ಜೂನ್ 1 ರಿಂದ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ದುಬಾರಿ, ಸರ್ಕಾರದ ಸಬ್ಸಿಡಿ ಕಡಿತ!

By Suvarna News  |  First Published May 30, 2023, 3:44 PM IST

ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಯೋಜನೆಯಲ್ಲಿದ್ದರೆ, ಇನ್ನೆರಡು ದಿನದಲ್ಲಿ ಖರೀದಿ ಮಾಡಿದರೆ ಪ್ರಸಕ್ತ ಬೆಲೆಯಲ್ಲಿ ಲಭ್ಯವಾಗಲಿದೆ. ಆದರೆ ಜೂನ್ 1ರಿಂದ ಬೆಲೆ ದುಬಾರಿಯಾಗಲಿದೆ. 


ನವದೆಹಲಿ(ಮೇ.30): ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾಗುತ್ತಿದೆ. ಹಲವು ಸ್ಟಾರ್ಟ್ ಅಪ್ ಕಂಪನಿಗಳು ಹೊಸ ಹೊಸ ಸ್ಕೂಟರ್ ಬಿಡುಗಡೆ ಮಾಡುತ್ತಿದೆ. ಕಡಿಮೆ ಬೆಲೆ, ಗರಿಷ್ಠ ಮೈಲೇಜ್ ಸೇರಿದಂತೆ ಹಲವು ವಿಶೇಷತೆಗಳು, ಆಕರ್ಷಕ ವಿನ್ಯಾಸ ಸೇರಿದಂತೆ ಒಂದಕ್ಕಿಂತ ಒಂದು ಭಿನ್ನವಾಗಿದೆ. ಸದ್ಯ ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿಗೆ FAME II ಅಡಿಯಲ್ಲಿ ಸಬ್ಸಿಡಿ ನೀಡಿದೆ. ಆದರೆ ಜೂನ್ 1 ರಿಂದ ಕೇಂದ್ರ ನೀಡಿರುವ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಸಬ್ಸಿಡಿ ಕಡಿತಗೊಳಿಸುತ್ತಿದೆ. ಹೀಗಾಗಿ ಒಂದೇ ಸಮನೆ ಸ್ಕೂಟರ್ ಬೆಲೆ ಏರಿಕೆಯಾಗಲಿದೆ.

ಕೇಂದ್ರ ಸರ್ಕಾರದ ಅಧಿಸೂಚನೆ ಪ್ರಕಾರ FAME II ಅಡಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗೆ ನೀಡಿರುವ 15,000 ರೂಪಾಯಿ ಸಬ್ಸಿಡಿಯನ್ನು ಇದೀಗ 10,000 ರೂಪಾಯಿಗೆ ಕಡಿತಗೊಳಿಸಲಾಗಿದೆ. ಹೀಗಾಗಿ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ 5,000 ರೂಪಾಯಿ ಹೊರೆಯಾಗಲಿದೆ. ಎಕ್ಸ್ ಶೋ ರೂಂ ಬೆಲೆ ಮೇಲೆ ಗರಿಷ್ಠ 15 ಶೇಕಡಾ ವಿನಾಯಿತಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಸದ್ಯ ಶೇಕಡಾ 40 ರಷ್ಟು ವಿನಾಯಿತಿ ನೀಡಲಾಗಿತ್ತು.

Latest Videos

undefined

ಬರೋಬ್ಬರಿ 525 ಕಿ.ಮೀ ಮೈಲೇಜ್, 65 ಸಾವಿರ ರೂಪಾಯಿ; ಹೊಸ ಭೀಮ್ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್!

ಎಲೆಕ್ಟ್ರಿಕ್ ವಾಹನ ಖರೀದಿಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ  ಸಬ್ಸಿಡಿ ಯೋಜನೆ ಜಾರಿಗೆ ತಂದಿತ್ತು. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಕೈಗೆಟುಕುವ ದರದಲ್ಲಿ ಇಲ್ಲ. ಹೀಗಾಗಿ ಕೇಂದ್ರ ಸರ್ಕಾರ ಸಬ್ಸಿಡಿ ಮೂಲಕ ಇಂಧನ ವಾಹನದಿಂದ ಎಲೆಕ್ಟ್ರಿಕ್ ವಾಹನ ಖರೀದಿಸುವಂತೆ ಪ್ರೇರಿಪಿಸಲು ಈ ಯೋಜನೆ ಜಾರಿಗೆ ತರಲಾಗಿದೆ. ಈಮೂಲಕ 2030ರ ವೇಳೆಗೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆದಾರರ ದೇಶವನ್ನಾಗಿ ಮಾಡಿ ಪರಿಸರ ಅಸಮತೋಲನ ಕಡಿಮೆ ಮಾಡುವ ಬೃಹತ್ ಉದ್ದೇಶ ಇಟ್ಟುಕೊಂಡಿದೆ.

ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟಕ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿದೆ. ಎಲೆಕ್ಟ್ರಿಕ್ ವಾಹನಗಳ ಖರೀದಿ ನಿಧಾನವಾಗಿ ಹೆಚ್ಚಳವಾಗುತ್ತಿದೆ. ಇಂಧನ ವಾಹನಗಳಿಗಂ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳ ಮಾರಾಟ ಅತೀ ಕಡಿಮೆ. ಇಂತಹ ಸಮಯದಲ್ಲಿ ಕೇಂದ್ರ ಸರ್ಕಾರ ಸಬ್ಸಿಡಿ ಕಡಿತಗೊಳಿಸಿದರೆ ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಲಿದೆ. ಇದರಿಂದ ಎಲಕ್ಟ್ರಿಕ್ ವಾಹನ ಮಾರಾಟ ಮತ್ತಷ್ಟು ಕುಸಿತಗೊಳ್ಳಲಿದೆ ಎಂದು ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟಕ ಹೇಳಿದೆ.

ಬೆಂಗಳೂರು: ಒಮ್ಮೆ ಚಾರ್ಜ್‌ ಮಾಡಿದ್ರೆ 200 ಕಿ.ಮೀ ಕ್ರಮಿಸುವ ಎಲೆಕ್ಟ್ರಿಕ್‌ ಬೈಕ್‌ ಬಿಡುಗಡೆ

ಭಾರತದಲ್ಲಿ ಪೆಟ್ರೋಲ್ ಸ್ಕೂಟರ್ 1 ಲಕ್ಷ ರೂಪಾಯಿಗೆ ಸಿಗುತ್ತಿದೆ. ಅತ್ಯುತ್ತಮ ಬ್ರ್ಯಾಂಡ್ ಕಂಪನಿಗಳ ಸ್ಕೂಟರ್ 1 ಲಕ್ಷ ರೂಪಾಯಿ ಒಳಗೆ ಲಭ್ಯವಾಗುತ್ತದೆ. ಅದೇ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಸರಾಸರಿ 1.5 ಲಕ್ಷ ರೂಪಾಯಿ ಇದೆ. ಹೀಗಾಗಿ ಜನರು ಇಂಧನ ವಾಹನದ ಮೊರೆ ಹೋಗಲಿದ್ದಾರೆ. ಎಲೆಕ್ಟ್ರಿಕ್ ವಾಹನ ಖರೀದಿಗೆ ಆಸಕ್ತಿ ತೋರುವುದಿಲ್ಲ. ಭಾರತದ ಮಾರುಕಟ್ಟೆಯಲ್ಲಿ ಬೆಲೆ ಅತ್ಯಂತ ಮುಖ್ಯವಿಷಯವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ಸ್ಕೂಟರ್ ವಾಹನಗಳಿಗೆ ನೀಡಿರುವ ಸಬ್ಸಿಡಿಯನ್ನು ಮುಂದುವರಿಸಬೇಕು ಎಂದು ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟಕ ಹೇಳಿದೆ.ಜೂನ್ 1ಕ್ಕೂ ಮೊದಲು ಬುಕ್ ಮಾಡುವ ಗ್ರಾಹಕರಿಗೆ ಪ್ರಸಕ್ತ ಬೆಲೆಯಲ್ಲಿ ಸ್ಕೂಟರ್ ಲಭ್ಯವಾಗಲಿದೆ. 

click me!