6,999 ರೂಪಾಯಿ ಡೌನ್‌ಪೇಮೆಂಟ್, 5.55% ಬಡ್ಡಿ; ಭರ್ಜರಿ ಆಫರ್ ಘೋಷಿಸಿದ ಹೀರೋ ಮೋಟೋಕಾರ್ಪ್!

By Suvarna News  |  First Published Oct 14, 2021, 9:54 PM IST
  • ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಿದ ಹೀರೋ ಮೋಟೋಕಾರ್ಪ್ 
  • ದ್ವಿಚಕ್ರ ವಾಹನ ಖರೀದಿಗೆ ಹಣಕಾಸು ನೆರವು
  • ಸುಲಭ ಪೇಮೆಂಟ್, ಸುಲಭ ಸಾಲ ಸೇರಿದಂತೆ ಹಲವು ಕೊಡುಗೆ

ಬೆಂಗಳೂರು(ಅ.14): ವಿಶ್ವದ ಅತಿದೊಡ್ಡ ಮೋಟಾರುಸೈಕಲ್ ಮತ್ತು ಸ್ಕೂಟರ್ ತಯಾರಿಕಾ  ಸಂಸ್ಥೆ ಹೀರೋ ಮೋಟೋಕಾರ್ಪ್, ತನ್ನ ಗ್ರಾಹಕರಿಗಾಗಿ ಹೊಸ  ರೀಟೇಲ್ ಹಣಕಾಸು ಸ್ಕೀಮ್ ಘೋಷಿಸಿದೆ.  ಹಬ್ಬದ ಸಂಭ್ರಮ ಹೆಚ್ಚಿಸಲು ಹಲವು   ರಾಷ್ಟ್ರೀಕೃತ ಬ್ಯಾಂಕುಗಳು, ಖಾಸಗಿ ಬ್ಯಾಂಕುಗಳು ಮತ್ತು ನಾನ್-ಬ್ಯಾಂಕಿಂಗ್ ಹಣಕಾಸು ಸಂಸ್ಥೆಗಳಿಂದ(ಎನ್‍ಬಿಎಫ್‍ಸಿ) ಹಣಕಾಸು ನೆರವನ್ನು ಲಭ್ಯಗೊಳಿಸುತ್ತಿದೆ. ಪ್ರವೇಶಾವಕಾಶ ಇರುವಂತಹ ಹಣಕಾಸು ಆಯ್ಕೆಗಳು ಮತ್ತು ವೈಯಕ್ತೀಕೃತ ಯೋಜನೆಗಳ ಮೂಲಕ ಅದು ಗ್ರಾಹಕರಿಗಾಗಿ ಸುಲಭವಾದ ಖರೀದಿ  ಅನುಭವವನ್ನು  ಖಾತರಿಪಡಿಸುತ್ತಿದೆ. 

ಹಬ್ಬದ ಸಂಬ್ರಮದಲ್ಲಿ ಕೈಗೆಟುಕವ ಬೆಲೆಯ ಹೀರೋ ಪ್ಲೆಷರ್+ XTec ಸ್ಕೂಟರ್ ಬಿಡುಗಡೆ!

Latest Videos

ಅಡಮಾನರಹಿತ(ನೋ-ಹೈಪಾತಿಕೇಶನ್), ಇಎಮ್‍ಐ ವೆಚ್ಚವಿಲ್ಲದ,ಮತ್ತು ನಗದು ಇಎಮ್‍ಐ(ಬ್ಯಾಂಕ್ ಖಾತೆ ಇಲ್ಲದ ಸಾಲ) ಮುಂತಾದ ವಿನೂತನ ಹಣಕಾಸು ಉತ್ಪನ್ನಗಳ ಮೂಲಕ ಸಂಸ್ಥೆಯು ಗ್ರಾಹಕರು ತಮ್ಮ ನೆಚ್ಚಿನ ಹೀರೋ ಮೋಟೋಕಾರ್ಪ್  ಉತ್ಪನ್ನವನ್ನು ಮನೆಗೆ ತರಲು ಬೆಂಬಲ ನೀಡುತ್ತಿದೆ. ಹೀರೋ ಫಿನ್‍ಕಾರ್ಪ್‍ನ ಜೊತೆಗೆ ಅದು ಕಿಸಾನ್ ಇಎಮ್‍ಐ ಹಾಗೂ ಬಲೂನ್ ಇಎಮ್‍ಐನಂತಹ ಉದ್ಯಮದಲ್ಲೇ ಮೊಟ್ಟಮೊದಲನೆಯದಾದ ಯೋಜನೆಗಳನ್ನೂ  ಪರಿಚಯಿಸುತ್ತಿದೆ. ಈ ಯೋಜನೆಗಳು, ಕೃಷಿ-ಆದಾಯ-ಆಧಾರಿತ  ಗ್ರಾಹಕರಿಗೆ ಮಾತ್ರವಲ್ಲದೆ ಋತುಮಾನಿಕ ಆದಾಯಗಳಿರುವಂತಹ  ಗ್ರಾಹಕರಿಗೂ ಅವರ ಅಗತ್ಯಗಳಿಗೆ  ತಕ್ಕ ಪರಿಹಾರಗಳನ್ನು ಒದಗಿಸುತ್ತವೆ. 

ಹಬ್ಬದ ಸಂಭ್ರಮ ಡಬಲ್ ಮಾಡಲು ಹೀರೋ X ಪಲ್ಸ್ 200 4 ವೇಲ್ವ್ ಬೈಕ್ ಬಿಡುಗಡೆ!

ಈ  ಅಗತ್ಯಕ್ಕೆ ತಕ್ಕ, ವಿನೂತನ ಹಣಕಾಸು ಕೊಡುಗೆಗಳೊಂದಿಗೆ ಹೀರೋ ಮೋಟೋಕಾರ್ಪ್, ದೇಶಾದ್ಯಂತ  ಇರುವ ತನ್ನ ಗ್ರಾಹಕರು ಅದರ ವಿಶ್ವದರ್ಜೆ  ಉತ್ಪನ್ನಗಳಿಗೆ ಪ್ರವೇಶಾವಕಾಶ ಪಡೆದುಕೊಳ್ಳುವುದನ್ನು ಖಾತರಿಪಡಿಸುತ್ತಿದೆ. ಈ ರೀತಿಯ ಪ್ರಕ್ರಿಯೆಯಲ್ಲಿ ಅದು ಅವರನ್ನು ಹಾಗೂ ಆರ್ಥಿಕತೆಯನ್ನೂ ವರ್ಧಿಸುತ್ತಿದೆ. 

ಹೆಚ್ಚುವರಿಯಾಗಿ, ಹೀರೋ ಮೋಟೋಕಾರ್ಪ್, ಆಧಾರ್ ಆಧಾರಿತ ಹಣಕಾಸು ನೆರವು, ರೂ. 6,999/-ನಿಂದ ಆರಂಭವಾಗುವ ಕಡಿಮೆ ಡೌನ್‍ಪೇಮೆಂಟ್, 5.55% ಬಡ್ಡಿದರ, 48 ತಿಂಗಳುಗಳವರೆಗಿನ ದೀರ್ಘಾವಧಿ ಸಾಲಾವಧಿಗಳು ಮುಂತಾದ ಆಕರ್ಷಕ ಯೋಜನೆಗಳನ್ನೂ ಪರಿಚಯಿಸಿದೆ. ಗ್ರಾಹಕರು,  ಎಸ್‍ಬಿಐ ಮತ್ತು ಐಸಿಐಸಿಐ ಬ್ಯಾಂಕುಗಳ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡುಗಳನ್ನು ಬಳಸುವ ಮೂಲಕ ತಕ್ಷಣ ಹಣಕಾಸು ಪ್ರಯೋಜನಗಳನ್ನೂ ಪಡೆದುಕೊಳ್ಳಬಹುದು. 

ಕಡಿಮೆ ಬೆಲೆ, ಅತ್ಯಾಧುನಿಕ ತಂತ್ರಜ್ಞಾನದ ಗ್ಲಾಮರ್ XTEC ಬೈಕ್ ಪರಿಚಯಿಸಿದ ಹೀರೋ!

ಗ್ರಾಹಕರಿಗೆ ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ನೀಡುವ ಮೂಲಕ ಹೀರೋ ಮೋಟೋಕಾರ್ಪ್, ಹೆಚ್‍ಡಿಎಫ್‍ಸಿ ಬ್ಯಾಂಕ್, ಇಂಡಸ್‍ಇಂಡ್ ಬ್ಯಾಂಕ್,  ಶ್ರೀರಾಮ್ ಸಿಟಿ ಯೂನಿಯನ್ ಫೈನಾನ್ಸ್, ಹೆಚ್‍ಡಿಬಿ  ಫೈನಾನ್ಶಿಯಲ್ ಸರ್ವಿಸಸ್, ಐಡಿಎಫ್‍ಸಿ ಫರ್ಸ್ಟ್ ಬ್ಯಾಂಕ್ ಮತ್ತು ವ್ಹೀಲ್ಸ್ ಇಎಮ್‍ಐ ಒಳಗೊಂಡಂತೆ ಹಣಕಾಸು ಆಯ್ಕೆಗಳಿಗಾಗಿ ಅನೇಕ ಬ್ಯಾಂಕುಗಳು ಹಾಗೂ ಎನ್‍ಬಿಎಫ್‍ಸಿಗಳೊಂದಿಗೆ ಸಹಯೋಗ ಏರ್ಪಡಿಸಿಕೊಂಡಿದೆ. 

click me!