Electric 2 Wheeler ಬೈಕ್, ಸ್ಕೂಟರ್ ಸೇರಿ ಮೂರು ಎಲೆಕ್ಟ್ರಿಕ್ ದ್ವಿಚಕ್ರವಾಹನ ಅನಾವರಣ, ಜಿಟಿ ಫೋರ್ಸ್‌ಗೆ ಉತ್ತಮ ಸ್ಪಂದನೆ!

By Suvarna News  |  First Published Dec 27, 2021, 5:26 PM IST
  • ಹೊಸ ವರ್ಷಕ್ಕೂ ಮುನ್ನ ಮತ್ತೆ 3 ಎಲೆಕ್ಟ್ರಿಕ್ ದ್ವಿಚಕ್ರವಾಹನ ಬಿಡುಗಡೆ
  • ಜಿಟಿ ಫೋರ್ಸ್ ಕಂಪನಿಯಿಂದ ಅತ್ಯುತ್ತಮ ದರ್ಜೆಯ ವಾಹನ ಬಿಡುಗಡೆ
  • 150 ಕಿಲೋಮೀಟರ್ ಮೈಲೇಜ್ ಸಾಮರ್ಥ್ಯ ಹೊಂದಿರುವ ದ್ವಿಚಕ್ರ ವಾಹನ

ನವದೆಹಲಿ(ಡಿ.27): ಭಾರತ ಇದೀಗ ಎಲೆಕ್ಟ್ರಿಕ್ ಸ್ಕೂಟರ್‌ ಉತ್ಪಾದನೆಯ ತವರಾಗಿ ಮಾರ್ಪಟ್ಟಿದೆ. ಪ್ರತಿ ದಿನ ಹೊಸ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನ(Electric Two Wheelers) ಬಿಡುಗಡೆಯಾಗುತ್ತಿದೆ. ಇದೀಗ ಜಿಟಿ ಫೋರ್ಸ್(GT Force) ಕಂಪನಿ ಮೂರು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಿಡುಗಡೆ ಮಾಡಿದೆ.   ಇ.ವಿ ಇಂಡಿಯಾ ಎಕ್ಸ್‌ಪೊ 2021(EV India Expo 2021 ) ರಲ್ಲಿ ಮೂರು ಎಲೆಕ್ಟ್ರಿಕ್ ದ್ವಿಚಕ್ರ-ವಾಹನಗಳಾದ ಜಿಟಿ ಡ್ರೈವ್, ಜಿಟಿ ಡ್ರೈವ್ ಪ್ರೊ, ಮತ್ತು ಎಲೆಕ್ಟ್ರಿಕ್ ಮೊಟಾರ್‌ಸೈಕಲ್ ಪ್ರೊಟೊಟೈಪ್ ಅನ್ನು ಪ್ರದರ್ಶನಗೊಳಿಸಿತು. ಸ್ಟಾರ್ಟ್-ಅಪ್ ಇ.ವಿ ತಯಾರಕರು ಚಮತ್ಕಾರಿ ಶೈಲಿ ಮತ್ತು ಉತ್ತಮ ತಂತ್ರಜ್ಞಾನವನ್ನು ಪ್ರದರ್ಶಿಸುವ ಉನ್ನತ ಮಟ್ಟದ ಇ.ವಿ ಉತ್ಪನ್ನಗಳ ಚಕಿತಗೊಳಿಸುವ ಲೈನ್-ಅಪ್ ಅನ್ನು ಪ್ರಸ್ತುತಪಡಿಸಿದರು.

ಜಿಟಿ ಡ್ರೈವ್ - ಹೆಚ್ಚಿನ ವೇಗದ ವಿಭಾಗದಲ್ಲಿ ಜಿಟಿ-ಫೋರ್ಸ್ ಮೂಲಕ ಅನಾವರಣಗೊಳಿಸಿದ ಇ-ಸ್ಕೂಟರ್ ಬ್ರ್ಯಾಂಡ್‌ನಲ್ಲಿ ಜಿಟಿ ಡ್ರೈವ್ ಸಾಲಿಗೆ ಸೇರ್ಪಡೆಯಾಗಿದೆ. ಇದು ಗಂಟೆಗೆ 60 ಕಿಮೀ ವೇಗವನ್ನು ನೀಡುತ್ತದೆ ಮತ್ತು ಒಂದೇ ಚಾರ್ಜ್‌ನಲ್ಲಿ 150 ಕಿಲೋಮೀಟರ್‌ಗಳ ಮೈಲೇಜ್ ನೀಡುತ್ತದೆ. ಉತ್ಪನ್ನವು ಲಿಥಿಯಂ-ಐಯಾನ್ ಬ್ಯಾಟರಿಯಲ್ಲಿ ಲಭ್ಯವಿದೆ. ಇದು ಆರ್ಥಿಕತೆ, ಸ್ಟ್ಯಾಂಡರ್ಡ್ ಮತ್ತು ಟರ್ಬೊ ಎಂಬ ಮೂರು ಡ್ರೈವ್ ಮೋಡ್‌ಗಳೊಂದಿಗೆ ಬರುತ್ತದೆ. ಸ್ಕೂಟರ್ ಕ್ರೂಸ್ ಕಂಟ್ರೋಲ್ ಸಿಸ್ಟಮ್‌ನೊಂದಿಗೆ ಬರುತ್ತದೆ.

Latest Videos

undefined

Electric Cars ಹೊಸ ವರ್ಷಕ್ಕೆ ಟಾಟಾದಿಂದ ಗೂಡ್ ನ್ಯೂಸ್, 400+ ಮೈಲೇಜ್ ಟಾಟಾ ನೆಕ್ಸಾನ್ EV ಬಿಡುಗಡೆ ರೆಡಿ!

ಜಿಟಿ ಡ್ರೈವ್ ಪ್ರೊ- ನಿಧಾನಗತಿಯ ವರ್ಗದಲ್ಲಿರುವ ಇ-ಸ್ಕೂಟರ್ ಕಡಿಮೆ-ದೂರ ಪ್ರಯಾಣದ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ. ಕುಟುಂಬ, ಮಹಿಳೆಯರು ಮತ್ತು ಮಕ್ಕಳ ಅಗತ್ಯತೆಗಳನ್ನು ಅರ್ಥೈಸಿಕೊಂಡು, ಉತ್ಪನ್ನವನ್ನು ಎಲ್ಲರೊಂದಿಗೆ ಹೊಂದಿಕೆಯಾಗುವಂತೆ ವಿನ್ಯಾಸಗೊಳಿಸಲಾಗಿದೆ(Customer Demand). ಇದು ಒಂದೇ ಚಾರ್ಜ್‌ನಲ್ಲಿ 150 ಕಿಲೋಮೀಟರ್ ದೂರವನ್ನು ಸುಲಭವಾಗಿ ಕ್ರಮಿಸುತ್ತದೆ ಮತ್ತು ಪ್ರತಿ ಗಂಟೆಗೆ 25 ಕಿಲೋಮೀಟರ್ ವೇಗವನ್ನು ನೀಡುತ್ತದೆ. ಈ ಉತ್ಪನ್ನವು ಲೀಡ್ ಆಸಿಡ್ ಮತ್ತು ಲಿಥಿಯಂ-ಐಯಾನ್ ಬ್ಯಾಟರಿ ಆವೃತ್ತಿಗಳಲ್ಲಿ ಲಭ್ಯವಿದೆ.

ಇ.ವಿಗಳು ದೂರ ಪ್ರಯಾಣದ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗದಿರಬಹುದು ಅಥವಾ ಬಹುಶಃ ಅವು ಅನಾನುಕೂಲಕರವಾಗಿರಬಹುದು ಎಂಬ ತಪ್ಪು ಕಲ್ಪನೆಯಲ್ಲಿ ಜನರಿದ್ದಾರೆ. ಈ ತಪ್ಪು ಕಲ್ಪನೆಗೆ ಕಾರಣವೇನೆಂದರೆ, ಅವರು ಇನ್ನೂ ಉತ್ಪನ್ನಗಳನ್ನು ನಿಜವಾಗಿಯೂ ಪ್ರಯತ್ನ ಮಾಡಿಯೇ ಇಲ್ಲ. ಆದ್ದರಿಂದ, ಉತ್ಪನ್ನವನ್ನು ದೇಶದ ಮೂಲೆ ಮೂಲೆಗಳಲ್ಲಿ ಲಭ್ಯವಾಗುವಂತೆ ಮಾಡಲು ನಾವು ಶ್ರಮಿಸುತ್ತಿದ್ದೇವೆ. ಹೆಚ್ಚಿನ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಲು ವಿತರಕರ ಜಾಲವನ್ನು ವಿಸ್ತರಿಸಲು ತಂಡವು ಎಲ್ಲಾ ಪ್ರಯತ್ನಗಳನ್ನು ಮಾಡಿದೆ ಎಂದು  ಜಿಟಿ ಫೋರ್ಸ್  ಸಿಇಒ ಮುಖೇಶ್ ತನೇಜಾ ಹೇಳಿದ್ದಾರೆ. 

Electric 2 Wheeler Sales ಕೇಂದ್ರದ ಸಬ್ಸಿಡಿಯಿಂದ ಹೊಸ ದಾಖಲೆ ನಿರ್ಮಾಣ, ವಾರಕ್ಕೆ 5,000 ಟು ವ್ಹೀಲರ್ ಸೇಲ್!

ಭಾರತವು ನಿಧಾನಗತಿಯಲ್ಲಿ ಐಸಿಇ ನಿಂದ ಇ.ವಿ ಕಡೆಗೆ ಚಲಿಸುತ್ತಿದೆ. ಬಳಕೆದಾರರಿಗೆ ಕೈಗೆಟುಕುವ ಗುಣಮಟ್ಟದ ಉತ್ಪನ್ನಗಳನ್ನು ನೀಡುವ ಮೂಲಕ ನಾವು ನಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದೇವೆ. ಇದರ ಉದ್ದೇಶವು ದೊಡ್ಡ ರಾಷ್ಟ್ರೀಯ ಮಹತ್ವಾಕಾಂಕ್ಷೆಗೆ ಸೇರಿಕೊಳ್ಳುವುದಾಗಿದೆ, ಮತ್ತು ಅದನ್ನು ಮಾಡಲು ಅಂತಿಮ-ಬಳಕೆದಾರರು ಇ.ವಿ ತಂತ್ರಜ್ಞಾನದೊಂದಿಗೆ ಪರಿಚಿತರಾಗಿರುವುದು ಕಡ್ಡಾಯವಾಗಿದೆ. ಜನರ ಪ್ರಯಾಣದ ಸವಾಲುಗಳನ್ನು ಒಂದೊಂದಾಗಿ ಪರಿಹರಿಸುವ ರೀತಿಯಲ್ಲಿ ನಾವು ನಮ್ಮ ಉತ್ಪನ್ನವನ್ನು ವಿಸ್ತರಿಸುತ್ತಿದ್ದೇವೆ. ನಮ್ಮ ನಿಧಾನಗತಿಯ ಉತ್ಪನ್ನಗಳು ಮಕ್ಕಳು, ಮಹಿಳೆಯರು ಮತ್ತು ಕುಟುಂಬಗಳ ಕಡಿಮೆ ದೂರದ ದೈನಂದಿನ ಪ್ರಯಾಣವನ್ನು ಸುಲಭವಾಗಿ ಪೂರೈಸಬಹುದಾಗಿದೆ. ಇ.ವಿ ಗಳ ಪ್ರವೇಶದ ನಂತರ, ಜನರು ಅವುಗಳನ್ನು ಆಯ್ಕೆ ಮಾಡಲು ಪ್ರಾರಂಭಿಸುತ್ತಾರೆ. ತಂತ್ರಜ್ಞಾನದೊಂದಿಗೆ ಪರಿಚಿತ ಮತ್ತು ಆರಾಮದಾಯಕವಾದ ನಂತರವೇ ಅವರು ಐಸಿಇ ಗೆ ಇವಿ ಅನ್ನು ಬದಲಾಯಿಸಲು ಮಾಹಿತಿಯುಕ್ತ ನಿರ್ಧಾರವನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು   ಜಿಟಿ-ಫೋರ್ಸ್‌ನ ಸಿಒ-ಸಂಸ್ಥಾಪ ರಾಜೇಶ್ ಸೈತ್ಯ ಹೇಳಿದ್ದಾರೆ.

ಹೆಚ್ಚುವರಿಯಾಗಿ,ಈ ಬ್ರ್ಯಾಂಡ್ ತನ್ನ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನ ಮೂಲ ಮಾದರಿಯನ್ನು ಎಕ್ಸ್‌ಪೋದಲ್ಲಿ ಪ್ರೇಕ್ಷಕರಿಗಾಗಿ ಅನಾವರಣಗೊಳಿಸಿದೆ. ಕ್ಯಾಲೆಂಡರ್ ವರ್ಷ 2022 ರ ದ್ವಿತೀಯಾರ್ಧದಲ್ಲಿ ಈ ಮೋಟಾರ್‌ಬೈಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

Best electric scooters:ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಪ್ಲಾನ್ ನಿಮಗಿದೆಯಾ, ಇಲ್ಲಿದೆ ಟಾಪ್ 10 ಟು ವ್ಹೀಲರ್!

ಜಿಟಿ-ಫೋರ್ಸ್ ಈಗಾಗಲೇ ತನ್ನ ವಿತರಕರ ಜಾಲವನ್ನು ದೇಶದಾದ್ಯಂತ 80 ನಗರಗಳಲ್ಲಿ 100 ಕ್ಕೂ ಹೆಚ್ಚು ಡೀಲರ್‌ಶಿಪ್‌ನೊಂದಿಗೆ ವಿಸ್ತರಿಸಲ್ಪಟ್ಟಿದೆ. ಪ್ರಸ್ತುತ, ಇದು ಮಹಾರಾಷ್ಟ್ರ, ಕರ್ನಾಟಕ, ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ರಾಜಸ್ಥಾನದಲ್ಲಿ ಪ್ರಬಲವಾದ ಅಸ್ತಿತ್ವವನ್ನು ಹೊಂದಿದೆ. ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ತನ್ನ ನೆಟ್‌ವರ್ಕ್ ಅನ್ನು 150 ಕ್ಕೂ ಹೆಚ್ಚು ವಿತರಕರಿಗೆ ವಿಸ್ತರಣೆ ಮಾಡುವ ಗುರಿಯನ್ನು ಹೊಂದಿದೆ. ಬ್ರ್ಯಾಂಡ್ ಈಗಾಗಲೇ ಅಂತಿಮ ಬಳಕೆದಾರರಿಗಾಗಿ ಮಾರುಕಟ್ಟೆಯಲ್ಲಿ 07 ಉತ್ಪನ್ನಗಳನ್ನು ಹೊಂದಿದೆ.

ಜಿಟಿ-ಫೋರ್ಸ್ ಸ್ಟಾರ್ಟ್ ಆಫ್:
ಜಿಟಿ-ಫೋರ್ಸ್ ಹ್ಯೂಸ್ಟನ್ ಇನ್ನೋವೇಶನ್ಸ್ ಎಲ್ಎಲ್‌ಪಿ ಯ ಪ್ರಮುಖ ಬ್ರಾಂಡ್ ಆಗಿದೆ ಮತ್ತು ಇದು ಹರಿಯಾಣದ ಮಾನೇಸರ್‌ ಎಂಬಲ್ಲಿ ತನ್ನ ಪ್ರಧಾನ ಕಛೇರಿಯನ್ನು ಹೊಂದಿದೆ. ಈ ಬ್ರ್ಯಾಂಡ್ ಯಾವಾಗಲೂ ಸುಸ್ಥಿರ ಮತ್ತು ಆರಾಮದಾಯಕವಾದ ಖಾಸಗಿ ಸಾರಿಗೆಯಲ್ಲಿ ನಂಬಿಕೆ ಹೊಂದಿದೆ. ಆರಂಭದಿಂದಲೂ ಸಂಸ್ಥೆಗೆ ಸಂಬಂಧಿಸಿದ ಜನರು ಮಾರುಕಟ್ಟೆಯಲ್ಲಿ ನಂಬಿಕೆಯನ್ನು ಬೆಳೆಸುವುದಕ್ಕಾಗಿ ಶ್ರಮಿಸಿದರು. ಜಿಟಿ ಫೋರ್ಸ್ ಬ್ರಾಂಡ್ ಹೆಸರಿನಲ್ಲಿ ಜಿಟಿ ಫೋರ್ಸ್ ವಿವಿಧ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದೆ. ಜಿಟಿ ಫೋರ್ಸ್ ಶ್ರೇಣಿಯ ವಿನ್ಯಾಸದ ಮಾದರಿಗಳು ಟ್ರೆಂಡಿ, ವೈಶಿಷ್ಟ್ಯತೆಗಳೊಂದಿಗೆ ಲೋಡ್ ಆಗಿದ್ದು ಪರಿಸರ-ಸ್ನೇಹಿ ತಂತ್ರಜ್ಞಾನವನ್ನು ಹೊಂದಿವೆ.

click me!