TVS Update: ದೀಪಾವಳಿ ಹಬ್ಬಕ್ಕೆ ಬೈಕ್ ಖರೀದಿಸಬೇಕಾ? ಹೊಸ ಫೀಚರ್ಸ್‌ನಲ್ಲಿ Apache, Ronin, ಇಲ್ಲಿದೆ ಸಂಪೂರ್ಣ ಮಾಹಿತಿ

Published : Sep 18, 2026, 11:50 AM IST
TVS Apache Ronin

ಸಾರಾಂಶ

ಟಿವಿಎಸ್ ಕಂಪನಿಯು ತನ್ನ ಜನಪ್ರಿಯ ಅಪಾಚೆ ಮತ್ತು ರೋನಿನ್ ಬೈಕ್‌ಗಳ ಹೊಸ ಟಾಪ್ ವೇರಿಯಂಟ್‌ಗಳನ್ನು ಬಿಡುಗಡೆ ಮಾಡಿದೆ. ಈ ಹೊಸ ಮಾದರಿಗಳಲ್ಲಿ ಟ್ರ್ಯಾಕ್ಷನ್ ಕಂಟ್ರೋಲ್, ಗೂಗಲ್ ಮ್ಯಾಪ್ಸ್ ಮತ್ತು ಟೈಪ್-ಸಿ ಚಾರ್ಜಿಂಗ್‌ನಂತಹ ಅತ್ಯಾಧುನಿಕ ಫೀಚರ್ಸ್‌ಗಳನ್ನು ನೀಡಲಾಗಿದೆ. ಬೆಲೆ, ಫೀಚರ್ಸ್ ವಿವರ ತಿಳಿಯಿರಿ.

ದ್ವಿಚಕ್ರ ವಾಹನ ತಯಾರಕ ಕಂಪನಿ TVS ತನ್ನ ಜನಪ್ರಿಯ Apache ಬೈಕ್‌ಗಳ ಹಲವು ಮಾದರಿಗಳಿಗೆ ಹೊಸ ಟಾಪ್ ವೇರಿಯಂಟ್‌ಗಳನ್ನು ಪರಿಚಯಿಸಿದೆ. Apache RTR 160, RTR 160 4V ಮತ್ತು RTR 200 4V ಬೈಕ್‌ಗಳಿಗೆ ಹೊಸ ಫೀಚರ್ಸ್‌ಗಳನ್ನು ನೀಡಲಾಗಿದೆ. ಇದರ ಜೊತೆಗೆ Ronin ಬೈಕ್‌ಗಳಲ್ಲೂ ಹೊಸ ಅಪ್‌ಡೇಟ್‌ಗಳನ್ನು ಮಾಡಲಾಗಿದೆ. ಇನ್ನು RTR 310 ಮತ್ತು RR 310 ಬೈಕ್‌ಗಳಿಗೆ ಹೊಸ Black Diamond Edition ಪರಿಚಯಿಸಲಾಗಿದೆ. ಹೊಸ ಬೈಕ್‌ಗಳ ಯಾವಾಗ ರಸ್ತೆಗಿಳಿಯಲಿವೆ. ಅದರ ಬೆಲೆಗಳು, ವೈಶಷ್ಟ್ಯಗಳ ಕುರಿತ ಸಂಪೂರ್ಣ ಮಾಹಿತಿ ಕೆಳಗೆ ವಿವರಿಸಲಾಗಿದೆ.

ಟಿವಿಎಸ್ ಅಪಾಚೆ ಆರ್‌ಟಿಆರ್(Apache RTR 160) ಬೆಲೆ ಎಷ್ಟು?

ಟಿವಿಎಸ್ ಕಂಪನಿ ಪರಿಚಯಿಸಿರುವ Apache RTR 160 ಬೈಕ್‌ನ ಹೊಸ ಟಾಪ್ ವೇರಿಯಂಟ್ ಬೆಲೆ ₹1.28 ಲಕ್ಷ. ಇದರ ಫೀಚರ್‌ಗಳು ಸೂಪರ್ ಆಗಿವೆ. ಈ ಬೈಕ್‌ನಲ್ಲಿ ಟ್ರ್ಯಾಕ್ಷನ್ ಕಂಟ್ರೋಲ್, ಹ್ಯಾಜರ್ಡ್ ಲೈಟ್‌ಗಳು ಮತ್ತು LED ಇಂಡಿಕೇಟರ್‌ಗಳನ್ನು ನೀಡಲಾಗಿದೆ. ಇದು ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ.

ಅಪಾಚೆ ಆರ್‌ಟಿಆರ್ 4V (Apache RTR 160 4V)

Apache RTR 160 4V ಕೂಡ ಅತ್ಯುತ್ತಮ ಫೀಚರ್‌ಗಳೊಂದಿಗೆ ಖರೀದಿಸುವವರ ಫೇವರಿಟ್ ಆಗಿದೆ. ಹೊಸ ಟಾಪ್ ವೇರಿಯಂಟ್‌ನ ಬೆಲೆ ₹1.41 ಲಕ್ಷ. ಇದರಲ್ಲಿ Google Maps ಮಿರರಿಂಗ್, ಪ್ಯಾನಿಕ್ ಬ್ರೇಕ್ ಅಲರ್ಟ್ ಮತ್ತು Type-C ಚಾರ್ಜಿಂಗ್ ಪೋರ್ಟ್‌ಗಳನ್ನು ನೀಡಲಾಗಿದೆ. ಈ ವಿಶಿಷ್ಟ ಫೀಚರ್ಸ್‌ಗಳಿಂದ ಬೈಕ್ ಖರೀದಿಸುವವರ ಟಾಪ್ ಲಿಸ್ಟ್‌ನಲ್ಲಿದೆ. ಈ ಬೈಕ್ ಕೂಡ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

Apache RTR 200 4V ಬೆಲೆ, ವೈಶಿಷ್ಟ್ಯವೇನು?

Apache RTR 200 4V ಹೊಸ ಟಾಪ್ ವೇರಿಯಂಟ್‌ನ ಬೆಲೆ ₹1.50 ಲಕ್ಷ. TVS ಕಂಪನಿ ಹೇಳಿಕೊಂಡಂತೆ, ಇದು ಭಾರತದಲ್ಲಿನ ತಂತ್ರಜ್ಞಾನ ಹೊಂದಿರುವ 200cc ಬೈಕ್‌ಗಳಲ್ಲಿ ಒಂದಾಗಿದೆ. ಇದರಲ್ಲಿ Google Maps ಮಿರರಿಂಗ್, ಪ್ಯಾನಿಕ್ ಬ್ರೇಕ್ ಅಲರ್ಟ್, Type-C ಚಾರ್ಜಿಂಗ್ ಪೋರ್ಟ್ ಇರಲಿದೆ. ಅಷ್ಟೇ ಅಲ್ಲದೇ ಇದರಲ್ಲಿ ಅಡ್ಜಸ್ಟ್ ಮಾಡಬಹುದಾದ ಮುಂಭಾಗದ USD ಫೋರ್ಕ್‌ಗಳನ್ನು ನೀಡಿರುವುದು ವಿಶೇಷ. ಈ ಬೈಕ್ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ. ಕಡಿಮೆ ಎಂಜಿನ್ ಸಾಮರ್ಥ್ಯದ ಹೊಸ Apache ಬೈಕ್‌ಗಳ ಡೆಲಿವರಿ ಈ ಹಬ್ಬದ ಸೀಸನ್‌ನಲ್ಲಿ ಆರಂಭವಾಗಲಿದೆ.

ಬ್ಲ್ಯಾಕ್ ಡೈಮಂಡ್ಎಡಿಷನ್ ಪರಿಚಯಿಸಿದ ಟಿವಿಎಸ್

TVS RTR 310 ಮತ್ತು RR 310 ಬೈಕ್‌ಗಳಿಗೆ ಹೊಸ Black Diamond Edition ಪರಿಚಯಿಸಲಾಗಿದೆ. ಇದರ ಬೆಲೆ ₹2.49 ಲಕ್ಷ, RR 310 Black Diamond ಬೆಲೆ ₹2.88 ಲಕ್ಷ. ಎರಡೂ ಬೈಕ್‌ಗಳಲ್ಲಿ Keyless-Go ತಂತ್ರಜ್ಞಾನ ನೀಡಲಾಗಿದೆ.

TVS Ronin ಬೈಕ್‌ಗಳಿಗೂ ಹೊಸ ಅಪ್‌ಡೇಟ್

TVS Ronin Base+ ವೇರಿಯಂಟ್ ಬೆಲೆ ₹1.42 ಲಕ್ಷ. ಇದರಲ್ಲಿ ಎರಡು ಹೊಸ ಬಣ್ಣಗಳ ಆಯ್ಕೆಯ ಜೊತೆಗೆ ಡ್ಯುಯಲ್-ಚಾನೆಲ್ ABS ನೀಡಲಾಗಿದೆ. ಮಿಡ್-ಸ್ಪೆಕ್ Ronin ಬೈಕ್‌ನ ಬೆಲೆ ₹1.51 ಲಕ್ಷ. ಇದರಲ್ಲಿ Type-C ಚಾರ್ಜಿಂಗ್ ಪೋರ್ಟ್, ಕನೆಕ್ಟೆಡ್ ಇನ್‌ಸ್ಟ್ರುಮೆಂಟೇಶನ್, ಡ್ಯುಯಲ್-ಚಾನೆಲ್ ABS ಮತ್ತು ಗೋಲ್ಡ್ ಫಿನಿಶ್‌ನ USD ಫೋರ್ಕ್ ನೀಡಲಾಗಿದೆ.

Ronin ಟಾಪ್ ವೆರಿಯಂಟ್ ಬೆಲೆ, ಫೀಚರ್ಸ್

Roninನ ಟಾಪ್ ವೇರಿಯಂಟ್ ಬೆಲೆ ₹1.63 ಲಕ್ಷ. ಇದರಲ್ಲಿ ಪ್ರೀಮಿಯಂ ಸೀಟ್, ಟ್ರ್ಯಾಕ್ಷನ್ ಕಂಟ್ರೋಲ್, Type-C ಚಾರ್ಜಿಂಗ್ ಪೋರ್ಟ್ ಮತ್ತು ಅಡ್ಜಸ್ಟ್ ಮಾಡಬಹುದಾದ ಲಿವರ್‌ಗಳನ್ನು ನೀಡಲಾಗಿದೆ. ಮುಂಬರುವ ದೀಪಾವಳಿ ದಸರಾ ಹಬ್ಬಗಳಲ್ಲಿ ಬೈಕ್ ಖರೀದಿಸುವ ಯೋಜನೆ ಇದ್ದರೆ ಈ ಬೈಕ್ ಗಳನ್ನು ಖರೀದಿಸುವುದು ಬೆಸ್ಟ್.

PREV
Read more Articles on
click me!

Recommended Stories

Royal Enfield Classic: 100 ರೂಪಾಯಿ ಪೆಟ್ರೋಲ್ ಹಾಕಿಸಿದ್ರೆ ಎಷ್ಟು ಕಿಲೋ ಮೀಟರ್ ಮೈಲೇಜ್ ಕೊಡುತ್ತೆ?
ಹೆಣ್ಣು ಮಕ್ಕಳು ಹೆಚ್ಚು ಇಷ್ಟಪಡ್ತಿರುವ ಎಲೆಕ್ಟ್ರಿಕ್ ಸೈಕಲ್‌ಗಳ ಲಿಸ್ಟ್, ಮಹಿಳೆಯರಿಗೆ ಯಾವುದು ಹೆಚ್ಚು ಸೂಕ್ತ?