ಟರ್ಕಿಯಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಹೆಲ್ಪ್‌ಲೈನ್‌

By Kannadaprabha NewsFirst Published Feb 8, 2023, 2:09 AM IST
Highlights

ಭಾರೀ ಭೂಕಂಪದಿಂದ ತತ್ತರಿಸಿರುವ ಟರ್ಕಿಯಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಕಂದಾಯ ಇಲಾಖೆಯಿಂದ (ವಿಪತ್ತು ನಿರ್ವಹಣೆ) ರಾಜ್ಯ ಸರ್ಕಾರ ಸಹಾಯವಾಣಿಯನ್ನು (Helpline) ಆರಂಭಿಸಲಾಗಿದೆ. 

ಬೆಂಗಳೂರು:  ಭಾರೀ ಭೂಕಂಪದಿಂದ ತತ್ತರಿಸಿರುವ ಟರ್ಕಿಯಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಕಂದಾಯ ಇಲಾಖೆಯಿಂದ (ವಿಪತ್ತು ನಿರ್ವಹಣೆ) ರಾಜ್ಯ ಸರ್ಕಾರ ಸಹಾಯವಾಣಿಯನ್ನು (Helpline) ಆರಂಭಿಸಲಾಗಿದೆ.  ಟರ್ಕಿಯಲ್ಲಿ ಯಾವುದೇ ಕನ್ನಡಿಗರು ಸಂಕಷ್ಟದಲ್ಲಿ ಸಿಲುಕಿದ್ದಲ್ಲಿ ಅವರ ರಕ್ಷಣೆಗಾಗಿ 080-1070 ಅಥವಾ 080-22340676ಗೆ ಕರೆ ಮಾಡಬಹುದು ಎಂದು ಸರ್ಕಾರ ತಿಳಿಸಿದೆ.

ಕಂದಾಯ ಇಲಾಖೆಯ (Revenue Department)ವಿಪತ್ತು ನಿರ್ವಹಣಾ ವಿಭಾಗದಿಂದ ಸ್ಥಾಪಿಸಿರುವ ಈ ರಾಜ್ಯ ತುರ್ತು ನಿರ್ವಹಣಾ ಸಹಾಯವಾಣಿಗೆ ಕರೆ ಮಾಡಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ಬಗ್ಗೆ ಸಂಬಂಧಿಸಿದ ಕುಟುಂಬ ವರ್ಗ ಅಥವಾ ಇನ್ಯಾವುದೇ ಸಾರ್ವಜನಿಕರು ಮಾಹಿತಿ ನೀಡಬಹುದು. ತಕ್ಷಣ ನಮ್ಮ ಅಧಿಕಾರಿಗಳು ಮತ್ತು ಸಿಬ್ಬಂದಿ ಟರ್ಕಿಯಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಸಂಪರ್ಕ ಸಾಧಿಸಿ ಕನ್ನಡಿಗರ (Kannadigas)ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದು ಕುಟುಂಬ ವರ್ಗಕ್ಕೆ ನೀಡಲಿದೆ. ಅಗತ್ಯವಿದ್ದರೆ ಅವರನ್ನು ರಕ್ಷಿಸುವ ಕಾರ್ಯವನ್ನು ಕೂಡ ಕೈಗೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (Karnataka State Disaster Management Authority)(ಕೆಎಸ್‌ಡಿಎಂಎ) ಆಯುಕ್ತ ಡಾ.ಮನೋಜ್‌ ರಾಜನ್‌ (Manoj Rajan) ತಿಳಿಸಿದ್ದಾರೆ.

Turkey Earthquake ಪರಿಹಾರ ಸಾಮಾಗ್ರಿ ಹೊತ್ತ ಭಾರತದ ವಿಮಾನಕ್ಕೆ ವಾಯುಪ್ರದೇಶ ನಿರಾಕರಿಸಿದ ಪಾಕಿಸ್ತಾನ!

ರಾಯಭಾರ ಕಚೇರಿ:

ಭಾರತೀಯ ರಾಯಭಾರ (Indian Embassy) ಕಚೇರಿ, ಟರ್ಕಿ ಹಾಗೂ ಟರ್ಕಿಯ ರಾಜಧಾನಿ ಅಂಕಾರಾದ ಸಹಾಯವಾಣಿ ಕೇಂದ್ರಗಳ ಉಸ್ತುವಾರಿಗಳ ಮಾಹಿತಿಯನ್ನೂ ಇಲಾಖೆ ನೀಡಿದೆ. ಇದಕ್ಕಾಗಿ ಸಮಂತ್‌ ರೋಹನ್‌ ರಾಜೇಂದ್ರ, ಫರ್ಸ್‌ ಸೆಕ್ರೆಟ್ರಿ (ಸಿ,ಪಿ ಅಂಡ್‌ ಐ) ಮೊ: +90-530 314 2203, ದೂ:+90-312 438 2195, ಮತ್ತೊಬ್ಬ ಉಸ್ತುವಾರಿ ಬೊಬ್ಬಿ ರಾವತ್‌, ಕನ್ಸೂಲರ್‌ ಅಧಿಕಾರಿ ಮೊ:-90-535 490 4071 (24*7)  ಮೂಲಕ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಟರ್ಕಿ ಕನ್ನಡಿಗರ ರಕ್ಷಣೆಗೆ ಅಗತ್ಯ ಕ್ರಮ: ಸಿಎಂ

ಟರ್ಕಿಯಲ್ಲಿ ನೆಲೆಸಿರುವ ಕನ್ನಡಿಗರ ರಕ್ಷಣೆ ಹಾಗೂ ಸುರಕ್ಷತೆಗೆ ರಾಜ್ಯ ಸರ್ಕಾರ ಸಹಾಯವಾಣಿ ಆರಂಭ ಸೇರಿದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದು, ಈ ಸಂಬಂಧ ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ವಿದೇಶಾಂಗ ವ್ಯವಹಾರಗಳ ಇಲಾಖೆಯು ಸಹಾಯವಾಣಿ ಸ್ಥಾಪಿಸಿದೆ. ಟಿರ್ಕಿಯ ರಾಯಭಾರಿ ಕಚೇರಿಯಿಂದ ಕರ್ನಾಟಕದವರ ಮಾಹಿತಿಯನ್ನು ಪಡೆಯಲಾಗುತ್ತಿದೆ. ಜತೆಗೆ, ಬೆಂಗಳೂರಿನಲ್ಲಿ ಸರ್ಕಾರ ಸಹಾಯವಾಣಿ ಸ್ಥಾಪಿಸಿದೆ. ಅಲ್ಲಿ ನೆಲೆಸಿದ್ದರ ಮಾಹಿತಿ ನೀಡಿದರೆ ಅವರನ್ನು ಸಂಪರ್ಕಿಸಿ, ಹಿಂದಿರುಗಲು ನೆರವು ಒದಗಿಸಲಾಗುವುದು. ಸಂಕಷ್ಟದಲ್ಲಿದ್ದರೆ ಅವರಿಗೆ ಅಗತ್ಯ ಚಿಕಿತ್ಸೆ ಇನ್ನಿತರೆ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಟರ್ಕಿ ಭೂಕಂಪ: ಭಾರತದಿಂದ ಸಹಾಯಹಸ್ತ; ದೋಸ್ತ್‌ ಎಂದು ಧನ್ಯವಾದ ಹೇಳಿದ ಟರ್ಕಿ ಸರ್ಕಾರ

click me!