Pulsar N160 ಬೈಕ್‌ S & SS ವೇರಿಯಂಟ್‌ನಲ್ಲಿ ಲಾಂಚ್; ಫೀಚರ್ಸ್, ಬೆಲೆಯ ಮಾಹಿತಿ ಇಲ್ಲಿದೆ

Published : Aug 08, 2026, 01:29 PM IST
Bajaj Pulsar N160 S and N160 SS l

ಸಾರಾಂಶ

ಬಜಾಜ್ ತನ್ನ ಜನಪ್ರಿಯ ಪಲ್ಸರ್ N160 ಬೈಕ್‌ನ S ಮತ್ತು SS ಎಂಬ ಎರಡು ಹೊಸ ವೇರಿಯಂಟ್‌ಗಳನ್ನು ಬಿಡುಗಡೆ ಮಾಡಿದೆ. ಈ ಬೈಕ್‌ಗಳು 4-ವಾಲ್ವ್ ತಂತ್ರಜ್ಞಾನದ ಹೊಸ ಇಂಜಿನ್, ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಡಿಜಿಟಲ್ ಕ್ಲಸ್ಟರ್ ಮತ್ತು ಡ್ಯುಯಲ್-ಚಾನೆಲ್ ABS ನಂತಹ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿವೆ.

Bajaj pulsar N160: ಭಾರತದಲ್ಲಿ ಬಜೆಟ್ ಮತ್ತು ಸ್ಟೈಲಿಶ್ ಬೈಕ್ ವಿಷಯ ಬಂದಾಗ ಎಲ್ಲರ ಕಣ್ಣು ಬಜಾನ್ ಪಲ್ಸರ್‌ನತ್ತ ಹೋಗುತ್ತದೆ. ಯುವ ಸಮುದಾಯದಲ್ಲಿ ಬಜಾಜ್ ಜನಪ್ರಿಯ ಬೈಕ್‌ಗಳಲ್ಲಿ ಒಂದಾಗಿದೆ. ಇದೀಗ ಮತ್ತೊಮ್ಮೆ ಬಜಾಜ್ ಟು-ವ್ಹೀಲರ್ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ.

Bajaj pulsar N160 ಎರಡು ಹೊಸ ಮತ್ತು ಅತ್ಯಂತ ಶಕ್ತಿಶಾಲಿಯ ವೇರಿಯಂಟ್ S ಮತ್ತು SS ರಸ್ತೆಗಿಳಿಸುವ ಬಗ್ಗೆ ಘೋಷಣೆ ಮಾಡಿದೆ. ಹಲವು ದಿನಗಳಿಂದ ನ್ಯೂ ವೇರಿಯಂಟ್ ಬೈಕ್‌ಗಾಗಿ ಕಾಯುತ್ತಿದ್ದ ಟೂ ವ್ಹೀಲರ್‌ ಲವರ್‌ಗೆ ಗುಡ್‌ನ್ಯೂಸ್ ಸಿಕ್ಕಂತಾಗಿದೆ.

ಈ ಬೈಕ್‌ನಲ್ಲಿ ಕಾಸ್ಮೆಟಿಕ್ ಬದಲಾವಣೆ ಜೊತೆ ಮೆಕ್ಯಾನಿಕಲ್ ಸೆಟಪ್ ಮತ್ತು ಇಂಜಿನ್‌ನಲ್ಲಿಯೂ ಗಮನಾರ್ಹ ಸುಧಾರಣೆಗಳನ್ನು ತೆಗೆದುಕೊಂಡು ಬಂದಿದೆ. Bajaj pulsar N160 ಬೈಕ್ 4-ವಾಲ್ವ್ ತಂತ್ರಜ್ಞಾನದೊಂದಿಗೆ ಹೊಸ ಎಂಜಿನ್ ನೀಡಲಾಗುತ್ತಿದ್ದು, ಇದರಿಂದ ಹೆಚ್ಚು ಪವರ್‌ಫುಲ್ ಮತ್ತು ಉತ್ತಮ ಮೈಲೇಜ್ ನೀಡುತ್ತದೆ. ಈ ಹಿಂದೆ 2-ವಾಲ್ವ್ ಟೆಕ್ನಾಲಜಿ ಹೊಂದಿತ್ತು. ಆದ್ರೆ ಮೈಲೇಜ್ ಸೇರಿದಂತೆ ಸುಧಾರಣೆಗಾಗಿ 4-ವಾಲ್ವ್ ಬಳಸಲಾಗಿದೆ.

ಫೀಚರ್ಸ್

ಪಲ್ಸರ್ ಎನ್‌160 ಅತ್ಯಂತ ಸ್ಟೈಲಿಶ್ ಬೈಕ್‌ಗಳಲ್ಲಿ ಒಂದಾಗಿದ್ದು, ಕೆಲವು ಹೊಸ ಬಣ್ಣ ಮತ್ತು ನ್ಯೂ ಗ್ರಾಫಿಕ್ಸ್ ಸೇರಿಸಲಾಗಿದೆ. ತೀಕ್ಷ್ಣವಾದ DRL ಗಳೊಂದಿಗೆ ಅದೇ ಸಿಗ್ನೇಚರ್ LED ಪ್ರೊಜೆಕ್ಟರ್ ಹೆಡ್‌ಲೈಟ್ ಹೊಂದಿದೆ. ಬೈಕ್‌ನ ಟ್ಯಾಂಕ್ ಕಟ್ ಮತ್ತು ಸೈಡ್ ಪ್ಯಾನೆಲ್‌ಗಳು ಆಕರ್ಷಕ ನೋಟ ನೋಡುತ್ತವೆ. ಇದು ಫುಲ್ಲಿ ಡಿಜಿಟಲ್ ಇನ್‌ಸ್ಟ್ರುಮೆಂಟ್‌ ಕ್ಲಸ್ಟರ್ ಒಳಗೊಂಡಿದ್ದು, ಬ್ಲ್ಯೂಟೂಥ್ ಕನೆಕ್ಟಿವಿಟಿಯನ್ನು ಸಪೋರ್ಟ್ ಮಾಡುತ್ತದೆ. ಸ್ಮಾರ್ಟ್‌ಫೋನ್ ಸಹಾಯದಿಂದ ಬೈಕ್‌ನ್ನು ಕನೆಕ್ಟ್ ಮಾಡಿಕೊಳ್ಳುವ ಆಯ್ಕೆಯನ್ನು ನೀಡಲಾಗಿದೆ. ಇದರಿಂದ ಕಾಲ್, ಮೆಸೇಜ್ ಅಲರ್ಟ್ ಮತ್ತು ಟರ್ನ್ ಬೈ ಟರ್ನ್ ನೇವಿಗೇಷನ್ ಲಾಭ ಪಡೆದುಕೊಳ್ಳಬಹುದಾಗಿದೆ.

ಇಷ್ಟು ಮಾತ್ರವಲ್ಲದೇ ಪಲ್ಸರ್ ಎನ್ 160ನಲ್ಲಿ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ ನೀಡಲಾಗಿದೆ. ಚಾಲನೆ ವೇಳೆ ನಿಮ್ಮ ಸ್ಮಾರ್ಟ್‌ಫೋನ್ ಚಾರ್ಜ್ ಮಾಡಿಕೊಳ್ಳಬಹುದು. ಇನ್ನು ಸುರಕ್ಷತೆಯನ್ನು ಗಮನಿಸೋದಾದ್ರೆ ಡ್ಯುಯಲ್-ಚಾನೆಲ್ ABS ಮತ್ತು ವಿಭಿನ್ನ ರೈಡಿಂಗ್ ಮೋಡ್‌ಗಳನ್ನು ಸಹ ಒಳಗೊಂಡಿದೆ.

ಎರಡು ವೇರಿಯಂಟ್‌ಗಳ ಬೆಲೆ ಎಷ್ಟು?

ಗ್ರಾಹಕರ ಅನುಕೂಲತೆ ಮತ್ತು ಬೇಡಿಕೆಗನುಸಾರ ಪಲ್ಸರ್ S ಮತ್ತು SS ಎಂಬ ಎರಡು ವೇರಿಯಂಟ್‌ಗಳನ್ನು ತಂದಿದೆ. ಜೆಟ್‌ನಲ್ಲಿ ಉತ್ತಮ 160cc ಬೈಕ್ ಬಯಸುವವರಿಗೆ S ರೂಪಾಂತರ ಒಳ್ಳೆಯ ಆಯ್ಕೆಯಾಗಲಿದೆ. SS ವೇರಿಯಂಟ್ ಟಾಪ್-ನಾಚ್ ಫೀಚರ್ಸ್ ಮತ್ತು ಅಡ್ವಾನ್ಸ್ ಸೇಫ್ಟಿಯನ್ನು ಹೊಂದಿದೆ.

S ವೇರಿಯಂಟ್ ಬೆಲೆ: 1,33,511 ರೂಪಾಯಿ

SS ವೇರಿಯಂಟ್ ಬೆಲೆ: 1,42,585 ರೂಪಾಯಿ

ಪಲ್ಸರ್‌ನ ಈ ಹೊಸ ಸೆಗ್ಮೆಂಟ್ ಸದ್ಯ ಮಾರುಕಟ್ಟೆಯಲ್ಲಿರುವ TVS Apache RTR 160 4V ಮತ್ತು ಹೀರೋ ಎಕ್ಸ್‌ಟ್ರೀಮ್ 160R ತೀವ್ರ ಸ್ಪರ್ಧೆಯನ್ನು ನೀಡಲಿದೆ.

ಇದನ್ನೂ ಓದಿ: Mahindra Thar Facelift: ಹೊಸ ಲುಕ್, ಹೈ-ಟೆಕ್ ಫೀಚರ್‌ಗಳೊಂದಿಗೆ ರಸ್ತೆಗಿಳಿಯಲು ಸಜ್ಜಾದ ಹೊಸ ಥಾರ್

PREV
Read more Articles on
click me!

Recommended Stories

TVS Jupiter 125 Vs Suzuki Access 125: ದರ, ಮೈಲೇಜ್ ಮತ್ತು ಫೀಚರ್ಸ್‌ನಲ್ಲಿ ಯಾವುದು ಬೆಸ್ಟ್?
ಬೆಂಗಳೂರಿನಿಂದ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್, ಎಐ ಟೆಕ್ ಜೊತೆ 165 ಕಿ.ಮೀ ಮೈಲೇಜ್