ಬೆಂಗಳೂರಿನ ವಿವಾದಿತ ಮನೆ ಬಾಗಿಲಲ್ಲೇ ಶರ್ಮಿಳಾಗೆ ನಿರಾಸೆ! ತಂದೆಯ ವೈಭವೋಪೇತ ಮನೆಗಾಗಿ ಅಣ್ಣ-ತಂಗಿ ಫೈಟ್

Published : Nov 23, 2026, 05:50 AM IST
Jagan Sharmila

ಸಾರಾಂಶ

ಆಂಧ್ರ ಕಾಂಗ್ರೆಸ್ ಅಧ್ಯಕ್ಷೆ ವೈ.ಎಸ್.ಶರ್ಮಿಳಾ ರೆಡ್ಡಿ ಅವರು ಯಲಹಂಕದಲ್ಲಿರುವ ತಮ್ಮ ವಿವಾದಿತ ಮನೆಗೆ ತೆರಳುತ್ತಿದ್ದಾಗ ಪೊಲೀಸರು ತಡೆದಿದ್ದಾರೆ. ಈ ಆಸ್ತಿ ವಿಚಾರವಾಗಿ ಜಗನ್ ಮೋಹನ್ ರೆಡ್ಡಿ ಹಾಗೂ ಶರ್ಮಿಳಾ ನಡುವೆ ವಿವಾದವಿದ್ದು, ಕೋರ್ಟ್ ತಡೆಯಾಜ್ಞೆ ಹಿನ್ನೆಲೆಯಲ್ಲಿ ಪ್ರವೇಶ ನಿರಾಕರಿಸಲಾಗಿದೆ.

ಬೆಂಗಳೂರು: ಸೋದರನ ವಿವಾದಿತ ಮನೆಗೆ ತೆರಳುತ್ತಿದ್ದ ಆಂಧ್ರದ ಕಾಂಗ್ರೆಸ್ ಅಧ್ಯಕ್ಷೆ ವೈ.ಎಸ್.ಶರ್ಮಿಳಾ ರೆಡ್ಡಿ ಅವರಿಗೆ ಯಲಹಂಕ ಠಾಣೆ ಪೊಲೀಸರು ಭಾನುವಾರ ನಿರ್ಬಂಧಿಸಿದ ಘಟನೆ ನಡೆಯಿತು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾತ್ರಿ 7 ಗಂಟೆಗೆ ಸುಮಾರಿಗೆ ಯಲಹಂಕದ ಬಾಗಲೂರು ಕ್ರಾಸ್‌ ಸಮೀಪದಲ್ಲಿರುವ ತಮ್ಮ ವಿವಾದಿತ ಮನೆಗೆ ಕುಟುಂಬದ ಜತೆ ಶರ್ಮಿಳಾ ಹೊರಟಿದ್ದರು. ಆದರೆ ನ್ಯಾಯಾಲಯದ ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ ಶರ್ಮಿಳಾ ಅವರಿಗೆ ಮನೆ ಪ್ರವೇಶಿಸಲು ಪೊಲೀಸರು ತಡೆದರು. ಕೆಲ ಹೊತ್ತು ಪೊಲೀಸರ ಜತೆ ಚರ್ಚಿಸಿದ ಅವರು ಕೊನೆಗೆ ಅಲ್ಲಿಂದ ತಮ್ಮ ಪರಿವಾರ ಸಮೇತ ಮರಳಿದ್ದಾರೆ.

ವೈಭವೋಪೇತ ಮನೆ

ಬಾಗಲೂರು ಕ್ರಾಸ್ ಸಮೀಪದಲ್ಲಿರುವ ಆಂಧ್ರದ ಮಾಜಿ ಸಿಎಂ ದಿ.ರಾಜಶೇಖರ್ ರೆಡ್ಡಿ ಅವರಿಗೆ ಸೇರಿದ ವೈಭವೋಪೇತ ಮನೆ ಇದೆ. ಆದರೆ ಈ ಮನೆ ಆಸ್ತಿ ವಿಚಾರವಾಗಿ ರಾಜಶೇಖರ್ ರೆಡ್ಡಿ ಅವರ ಮಕ್ಕಳಾದ ಆಂಧ್ರದ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಹಾಗೂ ಶರ್ಮಿಳಾ ಮಧ್ಯೆ ವಿವಾದವಾಗಿದೆ. ತಮ್ಮ ಸೋದರನ ವಿರೋಧದ ನಡುವೆಯೇ ಆ ಮನೆಯಲ್ಲೇ ತಮ್ಮ ಮಗಳ ಮದುವೆಯನ್ನು ಶರ್ಮಿಳಾ ನಿಶ್ಚಯಿಸಿದ್ದರು.

ಮನೆ ಪ್ರವೇಶಕ್ಕೆ ಕೋರ್ಟ್ ತಡೆಯಾಜ್ಞೆ

ಈ ಮದುವೆ ಸಮಾರಂಭ ನಡೆಯದಂತೆ ನ್ಯಾಯಾಲಯಕ್ಕೆ ಜಗಮೋಹನ್ ಮೊರೆ ಹೋದರು. ಈ ಕಾನೂನು ಹೋರಾಟ ಮಧ್ಯೆಯೇ ವಿವಾದಿತ ಮನೆಗೆ ತಮ್ಮ ತಾಯಿ, ಪತಿ ಹಾಗೂ ಮಕ್ಕಳ ಜತೆ ತೆರಳಲು ಶರ್ಮಿಳಾ ಮುಂದಾಗಿದ್ದರು. ಆದರೆ ಮಾರ್ಗ ಮಧ್ಯೆ ಅವರನ್ನು ತಡೆದ ಯಲಹಂಕ ಪೊಲೀಸರು, ನಿಮಗೆ ಮನೆ ಪ್ರವೇಶಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದೆ ಎಂಬ ಮಾಹಿತಿ ನೀಡಿದರು.

ಇದನ್ನೂ ಓದಿ: ಬೆಂಗಳೂರಿನ ಡೆವೆಲಪರ್‌ಗಳ GTA 6 ಗೇಮ್‌ಗೆ 24 ಗಂಟೆಗಳಲ್ಲಿ 35000 ಕೋಟಿ ರೂ. ಆದಾಯ

PREV
Read more Articles on
click me!

Recommended Stories

ಬೆಂಗಳೂರು ಶಿಫ್ಟಿಂಗ್ ಬಿಲ್ ನೋಡಿ ದಂಪತಿಗೇ ಶಾಕ್! 3BHKಗೆ ₹2.53 ಲಕ್ಷ ಖರ್ಚು, ಲೆಕ್ಕ ಇಲ್ಲಿದೆ
₹200ಕ್ಕೆ 1 ಕೆಜಿ ಪುಸ್ತಕ: ಬೆಂಗಳೂರಿನಲ್ಲಿ ತರಕಾರಿಗಳಂತೆ ತೂಕಕ್ಕೆ ಮಾರಾಟವಾಗುತ್ತಿರುವ ಜ್ಞಾನ ಭಂಡಾರ!