ದ್ವಿಚಕ್ರವಾಹನ ಉತ್ಪಾದನಾ ದೇಶಿ ಕಂಪನಿಗಳ ಪೈಕಿ ಟಿವಿಎಸ್ ಕೂಡ ಪ್ರಮುಖ ಕಂಪನಿಯಾಗಿದೆ. ಕಂಪನಿಯು ಇದೀಗ 2021ರ ಟಿವಿಎಸ್ ಅಪಾಚೆ ಆರ್‌ಆರ್310 ಹೊಸ ಮೋಟಾರ್ ಸೈಕಲ್ ಅನ್ನು ಆಗಸ್ಟ್ 30ರಂದು ಲಾಂಚ್ ಮಾಡಲು ಸಿದ್ಧತೆ ಮಾಡಿಕೊಂಡಿದೆ.
ಭಾರತದ ಪ್ರಮುಖ ದ್ವಿಚಕ್ರವಾಹನ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ ಟಿವಿಎಸ್ ಕಂಪನಿಯ ಅಪಾಚೆ ಕೂಡ ಅತ್ಯಂತ ಜನಪ್ರಿಯ ಪ್ರೀಮಿಯಂ ಬೈಕ್ ಎನಿಸಿಕೊಂಡಿದೆ. ಈ ಅಪಾಚೆ ಮೋಟಾರ್ ಸೈಕಲ್ ಅನ್ನು ಕಂಪನಿ ಅಪ್‌ಡೇಟ್ ಅಥವಾ ಹೊಸ ಆವೃತ್ತಿಗಳಲ್ಲಿ ಬಿಡುಗಡೆ ಮಾಡುತ್ತದೆ. ಟಿವಿಎಸ್ ಕಂಪನಿಯು ಇದೀಗ ಹೊಸ 2021ರ ಟಿವಿಎಸ್ ಅಪಾಚೆ ಆರ್‌ಆರ್310 ಅಪ್‌ಡೇಟೆಡ್ ಪ್ರೀಮಿಯಂ ಮೋಟಾರ್ ಸೈಕಲ್ ಅನ್ನು ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದೆ.
2025ರ ಹೊತ್ತಿಗೆ ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳಷ್ಟೇ ಮಾರಾಟವಾಗಬೇಕು!
ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ಎದುರಾಗದೇ ಇದ್ದಿದ್ದರೆ ಟಿವಿಎಸ್ ಕಂಪನಿಯು ಈ ಅಪಾಚೆ ಆರ್ ಆರ್ 310 ಬೈಕ್ ಅನ್ನು ಕಳೆದ ವರ್ಷವೇ ಬಿಡುಗಡೆ ಮಾಡಲಿತ್ತು. ಆದರೆ, ಕೋವಿಡ್‌ನಿಂದಾಗಿ ಕಂಪನಿಯು ಬಿಡುಗಡೆಯನ್ನ ಮುಂದಕ್ಕೆ ಹಾಕುತ್ತ ಬಂತು. ಇದೀಗ ಅದಕ್ಕೆ ಮುಹೂರ್ತ ಕೂಡಿ ಬಂದಿದ್ದು, ಈ ತಿಂಗಳ ಅಂದರೆ, ಆಗಸ್ಟ್ 30ಕ್ಕೆ ಹೊಸ 2021ರ ಅಪಾಚೆ ಆರ್ ಆರ್ 310 ಬೈಕ್ ಲಾಂಚ್ ಆಗಲಿದೆ.
ಈ ಹೊಸ ಮೋಟಾರ್‌ಸೈಕಲ್ ಅಪಾಚೆ ಆರ್ ಆರ್ 310ರಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದಾಗಿದೆ. ಉತ್ತಮವಾದ ಟೈರ್, ಟ್ವೀಕ್ಡ್ ಎಂಜಿನ್ ಮತ್ತು ಹೊಸ ಫೀಚರ್‌ಗಳನ್ನು ಅಪಾಚೆ ಬೈಕ್ ಅಭಿಮಾನಿಗಳು ನಿರೀಕ್ಷಿಸಬಹುದಾಗಿದೆ. ದ್ವಿಚಕ್ರವಾಹನ ಮಾರುಕಟ್ಟೆಯಲ್ಲಿ ಅಪಾಚೆ ಪ್ರೀಮಿಯಮ್ ಬೈಕ್ ಅದರದ್ದೇ ಬಹುದೊಡ್ಡ ಗ್ರಾಹಕ ವರ್ಗವಿದೆ.
ಅಪಾಚೆ ಆರ್ ಆರ್ 310 ಬೈಕ್ ಹೊರ ವಿನ್ಯಾಸದ ಬಗ್ಗೆ ಹೇಳುವುದಾದರೆ, ಪರಿಷ್ಕೃತ ವಿನ್ಯಾಸವನ್ನು ನಿರೀಕ್ಷಿಸಬಹುದಾಗಿದೆ. ಅಪಾಚೆ ಆರ್ ಆರ್ 310 ಬೈಕ್ ಹೆಡ್‌ಲ್ಯಾಂಪ್ ವಿನ್ಯಾಸ ಕೂಡ ಪರಿಷ್ಕೃತಗೊಂಡಿದ್ದು, ತಾಜಾತನದ ಲುಕ್ ನೀಡಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಹೊಸ ಮೋಟಾರ್ ಸೈಕಲ್ ಹೊಸ ಹೊಸ ಬಣ್ಣಗಳ ಆಯ್ಕೆಯಲ್ಲಿ ದೊರೆಯಬಹುದು ಎನ್ನಲಾಗಿದೆ.
ಹಬ್ಬದ ಸೀಸನ್‌ಗೆ ಎರಡು ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡಿದ ಒಮೆಗಾ ಸೀಕಿ
ಹೊಸ ಬೈಕ್ ಎಂಜಿನ್ ಕೂಡ ಇನ್ನಷ್ಟು ಶಕ್ತಿಶಾಲಿಯಾಗಿರುವ ಸಾಧ್ಯತೆಗಳಿವೆ. ಇದಕ್ಕಾಗಿ ಕಂಪನಿ ಒಂದಿಷ್ಟು ಚಿಕ್ಕಪುಟ್ಟ ಬದಲಾವಣೆಗಳನ್ನು ಮಾಡಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಸದ್ಯ ಬೈಕ್ 310 ಸಿಸಿ ಸಿಂಗಲ್ ಸಿಲಿಂಡರ್ ಎಂಜನ್ ಹೊಂದಿದ್ದು, ಇದು ಬಿಎಂಡಬ್ಲ್ಯೂನ ಜಿ 310 ಆರ್ ಎಂಜಿನ್ ಆಧರಿತವಾಗಿದೆ. ಈ ಎಂಜಿನ್ ಸಿಕ್ಸ್ ಸ್ಪೀಡ್ ಗೇರ್‌ಗಳೊಂದಿಗೆ ಬರುತ್ತದೆ. ಹೊಸ 2021ರ ಅಪಾಚೆ ಬೈಕ್‌ನಲ್ಲೂ ಒಟ್ಟಾರೆ ಶಕ್ತಿ ಉತ್ಪಾದನೆ ಮತ್ತು ಟಾರ್ಕ್ ಉತ್ಪಾದನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎನ್ನಲಾಗುತ್ತಿದೆ.
ಭಾರತೀಯ ದ್ವಿಚಕ್ರವಾಹನಗಳ ಮಾರುಕಟ್ಟೆಯಲ್ಲಿ ಟಿವಿಎಸ್‌ನ ಈ ಅಪಾಚೆ ಬ್ರ್ಯಾಂಡ್‌ಗೆ ಅದರದ್ದೇ ಗ್ರಾಹಕ ವಲಯವಿದೆ. 2020ರಲ್ಲಿ ಈ ಮೋಟಾರ್ ಸೈಕಲ್ ಅನ್ನು ಕಂಪನಿಯು ಮೈಕೆಲಿನ್ ರೋಡ್ 5 ಟೈರ್ಸ್‌ಗಳೊಂದಿಗೆ ಅಪ್‌ಡೇಟ್ ಮಾಡಿತ್ತು. ಇದು ಹಿಂದಿನ ಮೈಕೆಲಿನ್ ಪೈಲಟ್ ಸ್ಪೋರ್ಟ್ಸ್‌ಗೆ ಬದಲಿಯಾಗಿ ಬಂದಿತು. ಈಗ ಅಂದರೆ 2021ರ ಅಪಾಚೆ ಮೋಟಾರ್ ಸೈಕಲ್‌ನಲ್ಲಿ ಗ್ರಾಹಕರು ಟಿವಿಎಸ್ ಪ್ರೋಟಾರ್ಕ್ ಎಕ್ಸ್‌ಟ್ರೀಮ್ ರೈಡಿಯಲ್ಸ್ ರಬ್ಬರ್ ಟೈರ್‌ಗಳನ್ನು ನಿರೀಕ್ಷಿಸಬಹುದಾಗಿದೆ.
ಟಿವಿಎಸ್ ಕಂಪನಿಯು ಈಗಾಗಲೇ ಅಪಾಚೆ ಆರ್ ಆರ್ 310 ಮೋಟಾರ್ ಸೈಕಲ್ ಅನ್ನು ನಾಲ್ಕು ರೈಡಿಂಗ್ ಮೋಡ್‌ಗಳಲ್ಲಿ ನೀಡುತ್ತಿದೆ. ಸ್ಪೋರ್ಟ್, ಅರ್ಬನ್, ಟ್ರಾಕ್ ಮತ್ತು ರೇನ್ ಮೋಡ್‌ಗಳ ಫೀಚರ್‌ಗಳನ್ನು ಹೊಸ ಅಪಾಚೆ ಹೊಂದಿರಲಿದೆ. ಈ ನಾಲ್ಕು ಮೋಡ್‌ಗಳಿಗೆ ಹೆಚ್ಚುವರಿಯಾಗಿ ಕಂಪನಿಯು, ಡುಯಲ್ ಚಾನೆಲ್ ಎಬಿಎಸ್‌ನೊಂದಿಗೆ ಅಪಾಚೆಯ ಎರಡೂ ಚಕ್ರಗಳಿಗೆ ಡಿಸ್ಕ್ ಬ್ರೇಕ್‌ಗಳನ್ನು ನೀಡಲಿದೆ. ಹಾಗಾಗಿ, ಸುರಕ್ಷತೆಯ ದೃಷ್ಟಿಯಿಂದ ಈ ಫೀಚರ್ ಹೆಚ್ಚು ಸಶಕ್ತವಾಗಿದೆ ಎಂದು ಹೇಳಬಹುದು. ಅಪಾಚೆಯ ಈ ಹೊಸ ಅವತಾರವು ಇನ್ನಷ್ಟು ಅದರ ಪ್ರಸಿದ್ಧಿಯನ್ನು ಹೆಚ್ಚಿಸಬಹುದು.
ಹೊಸ ಟಿಗೋರ್ ಇವಿ ಅನಾವರಣ, 21000 ರೂ. ಕೊಟ್ಟು ಬುಕ್ ಮಾಡ್ಕೊಳ್ಳಿ
ಆಗಸ್ಟ್ 30ರಂದು ಬಿಡುಗಡೆ ಕಾಣಲಿರುವ ಈ ಅಪಾಚೆ ಆರ್ ಆರ್ 310 ಮೋಟಾರ್ ಸೈಕಲ್ ಬೆಲೆ ಎಷ್ಟಿದೆ ಎಂದು ನಿಖರವಾಗಿ ಇನ್ನೂ ಗೊತ್ತಾಗಿಲ್ಲ. ಹಾಗಿದ್ದೂ, 2.50 ಲಕ್ಷ ರೂ.ನಿಂದ 2.60 ಲಕ್ಷ ರೂ.ವರೆಗೆ ಇರಬಹುದು ಎಂದು ಅಂದಾಜಿಸಲಾಗುತ್ತಿದೆ.