Simple One 203KM ಮೈಲೇಜ್ ನೀಡಬಲ್ಲ ಬೆಂಗಳೂರಿನ ಸಿಂಪಲ್ ಎನರ್ಜಿ ಸ್ಕೂಟರ್ ಉತ್ಪಾದನೆ ಶೀಘ್ರದಲ್ಲೇ ಆರಂಭ!

By Suvarna News  |  First Published Dec 28, 2021, 10:02 PM IST
  • ಆಗಸ್ಟ್ 15 ರಂದು ಅನಾವರಣಗೊಂಡಿದ್ದ ಬೆಂಗಳೂರಿನ ಸಿಂಪಲ್ ಒನ್
  • ಒಂದು ಬಾರಿ ಚಾರ್ಜ್ ಮಾಡಿದರೆ 203 ಕಿ.ಮೀ ಮೈಲೇಜ್
  • ರೋಡ್ ಟೆಸ್ಟ್ ಮುಗಿಸಿ ಉತ್ಪಾದನೆಗೆ ಸಿಂಪಲ್ ಒನ್ ರೆಡಿ

ಬೆಂಗಳೂರು(ಡಿ.28): ಭಾರತ ಎಲೆಕ್ಟ್ರಿಕ್ ಸ್ಕೂಟರ್ ಕ್ಷೇತ್ರದಲ್ಲಿ(Electric Scooter) ಹೊಸ ಮೈಲಿಗಲ್ಲು ಸೃಷ್ಟಿಸಲು ಬೆಂಗಳೂರಿನ ಸಿಂಪಲ್ ಎನರ್ಜಿ(Simple Energy) ರೆಡಿಯಾಗಿದೆ. ಆಗಸ್ಟ್ 15 ರಂದು ಅನಾವರಣಗೊಂಡಿದ್ದ ಸಿಂಪಲ್ ಒನ್(Simple One) ಎಲೆಕ್ಟ್ರಿಕ್ ಸ್ಕೂಟರ್ ಇದೀಗ ಎಲ್ಲಾ ರೋಡ್ ಟೆಸ್ಟ್ ಮುಗಿಸಿ ಉತ್ಪಾದನೆಗೆ ರೆಡಿಯಾಗಿದೆ. ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ. ಈ ಬೈಕ್ ವಿಶೇಷ ಅಂದರೆ ಇಕೋ ಮೊಡ್‌ನಲ್ಲಿ 203 ಕಿ.ಮೀ ಮೈಲೇಜ್ ನೀಡಲಿದೆ. ಇದು ದೇಶದಲ್ಲಿ ಅತ್ಯಂತ ಗರಿಷ್ಠ ಮೈಲೇಜ್ ನೀಡಬಲ್ಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಈಗಾಗಲೇ ಬಿಡುಗಡೆಯಾಗಿ ಡೆಲಿವರಿ ಆರಂಭಿಸಿರುವ ಒಲಾ ಎಲೆಕ್ಟ್ರಿಕ್(Ola Electric Scooter) ಸ್ಕೂಟರ್ ಸದ್ಯ ಗರಿಷ್ಠ ಮೈಲೇಜ್ ನೀಡಬಲ್ಲ ಸ್ಕೂಟರ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಲಾ ಸ್ಕೂಟರ್ 181 ಕಿ.ಮೀ ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿದೆ. ಆದರೆ ಸಾಮಾನ್ಯವಾಗಿ 100 ರಿಂದ 110 ಕಿ.ಮೀ ಮೈಲೇಜ್ ನೀಡಲಿದೆ. ಆದರೂ ಇದುವೆ ಗರಿಷ್ಠ ಮೈಲೇಜ್ ಎಲೆಕ್ಟ್ರಿಕ್ ಸ್ಕೂಟರ್. ಆದರೆ ಸಿಂಪಲ್ ಒನ್ 203 ಕಿ.ಮೀ ಕಂಪನಿ ಹೇಳಿರುವ ಮೈಲೇಜ್. ಆನ್ ಗ್ರೌಂಡ್ 140 ರಿಂದ 150 ಮೈಲೇಜ್ ನೀಡುವ ಸಾಧ್ಯತೆ ಇದೆ.

Tap to resize

Latest Videos

undefined

Simple Electric Scooter ಓಲಾ ಹಿಂದಿಕ್ಕಿಲು ಸಿಂಪಲ್ ಎನರ್ಜಿ ಪ್ಲಾನ್, ಆರಂಭವಾಗುತ್ತಿದೆ ವಿಶ್ವದ ಅತೀ ದೊಡ್ಡ ಉತ್ಪಾದನಾ ಘಟಕ!

ಸಿಂಪಲ್ ಒನ್ ಸ್ಕೂಟರ್ ಅನಾವರಣ ಮಾಡಿದ ಮಾಡೆಲ್‌ಗಿಂತ ಉತ್ಪಾದನೆ ಮಾಡೆಲ್ ಕೊಂಚ ಬದಲಾಗಲಿದೆ ಎಂದು ಕಂಪನಿ ಹೇಳಿದೆ. ಕೆಲ ಬದಲಾವಣೆಗಳನ್ನು ಮಾಡಲು ಸಿಂಪಲ್ ಎನರ್ಜಿ ಮುಂದಾಗಿದೆ. ಬೆಂಗಳೂರಿನ ಹಲವು ಭಾಗದಲ್ಲಿ ಸಿಂಪಲ್ ಒನ್ ರೋಡ್ ಟೆಸ್ಟ್ ಮಾಡಿದೆ. ಈ ಟೆಸ್ಟ್‌ನಲ್ಲಿ ಮೈಲೇಜ್ ವಿಚಾರದಲ್ಲಿ ಕಂಪನಿ ಸಂತಸ ವ್ಯಕ್ತಪಡಿಸಿದೆ. ಹೀಗಾಗಿ ಸಿಂಪಲ್ ಒನ್ ಸ್ಕೂಟರ್ ದೇಶದ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಟಿಸಲಿದೆ.

ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ 4.5KW ಎಲೆಕ್ಟ್ರಿಕ್ ಮೋಟಾರ್ ಬಳಸಲಾಗಿದೆ.  4.8 KW ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದೆ. ಇಕೋ ಮೊಡ್‌ನಲ್ಲಿ 203 ಕಿ.ಮೀ ಮೈಲೇಜ್ ನೀಡಲಿದೆ. 0ಯಿಂದ 40 ಕಿ.ಮೀ ವೇಗ ಪಡೆಯಲು ಕೇವಲ 2.9 ಸೆಕೆಂಡ್ ತೆಗೆದುಕೊಳ್ಳಲಿದೆ. ಸಿಂಪಲ್ ಒನ್ ಗರಿಷ್ಠ ವೇಗ 105 ಕಿಲೋಮೀಟರ್ ಪ್ರತಿ ಗಂಟೆಗೆ.

Best electric scooters:ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಪ್ಲಾನ್ ನಿಮಗಿದೆಯಾ, ಇಲ್ಲಿದೆ ಟಾಪ್ 10 ಟು ವ್ಹೀಲರ್!

ಸಿಂಪಲ್ ಒನ್ ಸ್ಕೂಟರ್ ಬ್ಯಾಟರಿಯಲ್ಲಿ ಕೆಲ ವಿಶೇಷತೆಗಳಿವೆ. ಫಿಕ್ಸೆಡ್ ಬ್ಯಾಟರಿ, ಹೊರ ತೆಗೆಯಬಲ್ಲ ಬ್ಯಾಟರಿ ಆಯ್ಕೆಗಳಿವೆ. 7 ಕೆಜಿ ತೂಕದ ಬ್ಯಾಟರಿ ಆಯ್ಕೆಯೂ ಹೊಂದಿದೆ. ಈ ಬ್ಯಾಟರಿ 60 ಕಿಲೋಮೀಟರ್ ಮೈಲೇಜ್ ನೀಡಬಲ್ಲ ಸಾಮರ್ಥ್ಯ ಹೊಂದಿದೆ. ಇದರ ಜೊತೆಗೆ ಕಂಪನಿ ನಗರಗಳಲ್ಲಿ ಫಾಸ್ಟ್ ಚಾರ್ಜಿಂಗ್ ಸ್ಟೇಶನ್ ಅಳವಡಿಸಲು ಮುಂದಾಗಿದೆ.

ಸಿಂಪರ್ ಒನ್ ಸ್ಕೂಟರ್ ಬೆಲೆ ಈಗಾಗಲೇ ಬಹಿರಂಗ ಮಾಡಲಾಗಿದೆ. ಸಿಂಪಲ್ ಒನ್ ಸ್ಕೂಟರ್ ಬೆಲೆ 1.10 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ ಬೆಂಗಳೂರು). ಉತ್ಪಾದನೆಗೆ ರೆಡಿಯಾಗಿರುವ ಸಿಂಪಲ್ ಒನ್ 2022ರ ಆರಂಭಿಕ ದಿನಗಳಲ್ಲೇ ಬಿಡುಗಡೆಯಾಗುವ ಸಾಧ್ಯತೆ ಇದೆ. ಸಿಂಪಲ್ ಒನ್ ಸ್ಕೂಟರ್ ಬಿಡುಗಡೆ ಮಾಡಲು 1,947 ರೂಪಾಯಿ ಪಾವತಿಸಿ ಬುಕ್ ಮಾಡಿಕೊಳ್ಳಬುಹುದು.

ಸಿಂಪಲ್ ಒನ್ ಅನಾವರಣಗೊಂಡ ದಿನವೇ ಒಲಾ ಸ್ಕೂಟರ್ ಬಿಡುಗಡೆಯಾಗಿತ್ತು. ಒಲಾ ಡೆಲಿವರಿ ದಿನಾಂಕವನ್ನು ಮುಂದೂಡುತ್ತಲೇ ಬಂದಿತ್ತು. ಕೊನೆಗೂ ಡಿಸೆಂಬರ್ 15 ರಿಂದ ಒಲಾ ಸ್ಕೂಟರ್ ಡೆಲಿವರಿ ಆರಂಭಿಸಿದೆ. ಇದಕ್ಕೂ ಮುನ್ನ ಸೆಪ್ಟೆಂಬರ್ ತಿಂಗಳಲ್ಲಿ ಒಲಾ ಟೆಸ್ಟ್ ರೈಡ್ ನಡೆಸಿತ್ತು. ಒಲಾ ಬುಕ್ ಮಾಡಿದ ಗ್ರಾಹಕರಿಗೆ ಅತೀ ದೊಡ್ಡ ಟೆಸ್ಟ್ ರೈಡ್ ನಡೆಸಿತ್ತು. 
 

click me!