ಭಾರತೀಯರ ನೆಚ್ಚಿನ ದ್ವಿಚಕ್ರವಾಹನ ಕಂಪನಿಯಾಗಿರುವ ಬಜಾಜ್ ಆಟೋ 75ನೇ ವರ್ಷಾಚರಣೆಯ ಸಂದರ್ಭದಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದೆ. ಬಜಾಜ್ ಕಂಪನಿಯ ಮಾರುಕಟ್ಟೆ ಬಂಡವಾಳೀಕರಣವು ಒಂದು ಲಕ್ಷ ಕೋಟಿ ರೂ. ದಾಟಿದೆ. ಇಂಥ ಸಾಧನೆ ಮಾಡಿದ ಜಗತ್ತಿನ ಏಕೈಕ ದ್ವಿಚಕ್ರವಾಹನ ತಯಾರಿಕಾ ಕಂಪನಿಯಾಗಿದೆ.
ದ್ವಿಚಕ್ರವಾಹನ ಉತ್ಪಾದನೆ ಮತ್ತು ಮಾರಾಟದಲ್ಲಿ ಬಜಾಜ್ ಆಟೋ ಬಹುದೊಡ್ಡ ಹೆಸರು. ದೇಶದಲ್ಲಿ ಬಜಾಜ್ ಬ್ರ್ಯಾಂಡ್‌ಗೆ ಕೂಡ ಜನರು ಅಷ್ಟೇ ಪ್ರೀತಿ, ವಿಶ್ವಾಸವನ್ನು ತೋರಿಸುತ್ತಾರೆ. ಗ್ರಾಹಕರ ಅಗತ್ಯಕ್ಕೆ ತಕ್ಕ ಹಾಗೂ ಆಧುನಿಕ ತಂತ್ರಜ್ಞಾನ ಮಿಳಿತ ಮತ್ತು ಅವರಿಗೆ ಹೊರೆಯಾಗದಂತೆ ದ್ವಿಚಕ್ರವಾಹನಗಳನ್ನು ನೀಡುವುದರಲ್ಲಿ ಬಜಾಜ್ ಹೆಗ್ಗಳಿಕೆ ಇದೆ. ಹಾಗಾಗಿಯೇ ಇದೀಗ ಬಜಾಜ್ ಆಟೋ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದೆ. ಭಾರತದ ಈ ಕಂಪನಿ ಇದೀಗ ಒಂದು ಲಕ್ಷ ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳೀಕರಣ ಹೊಂದಿದೆ ಜಗತ್ತಿನ ಮೊದಲ ದ್ವಿಚಕ್ರವಾಹನ ಕಂಪನಿಯಾಗಿ ಹೊರ ಹೊಮ್ಮಿದೆ. ಬಜಾಜ್ ತನ್ನ 75ನೇ ವರ್ಷಾಚರಣೆಯಲ್ಲಿರುವಾಗಲೇ ಈ ಸಾಧನೆ ಹೊರ ಬಂದಿದ್ದು ಕಂಪನಿಯ ಬ್ರಾಂಡ್ ಮೌಲ್ಯ ಹೆಚ್ಚಾಗಲು ಕಾರಣವಾಗಿದೆ.
ಇನ್ನು ಹೋಂಡಾ ಸಿವಿಕ್, ಸಿಆರ್- ವಿ ಕಾರಿನ ಉತ್ಪಾದನೆ ಇಲ್ಲ!
undefined
ಬಜಾಜ್ ಆಟೋ ಕಂಪನಿ ಮಾರುಕಟ್ಟೆ ಬಂಡವಾಳೀಕರಣದ ಮೌಲ್ಯ 1,00,670.76 ಕೋಟಿ ರೂಪಾಯಿಯಾಗಿದೆ.
ದೇಶೀಯ ಎಲ್ಲ ದ್ವಿಚಕ್ರವಾಹನ ಉತ್ಪದನಾ ಕಂಪನಿಗಳಿಗಿಂತಲೂ ಬಜಾಜ್ ಕಂಪನಿಯ ಮಾರ್ಕೆಟ್ ಕ್ಯಾಪ್ ಗಣನೀಯವಾಗಿ ಹೆಚ್ಚಳವಾಗಿದೆ. ಯಾವುದೇ ಅಂತಾರಾಷ್ಟ್ರೀಯ ದ್ವಿಚಕ್ರವಾಹನ ತಯಾರಿಕಾ ಕಂಪನಿ ಈವರೆಗೂ ಒಂದ ಲಕ್ಷ ಕೋಟಿ ರೂ. ಮಾರುಕಟ್ಟೆ ಬಂಡವಾಳೀಕರಣವನ್ನು ಸಾಧಿಸಿಲ್ಲ. ದ್ವಿಚಕ್ರವಾಹನ ಸೆಗ್ಮೆಂಟ್‌ನಲ್ಲಿ ಬಜಾಜ್ ಮಾತ್ರವೇ ಇಂಥ ಸಾಧನೆ ಮಾಡಿದ ಜಗತ್ತಿನ ಏಕೈಕ ಕಂಪನಿಯಾಗಿದೆ ಎಂಬುದು ವಿಶ್ಲೇಷಕರ ಅಭಿಪ್ರಾಯವಾಗಿದೆ.
ಇಂಥದೊಂಡು ಸಾಧನೆ ಮೆರೆದ ಜಗತ್ತಿನ ಏಕೈಕ ಕಂಪನಿ ಇದು. ಭಾರತೀಯ ಕಂಪನಿಯೊಂದು ಇಂಥ ಸಾಧನೆ ಮಾಡಿರುವುದು, ಭಾರತೀಯರಾದ ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ.
75 ವರ್ಷಗಳ ಹಿಂದೆ ಬಜಾಜ್ ಕಂಪನಿ ಪ್ರಯಾಣ ಶುರುವಾಯಿತು. ಸದ್ಯ ಪಲ್ಸರ್, ಬಾಕ್ಸರ್, ಪ್ಲಾಟಿನಾ ಮತ್ತು ಆರ್‌ಇ ದ್ವಿಕ್ರವಾಹನಗಳು ಜಗತ್ತಿನ 70ಕ್ಕೂ ಹೆಚ್ಚು ದೇಶಗಳಲ್ಲಿ ಜನಪ್ರಿಯ ಬ್ರ್ಯಾಂಡ್‌ಗಳಾಗಿವೆ. ಕಳೆದ ವರ್ಷವಷ್ಟೇ ಬಜಾಜ್ ಥಾಯ್ಲೆಂಡ್ ಮಾರುಕಟ್ಟೆ ಪ್ರವೇಶಿಸಿ ತನ್ನ ಜಾಗತಿಕ ಮಾರುಕಟ್ಟೆಯನ್ನು ವಿಸ್ತರಿಸಿದ ಬೆನ್ನಲ್ಲೇ ಇದೀಗ ಬ್ರೆಜಿಲ್ ಮಾರುಕಟ್ಟೆಯನ್ನು ಪ್ರವೇಶಿಸುವ ತಯಾರಿಯಲ್ಲಿದೆ ಬಜಾಜ್ ಆಟೋ ಕಂಪನಿ.
ಚೇತಕ್ ಸ್ಕೂಟರ್, ಬಜಾಜ್ ಕಂಪನಿ ಅತ್ಯಂತ ಐಕಾನಿಕ್ ಸ್ಕೂಟರ್. 2019ರಲ್ಲಿ ಈ ಸ್ಕೂಟರ್ ಅನ್ನು ಮತ್ತೆ ಮರುರೂಪಿಸಿ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಬ್ರ್ಯಾಂಡ್ ಆಗಿ ಕಂಪನಿ 2019ರಲ್ಲಿ ಮಾರುಕಟ್ಟೆಗೆ ಪರಿಚಯಿಸಿದೆ. ಮಹಾರಾಷ್ಟ್ರದ ಚಕನ್ ಎಂಬಲ್ಲಿ 650 ಕೋಟಿ ರೂಪಾಯಿ ಹೂಡಿಕೆ ಮಾಡಿ ಮತ್ತೊಂದು ಪ್ಲಾಂಟ್ ತೆರೆಯುವುದಾಗಿ ಹೇಳಿದೆ. ಈ ಪ್ಲಾಂಟ್‌ನಲ್ಲಿ ಕಂಪನಿ ಪ್ರೀಮಿಯಮ್ ವ್ಯಾಪ್ತಿಯ ಮೋಟಾರ್‌ಸೈಕಲ್ ಹಾಗೂ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳನ್ನು ಉತ್ಪಾದಿಸುವ ಗುರಿಯನ್ನು ಬಜಾಜ್ ಕಂಪನಿ ಹಾಕಿಕೊಂಡಿದೆ.
ದೇಶದ ಮೊದಲ ಎಲೆಕ್ಟ್ರಿಕ್ ಟ್ರಾಕ್ಟರ್ ಸೋನಾಲಿಕಾ ‘ಟೈಗರ್’ ಬಿಡುಗಡೆ
ಆಸ್ಟ್ರಿಯಾ ಮೂಲದ ಕೆಟಿಎಂ ಎಜಿ ಕಂಪನಿ ಜೊತೆಗೆ ಬಜಾಜ್ ಕಂಪನಿ ಯಶಸ್ವಿ ಪಾಲುದಾರಿಕೆಯನ್ನು ಹೊಂದಿದೆ. ಆ ಮೂಲಕ ಭಾರತದ ಮಾರುಕಟ್ಟೆಯಲ್ಲಿ ಕೆಟಿಎಂ, ಅತಿ ಹೆಚ್ಚಿನ ಪ್ರೀಮಿಯಂ ಸ್ಪೋರ್ಟ್ಸ್ ಮೋಟಾರ್‌ಸೈಕಲ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸಲು ನೆರವಾಗಿದೆ. ಮತ್ತು ಕೆಟಿಎಂ ಬೈಕ್‌ಗಳ ಮಾರಾಟದಲ್ಲಿ ನೆರವು ನೀಡಿದೆ. ಅನೇಕ ಕೆಟಿಎಂ ಮತ್ತು ಹಸ್ಕವಾರನ್ ಮಾಡೆಲ್‌ಗಲನ್ನು ಕೆಟಿಎಂ ಮತ್ತು ಬಜಾಜ್ ಜಂಟಿಯಾಗಿ ವಿನ್ಯಾಸಗೊಳಿಸಿವೆ ಮತ್ತು ಈ ಬೈಕ್‌ಗಳನ್ನು ಭಾರತದಲ್ಲಿ ಉತ್ಪಾದಿಸಿ, ಜಾಗತಿಕ ಮಾರುಕಟ್ಟೆಗೆ ರಫ್ತು ಮಾಡುವಲ್ಲಿ ಕಂಪವಿ ಯಶಸ್ವಿಯಾಗಿದೆ. ಅಮೆರಿಕ, ಜಪಾನ್ ಸೇರಿದಂತೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಬೈಕ್ ಗಳನ್ನು ರಫ್ತು ಮಾಡಲಾಗಿದೆ.
ಬಜಾಜ್ ಆಟೋ, ಇಂಗ್ಲೆಂಡ್ ಮೂಲದ ಟ್ರಯಂಫ್ ಮೋಟಾರ್‌ಸೈಕಲ್ ಕಂಪನಿ ಜತೆಗೂ ಪಾಲುದಾರಿಕೆ ಹೊಂದಿದ್ದು, ಭಾರತದಲ್ಲಿ ಟ್ರಯಂಫ್ ಮೋಟಾರ್ ಸೈಕಲ್‌ಗಳನ್ನು ವಿನ್ಯಾಸಗೊಳಿಸಿ ಮತ್ತು ಉತ್ಪಾದನೆ ಮಾಡಿ ಜಾಗತಿಕ ಮಾರುಕಟ್ಟೆಗೆ ರಫ್ತು ಮಾಡುವ ಯೋಜನೆಯನ್ನು ಹಾಕಿಕೊಂಡಿದೆ.
7000 ರಾಯಲ್ ಎನ್‌ಫೀಲ್ಡ್ ಮಿಟಿಯರ್ ಸೋಲ್ಡ್, ಕ್ಲಾಸಿಕ್ 350 ಮಾರಾಟವಾಗಿದ್ದೆಷ್ಟು?