ಸೇನೆಯ ಗೂರ್ಖಾ ರಿಜಿಮೆಂಟ್ ಪ್ರೇರಿತ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಗೂರ್ಖಾ ಎಡಿಶನ್ ಬೈಕ್ ಲಾಂಚ್

Published : Aug 18, 2026, 05:33 PM IST
Army Inspired Royal Enfield Classic 350 Gurkha Edition Launched

ಸಾರಾಂಶ

ಭಾರತೀಯ ಸೇನೆಯ ಗೂರ್ಖಾ ರಿಜಿಮೆಂಟ್ ಧೈರ್ಯ, ಸಾಹಸ, ಶಿಸ್ತು, ಶೌರ್ಯಕ್ಕೆ ಗೌರವ ನೀಡುವ ಸಲುವಾಗಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಗೂರ್ಖಾ ಎಡಿಶನ್ ಬೈಕ್ ಲಾಂಚ್ ಆಗಿದೆ. ಈ ಬೈಕ್ ವಿಶೇಷತೆ ಏನು? ಬೆಲೆ ಎಷ್ಟು?

ಬೆಂಗಳೂರು (ಆ.18) ಭಾರತೀಯ ಸೇನೆಯ ಗೂರ್ಖಾ ರೆಜಿಮೆಂಟ್ ಶೌರ್ಯ, ಧೈರ್ಯ, ಸಾಹಸಕ್ಕೆ ಹೆಸರುವಾಸಿಯಾಗಿದೆ. ಈ ಗೂರ್ಖಾ ರೆಜಿಮೆಂಟ್‌ಗೆ ಗೌರವ ಸಲ್ಲಿಸಲು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಗೂರ್ಖಾ ಎಡಿಶನ್ ಬೈಕ್ ಲಾಂಚ್ ಆಗಿದೆ. ಮಿಲಿಟರಿ ಗ್ರೀನ್ ಬಣ್ಣದಲ್ಲಿ ಹೊಸ ಗೂರ್ಖಾ ಎಡಿಶನ್ ಬೈಕ್ ಲಾಂಚ್ ಆಗಿದೆ. ಇದರೊಂದಿಗೆ ಭಾರತೀಯ ಸೇನೆಯ ಗೂರ್ಖಾ ರೆಜಿಮೆಂಟ್‌ನಲ್ಲಿ ಸೇವ ಸಲ್ಲಿಸಿದ ಹಾಗೂ ಸಲ್ಲಿಸುತ್ತಿರುವ ಯೋಧರಿಗೆ ರಾಯಲ್ ಎನ್‌ಫೀಲ್ಡ್ ತನ್ನದೇ ರೀತಿಯಲ್ಲಿ ಗೌರವ ನೀಡಿದೆ. ವಿಶೇಷ ಅಂದರೆ ಈ ಬೈಕ್‌ನಲ್ಲಿ ಗೂರ್ಖಾ ರಿಜಿಮೆಂಟ್‌ನ ಖುಕ್ರಿ ಲೋಗೋ ನೀಡಲಾಗಿದೆ.

ಹೊಸ ಗೂರ್ಖಾ ಎಡಿಶನ್ ಬೈಕ್ ಬೆಲೆ

ಹೊಸ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಗೂರ್ಖಾ ಎಡಿಶನ್ ಬೈಕ್ ಬೆಲೆ 2,10,684 ರೂಪಾಯಿ (ಎಕ್ಸ್ ಶೋ ರೂಂ). ಗೂರ್ಖಾ ಎಡಿಶನ್ ಬೈಕ್ ಬುಕಿಂಗ್ ಕೂಡ ಆರಂಭಗೊಂಡಿದೆ. ಆಕರ್ಷಕ ಬೆಲೆಯಲ್ಲಿ ಹಾಗೂ ವಿಶೇಷ ಎಡಿಶನ್ ಬೈಕ್ ಲಭ್ಯವಿದ್ದು, ಬೈಕ್ ಪ್ರೀಯರು ಸ್ಪೆಷಲ್ ಎಡಿಶನ್ ಬೈಕ್ ಖರೀದಿಗೆ ಮುಂದಾಗಿದ್ದಾರೆ.

ಗೂರ್ಖಾ ಎಡಿಶನ್ ಬೈಕ್ ಜೆ ಸೀರಿಸ್ ಎಂಜಿನ್ ಹೊಂದಿದೆ. ಆ್ಯಸಿಸ್ಟ್ ಹಾಗೂ ಸ್ಲಿಪ್ಪರ್ ಕ್ಲಚ್ ನೀಡಲಾಗಿದೆ. ಇದರಿಂದ ಗೇರ್ ಬದಲಾವಣೆ ಸ್ಮೂತ್ ಆಗಿ ಮಾಡಲು ಸಾಧ್ಯವಿದೆ. ವೈಬ್ರೇಶನ್ ಸೇರಿದಂತೆ ಹಲವು ದೂರುಗಳಿಗೂ ಸ್ಪಂದಿಸಲಾಗಿತ್ತು. ರಾಯಲ್ ಎನ್‌ಫೀಲ್ಡ್ ಎಂಜಿನ್ ಹಾಗೂ ಫೀಚರ್‌ನಲ್ಲಿ ಭಾರಿ ಹೊಸತನ ನೀಡಲಾಗಿದೆ. ಮೊಬೈಲ್ ಚಾರ್ಜಿಂಗ್, ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಹಲವು ವಿಶೇಷತೆಗಳನ್ನು ಈ ಬೈಕ್ ಹೊಂದಿದೆ.

ಗೂರ್ಖಾ ಕಲೆಕ್ಷನ್

ಗೂರ್ಖಾ ಎಡಿಶನ್ ಬೈಕ್‌ನಲ್ಲಿ ರೈಡಿಂಗ್ ಅಪರೆಲ್ ಹಾಗೂ ಗೇರ್ ಕಲೆಕ್ಷನ್ ಅನಾವರಣ ಮಾಡಲಾಗಿದೆ. ಡ್ಯುಯೆಲ್ ಜೆಟ್ ಹಾಗೂ ಕ್ವೆಸ್ಟ್ ಹಲ್ಮೆಟ್, ಆ್ಯಂಕಲ್ ಲೆದರ್ ಬೂಟ್, ಹೆಡ್‌ಗೇರ್ಸ ಮಿಲಿಟರಿ ಶೈಲಿಯ ಜಾಕೆಟ್, ಉಡುಪುಗಳು ಸೇರಿವೆ. ಹಸಿರು, ಮ್ಯಾಟ್ ಬ್ಲಾಕ್ , ಕಂಚಿನ ಬಣ್ಣಗಳಲ್ಲಿ ರೈಡಿಂಗ್ ಗೇರ್ ಲಭ್ಯವಿದೆ. ಈ ಮೂಲಕ ಅತ್ಯಾಕರ್ಷಕ ಲುಕ್ ನೀಡಲಿದೆ.

ಗೂರ್ಖಾ ಪಡೆಯ ಸಾಹಸ ಮತ್ತು ನಿಷ್ಠೆಗೆ ಈ ಬೈಕ್ ಮೂಲಕ ನಾವು ನಮನ ಸಲ್ಲಿಸುತ್ತಿದ್ದೇವೆ ಎಂದು ರಾಯಲ್ ಎನ್‌ಫೀಲ್ಡ್ ಸಿಒಒ ಯದ್ವಿಂದರ್ ಸಿಂಗ್ ಗುಲೇರಿಯಾ ಹೇಳಿದ್ದಾರೆ. ಹಾಗೆಯೇ ಗೂರ್ಖಾ ಬ್ರಿಗೇಡ್ ಅಧ್ಯಕ್ಷ ಲೆಫ್ಟಿನೆಂಟ್ ಜನರಲ್ ಸಂಜೀವ್ ಚೌಹಾಣ್ ಮಾತನಾಡಿ, ನಮ್ಮ ಯೋಧರ ತ್ಯಾಗ ಮತ್ತು ಶಿಸ್ತನ್ನು ಗೌರವಿಸಿ ರಾಯಲ್ ಎನ್‌ಫೀಲ್ಡ್ ನಿರ್ಮಿಸಿರುವ ಈ ಬೈಕ್ ಗೂರ್ಖಾ ಪರಂಪರೆಗೆ ಸಂದ ಗೌರವ ಎಂದು ಸಂತಸ ವ್ಯಕ್ತಪಡಿಸಿದರು.

PREV
Read more Articles on
click me!

Recommended Stories

ಫ್ಯಾನ್ಸಿ ನಂಬರ್‌ ಕ್ರೇಜ್‌ನಿಂದ ಸಾರಿಗೆ ಇಲಾಖೆಗೆ ಹರಿದುಬಂತು ಕೋಟಿ ಕೋಟಿ ಹಣ, ಯಾವ ನಂಬರ್‌ಗೆ ಎಷ್ಟು ದುಡ್ಡು? ಇಲ್ಲಿದೆ ಡೀಟೇಲ್ಸ್‌..
ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಯ್ತು 77,777 ರೂ.ಗೆ ಸಿಗ್ತಿರುವ ಈ ಬೈಕ್