ಕೈಗೆಟುಕುವ ದರ, 212 ಕಿ.ಮೀ ಮೈಲೇಜ್, ಸಿಂಪಲ್ ಒನ್ ಸ್ಕೂಟರ್ ರಿಟೇಲ್ 50 ನಗರಕ್ಕೆ ವಿಸ್ತರಣೆ!

By Suvarna News  |  First Published May 31, 2023, 7:58 PM IST

ಬೆಂಗಳೂರು ಮೂಲದ ಸಿಂಪಲ್ ಒನ್ ನೂತನ ಎಲೆಕ್ಟ್ರಿಕ್ ಸ್ಕೂಟರ್ ಇದೀಗ ತನ್ನ ರೇಟೆಲ್ ಕಾರ್ಯಾಚರಣೆಯನ್ನು 40 ರಿಂದ 50 ನಗರಕ್ಕೆ ವಿಸ್ತರಿಸಲು ಮುಂದಾಗಿದೆ.ಇದರ ಜೊತೆಗೆ ಬುಕಿಂಗ್ ಮಾಡಿದ ಗ್ರಾಹಕರಿಗೆ ಸ್ಕೂಟರ್ ಡೆಲವರಿಗೆ ಪ್ಲಾನ್ ರೂಪಿಸಿಕೊಂಡಿದೆ. ನೂತನ ಸ್ಕೂಟರ್ ಬೆಲೆ ಹಾಗೂ ಲಭ್ಯತೆ ಮಾಹಿತಿ ಇಲ್ಲಿದೆ. 
 


ಬೆಂಗಳೂರು(ಮೇ.31) ಸಿಂಪಲ್ ಎನರ್ಜಿ ಬಿಡುಗಡೆ ಮಾಡಿರುವ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. 1.45 ಲಕ್ಷ ರೂಪಾಯಿ ಆರಂಭಿಕ ಬೆಲೆಯಲ್ಲಿ ಲಭ್ಯವಿರುವ ನೂತನ ಸ್ಕೂಟರ್ ಬರೋಬ್ಬರಿ 212 ಕಿಲೋಮೀಟರ್ ಮೈಲೇಜ್ ನೀಡಲಿದೆ.  ಸ್ಕೂಟರ್ ಜೊತೆಗೆ  750W ಚಾರ್ಜ್‌ ಕೂಡ ಗ್ರಾಹಕರಿಗೆ ಲಭ್ಯವಾಗಲಿದೆ. ಆಗಸ್ಟ್15, 2021ರಂದು ಜಾಗತಿಕವಾಗಿ ಅನಾವರಣಗೊಂಡ Simple ONE, ಹಲವು ಸುಧಾರಣೆಗಳ ಬಳಿಕ ಇದೀಗ ಮಾರುಕಟ್ಟೆ ಪ್ರವೇಶಿಸಿದೆ. ಇದೀಗ ಬುಕಿಂಗ್ ಮಾಡಿದ ಗ್ರಾಹಕರಿಗೆ ಸ್ಕೂಟರ್ ವಿತರಣೆ ಕಾರ್ಯದಲ್ಲಿ ತೊಡಿಗಿದೆ. ಇದರ ಜೊತೆಗೆ ರಿಟೇಲ್ ಕಾರ್ಯಾಚರಣೆಯನ್ನು 40 ರಿಂದ 50 ನಗರಕ್ಕೆ ವಿಸ್ತರಿಸಲು ಮುಂದಾಗಿದೆ.

Simple ONEಗಾಗಿ ಮಾಡಲಾದ ಬುಕಿಂಗ್ ಪ್ರಾರಂಭವು, ಕೇವಲ 18 ತಿಂಗಳುಗಳಲ್ಲಿ 1 ಲಕ್ಷಕ್ಕಿಂತ ಹೆಚ್ಚಿನ ಪ್ರೀಬುಕಿಂಗ್‌ಗಳನ್ನು ನೋಂದಣಿ ಮಾಡಿಕೊಳ್ಳುವ ಮೂಲಕ ಅಮೋಘ ಪ್ರತಿಕ್ರಿಯೆ ಪಡೆದುಕೊಂಡಿದೆ. ಈಗ, ಅಧಿಕೃತ ಲಾಂಛನದೊಂದಿಗೆ, ಸಂಸ್ಥೆಯು ಬೆಂಗಳೂರಿನೊಂದಿಗೆ ಆರಂಭಿಸಿ, ಹಂತಹಂತವಾಗಿ ಗ್ರಾಹಕ ಡೆಲಿವರಿಗಳನ್ನು ಸಾಧ್ಯಗೊಳಿಸುವ ಯೋಜನೆಗಳನ್ನು ಹೊಂದಿದೆ. ಮುಂಬರುವ ದಿನಗಳಲ್ಲಿ ಡೆಲಿವರಿಗಳು ಆರಂಭವಾಗಲಿದೆ. ಇದರ ಜೊತೆಗೆ ಅದು, 40-50 ನಗರಗಳಲ್ಲಿ 160-180 ರೀಟೇಲ್ ಕಾರ್ಯಾಜಾಲದ ಮೂಲಕ ತನ್ನ ಅಸ್ತಿತ್ವದೊಂದಿಗೆ ಮುಂದಿನ 12 ತಿಂಗಳುಗಳಲ್ಲಿ ಈ ನಗರಗಳಲ್ಲಿ ತನ್ನ ರೀಟೇಲ್ ಕಾರ್ಯಾಚರಣೆಗಳನ್ನು ವಿಸ್ತರಿಸಲಿದೆ. 

Tap to resize

Latest Videos

undefined

212 ಕಿ.ಮೀ ಮೈಲೇಜ್, ಕೈಗೆಟುಕವ ದರ; ಬೆಂಗಳೂರಿನ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್!

Simple ONE ರಿಮೂವೇಬಲ್ ಬ್ಯಾಟರಿ ಹೊಂದಿದೆ. ಐಡಿಸಿಯಲ್ಲಿ 212 ಕಿಲೋಮೀಟ್‌ಗಳ ಮೈಲೇಜ್ ರೇಂಜ್ ಒದಗಿಸುವ ಮೂಲಕ ಭಾರತದಲ್ಲೇ ಅತಿ ದೀರ್ಘ ಶ್ರೇಣಿಯ E2W ಆಗಿರಲಿದೆ. ವಿದ್ಯುತ್ E2W ಕ್ಷೇತ್ರದ ಈ ಹೊಸ ಮತ್ತು ತಾಜಾ ಕೊಡುಗೆಯು ಸಂಪೂರ್ಣವಾಗಿ ಭಾರತದಲ್ಲೇ ತಯಾರಾಗಿದ್ದು(ಭಾರತ ಸರ್ಕಾರದ ಆತ್ಮನಿರ್ಭರದ ಕನಸಿಗೆ ಅನುಗುಣವಾಗಿ), 214 ಐಪಿ ಪೋರ್ಟ್‌ಫೋಲಿಯೋ ಹೊಂದಿದೆ. ಮೇಲಾಗಿ, Simple ONE ಈ ವರ್ಗದಲ್ಲೇ ಅತಿವೇಗದ E2W ಆಗಿದ್ದು, ಕೇವಲ 2.77 ಸೆಕೆಂಡುಗಳಲ್ಲಿ 0-40 kmph ವೇಗ ಪಡೆದುಕೊಳ್ಳುತ್ತದೆ. Simple ONEಅನ್ನು ಇನ್ನಷ್ಟು ವಿಶಿಷ್ಟವನ್ನಾಗಿ ಮಾಡಿರುವ ಮತ್ತೊಂದು ಅಂಶವೆಂದರೆ, ಇದು, ಐಐಟಿ-ಇಂದೋರ್ ನೊಂದಿಗೆ ಸಹಯೋಗಾತ್ಮಕವಾಗಿ ಅಭಿವೃದ್ಧಿಪಡಿಸಲಾದ ಥರ್ಮಲ್ ಮ್ಯಾನೇಜ್ಮೆಂಟ್ ಸಿಸ್ಟಮ್‌ನೊಂದಿಗೆ ಬರುತ್ತಿರುವುದರಿಂದ, ಯಾವುದೇ ಥರ್ಮಲ್ ರನ್ನವೇ(ಶಾಖಸ್ಥಿತಿ)ಗಳನ್ನು ನಿವಾರಿಸಲು ನೆರವಾಗುತ್ತದೆ.

ನಮ್ಮ ಸಂಸ್ಥೆಯ ಇತಿಹಾಸದಲ್ಲೇ ಇಂದು ಅತ್ಯಂತ ಅವಿಸ್ಮರಣೀಯ ದಿನವಾಗಿದೆ. ಈ ಶುಭದಿನವು ಬಹಳ ವರ್ಷಗಳವರೆಗೆ ನಮ್ಮ ನೆನಪಿನಲ್ಲಿರುತ್ತದೆ. ಇದು ನಾವೆಲ್ಲರೂ ಹೆಮ್ಮೆ ಪಡುವಂತಹ ಮೈಲಿಗಲ್ಲನ್ನು ಪ್ರತಿನಿಧಿಸಿ,ನಮ್ಮ ಗುರಿಗಳ ಯಶಸ್ವೀ ಸಾಧನೆಗೆ ಕಾರಣವಾದ ನಮ್ಮ ಸಂಘಟಿತ ಶ್ರಮಗಳನ್ನು ನೆನಪಿಸುತ್ತದೆ ಎಂದು  ಸಿಂಪಲ್ ಎನರ್ಜಿಯ ಸ್ಥಾಪಕ ಮತ್ತು ಸಿಇಒ ಸುಹಾಸ್ ರಾಜ್‌ಕುಮಾರ್ ಹೇಳಿದ್ದಾರೆ. ನಮ್ಮ ಕನಸನ್ನು ನನಸಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ನಮ್ಮ ಹೂಡಿಕೆದಾರರೂ ಒಳಗೊಂಡಂತೆ ಎಲ್ಲಾ ಭಾಗೀದಾರರ ಅಚಲ ಬೆಂಬಲ ಇಲ್ಲದೆ ಇದ್ದಿದ್ದರೆ ಇದು ನಮ್ಮಿಂದ ಸಾಧ್ಯವಾಗುತ್ತಿರಲಿಲ್ಲ. ಸ್ಪರ್ಧಾತ್ಮಕವಾಗಿರುವ ಭಾರತೀಯ ಆಟೋ ಕ್ಷೇತ್ರದಲ್ಲಿ ನಮ್ಮ ಪಯಣವನ್ನು ಆರಂಭಿಸುವುದಕ್ಕೆ ನಮಗೆ ಅತ್ಯಂತ ಉತ್ಸಾಹವೆನಿಸುತ್ತಿದೆ ಮತ್ತು ಉದ್ಯಮದಿಂದ ನಾವು ಪಡೆದುಕೊಳ್ಳುವ ಅಂತರ್ದೃಷ್ಟಿಗಳು ಮತ್ತು ಕಲಿಕೆಯ ಮೂಲಕ ನಾವು ನಮ್ಮನ್ನು ಇನ್ನಷ್ಟು ವಿಕಸನಗೊಳ್ಳುವುದರ ಮೇಲೆ ಗಮನ ಕೇಂದ್ರೀಕರಿಸುತ್ತೇವೆ. ಮುಂದುವರಿದು, ತಮ್ಮ Simple ONEಅನ್ನು ಮನೆಗೆ ತೆಗೆದುಕೊಂಡು ಹೋಗಲು ಸಮಾಧಾನದಿಂದ ಕಾಯುತ್ತಿರುವ ನಮ್ಮ ಗ್ರಾಹಕರಿಗೆ ಕ್ಷಿಪ್ರವಾಗಿ ಡೆಲಿವರಿ ಮಾಡುವುದೇ ನಮ್ಮ ಅತಿದೊಡ್ಡ ಆದ್ಯತೆಯಾಗಿರುತ್ತದೆ ಎಂದರು.

ಬರೋಬ್ಬರಿ 525 ಕಿ.ಮೀ ಮೈಲೇಜ್, 65 ಸಾವಿರ ರೂಪಾಯಿ; ಹೊಸ ಭೀಮ್ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್!

ಈ ವರ್ಷದ ಆರಂಭದಲ್ಲಿ ಬೆಂಗಳೂರಿನ ಈ ಸ್ಟಾರ್ಟ್-ಅಪ್, ತಮಿಳುನಾಡಿನ ಶೂಲಗಿರಿಯಲ್ಲಿ Simple Vision 1.0,ಎಂಬ ತನ್ನ ಹೊಸ ಉತ್ಪಾದನಾ ಕಾರ್ಖಾನೆಯನ್ನು ಉದ್ಘಾಟಿಸಿ ವಾರ್ಷಿಕ  ಸರಿಸುಮಾರು 5 ಲಕ್ಷ ಯೂನಿಟ್‌ಗಳ ಸಾಮರ್ಥ್ಯವನ್ನು ಅನುಷ್ಠಾನಗೊಳಿಸಿದೆ. ಸರತಿಯಲ್ಲಿ ಇನ್ನೂ ಅನೇಕ ಉತ್ಪನ್ನಗಳಿದ್ದು, ಸಂಶೋಧನೆ ಮತ್ತು ಅಭಿವೃದ್ಧಿಯನ್ನು ತನ್ನ ಹೃದ್ಭಾಗದಲ್ಲಿ ಇರಿಸಿಕೊಳ್ಳುತ್ತಾ, ಸಿಂಪಲ್ ಎನರ್ಜಿ, ಹಸಿರು ಸಂಚಾರಕ್ಕೆ ಜಾಗತಿಕ ಪರಿವರ್ತನೆಯಲ್ಲಿ ಮುನ್ನೆಲೆಯಲ್ಲಿರುವ ಗುರಿ ಹೊಂದಿದೆ

click me!