ಭಾರತದ ಡ್ರೈವರ್ ಲೆಸ್ ಬೈಕ್, ವೈರಲ್ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರ!

Published : Oct 20, 2021, 03:50 PM IST
ಭಾರತದ ಡ್ರೈವರ್ ಲೆಸ್ ಬೈಕ್, ವೈರಲ್ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರ!

ಸಾರಾಂಶ

ಟೆಸ್ಲಾ ಸೇರಿದಂತೆ ಇತರ ಡ್ರೈವರ್‌ಲೆಸ್ ವಾಹನಕ್ಕೆ ಪೈಪೋಟಿ ಭಾರತದ ದೇಸಿ ಡ್ರೈವರ‌ಲೆಸ್ ಬೈಕ್, ವಿಡಿಯೋ ವೈರಲ್ ಆನಂದ್ ಮಹೀಂದ್ರ ಮನಸ್ಸು ಗೆದ್ದ ದೇಸಿ ಕಲಾಕಾರ್

ಮುಂಬೈ(ಅ.20): ಮಹೀಂದ್ರ ಅಂಡ್ ಮಹೀಂದ್ರ ಕಂಪನಿ ಮುಖ್ಯಸ್ಥ ಆನಂದ್ ಮಹೀಂದ್ರ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ವಿಶೇಷತೆ ಇರುವ ಹಲವು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಈ ಬಾರಿ ಆನಂದ್ ಮಹೀಂದ್ರ ಅಮೆರಿಕದ ಟೆಸ್ಲಾ  ವಾಹನಕ್ಕೆ ಪೈಪೋಟಿ ನೀಡಬಲ್ಲ ಭಾರತ ದೇಸಿ ಡ್ರೈವರ್‌ಲೆಸ್ ಸ್ಕೂಟರ್ ಕುರಿತು ಬೆಳಕು ಚೆಲ್ಲಿದ್ದಾರೆ.

ಇದು ಇಡ್ಲಿ ಕ್ಯಾಂಡಿ..! ಫೋಟೋ ಶೇರ್ ಮಾಡಿದ ಆನಂದ್ ಮಹೀಂದ್ರ

ಅಮೆರಿಕ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ಡ್ರೈವರ್‌ಲೆಸ್ ವಾಹನದ ಪ್ರಯೋಗ ನಡೆಯುತ್ತಿದೆ.  ಈ ಡ್ರೈವರ್‌ಲೆಸ್ ವಾಹನಕ್ಕೆ ಪೈಪೋಟಿ ನೀಡಬಲ್ಲ ಬೈಕ್ ಭಾರತದಲ್ಲಿ ಪತ್ತೆಯಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣಧಲ್ಲಿ ಡಾ.ಅಜಯಿತಾ ವಿಡಿಯೋ ಹಂಚಿಕೊಂಡಿದ್ದಾರೆ. ಇದೇ ವಿಡಿಯೋವನ್ನು ಆನಂದ್ ಮಹೀಂದ್ರ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ಎಲ್ಲರ ಗಮನಸೆಳೆದಿದ್ದಾರೆ.

ಪಲ್ಸರ್ ಬೈಕ್ ಹಿಂಭಾಗದ ಸೀಟಿನಲ್ಲಿ ಕುಳಿತಿರುವ ರೈಡರ್ ಯಾರ ಸಹಾಯವಿಲ್ಲದೆ ಬೈಕ್ ಓಡಿಸುತ್ತಿದ್ದಾನೆ. ಈತ ಹಿಂಬದಿಯಲ್ಲಿ ಪಿಲಿಯನ್ ರೈಡರ್ ರೀತಿ ಕುಳಿತಿದ್ದಾನೆ. ಬೈಕ್ ತನ್ನಷ್ಟಕ್ಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದೆ. ಬೈಕ್‌ನಲ್ಲಿ ರೈಡರ್ ಇಲ್ಲ. ಪಿಲಿಯನ್ ರೈಡರ್ ಮಾತ್ರ. ಹೀಗಾಗಿ ಇದು ಡ್ರೈವರ್ ಲೆಸ್ ಬೈಕ್ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಾಷ್ಟ್ರೀಯ ಬಾಕ್ಸರ್ ಈಗ ಆಟೋ ಚಾಲಕ.. ನೆರವಿಗೆ ಆನಂದ್‌ ಮಹೀಂದ್ರಾ!

ಈ ಸಾಹಸವನ್ನು ವಿಡಿಯೋ ಮಾಡಿದ ವ್ಯಕ್ತಿ  ಬೈಕನ್ನು ಯಾರು ಚಲಾಯಿಸುತ್ತಿದ್ದಾರೆ, ಈ ಮ್ಯಾಜಿಕ್ ಹೇಗೆ ಸಾಧ್ಯ ಎಂದು ಕೇಳಿದ್ದಾನೆ. ದೇವರೇ? ಎಂದು ಪ್ರಶ್ನಿಸಿದ್ದಾನೆ. ಅತ್ತ ಸಾಹಸಿ ಮುಗಳುನಕ್ಕು ಸುಮ್ಮನಾಗಿದ್ದಾನೆ. ಈ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರ ಹಂಚಿಕೊಂಡು ಕಿಶೋರ್ ಕುಮಾರ್ ಅವರ ಜನಪ್ರಿಯ ಹಾಡೊಂದನ್ನು ಉಲ್ಲೇಖಿಸಿದ್ದಾರೆ.

 

1972ರಲ್ಲಿ ಬಿಡುಗಡೆಯಾದ ಬಾಲಿವುಡ್ ಸಿನಿಮಾ ಪರಿಚಯ್ ಚಿತ್ರದ ಮುಸಾಫಿರ್ ಹೂನ್ ಯಾರೋನ್ ಹಾಡೊಂದನ್ನು ಗುನುಗಿದ್ದಾರೆ. ಈ ವಿಡಿಯೋ ಕ್ಷಣಾರ್ಧದಲ್ಲೇ 2.74 ಲಕ್ಷ ವೀಕ್ಷೆಣೆಯಾಗಿದೆ. ಆನಂದ್ ಮಹೀಂದ್ರ ಈ ವಿಡಿಯೋ ಹಂಚಿಕೊಂಡ ಬೆನ್ನಲ್ಲೇ ಹಲವರು ಮೆಚ್ಚುಗೆ ವ್ಯಕ್ತಪಡಿಸಿ ಪ್ರತಿಕ್ರಿಯೆ ನೀಡಿದ್ದಾರೆ.

ಕೊಟ್ಟ ಮಾತಿನಂತೆ 1 ರೂ ಇಡ್ಲಿ ಅಜ್ಜಿಗೆ ಮನೆ; ಆನಂದ್ ಮಹೀಂದ್ರ ಕಾರ್ಯಕ್ಕೆ ದೇಶವೇ ಸಲಾಂ!

ಟೆಸ್ಲಾ ಮುಖ್ಯಸ್ಥ ಎಲನ್ ಮಸ್ಕ್ ಭಾರತದಲ್ಲಿ ಚಾಲಕ ರಹಿತ ವಾಹನ ಬಿಡುಗಡೆ ಮಾಡುವ ತಯಾರಿಯಲ್ಲಿದ್ದಾರೆ. ಆದರೆ ಮಸ್ಕ್ ಭಾರತದಲ್ಲಿ ಡ್ರೈವರ್ ಲೆಸ್ ವಾಹನಕ್ಕೆ ತೀವ್ರ ಪೈಪೋಟಿ ಎದುರಿಸಲಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೋ ನೋಡಿದರೆ ಎಲನ್ ಮಸ್ಕ್ ತಕ್ಷಣವೆ ಗಗನ ಯಾತ್ರೆ ಕೈಗೊಳ್ಳಲಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

 

PREV
click me!

Recommended Stories

Hero Splendor ಬೈಕ್‌ಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳು
ಭರ್ಜರಿಯಾಗಿ ಮರಳಿದ ಭಾರತದ ಕೈನೆಟಿಕ್, ಕೇವಲ 1,000 ರೂಗೆ ಬುಕ್ ಮಾಡಿ ಎಲೆಕ್ಟ್ರಿಕ್ ಸ್ಕೂಟರ್