇದಕ್ಕಾಗಿ ಬೈಕ್ ಮಾಡಿಫೈ ಮಾಡಿ ಸುತ್ತಲೂ 100 ಹಾರ್ನ್ ಹಾಸಲಾಗಿದೆ. ಹಾರ್ನ್ ಬಟನ್ ಪ್ರೆಸ್ ಮಾಡಿದರೆ 100 ಶಬ್ದಗಳು ಒಂದರ ಹಿಂದೆ ಒಂದರಂತೆ ಕೇಳಲಿದೆ. ಈ ಮೂಲಕ ಇಡೀ ಪ್ರದೇಶಕ್ಕೆ ಹಾರ್ನ್ ಶಬ್ದ ಕೇಳಿಸಲಿದೆ.

100 ಹಾರ್ನ್ ಫಿಕ್ಸ್ ಮಾಡಲು ಬೈಕ್ ಸುತ್ತಲೂ ಮಾಡಿಫಿಕೇಶನ್ ಮಾಡಲಾಗಿದೆ. ಕನಿಷ್ಠ ಆಟೋದಷ್ಟು ಸ್ಥಳವನ್ನು ಈ ಬೈಕ್ ಆಕ್ರಮಿಸಿಕೊಳ್ಳುತ್ತಿದೆ. ಮುಂಭಾಗದಲ್ಲಿ ಧ್ವಜ ಇಡಲಾಗಿದೆ. ಈ ಬೈಕ್ ರಸ್ತೆಯಲ್ಲಿ ಚಲಿಸುತ್ತಿದ್ದಂತೆ ಎಲ್ಲರೂ ಒಂದು ಕಣ್ಣು ಹಾಯಿಸುತ್ತಾರೆ. ಹಲವರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯದಲ್ಲಿ ಪೋಸ್ಟ್ ಮಾಡಿದ್ದರು. ಇತ್ತ ಉತ್ತರಖಂಡ ಪೊಲೀಸರ ಗಮನಕ್ಕೂ ಬಂದಿದೆ. ಕನ್ವರ್ ಯಾತ್ರೆ ವೇಳೆ ಈ ಬೈಕ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೋಟಾರು ವಾಹನ ಕಾಯ್ದೆ ನಿಯಮ ಉಲ್ಲಂಘನೆಯಿಂದ ಸದ್ಯ ಬೈಕ್ ಸೀಜ್ ಮಾಡಿ ಪೊಲೀಸ್ ಠಾಣೆಯಲ್ಲಿ ಇಡಲಾಗಿದೆ. ನಿಯಮ ಉಲ್ಲಂಘನೆಗೆ ದಂಡ ಕಟ್ಟುವುದು ಮಾತ್ರವಲ್ಲ, ಸಂಪೂರ್ಣ ಹಾರ್ನ್ ತೆಗೆದು ಹಾಕಬೇಕು. ಕೇವಲ ಮಾಡಿಫಿಕೇಶನ್ ಮಾತ್ರವಲ್ಲ, ಮಾಡಿಫಿಕೇಶನ್‌ನಲ್ಲಿ ಇತರರ ಸವಾರರ ಸುರಕ್ಷತೆಗೂ ಅಡ್ಡಿಯಾದ ಕುರಿತು ಪ್ರಕರಣ ದಾಖಲಾಗಿದೆ.

PREV
Read more Articles on
click me!

Recommended Stories

ಬರುತ್ತಿದೆ ಕಡಿಮೆ ಬೆಲೆ, ಗರಿಷ್ಠ ಮೈಲೇಜ್ ನೀಡುವ ಅತ್ಯಾಕರ್ಷಕ ಹೀರೋ ಎಲೆಕ್ಟ್ರಿಕ್ ಬೈಕ್
Pulsar N160 ಬೈಕ್‌ S & SS ವೇರಿಯಂಟ್‌ನಲ್ಲಿ ಲಾಂಚ್; ಫೀಚರ್ಸ್, ಬೆಲೆಯ ಮಾಹಿತಿ ಇಲ್ಲಿದೆ