ಅತ್ತಿಬೆಲೆ, ಎಲೆಕ್ಟ್ರಾನಿಕ್ ಸಿಟಿ ಟೋಲ್‌ ಇಂದಿನಿಂದ 5 ರು. ಹೆಚ್ಚಳ

Published : Jul 01, 2025, 09:10 AM IST
Toll hike on Bengaluru elevated expressway from July 1

ಸಾರಾಂಶ

ನಗರದ ಹೊರಭಾಗದ ಹೊಸೂರು ರಸ್ತೆಯ ಎರಡು ಟೋಲ್‌ ಪ್ಲಾಜಾಗಳ ಮೂಲಕ ಸಂಚರಿಸುವ ವಾಹನಗಳು ಮಂಗಳವಾರದಿಂದ ಹೆಚ್ಚುವರಿ ಟೋಲ್‌ ದರ ಪಾವತಿಸಿ ಸಲ್ಲಿಸಬೇಕಿದೆ.

ಬೆಂಗಳೂರು : ನಗರದ ಹೊರಭಾಗದ ಹೊಸೂರು ರಸ್ತೆಯ ಎರಡು ಟೋಲ್‌ ಪ್ಲಾಜಾಗಳ ಮೂಲಕ ಸಂಚರಿಸುವ ವಾಹನಗಳು ಮಂಗಳವಾರದಿಂದ ಹೆಚ್ಚುವರಿ ಟೋಲ್‌ ದರ ಪಾವತಿಸಿ ಸಲ್ಲಿಸಬೇಕಿದೆ.

ಬೆಂಗಳೂರು ಎಲಿವೇಟೆಡ್‌ ಟೋಲ್‌ವೇ ಸಂಸ್ಥೆಯ ನಿರ್ಧಾರದಂತೆ ಅತ್ತಿಬೆಲೆ ಮತ್ತು ಎಲೆಕ್ಟ್ರಾನಿಕ್ ಸಿಟಿ ಟೋಲ್‌ ಪ್ಲಾಜಾಗಳ ದಿನದ ಟೋಲ್‌ ದರ, ತಿಂಗಳ ಮತ್ತು ವಾರ್ಷಿಕ ಪಾಸ್‌ ದರ ಹೆಚ್ಚಿಸಲಾಗಿದೆ. ಅದರಂತೆ ದಿನದ ಟೋಲ್‌ ದರದಲ್ಲಿ ಕಾರು, ಜೀಪು, ಲಘು ವಾಹನ, ಭಾರೀ ವಾಹನಗಳ ಟೋಲ್‌ ದರ 5 ರು. ಹೆಚ್ಚಿಸಲಾಗಿದೆ.

ಎಲೆಕ್ಟ್ರಾನಿಕ್‌ ಸಿಟಿ ಟೋಲ್‌ ಪ್ಲಾಜಾದಲ್ಲಿ ಕಾರು, ಜೀಪು, ಲಘು ವಾಹನಗಳ ಒಂದು ಪ್ರಯಾಣಕ್ಕೆ 60 ರು.ನಿಂದ 65 ರು.ಗೆ, ಎರಡು ಕಡೆಗಿನ ಪ್ರಯಾಣಕ್ಕೆ 85 ರು.ನಿಂದ 90 ರು., ಲಾರಿ, ಬಸ್‌ಗಳಿಗೆ ಒಂದು ಬದಿಗೆ 170 ರು.ನಿಂದ 175 ರು., ಮಲ್ಟಿ ಆ್ಯಕ್ಸಲ್‌ ವಾಹನಗಳಿಗೆ ಒಂದು ಬದಿಗೆ 345 ರು.ನಿಂದ 350 ರು. ದರ ನಿಗದಿ ಮಾಡಲಾಗಿದೆ.ಅತ್ತಿಬೆಲೆ ಟೋಲ್‌ ಪ್ಲಾಜಾದಲ್ಲಿ ಕಾರುಗಳು ಒಂದು ಪ್ರಯಾಣಕ್ಕೆ 35 ರು.ನಿಂದ 40 ರು., ಲಘು ವಾಹನ, ಮಿನಿ ಬಸ್‌ಗಳಿಗೆ 60 ರು.ನಿಂದ 65 ರು., ಟ್ರಕ್‌, ಬಸ್‌ಗಳಿಗೆ 120 ರು.ನಿಂದ 125 ರು.ಗೆ ಹೆಚ್ಚಿಸಲಾಗಿದೆ.- ಟ್ರಕ್, ಬಸ್ 125 (ಹಳೆ ಬೆಲೆ 120)..- ದೊಡ್ಡ ಮಲ್ಟಿ ಎಕ್ಸೆಲ್ ವಾಹನಗಳಿಗೆ ಒಂದು ಟ್ರಿಪ್‌ಗೆ 265 ರೂಪಾಯಿ ಇದೆ (ಹಳೆ ಬೆಲೆ 260)..

ರಾಷ್ಟ್ರೀಯ ಹೆದ್ದಾರಿ ಕಾಯ್ದೆ ಪ್ರಕಾರ ಕೆಲವರು ಟೋಲ್ ಕಟ್ಟಬೇಕಾಗಿಲ್ಲ

ಪ್ರತಿ ಜಿಲ್ಲೆಗಳಲ್ಲೂ ರಸ್ತೆ ಬಳಸಿದ್ದಕ್ಕೆ ಟೋಲ್ ಗೇಟ್‌ಗಳಲ್ಲಿ ಟೋಲ್ ಹಣ ಕಟ್ಟಬೇಕಾಗುತ್ತೆ. ರಸ್ತೆ, ಹೈವೇಗಳ ನಿರ್ಮಾಣ ಮತ್ತು ನಿರ್ವಹಣೆಗೆ ಸರ್ಕಾರ ಟೋಲ್ ತೆರಿಗೆ ವಿಧಿಸುತ್ತೆ. ಆದ್ರೆ ರಾಷ್ಟ್ರೀಯ ಹೆದ್ದಾರಿ ಕಾಯ್ದೆ ಪ್ರಕಾರ ಕೆಲವರು ಟೋಲ್ ಕಟ್ಟಬೇಕಾಗಿಲ್ಲ. ಯಾರಿಗೆಲ್ಲಾ ಟೋಲ್‌ ಕಟ್ಟೋದರಿಂದ ವಿನಾಯಿತಿ ಇದೆ ಅನ್ನೋದನ್ನ ಇಲ್ಲಿ ನೋಡೋಣ.

ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ, ಸೇತುವೆ, ಸುರಂಗ ಮಾರ್ಗಗಳ ನಿರ್ವಹಣೆಗೆ ಟೋಲ್ ಹಣ ಬಳಸಲಾಗುತ್ತದೆ. ರಸ್ತೆ, ಹೈವೇಗಳ ರಿಪೇರಿಗೂ ಈ ಹಣವೇ ಮೂಲ ಆಧಾರ. ರಾಷ್ಟ್ರೀಯ ಹೆದ್ದಾರಿ ಕಾಯ್ದೆ ಪ್ರಕಾರ ಕೆಲವರು ಟೋಲ್ ಕಟ್ಟೋ ಅಗತ್ಯ ಇಲ್ಲ. ಯಾಕಂದ್ರೆ ಅವರು ಸಾಮಾನ್ಯ ಜನರಿಗಿಂತ ಮುಖ್ಯ ವ್ಯಕ್ತಿಗಳು. ಅವರ್ಯಾರು ಅಂತ ಈಗ ನೋಡೋಣ. 

NHAI ಟೋಲ್ ವಸೂಲಿ ಬಗ್ಗೆ ಕೆಲವು ನಿಯಮ, ವಿನಾಯಿತಿಗಳನ್ನು ಹೊರಡಿಸಿದೆ. ವಾಹನದ ಪ್ರಕಾರ, ದೂರದ ಆಧಾರದ ಮೇಲೆ ಟೋಲ್ ಬದಲಾಗುತ್ತೆ. ಟ್ರಕ್, ಬಸ್‌ಗಳಿಗೆ ಕಾರುಗಳಿಗಿಂತ ದುಬಾರಿ. ಟೋಲ್ ಗೇಟ್‌ನ 20 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವವರಿಗೆ ಲೋಕಲ್ ಪಾಸ್ ಸಿಗುತ್ತೆ. ಇದನ್ನ ತಿಂಗಳಿಗೊಮ್ಮೆ ರೀಚಾರ್ಜ್ ಮಾಡಿಕೊಳ್ಳಬೇಕು. ಟೋಲ್ ಪ್ಲಾಜಾ ಹತ್ತಿರ ಇರೋರು ಆಗಾಗ ಅದನ್ನ ದಾಟಿ ಹೋಗ್ಬೇಕಾಗುತ್ತೆ. ಪ್ರತಿ ಸಲ ಟೋಲ್ ಕಟ್ಟೋದು ದುಬಾರಿ. ಅದಕ್ಕೆ ಮಾಸಿಕ ಪಾಸ್ ಕೊಡಲಾಗುತ್ತದೆ.

ವಾಹನ ಎಷ್ಟು ದೂರ ಹೋಗುತ್ತೋ ಅಷ್ಟಕ್ಕೆ ಮಾತ್ರ ಟೋಲ್ ಕಟ್ಟುವಂತೆ ಕೇಂದ್ರ ಸರ್ಕಾರ, NHAI ಪ್ಲಾನ್ ಮಾಡ್ತಿದೆ. ಜಿಪಿಎಸ್, ಇಂಟರ್ನೆಟ್ ಬಳಸಿ ಈ ವ್ಯವಸ್ಥೆ ರೂಪಿಸಲು ಪ್ರಯತ್ನ ನಡೀತಿದೆ. ಹೀಗಾದಲ್ಲಿ ಟೋಲ್ ವಸೂಲಿ ಪಾರದರ್ಶಕವಾಗಿರುತ್ತೆ. 2 ಕಿ.ಮೀ ಹೋದ್ರೆ ಅಷ್ಟಕ್ಕೆ ಮಾತ್ರ ಟೋಲ್ ಆಟೋಮ್ಯಾಟಿಕ್ ಆಗಿ ಕಟ್ ಆಗುತ್ತೆ. 200 ಕಿ.ಮೀ ಹೋದ್ರೆ ಅದಕ್ಕೆ ತಕ್ಕ ಟೋಲ್ ಕಟ್ ಆಗುತ್ತೆ. ಫಾಸ್ಟ್‌ಟ್ಯಾಗ್ ಬಂದ್ಮೇಲೆ ಟೋಲ್ ವಸೂಲಿ ಪಾರದರ್ಶಕವಾಗಿದೆ.

PREV
Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!