Bengaluru: PVR ಮಾಲ್‌ನಲ್ಲಿ ಬಳಸಿದ ಕಪ್‌ನಲ್ಲೇ ಪೆಪ್ಸಿ ಸರ್ವ್‌ ಮಾಡಿದ್ದ ಅಂಗಡಿಗೆ ಬೀಗ

Published : Nov 07, 2026, 07:37 AM IST
Bengaluru PVR Juice Counter Sealed Over Hygiene Violations

ಸಾರಾಂಶ

ಬೆಂಗಳೂರಿನ ಫೋರಂ ಮಾಲ್‌ನ ಪಿವಿಆರ್ ಸಿನಿಮಾಸ್‌ನಲ್ಲಿ ಬಳಸಿದ ಕಪ್‌ನಲ್ಲಿ ಪೆಪ್ಸಿ ಮಾರಾಟ ಮಾಡಿದ್ದಕ್ಕಾಗಿ ಜ್ಯೂಸ್ ಕೌಂಟರ್‌ಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ. ಗ್ರಾಹಕರ ದೂರಿನ ಮೇರೆಗೆ ಪರಿಶೀಲನೆ ನಡೆಸಿದಾಗ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಕಂಡುಬಂದಿದೆ.

ಬೆಂಗಳೂರು: ಬಳಸಿದ ಪ್ಲಾಸ್ಟಿಕ್ ಕಪ್‌ನಲ್ಲಿ ಗ್ರಾಹಕರಿಗೆ ತಂಪು ಪಾನೀಯ ಪೆಪ್ಸಿ ಮಾರಾಟ ಮಾಡಿದ್ದ ಕನಕಪುರ ರಸ್ತೆಯ ಫೋರಂ ಸೌತ್ ಬೆಂಗಳೂರು ಮಾಲ್‌ನಲ್ಲಿರುವ ಪಿವಿಆರ್ ಸಿನಿಮಾಸ್‌ ಆವರಣದಲ್ಲಿನ ತಿನಿಸು ಮಳಿಗೆಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಶುಕ್ರವಾರ ಬೀಗ ಹಾಕಿದರು.

ನೋಟಿಸ್ ನೀಡಿ ಜ್ಯೂಸ್ ಕೌಂಟರ್ ಕ್ಲೋಸ್

ಸಾರ್ವಜನಿಕರ ದೂರು ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳಿಂದ ಪರಿಶೀಲನೆ ವೇಳೆ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಮಳಿಗೆಗೆ ನೋಟಿಸ್ ಜಾರಿ ಮಾಡಿ ಜ್ಯೂಸ್ ಕೌಂಟರ್ ಅನ್ನು ಬಂದ್ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

ವ್ಯಾಪಾರದಷ್ಟೇ ಜನರ ಆರೋಗ್ಯವೂ ಮುಖ್ಯ

ಆಹಾರ ಸುರಕ್ಷತೆಯ ವಿಷಯ ಬಂದಾಗ ದೊಡ್ಡ ಬ್ರ್ಯಾಂಡ್‌ಗಳಾಗಲಿ, ಸಣ್ಣ ವ್ಯಾಪಾರಿಗಳಾಗಿರಲಿ ಎಲ್ಲರಿಗೂ ಒಂದೇ ನಿಯಮ ಅನ್ವಯಿಸುತ್ತವೆ. ಪ್ರತಿಯೊಬ್ಬ ವ್ಯಾಪಾರಿಯು ಗ್ರಾಹಕರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ವ್ಯಾಪಾರ ಮಾಡಬೇಕು. ನಿಮ್ಮ ವ್ಯಾಪಾರದಷ್ಟೇ ಜನರ ಆರೋಗ್ಯವೂ ಮುಖ್ಯ.

ಆಹಾರದ ಪ್ಯಾಕೇಜಿಂಗ್, ಬಡಿಸುವುದು ಸೇರಿದಂತೆ ಆಹಾರಕ್ಕೆ ಸಂಬಂಧಿಸಿದ ಶುಚಿತ್ವ ಇಲ್ಲದಿರುವುದು ಕಂಡು ಬಂದರೆ ಆಹಾರ ಇಲಾಖೆ ದೂರು ನೀಡಬಹುದು ಎಂದು ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ

ಪಿವಿಆರ್ ಸಿನೆಮಾಸ್‌ ಆವರಣದಲ್ಲಿನ ತಿನಿಸು ಮಳಿಗೆಯಲ್ಲಿ ಬಳಸಿದ ಕಪ್‌ಗಳಲ್ಲಿ ಗ್ರಾಹಕರಿಗೆ ಪೆಸ್ಸಿ ಮಾರಾಟ ಮಾಡುತ್ತಿರುವುದನ್ನು ಗ್ರಾಹಕರೊಬ್ಬರು ಪತ್ತೆ ಹಚ್ಚಿ ವಿಡಿಯೋ ಮಾಡಿ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

PREV
Read more Articles on
click me!

Recommended Stories

KMF vs Amul: ನಂದಿನಿ ಮೊಸರಿನ ದರ ಏರಿಕೆ ಬೆನ್ನಲ್ಲೇ, ಅಮುಲ್ ಮೊಸರು ₹10 ರ ಇಳಿಕೆ!
ಬೆಂಗಳೂರು ಕಲ್ಟ್ ಫಿಟ್ ಜಿಮ್‌ಗೆ ₹30,000 ಫೈನ್ ಹಾಕಿದ ಪಾಲಿಕೆ! ಮಾರ್ಷಲ್‌ಗಳಿಂದ ದಂಡ ವಸೂಲಿ