ಹೋಂಡಾ ಶೈನ್ 125 ಸಿಸಿ ಮೋಟಾರ್ ಸೈಕಲ್ ಹೊಸ ದಾಖಲೆಯೊಂದಿಗೆ ಮುನ್ನುಗ್ಗುತ್ತಿದೆ. ಅದು ಈಗ 90 ಲಕ್ಷಕ್ಕೂ ಹೆಚ್ಚು ಮಾರಾಟವನ್ನು ಕಂಡಿದ್ದು, ಗ್ರಾಹಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. 2006ರಲ್ಲಿ ಹೋಂಡಾ ಕಂಪನಿ ಈ ಶೈನ್ ದ್ವಿಚಕ್ರವಾಹನವನ್ನು ಮಾರುಕಟ್ಟೆಗೆ ಪರಿಚಯ ಮಾಡಿತ್ತು. ಬಿಡುಗಡೆ ಬಳಿಕ ಅದು ವರ್ಷದಿಂದ ವರ್ಷಕ್ಕೆ ಬೆಳವಣಿಗೆ ಕಾಣುತ್ತಲೇ ಬಂದಿದೆ.
ಭಾರತದ ಜನಪ್ರಿಯ ದ್ವಿಚಕ್ರವಾಹನವಾಗಿರುವ ಶೈನ್ 125 ಹೊಸ ಮೈಲುಗಲ್ಲು ನೆಟ್ಟಿದೆ. 2006ರಲ್ಲಿ ಭಾರತದ ರಸ್ತೆಗಿಳಿದ ಈ ಶೈನ್ ದ್ವಿಚಕ್ರವಾಹನ ಇದೀಗ 90 ಲಕ್ಷಕ್ಕೂ ಅಧಿಕ ಮಾರಾಟ ಕಂಡಿದೆ ಎಂದು ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಹೇಳಿದೆ.
125 ಸಿಸಿ ಸೆಗ್ಮೆಂಟ್‌ನಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿರುವ ಹೋಂಡಾ ಶೈನ್ ಮೋಟಾರ್‌ಸೈಕಲ್ 2020ರಲ್ಲೂ ಅತ್ಯುತ್ತಮ ಪ್ರದರ್ಶನವನ್ನು ತೋರಿದೆ. ವಾಸ್ತವದಲ್ಲಿ 2020 ಆಟೋಮೊಬೈಲ್ ಕ್ಷೇತ್ರಕ್ಕೆ ಆಶಾದಾಯಕ ವರ್ಷವೇನೂ ಆಗಿರಲಿಲ್ಲ. ಈ ವಲಯ ತೀವ್ರ ಹೊಡೆತ ಅನುಭವಿಸಿತ್ತು. ಇದರ ಮಧ್ಯೆಯೂ ಹೋಂಡಾ ಶೈನ್ ಅದ್ಭುತ ಪ್ರದರ್ಶನ ತೋರಿದೆ.
undefined
ಹೋಂಡಾ ಗ್ರೇಜಿಯಾ ಖರೀದಿ ಮೇಲೆ 5000 ರೂ. ಕ್ಯಾಶ್‌ಬ್ಯಾಕ್ ಆಫರ್
ದಶಕದಿಂದ ದಶಕಕ್ಕೆ ಹೋಂಡಾ ಶೈನ್ ಮತ್ತಷ್ಟು ಮಜಬೂತ್ತಾಗುತ್ತಿದೆ. ರಸ್ತೆಗೆ ಬಿಡುಗಡೆಯಾದ ಎರಡು ವರ್ಷದಲ್ಲೇ ಹೋಂಡಾ ಶೈನ್ ಅತ್ಯುತ್ತಮ ಮಾರಾಟವಾಗುವ ದ್ವಿಚಕ್ರವಾಹನ ಎನಿಸಿಕೊಂಡಿತು. 125 ಸಿಸಿ ಮೋಟಾರ್ ಸೈಕಲ್ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಬಿಡುಗಡೆಯಾದ ಮೊದಲ 54 ತಿಂಗಳಲ್ಲಿ 10 ಲಕ್ಷ ಯುನಿಟ್‌ಗಳು ಮಾರಾಟ ಕಂಡು, ವಿಶಿಷ್ಟ ದಾಖಲೆಗೆ ಕಾರಣವಾಯಿತು. 2013ರಲ್ಲಿ ಮಾರಾಟವಾದ ಪ್ರತಿ ಮೂರು 125 ಸಿಸಿ ದ್ವಿಚಕ್ರವಾಹನಗಳ ಪೈಕಿ ಹೋಂಡಾ ಶೈನ್ ಒಂದು ಆಗಿತ್ತು. ಇದರ ಪರಿಣಾಮ 2014ರ ಹೊತ್ತಿಗೆ ಕಂಪನಿ ಒಟ್ಟು 30 ಲಕ್ಷ ಹೋಂಡಾ ಶೈನ್ ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡಲು ಸಾಧ್ಯವಾಯಿತು. ಕಾಲಕಾಲಕ್ಕೆ ಹೋಂಡಾ ಶೈನ್ ಪಡೆದುಕೊಂಡ ಅಪ್‌ಡೇಟ್‌ಗಳಿಂದಾಗಿ ಗ್ರಾಹಕರ ವಿಶ್ವಾಸ ಗಳಿಸಲು ಸಾಧ್ಯವಾಯಿತು 2018ರ ಹೊತ್ತಿಗೆ ಮಾರಾಟವಾದ ಪ್ರತಿ ಸೆಕೆಂಡ್‌ಗೆ 125 ಸಿಸಿ ಮೋಟಾರ್‌ಸೈಕಲ್ ಶೈನ್ ಆಗಿತ್ತು ಎಂದು ಕಂಪನಿ ಹೇಳಿಕೊಂಡಿದೆ.
ದ್ವಿಚಕ್ರವಾಹನ ಮಾರುಕಟ್ಟೆಯಲ್ಲಿ ಸದ್ಯ ಹೋಂಡಾ ಶೈನ್, 125 ಸಿಸಿ ವಿಭಾಗದಲ್ಲಿ ಶೇ.39ರಷ್ಟು ಪಾಲನ್ನು ಹೊಂದಿದೆ. 2019ರ ನವೆಂಬರ್‌ನಲ್ಲಿ 75,144 ಯುನಿಟ್ಸ್ ಮಾರಾಟ ಮಾಡಿದ್ದ ಕಂಪನಿ, 2020ರ ನವೆಂಬರ್ ಹೊತ್ತಿಗೆ ಒಟ್ಟು 94,413 ಶೈನ್ ದ್ವಿಚಕ್ರವಾಹನಗಳನ್ನು ಮಾರಾಟ ಮಾಡುವ ಮೂಲಕ ಎರಡಂಕಿ ಅಭಿವೃದ್ಧಿಯನ್ನು ದಾಖಲಿಸಿದೆ ಎಂಬುದು ಕಂಪನಿಯ ಹೇಳಿಕೆಯಾಗಿದೆ.
2015ರಲ್ಲಿ ಸಿಬಿಎಸ್(ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್) ತಂತ್ರಜ್ಞಾನವನ್ನು ಹೋಂಡಾ ಕಂಪನಿ ಶೈನ್‌ಗೆ ಪರಿಚಯಿಸಿತು. ಎರಡು ವರ್ಷಗಳ ನಂತರ, 50 ಲಕ್ಷ ಮಾರಾಟ ಕಂಡ ಮೊದಲ 125 ಸಿಸಿ ಮೋಟಾರ್ ಸೈಕಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 2018ರಲ್ಲಿ ಹೊಸ ದಾಖಲೆ ಬರೆದ ಶೈನ್, ಒಟ್ಟು 70 ಲಕ್ಷಕ್ಕೂ ಅಧಿಕ ಯುನಿಟ್ಸ್ ಮಾರಾಟವಾದವು.
ದೇಶದ ಮೊದಲ ಎಲೆಕ್ಟ್ರಿಕ್ ಟ್ರಾಕ್ಟರ್ ಸೋನಾಲಿಕಾ ‘ಟೈಗರ್’ ಬಿಡುಗಡೆ
ಬಿಎಸ್ 6 ನಿಯಮಗಳ ಪಾಲನೆಗಾಗಿ ಎನಾಹನ್ಸಡ್ ಸ್ಮಾರ್ಟ್ ಪವರ್(ಇಎಸ್‌ಪಿ) ವರ್ಧಿತ ಪಿಜಿಎಂ-ಎಫ್ಐ ಎಚ್ಇಟಿ 125 ಸಿಸಿ ಎಂಜಿನ್‌ನೊಂದಿಗೆ ಹೊಸ ಶೈನ್ ಹೆಚ್ಚು ಪವರ್‌ಫುಲ್ ಆಗಿ ಪ್ರದರ್ಶನ ನೀಡುತ್ತಿದೆ. ವರ್ಷಗಳಿಂದ ಶೈನ್ 125 ಸಿಸಿ ವಿಭಾಗದಲ್ಲಿ ಗ್ರಾಹಕರ ನಿರೀಕ್ಷೆಗಳನ್ನು ನಿರಂತರ ಉತ್ಪನ್ನ ಮತ್ತು ವೈಶಿಷ್ಟ್ಯ ವರ್ಧನೆಯೊಂದಿಗೆ ಮರು ವ್ಯಾಖ್ಯಾನ ಮಾಡಿದೆ. ನಮ್ಮ ಗ್ರಾಹಕರನ್ನು ಸಂತೋಷದ ಸವಾರಿ ಮೂಲಕ ಆನಂದಿಸಲು ನಾವು ಬದ್ಧರಾಗಿದ್ದೇವೆ ಎಂದು ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಟ್ಸುಶಿ ಒಗಾಟಾ ಅಭಿಪ್ರಾಯಪಟ್ಟಿದ್ದಾರೆ.
ಹೊಸ ಹೋಂಡಾ ಶೈನ್ ಬೆಲ ಇದೀಗ 69,415(ಎಕ್ಸ್ ಶೋರೂಮ್). 125 ಸಿಸಿ ಸೆಗ್ಮೆಂಟ್‌ನಲ್ಲಿ ಭಾರೀ ಸ್ಪರ್ಧೆ ಇದೆ. ಬಜಾಜ್ ಕಂಪನಿಯ ಡಿಸ್ಕವರ್ 125 ಸಿಸಿ, ಪಲ್ಸರ್ 125 ಮತ್ತು ಹೀರೋ ಗ್ಲಾಮರ್ ಐ3ಎಸ್ ಮೋಟಾರ್‌ಸೈಕಲ್‌ಗಳ ಜತೆ ಹೋಂಡಾ ಶೈನ್ ಕೂಡ ತೀವ್ರ ಪೈಪೋಟಿ ಎದುರಿಸುತ್ತಿದೆ. ಇದರ ಮಧ್ಯೆಯೇ ಗ್ರಾಹಕರನ್ನು ತನ್ನತ್ತ ಸೆಳೆದುಕೊಳ್ಳಲು ಹೋಂಡಾ ಶೈನ್ ಯಶಸ್ವಿಯಾಗಿದೆ.
7000 ರಾಯಲ್ ಎನ್‌ಫೀಲ್ಡ್ ಮಿಟಿಯರ್ ಸೋಲ್ಡ್, ಕ್ಲಾಸಿಕ್ 350 ಮಾರಾಟವಾಗಿದ್ದೆಷ್ಟು?