ಫಿಕ್ಸೆಡ್ ಡೆಪಾಸಿಟ್ ಇಟ್ಟ ಬೆಂಗಳೂರು ಅಜ್ಜಿಗೆ 6 ವರ್ಷದ ಬಳಿಕ ಸಿಕ್ತು 3.35 ಲಕ್ಷ ರೂ ಪರಿಹಾರ

Published : Oct 28, 2026, 07:20 PM IST
Woman FD Withdrawal Ordeal Ends With Compensation

ಸಾರಾಂಶ

66 ವರ್ಷದ ಮಹಿಳೆಯೊಬ್ಬರು ಫಿಕ್ಸೆಡ್ ಡೆಪಾಸಿಟ್ ಮೂಲಕ ಹಣ ಉಳಿತಾಯ ಮಾಡಿದ್ದರು. ಇಳಿ ವಯಸ್ಸಿನಲ್ಲಿ ಹಣದ ಅವಶ್ಯಕತೆ ಅರಿತು ಎಫ್‌ಡಿ ಇಡಲಾಗಿತ್ತು. 6 ವರ್ಷದಿಂದ ಈ ಹಣ ಹಿಂಪಡೆಯಲು ಅಜ್ಜಿ ಪ್ರಯತ್ನಿಸಿ ವಿಫಲರಾಗಿದ್ದರು. ಪರಿಣಾಮ ಇದೀಗ 3.35 ಲಕ್ಷ ರೂಪಾಯಿ ಪರಿಹಾರ ಪಡೆದಿದ್ದಾರೆ.

ಬೆಂಗಳೂರು (ಅ.28) ಹಣ ಸುರಕ್ಷಿತವಾಗಿ ಉಳಿತಾಯ ಅಥವಾ ಹೂಡಿಕೆಗೆ ಬಹುತೇಕರು ಫಿಕ್ಸೆಡ್ ಡೆಪಾಸಿಟ್ (ಎಫ್‌ಡಿ) ಆಯ್ಕೆ ಮಾಡುತ್ತಾರೆ. ಮ್ಯೂಚ್ಯುವಲ್ ಫಂಡ್, ಷೇರು ಮಾರುಕಟ್ಟೆ ರೀತಿ ಏರಿಳಿತ ಇಲ್ಲಿರಲ್ಲ. ಹಣ ಸುರಕ್ಷಿತ, ಆದರೆ ನಿಗಿದತ ಬಡ್ಡಿ ಮೂಲಕ ಇಂತಿಷ್ಟು ವರ್ಷಗಳ ಬಳಿಕ ಪಡೆಯಬಹುದು. ಹೀಗೆ ಬೆಂಗಳೂರಿನ 66 ವರ್ಷದ ಮಹಿಳೆ ಫಿಕ್ಸೆಡ್ ಡೆಪಾಸಿಟ್ ಮೂಲಕ ಹಣ ಹೂಡಿಕೆ ಮಾಡಿದ್ದರು. ತನ್ನ ಇಳಿವಯಸ್ಸಿನಲ್ಲಿ ಆರ್ಥಿಕ ಸಂಕಷ್ಟ ತಪ್ಪಿಸಲು ಈ ಹಣ ಕೂಡಿಡಲಾಗಿತ್ತು. ಫಿಕ್ಸೆಡ್ ಡೆಪಾಸಿಟ್ ಮೆಚ್ಯೂರಿಟಿಗೆ ಬಂದು 6 ವರ್ಷವಾದರೂ ಮಹಿಳೆಗೆ ತಾನು ಹೂಡಿಕೆ ಮಾಡಿದ ಹಣ ಹಿಂಪಡೆಯಲು ಸಾಧ್ಯವಾಗಲಿಲ್ಲ. ಕ್ರೆಡಿಟ್ ಕೋ ಆಪರೇಟೀವ್ ಸೊಸೈಟಿ ಬ್ಯಾಂಕ್ ಅಜ್ಜಿಯ ಮನವಿಯನ್ನು ನಿರ್ಲಕ್ಷ್ಯ ಮಾಡುತ್ತಲೇ ಬಂದಿತ್ತು. ಪರಿಣಾಮ ಗ್ರಾಹಕರ ವೇದಿಕೆ ಇದೀಗ 3.35 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶ ನೀಡಿದೆ.

ಉಳಿತಾಯದ ಹಣ ಹೂಡಿಕೆ ಮಾಡಿದ್ದ ಮಹಿಳೆ

ಬೆಂಗಳೂರಿನ ಮಹಿಳೆ ತನ್ನ ಹಣದಲ್ಲಿ ಒಂದಿಷ್ಟು ಉಳಿತಾಯ ಮಾಡಿ ಕ್ರೆಡಿಟ್ ಕೋ ಆಪರೇಟೀವ್ ಸೊಸೈಟಿ ಬ್ಯಾಂಕ್‌ನಲ್ಲಿ ಫಿಕ್ಸೆಡ್ ಡೆಪಾಸಿಟ್ ಮೂಲಕ ಹೂಡಿಕೆ ಮಾಡಿದ್ದರು. ಈ ಫಿಕ್ಸೆಡ್ ಡೆಪಾಸಿಟ್ ನವೆಂಬರ್ 2020ರಲ್ಲಿ ಮೆಚ್ಯೂರಿಟಿಗೆ ಬಂದಿತ್ತು. ಫಿಕ್ಸೆಡ್ ಡೆಪಾಸಿಟ್ ಮೆಚ್ಯೂರಿಟಿಗೆ ಬಂದ ಕಾರಣ ಕ್ರೆಡಿಟ್ ಕೋ ಆಪರೇಟಿವ್ ಸೊಸೆಟಿ ಬ್ಯಾಂಕ್‌ಗೆ ತೆರಳಿ ಮನವಿ ಮಾಡಿದ್ದರು. ಒಂದಷ್ಟು ದಾಖಲೆ ಸಲ್ಲಿಸಲು ಬ್ಯಾಂಕ್ ಸೂಚಿಸಿತ್ತು. ಇದರಂತೆ ಮಹಿಳೆ ತನ್ನ ದಾಖಲೆ ಪತ್ರಗಳು, ವಿವರಗಳನ್ನು ಅರ್ಜಿ ಮೂಲಕ ಸಲ್ಲಿಕೆ ಮಾಡಿದ್ದಾರೆ.

ಹಲವು ಕಾರಣ ಹೇಳಿ ತಿರಸ್ಕೃತ

ತಿಂಗಳು ಉರುಳಿದರೂ ಫಿಕ್ಸೆಡ್ ಡೆಪಾಸಿಟ್ ಹಣ ತನ್ನ ಖಾತೆಗೆ ಜಮೆ ಆಗಲೇ ಇಲ್ಲ. 4 ತಿಂಗಳ ಬಳಿಕ ಮತ್ತೆ ಬ್ಯಾಂಕ್‌ಗೆ ತೆರಳಿ ಪರಿಶೀಲಿಸಿದ್ದಾರೆ. ಈ ವೇಳೆ ಹೊಸ ಒಂದೆರೆಡು ದಾಖಲೆ ಕೇಳಿದ್ದಾರೆ. ಬಳಿಕ ಈ ದಾಖಲೆ ಸಲ್ಲಿಕೆ ಮಾಡಿ ಕಾದಿದ್ದಾರೆ. ಆದರೆ ಹಣ ಬರಲೇ ಇಲ್ಲ. ಕೋವಿಡ್ ಸಂದರ್ಭದಲ್ಲಿ ಅನಿವಾರ್ಯವಾಗಿ ಬ್ಯಾಂಕ್ ತೆರಳಿ ವಿಚಾರಿಸಲು ಸಾಧ್ಯವಾಗಲಿಲ್ಲ. ಕೋವಿಡ್ ನಿರ್ಬಂಧ ತೆರವಾಗುತ್ತಿದ್ದಂತೆ ಮತ್ತೆ ಮನವಿ ಸಲ್ಲಿಸಿದ್ದಾರೆ. ಸತತ ಮನವಿ ಸಲ್ಲಿಸಿದರೂ ಬ್ಯಾಂಕ್ ಒಂದಲ್ಲ ಒಂದು ಕಾರಣ ನೀಡಿ ಫಿಕ್ಸೆಡ್ ಡೆಪಾಸಿಟ್ ಹಣ ಹಿಂದಿರುಗಿಸಲು ನಿರಾಕರಿಸಿತ್ತು.

2017ರಲ್ಲಿ ಮಹಿಳೆ ನಿಗದಿತ ರೂಪಾಯಿ ಫಿಕ್ಸೆಡ್ ಡೆಪಾಸಿಟ್ ಇಟ್ಟಿದ್ದರು.9.5 ಶೇಕಡಾ ಬಡ್ಡಿ ಗ್ಯಾರೆಂಟಿ ನೀಡಲಾಗಿತ್ತು. ಅಕ್ಟೋಬರ್ 11, 2020ಕ್ಕೆ ಎಫ್‌ಡಿ ಮೆಚ್ಯೂರಿಟಿಗೆ ಬಂದಿತ್ತು. ಲಾಯರ್ ಮೂಲಕ ಲೀಗಲ್ ನೋಟಿಸ್ ಕೂಡ ಕಳುಹಿಸಲಾಗಿತ್ತು. ಆದರೂ ಬ್ಯಾಂಕ್ ತೆಪ್ಪಗೆ ಕುಳಿತಿತ್ತು. ಕೊನೆಗೆ ಗ್ರಾಹಕರ ವೇದಿಕೆ ಮೂಲಕ ಮಹಿಳೆ ಹೋರಾಟಕ್ಕೆ ಸಜ್ಜಾಗಿದ್ದು. ದಾಖಲೆ ಪರಿಶೀಲನೆ ಮಾಡಿದ ಗ್ರಾಹಕರ ವೇದಿಕೆ, ತನಿಖೆ ನಡೆಸಿತ್ತು. ಈ ವೇಳೆ ಬ್ಯಾಂಕ್ ಮಹಿಳೆಯ ಎಫ್‌ಡಿ ಹಣ ನೀಡದಿರುವುದು ಪತ್ತೆಯಾಗಿದೆ. ಹೀಗಾಗಿ ಗ್ರಾಹಕರ ವೇದಿಕೆ ವಿಚಾರಣೆ ನಡೆಸಿ ಸೊಸೈಟಿ ಬ್ಯಾಂಕ್‌ಗೆ ದಂಡ ವಿಧಿಸಿದೆ. 25 ಸಾವಿರ ರೂಪಾಯಿ ಪರಿಹಾರ, 10 ಸಾವಿರ ರೂಪಾಯಿ ಕಾನೂನು ಹೋರಾಟದ ವೆಚ್ಚ ಸೇರಿದಂತೆ 35 ಸಾವಿರ ರೂಪಾಯಿ ಹಾಗೂ ಫಿಕ್ಸೆಡ್ ಡೆಪಾಸಿಟ್ 3 ಲಕ್ಷ ರೂಪಾಯಿ ನೀಡುವಂತೆ ಆದೇಶ ನೀಡಿದೆ.

PREV
Read more Articles on
click me!

Recommended Stories

ಬೆಂಗಳೂರಿನ ಮಲ್ಲೇಶ್ವರದ ಪ್ರಸಿದ್ಧ CTR ದೋಸೆಯಲ್ಲಿ ಜಿರಳೆ ಪತ್ತೆ, ಗ್ರಾಹಕರ ಕ್ಷಮೆ ಕೋರಿದ ಹೋಟೆಲ್‌
ಧನ್ವೀರ್‌ ಮನೆಯ ರೂಮ್‌ನಲ್ಲಿ ವಿಜಯಲಕ್ಮೀ ಲಾಕ್‌: ಗಲಾಟೆ ನಡೆದ ದಿನದ ವಿವರ ಘಟನೆ ಬಿಚ್ಚಿಟ್ಟ ದರ್ಶನ್ ಆಪ್ತ ವೇಲು ನಾಯ್ಕರ್!