ಬೇಕಾಬಿಟ್ಟಿ ವಾಹನ ಪಾರ್ಕಿಂಗ್ ಮಾಡುವವರಿಗೆ ಶಾಕ್: ಬೆಂಗಳೂರಿನಲ್ಲಿ ಮತ್ತೆ ಶುರುವಾಗಲಿದೆ ಟೋಯಿಂಗ್

Published : Dec 16, 2024, 10:27 AM IST
ಬೇಕಾಬಿಟ್ಟಿ ವಾಹನ ಪಾರ್ಕಿಂಗ್ ಮಾಡುವವರಿಗೆ ಶಾಕ್: ಬೆಂಗಳೂರಿನಲ್ಲಿ ಮತ್ತೆ ಶುರುವಾಗಲಿದೆ ಟೋಯಿಂಗ್

ಸಾರಾಂಶ

ಬೆಂಗಳೂರಿನಲ್ಲಿ ಬೇಕಾಬಿಟ್ಟಿ ವಾಹನ ಪಾರ್ಕಿಂಗ್ ಮಾಡುವವರಿಗೆ ಶಾಕ್.  ಮೂರು ವರ್ಷಗಳ ನಂತರ ಮತ್ತೆ ಟೋಯಿಂಗ್ ಆರಂಭ.

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಾಹನ ಸವಾರರಿಗೆ ಮತ್ತೆ ಬಿಗ್ ಶಾಕ್ ಕಾದಿದೆ. ಬೆಂಗಳೂರಿನಲ್ಲಿ ಇನ್ನು ವಾಹನ ಸವಾರರು ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಹೋದರೆ ಮತ್ತೆ ವಾಪಸ್ ಬರುವ ವೇಳೆ ನಿಮ್ಮ ವಾಹನ ನಾಪತ್ತೆಯಾಗಿರಲಿದೆ. ಹೌದು ಬೆಂಗಳೂರಿಗರೇ ಇನ್ಮೇಲೆ ನೋ ಪಾರ್ಕಿಂಗ್ ಜಾಗದಲ್ಲಿ ಕಾರು, ಬೈಕ್ ನಿಲ್ಲಿಸುವ ಮುನ್ನ ವಾಹನ ಸವಾರರು ಎಚ್ಚರ ವಹಿಸುವುದು ಸೂಕ್ತ. ಬೇಕಾಬಿಟ್ಟಿ ವಾಹನ ಪಾರ್ಕಿಂಗ್ ಮಾಡುವವರಿಗೆ ಟೋಯಿಂಗ್ ಕಾಟ ಶುರುವಾಗಲಿದೆ.

ಶೀಘ್ರದಲ್ಲೇ ಇಡೀ ಬೆಂಗಳೂರಿನಲ್ಲಿ ಟೋಯಿಂಗ್ ಆರಂಭವಾಗಲಿದೆ . ಪಾರ್ಕಿಂಗ್ ಇಲ್ಲದ ಸ್ಥಳಗಳಲ್ಲಿ ವಾಹನ ನಿಲ್ಲಿಸಿ ಸಂಚಾರ ದಟ್ಟಣೆಗೂ ಕಾರಣವಾಗುತ್ತಿರುವುದರಿಂದ ಮತ್ತೆ ಇಡೀ ರಾಜಧಾನಿಯಲ್ಲಿ ಟೋಯಿಂಗ್ ಅಬ್ಬರಕ್ಕೆ ಪೊಲೀಸ್ ಇಲಾಖೆ  ಪ್ಲಾನ್ ರೂಪಿಸಿದೆ. ಕಳೆದ ಮೂರು ವರ್ಷಗಳಿಂದ ಈ ಟೋಯಿಂಗ್ ಉಪಟಳವಿರಲಿಲ್ಲ, ಇದರಿಂದ ವಾಹನ ಸವಾರರು ನಿಟ್ಟುಸಿರು ಬಿಟ್ಟಿದ್ದರು. ಅಲ್ಲದೇ ನಗರದಲ್ಲಿ  ಟೋಯಿಂಗ್ ವ್ಯವಸ್ಥೆ ಮತ್ತೆ ಜಾರಿ ಇಲ್ಲ ಮಾಡುವುದಿಲ್ಲ ಎಂದು ಸರ್ಕಾರ ಭರವಸೆ ನೀಡಿತ್ತು,  ಆದರೆ ಈಗ ಮತ್ತೆ ಟೋಯಿಂಗ್ ಶುರು ಮಾಡಿದ್ದು, ಹೀಗಾಗಿ ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿಸಿದ್ರೆ  ಪೊಲೀಸರು ದಂಡಂ ದಶಗುಣಂ ತೋರಿಸಲಿದ್ದಾರೆ.  

ಟೋಯಿಂಗ್ ಜಾರಿಗೆ ಬಂದಿರುವುದರಿಂದ  ಈಗಾಗಲೇ  ಮೆಜೆಸ್ಟಿಕ್ ಸುತ್ತಮುತ್ತ ತಾತ್ಕಾಲಿಕವಾಗಿ ಟೋಯಿಂಗ್ ಜಾರಿಯಾಗಿದೆ. ಇದು ಇಡೀ ಬೆಂಗಳೂರಿಗೆ ವಿಸ್ತರಣೆ ಆಗಲಿದೆ. 

PREV
Read more Articles on
click me!

Recommended Stories

ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್
ನಾಳೆ ಬೆಂಗಳೂರಿನಲ್ಲಿ ವಿದ್ಯುತ್ ಕಡಿತ: ನಿಮ್ಮ ಏರಿಯಾ ಇದೆಯಾ ಚೆಕ್ ಮಾಡಿ?