KSRTC ಬಡವರಿಗೆ ಇಲ್ಲದ ಹಾಗಾಯ್ತು, ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗಲು ಕರಾವಳಿಗರಿಗೆ ರೈಲ್ವೇಸ್‌ನಿಂದ ಸ್ಪೆಷಲ್‌ ಟ್ರೇನ್‌!

Published : Nov 04, 2026, 04:55 PM IST
Karavali deepawali special train

ಸಾರಾಂಶ

ಕೆಎಸ್‌ಆರ್‌ಟಿಸಿ ಬಸ್ ದರ ಏರಿಕೆಯ ನಡುವೆ ದೀಪಾವಳಿ ಹಬ್ಬಕ್ಕೆ ಊರಿಗೆ ತೆರಳುವವರ ಅನುಕೂಲಕ್ಕಾಗಿ ನೈಋತ್ಯ ರೈಲ್ವೇ ವಿಶೇಷ ರೈಲುಗಳನ್ನು ಘೋಷಿಸಿದೆ. ನವೆಂಬರ್ 6 ಮತ್ತು 8ರಂದು ಬೆಂಗಳೂರಿನಿಂದ ಮಂಗಳೂರು ಹಾಗೂ ಮಡಗಾಂವ್‌ಗೆ ಈ ವಿಶೇಷ ರೈಲುಗಳು ಸಂಚರಿಸಲಿವೆ.

ಬೆಂಗಳೂರು (ನ.4): ಒಂದೆಡೆ ಕೆಎಸ್‌ಆರ್‌ಟಿಸಿ ಬಸ್‌ ದರದಲ್ಲಿ ರಾಜ್ಯ ಸರ್ಕಾರ ಭಾರೀ ದರ ಏರಿಕೆ ಮಾಡಿರುವ ಕಾರಣ ಊರಿಗೆ ಹೋಗೋದು ಕಷ್ಟ ಅನ್ನೋ ಭಯ ಬೇಡ. ದೀಪಾವಳಿ ಹಬ್ಬಕ್ಕೆ ರಾಜಧಾನಿ ಬೆಂಗಳೂರಿನಿಂದ ಕರಾವಳಿಗೆ ಪ್ರಯಾಣಿಸುವ ಲಕ್ಷಾಂತರ ಪ್ರಯಾಣಿಕರ ಭಾರಿ ದಟ್ಟಣೆಯನ್ನು (Passenger Rush) ನಿಯಂತ್ರಿಸಲು ನೈಋತ್ಯ ರೈಲ್ವೇ (South Western Railway - SWR) ಮಹತ್ವದ ಕೊಡುಗೆ ನೀಡಿದೆ. ಬೆಂಗಳೂರು ಮತ್ತು ಮಂಗಳೂರು, ಮಡಗಾಂವ್ ನಡುವೆ ದೀಪಾವಳಿ ವಿಶೇಷ ರೈಲುಗಳ (Deepawali Special Train) ಸಂಚಾರಕ್ಕೆ ರೈಲ್ವೇ ಮಂಡಳಿಯು ಅಧಿಕೃತ ಅನುಮೋದನೆ ನೀಡಿದೆ.

ಹಬ್ಬದ ವೇಳೆ ಊರುಗಳಿಗೆ ತೆರಳಲು ನಿಯಮಿತ ರೈಲುಗಳಲ್ಲಿ ಹಾಗೂ ಬಸ್‌ಗಳಲ್ಲಿ ಟಿಕೆಟ್ ಸಿಗದೆ ಪರದಾಡುತ್ತಿದ್ದ ಪ್ರಯಾಣಿಕರ ಅನುಕೂಲಕ್ಕಾಗಿ ರೈಲು ಸಂಖ್ಯೆ 06591 / 06592 (Yesvantpur - Madgaon - Bengaluru Cant Express Special) ಅನ್ನು ಹಳಿಗಳ ಮೇಲೆ ಇಳಿಸಲಾಗುತ್ತಿದೆ. ಈ ವಿಶೇಷ ರೈಲು ಸೇವೆಗಳು ನವೆಂಬರ್ 6 (ಶುಕ್ರವಾರ) ಮತ್ತು ನವೆಂಬರ್ 8 (ಭಾನುವಾರ) ರಂದು ಕಾರ್ಯಾಚರಣೆ ನಡೆಸಲಿವೆ.

ರೈಲು ಸಂಚಾರ ಹಾಗೂ ಸಮಯದ ಸಂಪೂರ್ಣ ವಿವರ

ರೈಲು ಸಂಖ್ಯೆ 06591 (ಯಶವಂತಪುರ - ಮಡಗಾಂವ್ / ಮಂಗಳೂರು ಮಾರ್ಗ):

ಹೊರಡುವ ದಿನಾಂಕ: ನವೆಂಬರ್ 6, 2026 (ಶುಕ್ರವಾರ).

ಸಮಯ: ಶುಕ್ರವಾರ ರಾತ್ರಿ 23:55 (11:55 PM) ಕ್ಕೆ ಯಶವಂತಪುರ (YPR) ರೈಲು ನಿಲ್ದಾಣದಿಂದ ಹೊರಡಲಿದೆ.

ಪ್ರಮುಖ ನಿಲುಗಡೆಗಳು: ಕುಣಿಗಲ್ (00:50), ಚನ್ನರಾಯಪಟ್ಟಣ (01:50), ಹಾಸನ (05:00), ಸಕಲೇಶಪುರ (05:55), ಸುಬ್ರಹ್ಮಣ್ಯ ರೋಡ್ (08:50), ಕಬಕ ಪುತ್ತೂರು (09:45), ಬಂಟ್ವಾಳ (10:15) ಹಾಗೂ ಶನಿವಾರ ಬೆಳಿಗ್ಗೆ 11:00 ಗಂಟೆಗೆ ಮಂಗಳೂರು ಜಂಕ್ಷನ್ (MAJN) ತಲುಪಲಿದೆ.

ಮಂಗಳೂರು ಜಂಕ್ಷನ್‌ನಿಂದ ಮುಂದುವರಿದು ಸುರತ್ಕಲ್, ಮುಲ್ಕಿ, ಉಡುಪಿ (13:10), ಕುಂದಾಪುರ (13:40), ಬೈಂದೂರು, ಭಟ್ಕಳ, ಮುರುಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್, ಅಂಕೋಲಾ, ಕಾರವಾರ (16:50) ಮಾರ್ಗವಾಗಿ ಶನಿವಾರ ಸಂಜೆ 18:10 ಕ್ಕೆ ಮಡಗಾಂವ್ (MAO) ತಲುಪಲಿದೆ.

ರೈಲು ಸಂಖ್ಯೆ 06592 (ಮಡಗಾಂವ್ / ಮಂಗಳೂರು - ಬೆಂಗಳೂರು ಕಂಟೋನ್ಮೆಂಟ್‌ ಮಾರ್ಗ)

ಹೊರಡುವ ದಿನಾಂಕ: ನವೆಂಬರ್ 8, 2026 (ಭಾನುವಾರ).

ಸಮಯ: ಮಡಗಾಂವ್‌ನಿಂದ ಬೆಳಿಗ್ಗೆ 11:00 ಗಂಟೆಗೆ ಹೊರಡಲಿದೆ.

ಮಂಗಳೂರು ಜಂಕ್ಷನ್‌ಗೆ ಸಂಜೆ 17:10 ಕ್ಕೆ ಆಗಮಿಸಿ, 17:30 ಕ್ಕೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಲಿದೆ.

ಈ ರೈಲು ಸೋಮವಾರ ಮುಂಜಾನೆ 03:00 ಗಂಟೆಗೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVB) ಹಾಗೂ ಬೆಳಿಗ್ಗೆ 05:20 ಕ್ಕೆ ಬೆಂಗಾಳೂರು ಕಂಟೋನ್ಮೆಂಟ್‌ (BNC) ರೈಲು ನಿಲ್ದಾಣವನ್ನು ತಲುಪಲಿದೆ.

ಬೋಗಿಗಳ ಸಂಯೋಜನೆ

ಈ ವಿಶೇಷ ದೀಪಾವಳಿ ರೈಲಿನಲ್ಲಿ ಒಟ್ಟು 19 ಬೋಗಿಗಳು ಇರಲಿವೆ. 10 ಸ್ಲೀಪರ್ ಕ್ಲಾಸ್ (WGSCN) ಬೋಗಿಗಳು, 6 ಸಾಮಾನ್ಯ ದ್ವಿತೀಯ ದರ್ಜೆ (GS) ಬೋಗಿಗಳು, 2 ಎಸಿ 3-ಟೈರ್ (WGACCW) ಬೋಗಿಗಳು ಹಾಗೂ 1 ಎಸ್‌ಎಲ್‌ಆರ್/ಡಿ ಬೋಗಿ ಇರಲಿದೆ. ದೀಪಾವಳಿ ಹಬ್ಬಕ್ಕೆ ಕರಾವಳಿ ಕರ್ನಾಟಕ ಹಾಗೂ ಸ್ವಗ್ರಾಮಗಳಿಗೆ ತೆರಳುವ ಸಾರ್ವಜನಿಕರಿಗೆ ಈ ವಿಶೇಷ ರೈಲು ಭಾರಿ ನೆರವಾಗಲಿದ್ದು, ಪ್ರಯಾಣಿಕರು ಐಆರ್‌ಸಿಟಿಸಿ (IRCTC) ವೆಬ್‌ಸೈಟ್ ಅಥವಾ ರೈಲ್ವೇ ಟಿಕೆಟ್ ಕೌಂಟರ್‌ಗಳ ಮೂಲಕ ಶೀಘ್ರವೇ ಟಿಕೆಟ್‌ ಬುಕ್‌ ಮಾಡಿಕೊಳ್ಳಬಹುದಾಗಿದೆ.

PREV
Read more Articles on
click me!

Recommended Stories

ಕೇಸ್ ವಾಪಸ್ ಪಡೆಯದಿದ್ದರೆ ಅಷ್ಟೇ... ದರ್ಶನ್ ಮನೆ ಮುಂದೆ 20ಕ್ಕೂ ಹೆಚ್ಚು ಆಟೋ ತರಿಸಿ ಸೆಕ್ಯೂರಿಟಿಯನ್ನ ಮುಗಿಸೋ ಬೆದರಿಕೆ!
'ಪ್ರಾಣಿಗಳಲ್ಲ, ಪ್ರಯಾಣಿಕರ ಮೇಲೆ ದಯೆ ಇರಲಿ': ಬಡ ಜನರ ಹೊಟ್ಟೆ ಮೇಲೆ ಬಸ್‌ ಹತ್ತಿಸಿದ ಗ್ಯಾರಂಟಿ ಸರ್ಕಾರಕ್ಕೆ ಸಾರ್ವಜನಿಕರ ಹಿಡಿಶಾಪ!