ಬಜಾಜ್ ಡೊಮಿನಾರ್ 250 ಡ್ಯುಯಲ್ ಟೋನ್ ಎಡಿಶನ್ ಬೈಕ್ ಬಿಡುಗಡೆ!

By Suvarna News  |  First Published Aug 9, 2021, 8:50 PM IST
  • ಬಜಾಜ್ ಡೊಮಿನಾರ್ 400 ಬೈಕ್ ಎಲ್ಲಾ ಫೀಚರ್ಸ್ 250ಯಲ್ಲಿ ಲಭ್ಯ
  • ಉತ್ಸಾಹಿ ಬೈಕರ್‌ಗಳ ಟೂರಿಂಗ್ ಅನುಭವಕ್ಕೆ ಡೊಮಿನಾರ್ 250 ಡ್ಯುಯಲ್ ಟೋನ್
  • ನೂತನ ಬೈಕ್ ಬೆಲೆ 1,54,176 ರೂಪಾಯಿ

ಬೆಂಗಳೂರು(ಆ.08): ಭಾರತದ ದ್ವಿಚಕ್ರ ವಾಹನ ತಯಾರಿಕಾ ಕಂಪನಿಯಾದ ಬಜಾಜ್ ಆಟೊ ಬೈಕ್ ರೈಡಿಂಗ್ ಉತ್ಸಾಹಿಗಳ  ಟೂರಿಂಗ್ ಅಭಿಯಾನಕ್ಕೆ  ಉತ್ತೇಜನೆ ನೀಡಲು ಡೋಮಿನಾರ್ 250 ಡ್ಯುಯೆಲ್ ಟೋನ್ ಎಡಿಶನ್ ಬಿಡುಗಡೆ ಮಾಡಿದೆ. ನೂತನ ಬೈಕ್ ಬೆಲೆ 1,54,176 ರೂಪಾಯಿ (ಎಕ್ಸ್ ಶೋ ರೂಂ)ಗೆ ಲಭ್ಯವಿದೆ.

ಹೆಚ್ಚು ಮೈಲೇಜ್, ಕೈಗೆಟುಕುವ ಬೆಲೆ; ಬಜಾಜ್ CT110X ಬೈಕ್ ಬಿಡುಗಡೆ!

Latest Videos

undefined

ಡೊಮಿನಾರ್ 250 ವೈಶಿಷ್ಟ:
ಈ ವಿಭಾಗದಲ್ಲಿನ ಅತ್ಯುತ್ತಮ ಟೂರಿಂಗ್ ಬೈಕ್ ಇದಾಗಿದೆ. ಈ ಬೈಕ್ ಲಿಕ್ವಿಡ್ ಕೂಲ್ಡ್248.8 CC DOHC FI ಎಂಜಿನ್ ಹೊಂದಿದೆ. 27 PS ಪವರ್ ಮತ್ತು 23.5 NM ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇದಲ್ಲದೆ, ಇದು ಡೊಮಿನಾರ್  400ನ ಎಲ್ಲಾ ಅತ್ಯಾಧುನಿಕ ಕ್ಲಾಸ್-ಲೀಡಿಂಗ್ ಫೀಚರ್‌ಗಳನ್ನು ಒಳಗೊಂಡಿದೆ.  ಅಪ್-ಸೈಡ್ ಡೌನ್  ಫೋರ್ಕ್ ಬೈಕ್‌ನ ಶ್ರೇಷ್ಠ ಬಗೆಯ ನಿರ್ವಹಣೆಗೆ ನೆರವಾಗಲಿವೆ.  ಟ್ವಿನ್ ಬ್ಯಾರೆಲ್ ಎಕ್ಸಾಸ್ಟ್, ಹೆವಿ ಬಾಸ್‌ನೊಂದಿಗೆ ಥ್ರೋಟಿ ಎಕ್ಸಾಸ್ಟ್ ಒದಗಿಸಲಿದೆ. ಇವೆಲ್ಲವೂ ಸ್ಪೋಟ್ಸ್ ಟೂರರ್ ಅನುಭವ ಹೆಚ್ಚಿಸಲಿವೆ.

ವಿಶ್ವದಾದ್ಯಂತ ಗರಿಷ್ಠ ಬೈಕ್ ಮಾರಾಟ; ಭಾರತದ ನಂ.1 ಕಂಪನಿಯಾಗಿ ಹೊರಹೊಮ್ಮಿದ ಬಜಾಜ್!
 
ಸಮಯ ಮತ್ತು ಟೂರಿಂಗ್ ಮಾಹಿತಿ ತೋರಿಸುವ ಮರು ವಿನ್ಯಾಸಗೊಳಿಸಲಾದ ಸೆಕೆಂಡರಿ ಡಿಸ್‌ಪ್ಲೇ ಮತ್ತು ಬಾಹ್ಯಾಕಾಶ ನೌಕೆಯ ವಿನ್ಯಾಸದಿಂದ ಪ್ರೇರಣೆ ಪಡೆದಿರುವ ಟ್ಯಾಂಕ್ ಪ್ಯಾಡ್ ಡಿಕಾಲ್‌ಗಳನ್ನು ಇದು ಒಳಗೊಂಡಿದೆ.

ನಾವು ಇತ್ತೀಚೆಗೆ ವಿಶ್ವದಾದ್ಯಂತ 1,00,000 ಡೊಮಿನಾರ್  ಮಾರಾಟದ ಐತಿಹಾಸಿಕ ಮೈಲುಗಲ್ಲನ್ನು ಸಾಧಿಸಿದ್ದೇವೆ. ಇದು ನಮ್ಮ ದೂರ ಪಯಣದ ಟೂರಿಂಗ್ ಅನ್ನು ಮರು ವ್ಯಾಖ್ಯಾನಿಸುವ ನಮ್ಮ ಧ್ಯೇಯವನ್ನು ಪುನರುಚ್ಚರಿಸುತ್ತದೆ. ಬೈಕ್ ಕಾರ್ಯಕ್ಷಮತೆ, ಉದ್ದೇಶಪೂರ್ವಕ ವಿನ್ಯಾಸ ಮತ್ತು ಶ್ರೇಷ್ಠ ಸ್ವರೂಪದ ಸವಾರಿ ಅನುಭವದೊಂದಿಗೆ ಬಂದರೆ ಯುವಕರಿಗೆ ಬೈಕಿಂಗ್ ಕೇವಲ ಬೀದಿಯಲ್ಲಿನ ಮೋಜಿಗಿಂತ ಹೆಚ್ಚಿನ ಅನುಭವ ನೀಡಲಿದೆ ಎಂಬುದನ್ನು ನಾವು ಅರಿತುಕೊಂಡಿದ್ದೇವೆ ಎಂದು ಬಜಾಜ್ ಆಟೊ ಲಿಮಿಟೆಡ್‌ನ ಮಾರ್ಕೆಟಿಂಗ್ ಮುಖ್ಯಸ್ಥ ನಾರಾಯಣ್ ಸುಂದರರಾಮನ್ ಹೇಳಿದ್ದಾರೆ.

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಟೂರಿಂಗ್ ಮೋಟರ್ ಸೈಕಲ್‌ಗಳ ವಿಭಾಗವನ್ನು ವಿಸ್ತರಿಸುವ ಉದ್ದೇಶದಿಂದ ಡೊಮಿನಾರ್ 250 ಬೈಕ್ 2020ರ ಮಾರ್ಚ್ ತಿಂಗಳಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಡಿಸೆಂಬರ್ 2019ರಲ್ಲಿ ಪರಿಚಯಿಸಿದ ಇದರ ಹಿರಿಯ ಸಹೋದರ, ಡೊಮಿನಾರ್   400, 5 ಭೂಖಂಡಗಳಲ್ಲಿ6 ಯಶಸ್ವಿ ಒಡಿಸಿಸ್ ಪಯಣದೊಂದಿಗೆ ಟೂರಿಂಗ್ ಉತ್ಸಾಹಿಗಳ ಕಲ್ಪನೆಯನ್ನು ಸೆರೆಹಿಡಿದಿದೆ.
 

click me!