ಭಾರಿ ಜನಪ್ರಿಯ ಪಲ್ಸರ್ ಹೊಸ ರೂಪದಲ್ಲಿ ಮತ್ತೆ ಗ್ರಾಹಕರ ಮುಂದೆ ಬರಲಿದೆ. ಬಜಾಜ್ ಆಟೋ (Bajaj Auto) ಕಂಪನಿಯು ಹೊಚ್ಚ ಬಜಾಜ್ ಪಲ್ಸರ್ 250 (Bajaj Pulsar 250) ಮೋಟಾರ್ ಸೈಕಲ್ ಅನ್ನು ಅಕ್ಟೋಬರ್ 28ರಂದು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ತನ್ನ ಸ್ಟೈಲಿಶ್ ಲುಕ್ ಹಾಗೂ ಎಂಜಿನ್ ದಕ್ಷತೆಯಿಂದಾಗಿ ಇದು ಯುವ ಸಮೂಹವನ್ನು ಮತ್ತೆ ಸೆಳೆಯುವ ಸಾಧ್ಯತೆ ಇದೆ.
ಬಜಾಜ್ ಆಟೋ (Bajaj Auot) ಕಂಪನಿಯ ಅತ್ಯಂತ ಜನಪ್ರಿಯ ಬೈಕ್ ಪಲ್ಸರ್ (Pulsar) ಮತ್ತೆ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ. ಕಂಪನಿಯು ಪಲ್ಸರ್ ಮೋಟಾರ್‌ಸೈಕಲ್ ಅನ್ನು ಮೊದಲಿಗೆ 2001ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಆ ಬಳಿಕ ನಡೆದಿದ್ದೆಲ್ಲ ಇತಿಹಾಸವೇ ಸರಿ.
ತನ್ನ ಸ್ಪೋರ್ಟ್ಸ್ ಲುಕ್ ಹಾಗೂ ಪವರ್ ಫುಲ್ ಎಂಜಿನ್‌ನಿಂದಾಗಿ ಬಜಾಜ್ ಪಲ್ಸರ್ (Bajaj Pulsar) ಬಹಳ ಬೇಗ ಯುವ ಸಮೂಹವನ್ನು ಆಕರ್ಷಿಸಲು ಯಶಸ್ವಿಯಾಯಿತು. ಪರಿಣಾಮ, ಈ ಸೆಗ್ಮೆಂಟ್‌ನಲ್ಲಿ ತನ್ನೆಲ್ಲ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿದ ಪಲ್ಸರ್ ಸಾಕಷ್ಟು ವೇಗದಲ್ಲಿ ಮಾರಾಟ ಕಂಡಿತು. ಭಾರತದ ಎಲ್ಲ ರಸ್ತೆಗಳಲ್ಲಿ ಪಲ್ಸರ್ ಬೈಕುಗಳದ್ದೇ ಕಾರುಬಾರು ಕಾಣವಂತಾಗಿತ್ತು.
ಹಬ್ಬದ ಸಂಬ್ರಮದಲ್ಲಿ ಕೈಗೆಟುಕವ ಬೆಲೆಯ ಹೀರೋ ಪ್ಲೆಷರ್+ XTec ಸ್ಕೂಟರ್ ಬಿಡುಗಡೆ!
ಬಜಾಜ್ ಪಲ್ಸರ್ ನಿರೀಕ್ಷೆ ಮೀರಿ ಯಶಸ್ವಿಯಾಗುತ್ತಿದ್ದಂತೆ ಕಂಪನಿಯು ಆಗಾಗ ಅದರ ಹೊಸ ಆವೃತ್ತಿಗಳನ್ನು ಬಿಡುಗಡೆ ಮಾಡುತ್ತಲೇ ಬಂದಿದೆ. ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿ ಅದನ್ನು ಹೆಚ್ಚು ಪ್ರಸ್ತುಗೊಳಿಸುವ ಪ್ರಯತ್ನ ಮಾಡುತ್ತಲೇ ಇದೆ. ಇದೀಗ ಕಂಪನಿಯು ಅಕ್ಟೋಬರ್ 28ರಂದು ಬಜಾಜ್ ಪಲ್ಸರ್ 250 (Baja Pulsar 250) ಮೋಟಾರ್ ಬೈಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.
ಬಜಾಜ್ ಪಲ್ಸರ್ 250 (Bajaj Pulsar 250) ರೂಪದಲ್ಲಿ ಹೊಸ ತಲೆಮಾರಿನ ಪಲ್ಸರ್ ಬೈಕ್ ಅನ್ನು ಬಳಕೆದಾರರ ಶೀಘ್ರವೇ ರಸ್ತೆಯ ಮೇಲೆ ಕಾಣಬಹುದಾಗಿದೆ. ಈ ಹೊಸ ಬಜಾಜ್ ಪಲ್ಸರ್ ಅನ್ನು ಕಂಪನಿಯ ಎರಡು ನೆಕೆಡ್ ಹಾಗೂ ಸೆಮಿ ಫೇರಿಂಗ್ ಆವೃತ್ತಿಯಲ್ಲಿ ಬಿಡುಗಡೆ ಮಾಡಲಿದೆ. ಅಂದರೆ, ಬಜಾಜ್ ಪಲ್ಸರ್ 250ಎಫ್ (Bajaj Pulsar 250F) ಹಾಗೂ ಬಜಾಜ್ ಎನ್‌ಎಸ್250 (Bajaj NS250) ಬೈಕುಗಳು ಬಿಡುಗಡೆಯಾಗಲಿವೆ. ಪಲ್ಸರ್ ವ್ಯಾಪ್ತಿಯ ಬೈಕುಗಳ ಪೈಕಿಯೇ ಈ ಬೈಕು ಅತಿ ಹೆಚ್ಚು ಡಿಸ್‌ಪ್ಲೆಸ್‌ಮೆಂಟ್ ಎಂಜಿನ್ ಇರಲಿದೆ ಎಂದು ಹೇಳಲಾಗುತ್ತಿದೆ. ಬಜಾಜ್ ಡೊಮಿನಾರ್ 250 (Bajaj Dominar 250), ಕೆಟಿಎಂ 250 ಡ್ಯೂಕ್ (KTM 250 Duke) , ಹಸ್ಕ್‌ವರ್ಣಾ 250ಸಿಸಿ (Husqvarna 250cc) ಬೈಕುಗಳ ಸಾಲಿಗೆ ಇದು ಸೇರಲಿದೆ.
6,999 ರೂಪಾಯಿ ಡೌನ್‌ಪೇಮೆಂಟ್, 5.55% ಬಡ್ಡಿ; ಭರ್ಜರಿ ಆಫರ್ ಘೋಷಿಸಿದ ಹೀರೋ ಮೋಟೋಕಾರ್ಪ್!
ಅಕ್ಟೋಬರ್ 28ಕ್ಕೆ ಮಾರುಕಟ್ಟೆಗೆ ಪ್ರವೇಶ ಪಡೆಯಲಿರುವ ಬಜಾಜ್ ಪಲ್ಸರ್ 250 ಬೈಕ್, ಈಗಾಗಲೇ ಮಾರುಕಟ್ಟೆಯಲ್ಲಿರುವ ಸುಜುಕಿಯ ಕಂಪನಿಯ ಗಿಕ್ಸರ್ 250 (Suzuki Gixxer 250) ಹಾಗೂ ಯಮಹಾ ಕಂಪನಿಯ ಯಮಹಾ ಎಫ್‌ಜೆಡ್25 (Yamaha FZ25) ಬೈಕುಗಳಿಗೆ ತೀವ್ರ ಪೈಪೋಟಿಯನ್ನು ಒಡ್ಡುವ ಸಾಧ್ಯತೆಯಿದೆ. ತನ್ನ ಪವರ್ ಫುಲ್ ಎಂಜಿನ್ ಹಾಗೂ ಆಕರ್ಷಕ ಲುಕ್‌ನಿಂದ ಪಲ್ಸರ್ 250 ಮತ್ತೊಬ್ಬ ಯುವಕರನ್ನು ಮನೆಸೊರೆಗೊಳ್ಳಬಹುದು.
ಈಗ ಬಿಡುಗಡೆಗೆ ಸಜ್ಜಾಗಿರುವ ಪಲ್ಸರ್ 250 ಎರಡೂ ಆವೃತ್ತಿ ಬೈಕ್‌ಗಳನ್ನು 2018 ಮಾರ್ಚ್‌ನಿಂದಲೇ ಪರೀಕ್ಷಿಸಲಾಗುತ್ತಿದೆ. ಈಗಾಗಲೇ ನೀವು ಈ ಬೈಕ್ ಪ್ರಯೋಗಾರ್ಥವಾಗಿ ರಸ್ತೆಗಳ ಮೇಲೆ ಓಡಾಡಿರುವುದನ್ನು ಕಂಡಿರಬಹುದು. ಹಾಗಾಗಿ ಈ ಬೈಕ್‌ನ ವಿನ್ಯಾಸ ಹಾಗೂ ಇತರೆ ಮಾಹಿತಿಗಳು ಹೆಚ್ಚು ಕುತೂಹಲ ಮೂಡಲು ಕಾರಣವಾಗಿದೆ.
ಅಂಪಿಯರ್ ಮ್ಯಾಗ್ನಸ್ ಇಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್, ಬೆಲೆ ಎಷ್ಟು?
ಬಜಾಜ್ ಪಲ್ಸರ್ 250 (Bajaj Pulsar 250) ಬೈಕ್ ಕೆಟಿಎಂ 250ಸಿಸಿ (KTM 250cc) ಆಯಿಲ್ ಕೂಲ್ಡ್ ಸಿಂಗಲ್ ಸಿಲೆಂಡರ್ ಎಂಜಿನ್‌ನೊಂದಿಗೆ ಬರಲಿದೆ. ಆದರೆ, ಪವರ್ ಉತ್ಪಾದನೆಯಲ್ಲಿ ಕೊಂಚ ವ್ಯತ್ಯಾಸ ಇರಲಿದೆ. ಪಲ್ಸರ್ ಎಂಜಿನ್ 28 ಬಿಎಚ್‌ಪಿ ಹಾಗೂ 20 ಎನ್ಎಂ ಟಾರ್ಕ್ ಉತ್ಪಾದಿಸಲಿದೆ. ಜೊತೆಗೆ ಈ ಬೈಕ್ ಬೆಲೆ ಅಂದಾಜು 1.4 ಲಕ್ಷ ರೂ.ವರೆಗೂ ಇರಲಿದೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಖಚಿತವಾದ ಮಾಹಿತಿಗಳಿಲ್ಲ.