Bengaluru ಆಟೋ ಹಿಂಬದಿ ಬರಹ; ಚಾಲಕನ ಹೃದಯವಂತಿಕೆ, ಪ್ರೀತಿಗೆ ನೆಟ್ಟಿಗರ ಸೆಲ್ಯೂಟ್

Published : Nov 07, 2026, 02:24 PM IST
Bengaluru Auto Driver

ಸಾರಾಂಶ

ಬೆಂಗಳೂರಿನ ಆಟೋ ಹಿಂಬದಿ ಬರಹವೊಂದು ವೈರಲ್ ಆಗಿದ್ದು, ಚಾಲಕನ ಹೃದಯವಂತಿಕೆಯನ್ನು ತೋರಿಸುತ್ತದೆ. ತನ್ನ ಮೃತ ಪತ್ನಿಯ ನೆನಪಿನಲ್ಲಿ ಆಟೋ ಮೇಲೆ ಭಾವನಾತ್ಮಕ ಸಾಲುಗಳನ್ನು ಬರೆಸಿದ ಈ ಚಾಲಕನ ಕಥೆಗೆ ನೆಟ್ಟಿಗರು ಸೆಲ್ಯೂಟ್ ಮಾಡಿದ್ದಾರೆ.

ಬೆಂಗಳೂರು: ನೀವು ಬೆಂಗಳೂರಿನ ರಸ್ತೆಗಿಳಿದ್ರೆ ವಿಭಿನ್ನ ಪ್ರಪಂಚದ ದರ್ಶನವಾಗುತ್ತದೆ. ಅದರಲ್ಲಿಯೂ ಟ್ರಾಫಿಕ್‌ನಲ್ಲಿ ಸಿಲುಕಿದ ಸಂದರ್ಭದಲ್ಲಿ ತಮ್ಮ ಸುತ್ತಮುತ್ತ ನಿಂತಿರುವ ವಾಹನಗಳತ್ತ ಕಣ್ಣು ಹೋಗುತ್ತದೆ. ಒಂದು ವೇಳೆ ನೀವು ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ರೆ, ನಿಮಗೆ ವಿವಿಧ ಭಾಗದ ಜನರೊಂದಿಗೆ ಮಾತನಾಡುವ ಅವಕಾಶವೂ ಲಭ್ಯವಾಗುತ್ತದೆ. ಹಾಗೆಯೇ ಆಟೋಗಳ ಹಿಂಬದಿ ಬರಹ ನಿಮ್ಮನ್ನು ಆಕರ್ಷಿಸುತ್ತವೆ. ಚಾಲಕರು ತಮ್ಮ ಆಟೋಗಳ ಮೇಲೆ ವಿಶೇಷ ಮತ್ತು ವಿಭಿನ್ನ ಸಾಲುಗಳನ್ನು ಬರೆಸುತ್ತಿರುತ್ತಾರೆ. ಕೆಲವರು ತಮಾಷೆಯಾಗಿ ಈ ಸಾಲುಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಆದ್ರೆ ಆ ಸಾಲುಗಳ ಹಿಂದಿರುವ ಕಥೆ ಕೇಳಿದ್ರೆ ಕಣ್ಣಾಲಿಗಳು ತೇವಗೊಳ್ಳುತ್ತವೆ.

ಇಂತಹ ವಿಶೇಷ ಮತ್ತು ಭಾವನಾತ್ಮಕ ಸಾಲುಗಳನ್ನು ಬರೆಸಿರೋ ಆಟೋ ಚಾಲಕನ ಕಥೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ವಿಡಿಯೋ ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು, ಸಮಾಜಕ್ಕೆ ನಿಜವಾದ ಹೀರೋ ಬಾಸ್ ನೀನೇ ಅಣ್ಣ. ನಿಮ್ಮ ಮಗಳ ಭವಿಷ್ಯ ನಿಮ್ಮ ಜೀವನ ಉಜ್ವಲವಾಗಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡಿದವರು ಇಲ್ಲ ಅಂದ್ರೂ ಇದಾರೆ ಅನ್ಕೊಂಡೆ ಜೀವಿಸುದೆ ನಿಜವಾದ ಪ್ರೀತಿ ಎಂದು ಕಮೆಂಟ್ ಮಾಡಿದ್ದಾರೆ.

ಆಟೋ ಮೇಲಿನ ಸಾಲುಗಳು ಹೀಗಿವೆ

ಕೊನೆಯವರೆಗೂ ಇರುತ್ತೇನೆ ಎಂದಳು!

ಮಾತು ತಪ್ಪಲಿಲ್ಲ

ಈಗಲೂ ಜೊತೆಗೇ ಇದ್ದಾಳೆ,

ಒಮ್ಮೆ ನೆನಪಾಗಿ, ಮತ್ತೊಮ್ಮೆ ನೋವಾಗಿ!

ಆಟೋ ಚಾಲಕನ ಕಣ್ಣೀರಿನ ಕಥೆ

ಈ ವಿಡಿಯೋವನ್ನು Babugvibes ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದೆ. ಆಟೋದ ಮೇಲಿನ ಸಾಲುಗಳನ್ನು ಗಮನಿಸಿದ ವ್ಲಾಗರ್ ಚಾಲಕನೊಂದಿಗೆ ಮಾತನಾಡಿದ್ದಾರೆ. ಈ ಸಾಲುಗಳ ಅರ್ಥ ಏನು ಎಂದು ಕೇಳಿದಾಗ, ನನ್ನ ಪತ್ನಿ ಗರ್ಭಿಣಿಯಾಗಿದ್ದಾಗ ಸಾವನ್ನಪ್ಪಿದರು. ಸಾವನ್ನಪ್ಪಿದ್ರೂ ಪತ್ನಿ ನನ್ನ ಜೊತೆಯಲ್ಲಿಯೇ ಇದ್ದಾಳೆ ಎಂದು ಈ ಸಾಲುಗಳನ್ನು ಬರೆಸಿದ್ದೇನೆ. ಈಗ ಇರೋ ಮಗಳಿಗಾಗಿ ಜೀವನ ನಡೆಸುತ್ತಿದ್ದೇನೆ. ನನ್ನೊಂದಿಗೆ ಮುಂದಿನ ಜೀವನ ನಡೆಸಲು ಮಗಳನ್ನು ಬಿಟ್ಟು ಹೋಗಿದ್ದಾನೆ. ಮುಂದಿನ ಜೀವನವೆಲ್ಲಾ ಮಗಳಿಗೆ ಮೀಸಲು. ಪತ್ನಿ ನೆನಪುಗಳ ಜೊತೆಯಲ್ಲಿದ್ದೇನೆ ಎಂದು ಚಾಲಕ ತಮ್ಮ ಕಥೆಯನ್ನು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ನೀವೇನು ತರಕಾರಿ ಮಂಗಳ ಗ್ರಹದಿಂದ ತರ್ತೀರಾ? ರಾಮೇಶ್ವರಂ ಕೆಫೆ ಮಾಲೀಕ ಫುಲ್ ಟ್ರೋಲ್

ಈ ಆಟೋ ಚಾಲಕ ಯಾರು ಮತ್ತು ಎಲ್ಲಯವರು ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇಲ್ಲಿವರೆಗೆ ಈ ವಿಡಿಯೋಗೆ 61 ಲಕ್ಷಕ್ಕೂ ಅಧಿಕ ವ್ಯೂವ್, 5 ಸಾವಿರಕ್ಕೂ ಹೆಚ್ಚು ಕಮೆಂಟ್‌ಗಳು ಬಂದಿವೆ. 50 ಸಾವಿರಕ್ಕೂ ಅಧಿಕ ಲೈಕ್ಸ್‌ಗಳನ್ನು ಈ ವಿಡಿಯೋ ಪಡೆದುಕೊಂಡಿದೆ.

ಇದನ್ನೂ ಓದಿ: ಗ್ರಾಮದ ಮಧ್ಯೆ ಪಾಳುಬಿದ್ದ 300 ವರ್ಷದ ಶಾಪಗ್ರಸ್ಥ ಮನೆ; ನಿಧಿ ಇದ್ರೂ ಮುಟ್ಟಂಗಿಲ್ಲ!

PREV
Read more Articles on
click me!

Recommended Stories

ಕೇವಲ 1.6 ಕಿಮೀ ಕಾಮಗಾರಿಗೆ 18 ತಿಂಗಳು ಕೆಐಎ ರಸ್ತೆ ಬಂದ್, ಪರ್ಯಾಯ ರೋಡ್‌ ಕಥೆ ಒಂದೆರಡಲ್ಲ, ಯಾವ ಮಾರ್ಗದಲ್ಲಿ ಏನೇನು ಸಮಸ್ಯೆ?
ಕರ್ನಾಟಕದಲ್ಲಿ ಮುಂದಿನ ಎರಡು ದಿನ ಮಳೆ ಪಕ್ಕಾ! ಬೆಂಗಳೂರು, ಕರಾವಳಿ ಸೇರಿ ಹಲವು ಜಿಲ್ಲೆಗಳ ಮಳೆ ಮುನ್ಸೂಚನೆ ಹೀಗಿದೆ