Royal Enfield Classic 500: ಗಮನ ಸೆಳೆಯುತ್ತಿದೆ ಸೆಳೆಯುತ್ತಿದೆ ವೈಯಕ್ತೀಕರಿಸಿದ ರಾಯಲ್ ಎನ್ಫೀಲ್ಡ್!

By Suvarna News  |  First Published Dec 27, 2021, 1:05 PM IST
  • ವಿಶ್ವದ ಅತಿ ಪುರಾತನ ದ್ವಿಚಕ್ರ ವಾಹನ ತಯಾರಕ ಕಂಪನಿ ರಾಯಲ್‌ ಎನ್‌ಫೀಲ್ಡ್‌
  • ವೈಯಕ್ತೀಕರಿಸಿದ, ಮಾರ್ಪಾಡು ಮಾಡಲಾದ ರಾಯಲ್‌ ಎನ್‌ಫೀಲ್ಡ್‌ 500
  • ಮನಸೂರೆಗೊಳ್ಳುವ ವಿನ್ಯಾಸ, ಬಣ್ಣಗಳ ಆಯ್ಕೆ

Auto Desk: ವಿಶ್ವದ ಅತಿ ಪುರಾತನ ದ್ವಿಚಕ್ರ ವಾಹನ ತಯಾರಕ ಕಂಪನಿಗಳಲ್ಲಿ ರಾಯಲ್‌ ಎನ್‌ಫೀಲ್ಡ್‌ (Royal Enfield) ಕೂಡ ಒಂದು. ಇದರಲ್ಲಿ ಹಲವು ಬಗೆಯ ರೆಟ್ರೋ (Retro) ಹಾಗೂ ನಿಯೋ ರೆಟ್ರೋ (Neo Retro) ವಿನ್ಯಾಸದ ಮಾದರಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ರಾಯಲ್‌ ಎನ್‌ಫೀಲ್ಡ್‌ ಈಗ ತನ್ನ ಪೋರ್ಟ್‌ಫೋಲಿಯೋ ಅನ್ನು ವಿಸ್ತರಿಸುತ್ತಿದ್ದು, 2021ರಲ್ಲಿ ಹೊಸ ಪೀಳಿಗೆಯ ಕ್ಲಾಸಿಕ್‌ ಸರಣಿಯ ಮೋಟಾರ್‌ಸೈಕಲ್‌ ಅನ್ನು ಬಿಡುಗಡೆಗೊಳಿಸಿದೆ.

ಇದರ ಹಿಂದಿನ ಪೀಳಿಗೆಯ ಕ್ಲಾಸಿಕ್‌ ಮೋಟಾರ್‌ಸೈಕಲ್‌ಗಳು 350 ಸಿಸಿ ಹಾಗೂ 500 ಸಿಸಿ ವೇರಿಯಂಟ್‌ಗಳಲ್ಲಿ ಲಭ್ಯವಿದ್ದವು. ನಂತರ, 500 ಸಿಸಿ ಮೋಟಾರ್‌ ಸೈಕಲ್‌ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದರ ಜೊತೆಗೆ, ದೇಶದಲ್ಲಿ ಹಲವು ಮಾರ್ಪಾಡು ಮಾಡಲಾದ ಅಥವಾ ವೈಯಕ್ತೀಕರಿಸಿದ ರಾಯಲ್‌ ಎನ್‌ಫೀಲ್ಡ್‌ ಮೋಟಾರ್‌ಸೈಕಲ್‌ಗಳು ದೊರೆಯುತ್ತವೆ. ಇಲ್ಲಿ ಅಂತಹದು ಒಂದೇ ಮಾರ್ಪಾಡು ಮಾಡಲಾದ ಮೋಟಾರ್‌ ಸೈಕಲ್‌ ಬಗ್ಗೆ ವಿವರಿಸುತ್ತೇವೆ..

Latest Videos

undefined

ಐಮೋರ್‌ ಕಸ್ಟಮ್ಸ್‌ ಮಾರ್ಪಾಡು!

ಈ ಕ್ಲಾಸಿಕ್‌ 500 ಬೈಕ್‌ ಅನ್ನು ಐಮೋರ್‌ ಕಸ್ಟಮ್ಸ್‌ ( Eimor Customs) ಅವರು ಅತ್ಯುತ್ತಮವಾಗಿ ಮಾರ್ಪಾಡು ಮಾಡಿದೆ. ಈಗಾಗಲೇ ಅದರ ಮಾದರಿ ಐಮೋರ್‌ ಕಸ್ಟಮ್ಸ್‌ ಫೇಸ್‌ಬುಕ್‌ ಪುಟದಲ್ಲಿ ಲಭ್ಯವಿದೆ. ಈ ಮೋಟಾರ್‌ಸೈಕಲ್‌ ಅನ್ನು ಸಂಪೂರ್ಣವಾಗಿ ಕ್ರೂಸರ್‌ ಮೋಟಾರ್‌ಸೈಕಲ್‌ ಆಗಿ ಪರಿವರ್ತಿಸಲಾಗಿದೆ. ಇದರ ವಿನ್ಯಾಸ ಕೆಲವೊಂದು ಕೋನದಲ್ಲಿ ಹಾರ್ಲೇ ಡೇವಿಡ್‌ಸನ್‌ (Harley Devidson) ಬೈಕಿನಿಂದ ಪ್ರೇರೇಪಿತವಾಗಿದೆ ಎಂಬ ಭಾವನೆ ಕೂಡ ಮೂಡಬಹುದು.

ಈ ಮಾರ್ಪಾಡಾದ ಬೈಕ್‌ ಅನ್ನು ನೋಡಿದಾಗ ಮೊದಲಿಗೆ ನಿಮ್ಮ ಕಣ್ಣಿಗೆ ಬೀಳುವುದು ಇದರ ಪೇಂಟ್‌. ಇದರಲ್ಲಿ ಮುಖ್ಯ ಭಾಗಗಳನ್ನು ವೈನ್‌ ಕೆಂಪು ಬಣ್ಣದಿಂದ ಪೇಂಟ್‌ ಮಾಡಲಾಗಿದೆ. ಉಳಿದ ಭಾಗಗಳು ಕಪ್ಪು ಬಣ್ಣದಲ್ಲಿವೆ. ಮುಂಭಾಗದಲ್ಲಿ ಸ್ಟೀಲ್‌ ರಾಡುಗಳಿವೆಯಾದರೂ, ಅವುಗಳನ್ನು ಕೂಡ ಕಪ್ಪು ಬಣ್ಣದಲ್ಲಿ ಪೇಂಟ್‌ ಮಾಡಲಾಗಿದೆ. ಇದರ ಚಕ್ರಗಳನ್ನು ವ್ರ್ಯಾಪ್‌ ಮಾಡಿ 18 ಇಂಚಿನ ಟೈರ್‌ನಂತೆ ಕಾಣುವಂತೆ ಮಾಡಲಾಗಿದೆ. ಇದರಲ್ಲಿನ ಸ್ಟಾಕ್‌ ಹೆಡ್‌ಲಾಪ್‌ ಬದಲಿಗೆ ಪ್ರೊಜೆಕ್ಟರ್‌ ಎಲ್‌ಇಡಿ (LED) ಲೈಟ್‌ಗಳನ್ನು ಬಳಸಲಾಗಿದೆ.

ವೈನ್‌ ಕೆಂಪು ಬಣ್ಣದಿಂದ ಪೇಂಟ್‌!

ಜೊತೆಗೆ, ಇದರಲ್ಲಿನ ಇನ್‌ಸ್ಟ್ರೂಮೆಂಟ್‌ ಕ್ಲಸ್ಟರ್‌ (ಡಿಸ್‌ಪ್ಲೇ) ಅನ್ನು ತೆಗೆದುಹಾಕಲಾಗಿದೆ. ಸ್ಟಾಕ್‌ ಹ್ಯಾಂಡಲ್‌ ಬಾರ್‌ ಅನ್ನು ಕೂಡ ಆಪ್ಟರ್‌ ಮಾರ್ಕೆಟ್‌ ಯೂನಿಟ್‌ಗಳಿಂದ ಬದಲಿಸಲಾಗಿದೆ. ಮುಂದೆ ಟರ್ನ್ ಇಂಡಿಕೇಟರ್‌ಗಳಿವೆ. ಬೈಕ್‌ನಲ್ಲಿ ಇಂಧನ ಟ್ಯಾಂಕ್‌ ಅನ್ನು ವೈಯಕ್ತೀಕರಿಸಲಾಗಿದ್ದು, ಇಂಧನ ಟ್ಯಾಂಕ್‌ ಇರಿಸುವ ಜಾಗವನ್ನು ಕೂಡ ಸ್ವಲ್ಪ ಮಟ್ಟಿಗೆ ಬದಲಿಸಲಾಗಿದೆ. ಇದರ ವಿನ್ಯಾಸ ಹೇಗಿದೆಯೆಂದರೆ, ಅದರ ಕೆಳಗೆ ಬಾಗಿ ಬೈಕ್‌ನ ಸೀಟ್‌ ಅನ್ನು ತಲುಪುವಂತಿದೆ.

ಈ ಇಂಧನ ಟ್ಯಾಂಕ್‌ ಸ್ವಲ್ಪ ಎತ್ತರದಲ್ಲಿ ಇರಿಸಿರುವುದರಿಂದ, ಬೈಕ್‌ನ ಎತ್ತರ ಕೂಡ ಕಡಿಮೆಯಾಗಿದೆ ಎಂಬ ಭಾವನೆ ಮೂಡುತ್ತದೆ. ಆದರೆ, ಅಂತಹ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇದರ ಸಿಂಗಲ್‌ ಸೀಟ್‌ ಅನ್ನು ಕೂಡ ತುಂಬಾ ಉತ್ತಮವಾಗಿ ವಿನ್ಯಾಸಗೊಳಿಸಲಾಗಿದ್ದು, ಇಡೀ ಬೈಕ್‌ನ ವಿನ್ಯಾಸಕ್ಕೆ ಹೊಂದಿಕೊಳ್ಳುತ್ತದೆ. ಇದರ ಎರಡೂ ಬದಿಗಳಲ್ಲಿ ವೈನ್‌ ಕೆಂಪು ಬಣ್ಣದಿಂದ ಪೇಂಟ್‌ ಮಾಡಲಾಗಿದೆ. ಉಳಿದಂತೆ ಇಂಜಿನ್‌ ಕೇಸ್‌ ಅನ್ನು ಕಪ್ಪು ಬಣ್ಣದಲ್ಲಿರಿಸಲಾಗಿದೆ.

ಪಿಲಿಯನ್‌ ರೈಡರ್‌ಗಾಗಿ ಬ್ಯಾಕ್‌ ರೆಸ್ಟ್‌!

ಬ್ರೇಕ್ ಮತ್ತು ಕ್ಲಚ್ ಲಿವರ್ ಕೂಡ ಬದಲಾಗಿವೆ. ಬೈಕ್‌ ಚಾಲಕನ ಕಾಲು ಇರಿಸುವ ಪೆಗ್‌ಗಳ ಸ್ಥಳ ಬದಲಿಸಲಾಗಿದ್ದು, ಆರಾಮದಾಯಕ ಚಾಲನೆಯ ಅನುಭವ ನೀಡಲಿದೆ. ಸ್ಟಾಕ್ ಎಕ್ಸಾಸ್ಟ್ ಪೈಪ್ ಕಪ್ಪು ಬಣ್ಣದಲ್ಲಿದೆ. ಪಿಲಿಯನ್‌ ರೈಡರ್‌ಗಾಗಿ ಬ್ಯಾಕ್‌ ರೆಸ್ಟ್‌ ಅನ್ನು ಕೂಡ ನೀಡಲಾಗಿದೆ. ಎಲ್‌ಇಡಿ(LED) ಸ್ಟ್ರೈಫ್‌ ಇರುವ ಟೈಲ್ ಲ್ಯಾಂಪ್ (tail lamp), ಎಲ್ಇಡಿ ಟರ್ನ್ ಇಂಡಿಕೇಟರ್‌ಗಳು ಬೈಕ್‌ಗೆ ಒಂದು ಸಂಪೂರ್ಣ ಲುಕ್‌ ನೀಡುತ್ತವೆ.

ಈ ಮಾರ್ಪಾಡು ಮಾಡಲಾದ ಮೋಟಾರ್‌ಸೈಕಲ್‌ನ ಸಸ್ಪೆನ್ಷನ್‌ ಸೆಟಪ್‌ನಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಹಾಗೆ, ಇಂಜಿನ್‌ ಕೂಡ ಹಳೆಯದೇ ಉಳಿಸಿಕೊಳ್ಳಲಾಗಿದೆ. ಇಂತಹ ವಿನೂತನ ವೈಯಕ್ತೀಕರಿಸಿದ ಬೈಕ್‌ ಬಗ್ಗೆ ಆಸಕ್ತಿಯುಳ್ಳವರು ಹೈದ್ರಾಬಾದ್ ಮೂಲದ ಐಮೋರ್ ಕಸ್ಟಮ್ಸ್‌ ಅನ್ನು ಸಂಪರ್ಕಿಸಬಹುದು.

ಇದನ್ನೂ ಓದಿ:

1) Mahindra SUV: 2022ರಲ್ಲಿ ಬರಲಿದೆ ಬಹುನಿರೀಕ್ಷೆಯ ಮಹೀಂದ್ರ ನ್ಯೂ ಸ್ಕಾರ್ಪಿಯೋ!

2) Automobile ಉದ್ಯಮ 2022ರಲ್ಲಿ ಕಠಿಣ ಸವಾಲುಗಳನ್ನು ಎದುರಿಸಲಿದೆ : ರಾಜೀವ್‌ ಚಾಬಾ!

3) Dual Mode Vehicle: ರಸ್ತೆ ಮತ್ತು ರೈಲು ಹಳಿಗಳೆರಡರ ಮೇಲೂ ಓಡಲಿದೆ ಜಪಾನ್‌ನ ಮಿನಿ ಬಸ್!‌

click me!