ಹಳೆಯ ಸ್ಕೂಟರ್‌ ಹೊಂದಿದವರು ಏಥರ್‌ 450 ಎಕ್ಸ್‌ ಸ್ಕೂಟರ್‌ಗೆ ಹೀಗೆ ಅಪ್‌ಗ್ರೇಡ್‌ ಮಾಡಿಕೊಳ್ಳಿ..!

By Kannadaprabha News  |  First Published Jan 10, 2023, 2:52 PM IST

ಏಥರ್‌ ಇ ಸ್ಕೂಟರ್‌ ಕಾಲಕಾಲಕ್ಕೆ ಹೊಸತನದೊಂದಿಗೆ ಹಾಜರಾಗುತ್ತಿದೆ. ಇದೀಗ ಏಥರ್‌ ಎನರ್ಜಿಯ ಸಂಸ್ಥಾಪಕ ಸಿಇಓ ತರುಣ್‌ ಮೆಹ್ತಾ, ಏಥರ್‌ ಸ್ಕೂಟರ್‌ನ ಹೊಸ ಫೀಚರ್‌ಗಳನ್ನು ಪ್ರಕಟಿಸಿದ್ದಾರೆ.


ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಹಲವು ಆಯ್ಕೆಗಳಿವೆ. ಅತಿ ಕಡಿಮೆ ಹಾಗೂ ಕೈಗೆಟುಕುವ ದರದಿಂದ ಆರಂಭಗೊಳ್ಳುವ ಹಾಗೂ ದುಬಾರಿ ಬೆಲೆಯ ಸ್ಕೂಟರ್‌ಗಳು ಸಹ ಲಭ್ಯವಿದೆ. ಈ ಪೈಕಿ ಭಾರತದಲ್ಲಿ ಲಭ್ಯವಿರುವ ಎಲೆಕ್ಟ್ರಿಕ್ ಸ್ಕೂಟರ್ ಏಥರ್ ಎನರ್ಜಿ ಭಾರಿ ಬೇಡಿಕೆ ಉಳಿಸಿಕೊಂಡಿದೆ. ಇದೀಗ ಏಥರ್ ತನ್ನ ಭಾರಿ ಬೇಡಿಕೆಯ 450X ಎಲೆಕ್ಟ್ರಿಕ್ ಸ್ಕೂಟರನ್ನು ಹೊಸ ಬಣ್ಣ ಹಾಗೂ ಹೆಚ್ಚುವರಿ ಫೀಚರ್ಸ್‌ನೊಂದಿಗೆ ಬಿಡುಗಡೆ ಮಾಡಿದೆ. ಅತ್ಯಾಧುನಿಕ ತಂತ್ರಜ್ಞಾನ, ಕಟ್ಟಿಂಗ್ ಎಡ್ಜ್ ಡಿಸೈನ್ ಹಾಗೂ ಅತ್ಯುತ್ತಮ ಪರ್ಫಾಮೆನ್ಸ್ ಸ್ಕೂಟರ್ ಬಿಡುಗಡೆ ಮಾಡಲಾಗಿದೆ. ಇದು ರೈಡರ್‌ಗಳ ಉತ್ಸಾಹ ಹೆಚ್ಚಿಸಲಿದೆ ಎಂದು ಏಥರ್ ಎನರ್ಜಿ ಹೇಳಿದೆ.

ಏಥರ್‌ ಇ ಸ್ಕೂಟರ್‌ (Ather Electric Scooter) ಕಾಲಕಾಲಕ್ಕೆ ಹೊಸತನದೊಂದಿಗೆ ಹಾಜರಾಗುತ್ತಿದೆ. ಇದೀಗ ಏಥರ್‌ ಎನರ್ಜಿಯ (Ather Energy) ಸಂಸ್ಥಾಪಕ ಸಿಇಓ ತರುಣ್‌ ಮೆಹ್ತಾ (Tarun Mehta) , ಏಥರ್‌ ಸ್ಕೂಟರ್‌ನ ಹೊಸ ಫೀಚರ್‌ಗಳನ್ನು ಪ್ರಕಟಿಸಿದ್ದಾರೆ.

Latest Videos

undefined

ಇದನ್ನು ಓದಿ: ಹೊಸ ಬಣ್ಣ, ಮತ್ತಷ್ಟು ಫೀಚರ್ಸ್, ಎಥರ್ 450X ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ!

1. ನಾಲ್ಕು ಬಣ್ಣ, ಹೊಸ ಲುಕ್‌
ಈವರೆಗೆ ಒಂದೇ ಬಣ್ಣದಲ್ಲಿದ್ದ ಏಥರ್‌ 450 ಎಕ್ಸ್‌ (Ather 450 X) ಈಗ ನಾಲ್ಕು ಹೊಸ ಬಣ್ಣಗಳೊಂದಿಗೆ ಬಂದಿದೆ. ಲೂನಾರ್‌ ಗ್ರೇ, ಕಾಸ್ಮಿಕ್‌ ಬ್ಲ್ಯಾಕ್‌, ಕೆಂಪು ಮತ್ತು ಸಾಲ್ಟ್‌ ಗ್ರೀನ್‌ (ಮಿಂಟ್‌ ಗ್ರೀನ್‌).

2. ವೆಕ್ಟರ್‌ ನ್ಯಾವಿಗೇಶನ್‌
ವಿಶ್ವದಲ್ಲೇ ಮೊಟ್ಟ ಮೊದಲ ಬಾರಿ ಸ್ಕೂಟರ್‌ನಲ್ಲಿ ನ್ಯಾವಿಗೇಷನ್‌ ಅಳವಡಿಸಿದ್ದು ನಮ್ಮ ಏಥರ್‌ ಎನರ್ಜಿ’ ಎನ್ನುವ ತರುಣ್‌, ‘ಈ ಬಾರಿ ಗೂಗಲ್‌ ವೆಕ್ಟರ್‌ ನ್ಯಾವಿಗೇಶನ್‌ ಅಳವಡಿಸಿದ್ದೇವೆ. ಟಚ್‌ ಸ್ಕ್ರೀನ್‌ ಮೂಲಕ ರೋಡ್‌ ಬಗ್ಗೆ ಇನ್ನಷ್ಟು ಸ್ಪಷ್ಟತೆ ಪಡೆಯಬಹುದು. ಇದು ನಿಖರವಾದ ನ್ಯಾವಿಗೇಶನ್‌’ ಎಂದರು.

ಇದನ್ನೂ ಓದಿ: ಓಲಾ, ಸಿಂಪಲ್ ಒನ್‌ಗೆ ತೀವ್ರ ಸ್ಪರ್ಧೆ ಒಡ್ಡಲಿರುವ ಏಥರ್: 3ನೇ ಘಟಕ ಸ್ಥಾಪನೆಗೆ ಸಿದ್ಧತೆ

3. ಆಟೋ ಹೋಲ್ಡ್‌
ಟ್ರಾಫಿಕ್‌ ಸಿಗ್ನಲ್‌ನಲ್ಲಿ, ಟ್ರಾಫಿಕ್‌ ಜಾಮ್‌ ಇದ್ದಾಗ ಬ್ರೇಕ್‌ ಹಿಡಿದುಕೊಂಡಿರಬೇಕಿಲ್ಲ. ಆಟೋ ಹೋಲ್ಡ್‌ ಆಪ್ಶನ್‌ ಇದೆ. ಅದನ್ನು ಆನ್‌ ಮಾಡಿದ್ರೆ ಸಾಕು, ಸ್ಕೂಟರ್‌ ನಿಂತಲ್ಲೇ ನಿಲ್ಲುತ್ತದೆ. ಕಡಿದಾದ ಏರು ದಾರಿಯಲ್ಲಿ ಆಟೋ ಹೋಲ್ಡ್‌ ಆನ್‌ ಮಾಡಿದ್ದರೆ ಸ್ಕೂಟರ್‌ ಹಿಂದಕ್ಕೆ ಚಲಿಸೋದಿಲ್ಲ.

4. ಚಾರ್ಜಿಂಗ್‌ ಪಾಯಿಂಟ್‌
ಸ್ಕೂಟರ್‌ನಲ್ಲಿ ಚಾರ್ಜ್‌ ಮುಗಿಯುತ್ತಾ ಬಂದರೆ ಗಾಬರಿ ಬೀಳಬೇಕಿಲ್ಲ. ಹತ್ತಿರದಲ್ಲಿ ಏಥರ್‌ ಎನರ್ಜಿ ಜಾರ್ಜಿಂಗ್‌ ಪಾಯಿಂಟ್‌ ಎಲ್ಲಿದೆ ಅನ್ನೋದನ್ನು ಡ್ಯಾಶ್‌ ಬೋರ್ಡಲ್ಲಿ ನೋಡಿ ತಿಳಿಯಬಹುದು.

ಇದನ್ನೂ ಓದಿ: ಎಥರ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ, ಟೆಸ್ಟ್ ರೈಡ್ ಮತ್ತಷ್ಟು ಸುಲಭ; ಬೆಂಗಳೂರಿನಲ್ಲಿ 2ನೇ ಸೆಂಟರ್ ಆರಂಭ!

5. ವಾರಂಟಿ ವಿಸ್ತರಣೆ
ಇಲ್ಲೀವರೆಗೆ ಮೂರು ವರ್ಷಗಳಿಗೆ ಇದ್ದ ಏಥರ್‌ ಎನರ್ಜಿ ಬ್ಯಾಟರಿ ವಾರಂಟಿಯನ್ನು ಐದು ವರ್ಷಗಳಿಗೆ / 60,000 ಕಿಮೀಗೆ ವಿಸ್ತರಿಸಲಾಗಿದೆ. ‘5 ವರ್ಷಗಳ ಬಳಿಕವೂ ಬ್ಯಾಟರಿ ಶೇ. 70 ರಷ್ಟು ಚೆನ್ನಾಗಿಯೇ ಇರುತ್ತದೆ’ ಎಂಬುದು ಕಂಪೆನಿ ಕೊಡುವ ಭರವಸೆ.
ಇದರ ಜೊತೆಗೆ 14 ಲೀಟರ್‌ಗಳ ಸ್ಟೋರೇಜ್‌ ಜಾಗವನ್ನು ಸ್ಕೂಟರ್‌ನ ಮುಂಭಾಗ ಅಳವಡಿಸಲಾಗುತ್ತದೆ. ಜೊತೆಗೆ ಹೊಸ ವಿನ್ಯಾಸದ ಸೀಟ್‌ ಅನ್ನೂ ಅಳವಡಿಸಲಾಗುತ್ತೆ. ಅಪ್‌ಗ್ರೇಡ್‌ ಮಾಡುವವರಿಗೆ ಇದು ಉಚಿತ.
 

ಅಪ್‌ಗ್ರೇಡ್‌ ವಿವರ
ಹಳೆಯ ಸ್ಕೂಟರ್‌ ಹೊಂದಿದವರು ಏಥರ್‌ 450 ಎಕ್ಸ್‌ ಸ್ಕೂಟರ್‌ಗೆ ಅಪ್‌ಗ್ರೇಡ್‌ ಆಗಬಹುದು. ಜನವರಿ ಕೊನೆಯ ಒಳಗೆ ಅಪ್‌ಗ್ರೇಡ್‌ ಮಾಡಿಸಿದರೆ 3 ವರ್ಷದೊಳಗಿನ ಸ್ಕೂಟರ್‌ಗೆ .70,000 ರೂ., 3 ವರ್ಷ ದಾಟಿದ್ದರೆ .80,000 ರೂ ಮುಂದಿನ ತಿಂಗಳಿನಿಂದ ಇದು 10,000 ರೂ. ಏರಿಕೆ ಆಗುತ್ತದೆ.

‘ಅಪಾರ್ಟ್‌ಮೆಂಟ್‌ಗಳಲ್ಲಿ ಚಾರ್ಜಿಂಗ್‌ ಪಾಯಿಂಟ್‌ಗಳಿಲ್ಲದ ಕಾರಣ ಅನೇಕ ಮಂದಿ ಇ ಸ್ಕೂಟರ್‌ ಖರೀದಿ ನಿರ್ಧಾರದಿಂದ ಹಿಂದೆ ಸರಿಯುತ್ತಿದ್ದಾರೆ. ಇದಕ್ಕಾಗಿ ಹೊಸ ಬಗೆಯ ಚಾರ್ಜಿಂಗ್‌ ಪಾಯಿಂಟ್‌ಗಳನ್ನು ಕೆಲವು ಖಾಸಗಿ ಜಾಗಗಳಲ್ಲಿ ಅಂದರೆ ಅಪಾರ್ಟ್‌ಮೆಂಟ್‌ ಕಾಂಪ್ಲೆಕ್ಸ್‌, ಆಫೀಸ್‌ ಬಿಲ್ಡಿಂಗ್‌ ಮೊದಲಾದೆಡೆ ಅಳವಡಿಸಲಾಗುತ್ತದೆ’ ಎಂದೂ ತರುಣ್‌ ಮಾಹಿತಿ ನೀಡಿದರು. ಇದರ ಜೊತೆಗೆ ‘ಸುಮಾರು 80,000 ಜನ ಈಗಾಗಲೇ ಏಥರ್‌ ಸ್ಕೂಟರ್‌ ಖರೀದಿಸಿದ್ದು, 6 ತಿಂಗಳೊಳಗೇ 40,000 ಸ್ಕೂಟರ್‌ ಮಾರಾಟವಾಗಿದೆ. ಚಾರ್ಜಿಂಗ್‌ ಪಾಯಿಂಟ್‌ಗಳನ್ನು ಹೆಚ್ಚಿಸುವ ಯೋಜನೆ ಜಾರಿಯಲ್ಲಿದೆ’ ಎಂದೂ ತರುಣ್‌ ಮೆಹ್ತಾ ತಿಳಿಸಿದ್ದಾರೆ.

click me!