ಬೆಂಗಳೂರಿನ ಸಿಂಪಲ್ ಎನರ್ಜಿಯಿಂದ 243 ಕಿ.ಮಿ ಮೈಲೇಜ್ ನೀಡುವ ವೇವ್ ಫ್ಯಾಮಿಲಿ ಸ್ಕೂಟರ್ ಲಾಂಚ್

Published : Sep 02, 2026, 06:19 PM IST
Simple Energy Launches Wave Family Scooter

ಸಾರಾಂಶ

ಬೆಂಗಳೂರು ಮೂಲದ ಸಿಂಪಲ್ ಎನರ್ಜಿ ಮೊದಲ ಫ್ಯಾಮಿಲಿ ಸ್ಕೂಟರ್ ಲಾಂಚ್ ಮಾಡಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 243 ಕಿಲೋಮೀಟರ್ ಮೈಲೇಜ್ ನೀಡಲಿದೆ. ಸಿಂಪಲ್ ವೇವ್ ಸ್ಕೂಟರ್ ಬೆಲೆ, ಡಿಟೇಲ್ಸ್ ಇಲ್ಲಿದೆ.

ಬೆಂಗಳೂರು (ಸೆ.02) ಬೆಂಗಳೂರು ಮೂಲದ ಸಿಂಪಲ್ ಎನರ್ಜಿ ಇದೀಗ ಮೊದಲ ಫ್ಯಾಮಿಲಿ ಸ್ಕೂಟರ್ ಬಿಡುಗಡೆ ಮಾಡಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 243 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇದರಿಂದ ಪದೇ ಪದೇ ಚಾರ್ಜ್ ಮಾಡುವ, ಕಾಯಬೇಕಾದ ಪರಿಸ್ಥಿತಿ ಇಲ್ಲ. ಅತೀ ದೊಡ್ಡ ಸ್ಟೋರೇಜ್ ಸ್ಪೇಸ್, ಅತ್ಯಾಧುನಿಕ ಟೆಕ್, ಉತ್ತಮ ಪರ್ಫಾಮೆನ್ಸ್ ಇರುವ ಸ್ಕೂಟರ್ ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಕರ್ಷಕ ಸ್ಕೂಟರ್ ಬಿಡುಗಡೆಯಾಗಿದೆ.

ಸಿಂಪಲ್ ವೇವ್ ಬೆಲೆ

ಸಿಂಪಲ್ ವೇವ್ ಸ್ಕೂಟರ್ ಬೆಲೆ 1,09,999 ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಆರಂಭಿಕ ಆಫರ್ ಮೂಲಕ ಈ ಬೆಲೆಗೆ ಬಿಡುಗಡೆ ಮಾಡಲಾಗಿದೆ. ಸಿಂಪಲ್ ಎನರ್ಜಿ ಅಧಿಕೃತ ಟಚ್ ಪಾಯಿಂಟ್ ಮೂಲಕ ಬುಕಿಂಗ್ ಲಭ್ಯವಿದೆ. ಸ್ಟೋರ್ ಮೂಲಕ ಅಥವಾ ಅಧಿಕೃತ ವೆಬ್‌ಸೈಟ್ ಮೂಲಕ ಸ್ಕೂಟರ್ ಬುಕ್ ಮಾಡಿಕೊಳ್ಳಬಹುದು. ಸೆಪ್ಟೆಂಬರ್ ಕೊನೆಯ ವಾರದಿಂದ ಡೆಲಿವರಿ ಆರಂಭಗೊಳ್ಳಲಿದೆ.

ಮೈಲೇಜ್ ರೇಂಜ್

ಸಿಂಪಲ್ ವೇವ್ + ಟಾಪ್ ಮಾಡೆಲ್ 5 kWh ಬ್ಯಾಟರಿ ಪ್ಯಾಕ್ ಹೊಂದಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 243 ಕಿ.ಮೀ. IDC ರೇಂಜ್ ನೀಡಲಿದೆ ಎಂದಿದೆ. 90 ಕಿ.ಮೀ.ಟಾಪ್ ಸ್ಪೀಡ್ ನೀಡಲಿದೆ. ಈ ಸ್ಕೂಟರ್ 6.4 kW PMSM ಮೋಟರ್‌ನೊಂದಿಗೆ 179 Nm ವೀಲ್ ಟಾರ್ಕ್ ಸಾಮರ್ಥ್ಯ ಹೊಂದಿದೆ. ಇನ್ನು 3.7 kWh, 2.7 kWh ಮತ್ತು 2.2 kWh ಬ್ಯಾಟರಿ ಆಯ್ಕೆಗಳೂ ಲಭ್ಯವಿದೆ. ಕ್ರಮವಾಗಿ 171 ಕಿ.ಮೀ, 132 ಕಿ.ಮೀ ಮತ್ತು 110 ಕಿ.ಮೀ ಮೈಲೇಜ್ ನೀಡಲಿದೆ. ಎಲ್ಲಾ ವೇರಿಯೆಂಟ್ ರೈಡ್ ಇಕೋ ಹಾಗೂ ಇಕಾಕ್ಸ್ ರೈಡಿಂಗ್ ಮೋಡ್‌ಗಳಿವೆ. ಇನ್ನು ಸ್ಪೋರ್ಟ್ ಮೂಡ್ ಕೂಡ ಲಭ್ಯವಿದೆ.

70 ಲೀಟರ್ ಲೀಡಿಂಗ್ ಸ್ಟೋರೇಜ್, 3 ಲೀಟರ್ ಸಾಮರ್ಥ್ಯದ ಅನುಕೂಲಕರ ಗ್ಲವ್ ಬಾಕ್ಸ್ ಸೇರಿವೆ.ಡಿಸ್ಪ್ಲೇ ತಂತ್ರಜ್ಞಾನಗಳು ಮತ್ತು ಕನೆಕ್ಟೆಡ್ ಫೀಚರ್‌ ಹೊಂದಿದೆ. ಆಕರ್ಷಕ ವಿನ್ಯಾಸ ಹೊಂದಿರುವ ಫ್ಯಾಮಿಲಿ ಸ್ಕೂಟರ್ ಇದೀಗ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸುವ ಭರವಸೆ ಮೂಡಿಸಿದೆ. ಸಿಂಪಲ್ ಎನರ್ಜಿ ಸ್ಕೂಟರ್ ಎಥರ್, ಬಜಾಜ್ ಚೇತಕ್ ಸೇರಿದಂತೆ ಹಲವು ಇವಿ ಸ್ಕೂಟರ್‌ಗೆ ಪ್ರತಿಸ್ಪರ್ಧಿಯಾಗಿದೆ.

PREV
Read more Articles on
click me!

Recommended Stories

10 ವರ್ಷಗಳ ಬ್ಯಾಟರಿ ವಾರಂಟಿ, ಒಂದೇ ಚಾರ್ಜ್‌ಗೆ 200 ಕಿ.ಮೀ ರೇಂಜ್‌; ಕೈಗೆಟುಕುವ ದರದಲ್ಲಿ ಏಥರ್ ಕೊನಾರ್ಕ್ ರಿಲೀಸ್‌
ಬಜಾಜ್ ಪಲ್ಸರ್ ಬೈಕ್‌ಗೆ 25 ವರ್ಷದ ಸಂಭ್ರಮದಲ್ಲಿ ಕೈಗೆಟುಕುವ ದರದಲ್ಲಿ ಹೊಸ ಪಲ್ಸರ್ ಲಾಂಚ್