ಅಮೆರಿಕ ಮಹಿಳೆಯ 'ಕಣ್ಣು ಬೆಳಗಿಸಿದ' ಬೆಂಗಳೂರಿನ ಆಸ್ಪತ್ರೆ, ರೋಚಕ ಅನುಭವ ಕೇಳಿ ಖುಷಿಯಾದ ಜನ

Published : Oct 28, 2026, 07:51 PM IST
US traveller eye surgery Bengaluru,

ಸಾರಾಂಶ

ಅಮೆರಿಕದಿಂದ ಪ್ರವಾಸಕ್ಕೆ ಬಂದಿದ್ದ ಮಹಿಳೆಯೊಬ್ಬರು ಅನಿವಾರ್ಯವಾಗಿ ಬೆಂಗಳೂರಿನ ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅಮೆರಿಕದ ಆರೋಗ್ಯ ವ್ಯವಸ್ಥೆಗೆ ಹೋಲಿಸಿದರೆ ಇಲ್ಲಿನ ತ್ವರಿತ ಹಾಗೂ ಅತ್ಯುತ್ತಮ ವೈದ್ಯಕೀಯ ಸೇವೆ ಕಂಡು ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ವಿಮೆ ಇಲ್ಲದಿದ್ದರೂ ಸುಲಭವಾಗಿ ಚಿಕಿತ್ಸೆ ಸಿಕ್ಕಿದ್ದಕ್ಕೆ ಅವರು ಆಸ್ಪತ್ರೆಗೆ ಧನ್ಯವಾದ ತಿಳಿಸಿದ್ದಾರೆ.

ಬೆಂಗಳೂರು: ದೇಶದ ಶ್ರೀಮಂತರು, ರಾಜಕಾರಣಿಗಳು, ಸೆಲೆಬ್ರಿಟಿಗಳು ಸೇರಿದಂತೆ ಉಳ್ಳವರಿಗೆ ಅನಾರೋಗ್ಯ ಕಾಡಿದ್ರೆ ಸಾಕು.. ಟ್ರೀಟ್ಮೆಂಟ್‌ಗೆ ಅಂತಾ ವಿದೇಶಕ್ಕೆ ಹಾರುತ್ತಾರೆ.. ಲಕ್ಷ, ಕೋಟಿ ಹಣ ಸುರಿದು ವಿದೇಶದಲ್ಲಿ ಚಿಕಿತ್ಸೆ ಪಡೆದುಬಂದೆ ಎಂದು ಬೀಗುತ್ತಾರೆ. ವಿದೇಶದಲ್ಲಿ ಒಳ್ಳೆಯ ಟ್ರೀಟ್ಮೆಂಟ್ ಸಿಗಬಹುದು! ಆದರೆ ನಮ್ಮಲ್ಲಿಯೂ ಉತ್ತಮ ವೈದ್ಯಕೀಯ ಸೌಲಭ್ಯಗಳಿವೆ.

ಇದೀಗ ಅಮೆರಿಕ ಪ್ರವಾಸಿ ಮಹಿಳೆಯೊಬ್ಬರು ಬೆಂಗಳೂರಿನ ಆಸ್ಪತ್ರೆ ಒಂದರಲ್ಲಿ ಆಗಿರುವ ಅನುಭವವನ್ನು ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ಅಮೆರಿಕದಂತ ದೊಡ್ಡ ದೊಡ್ಡ ದೇಶಗಳ ನಾಗರಿಕರು ಟ್ರೀಟ್ಮೆಂಟ್‌ಗಾಗಿ ಬೆಂಗಳೂರು ಸೇರಿದಂತೆ ಭಾರತಕ್ಕೆ ಬರೋದು ತುಂಬಾನೇ ಕಡಿಮೆ. ಭಾರತಕ್ಕೆ ಪ್ರವಾಸಕ್ಕೆ ಎಂದು ಬಂದಿದ್ದ ಅಮೆರಿಕ ಮಹಿಳೆಯೊಬ್ಬರು, ಅನಿವಾರ್ಯವಾಗಿ ಚಿಕಿತ್ಸೆಗೆ ಒಳಗಾದರು. ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಬಳಿಕ, ಇಲ್ಲಿನ ಆರೋಗ್ಯ ಸೇವೆ ಬಗ್ಗೆ ಕಳೆದು ಹೋಗಿದ್ದಾರೆ.

ಸ್ಟೋನ್‌ಫಿಶ್ ಎಂಬ ಮಹಿಳೆ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಅಂದ್ಹಾಗೆ ಅವರು ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಬಂದವರಲ್ಲ. ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆಗಳು ತುಂಬಾ ಕಳಪೆ ಆಗಿರುತ್ತದೆ ಎಂದು ಭಾವಿಸಿದ್ದರು. ಆದರೂ ಬೆಂಗಳೂರಿನಲ್ಲಿರುವ Dr. Agarwal's Eye Hospital ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಂಡು ಫುಲ್ ಖುಷಿಯಾಗಿದ್ದಾರೆ.

ಏನಂದ್ರು ಅವರು..?

ನಾನು ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದ ಕಾರಣದಿಂದಲೇ ಇಷ್ಟು ದಿನ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ನಾನು 'ಮೆಡಿಕಲ್ ಟೂರಿಸಂ'ಗಾಗಿ ಭಾರತಕ್ಕೆ ಬಂದಿದ್ದಲ್ಲ. ನನ್ನ ಸ್ನೇಹಿತನಿಗೆ ಇಲ್ಲಿ ಆದ ಚಿಕಿತ್ಸೆ ಯಶಸ್ವಿಯಾದದ್ದನ್ನು ನೋಡಿ, ನಾನು ತಕ್ಷಣಕ್ಕೆ ತೆಗೆದುಕೊಂಡ ನಿರ್ಧಾರ ಇದು. ನನ್ನ ಬಳಿ ಯಾವುದೇ ಹೆಲ್ತ್ ಇನ್ಶೂರೆನ್ಸ್ ಇಲ್ಲ. ಏಕೆಂದರೆ ಅಮೆರಿಕಾದಲ್ಲಿ 26 ವರ್ಷ ತುಂಬಿದ ತಕ್ಷಣ ಪೋಷಕರ ವಿಮೆಯಿಂದ ನಮ್ಮನ್ನು ಹೊರಗಿಡಲಾಗುತ್ತದೆ. ಹಾಗೆಯೇ ಕಂಪನಿಯಿಂದ ವಿಮೆ ಸಿಗುವಂತಹ ಪೂರ್ಣಾವಧಿ ಕೆಲಸವನ್ನೂ ನಾನು ಮಾಡುತ್ತಿಲ್ಲ.

ಆದರೆ.. ಇನ್ಶೂರೆನ್ಸ್ ಇಲ್ಲದಿದ್ದರೂ ನನಗೆ ಬೇಕಾದ ಚಿಕಿತ್ಸೆ ಸುಲಭವಾಗಿ ಸಿಗಲು ಯಾವುದೇ ಅಡ್ಡಿಯಾಗಲಿಲ್ಲ. ಇದಕ್ಕೆ ಹೋಲಿಸಿದರೆ ಅಮೆರಿಕಾದಲ್ಲಿ..ಇನ್ಶೂರೆನ್ಸ್ ಇದ್ದರೂ ನನ್ನ ಸ್ನೇಹಿತೆಯೊಬ್ಬಳಿಗೆ ಕಾಂಟ್ಯಾಕ್ಟ್ ಲೆನ್ಸ್ ಚೀಟಿಯನ್ನು ರಿನಿವ್ ಮಾಡಲು ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣ ಆಕೆ ಕೇವಲ ಬೇರೆ ರಾಜ್ಯದಲ್ಲಿದ್ದಳು ಅಷ್ಟೇ. ಕೇವಲ ಎರಡು ನಿಮಿಷದ ಕಣ್ಣಿನ ಪರೀಕ್ಷೆಗೂ ಆಕೆಗೆ ನೇರವಾಗಿ ಆಗಲ್ಲ ಎಂದು ನಿರಾಕರಿಸಿಬಿಟ್ಟರು. ಬೆಂಗಳೂರಿನ Dr.Agarwals ಆಸ್ಪತ್ರೆ ನಿಜವಾಗಿಯೂ ನನ್ನ ಬದುಕನ್ನೇ ಬದಲಾಯಿಸಿದೆ, ಅವರಿಗೆ ನಾನು ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದು ಬರೆದುಕೊಂಡಿದ್ದಾರೆ.

ಅಂದ್ಹಾಗೆ ಅವರು ಯುನೈಟೆಡ್ ಸ್ಟೇಟ್ಸ್‌ನಲ್ಲಿನ ಆರೋಗ್ಯ ಸೇವೆಯ ಅನುಭವದೊಂದಿಗೆ ಬೆಂಗಳೂರನ್ನು ಹೋಲಿಸಿದ್ದಾರೆ. ಒಂದಷ್ಟು ಆತಂಕದ ಮಧ್ಯೆಯೇ ನಾನು ಆಸ್ಪತ್ರೆಗೆ ಸ್ನೇಹಿತೆ ಜೊತೆಗೆ ಹೋದೆ. ಆಸ್ಪತ್ರೆಯಲ್ಲಿ ನನ್ನ ಕಣ್ಣುಗಳನ್ನ ಉಚಿತವಾಗಿ ಸ್ಕ್ಯಾನ್ ಮಾಡಲಾಯಿತು. ಆ ಸಮಯದಲ್ಲಿ ತನಗೆ ಆರೋಗ್ಯ ವಿಮೆ ಇರಲಿಲ್ಲ. ತಪಾಸಣೆ ಬೆನ್ನಲ್ಲೇ ಒಂದು ವಾರದೊಳಗೆ ಶಸ್ತ್ರಕಿತ್ಸೆಗೆ ದಿನಾಂಗ ನಿಗದಿ ಮಾಡಿದರು. ಅಲ್ಲಿನ ವೈದ್ಯರು ಅತ್ಯುತ್ತಮರು. ಈಗ ನಾನು ಚೇತರಿಸಿಕೊಳ್ಳುತ್ತಿದ್ದೇನೆ. ಯಾವುದೇ ಸಮಸ್ಯೆ ಆಗಿಲ್ಲ. ಮುಂದಿನ ಬಾರಿಯ ಭೇಟಿಗೆ ನೀಡಬೇಕಿದ್ದ ಶುಲ್ಕವನ್ನು ವಿಧಿಸುತ್ತಿಲ್ಲ ಎಂದಿದ್ದಾರೆ. ಸದ್ಯ ಅವರ ವಿಡಿಯೋ ಇದೀಗ ಬೆಂಗಳೂರಿನ ಆಸ್ಪತ್ರೆ ಒಂದನ್ನ ಕೊಂಡಾಡುವಂತೆ ಮಾಡಿದೆ.

PREV
Read more Articles on
click me!

Recommended Stories

ಬೆಂಗಳೂರು-ಹೊಸೂರು ಟ್ರಾಫಿಕ್ ಸಮಸ್ಯೆಗೆ ಮುಕ್ತಿ, ಚಂದಾಪುರ NH-44 ರಲ್ಲಿ 61 ಮೀಟರ್ ದೈತ್ಯ ಗರ್ಡರ್ ಅಳವಡಿಸಿದ K-RIDE
ಬೆಂಗಳೂರಿನ ಮಲ್ಲೇಶ್ವರದ ಪ್ರಸಿದ್ಧ CTR ದೋಸೆಯಲ್ಲಿ ಜಿರಳೆ ಪತ್ತೆ, ಗ್ರಾಹಕರ ಕ್ಷಮೆ ಕೋರಿದ ಹೋಟೆಲ್‌