BMTC ಬಸ್‌ಗೆ ವಿಶೇಷ ದಾರಿ; ಪ್ರಯಾಣಿಕರೇ ನೆಮ್ಮದಿಯಿಂದ ಮಾಡಿ ಸವಾರಿ!

By Web DeskFirst Published Oct 14, 2019, 5:41 PM IST
Highlights

ಬೆಂಗಳೂರಲ್ಲಿ ಟಿನ್ ಫ್ಯಾಕ್ಟ್ರಿಯಿಂದ - ಸಿಲ್ಕ್ ಬೋರ್ಡ್ ಸರ್ಕಲ್‌ಗೆ ಪ್ರಯಾಣಿಸುವುದು ಸವಾಲು ಮಾತ್ರವಲ್ಲ ಸಾಹಸವೇ ಸರಿ.  ಬಿಗಿ ಟ್ರಾಫಿಕ್ ಜಾಮಲ್ಲಿ ಬಿಎಂಟಿಸಿ ಬಸ್ಸುಗಳು ಏದುಸಿರು ಬಿಡುತ್ತಾ ಒಂದೊಂದೆ ಹೆಜ್ಜೆ ಇಡೋದನ್ನ ತಪ್ಪಿಸಲು ಹೊಸ ಪ್ಲಾನ್ ರೆಡಿಯಾಗ್ತಿದೆ. ಏನದು ಆ ಪ್ಲಾನ್..?

ಬೆಂಗಳೂರು(ಅ.14):  ಟಿನ್ ಫ್ಯಾಕ್ಟ್ರಿಯಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ಮಾರ್ಗದಲ್ಲಿ ಬಿಎಂಟಿಸಿ ಬಸ್ಸುಗಳಲ್ಲಿ ಸಂಚರಿಸುವವರಿಗೆ ಸಿಹಿ ಸುದ್ದಿ. ಈ ಮಾರ್ಗದಲ್ಲಿ ಬಿಎಂಟಿಸಿ ಬಸ್ಸುಗಳಿಗೆ ಪ್ರತ್ಯೇಕ ಪಥ ಸಿದ್ಧವಾಗುತ್ತಿದೆ. ಈ ಪಥದಲ್ಲಿ ಬೇರೆ ವಾಹನ ನುಗ್ಗದಂತೆ ಕಾಯಲು ಸಿಸಿಟಿವಿಯ ಕಣ್ಗಾವಲನ್ನು ಹಾಕಲಾಗುತ್ತಿದೆ.

ಇದನ್ನೂ ಓದಿ: ಟಿಕೆಟ್‌ ರಹಿತ ಪ್ರಯಾಣ : 10 ಲಕ್ಷ ರು. ದಂಡ

ರಾಜ್ಯೋತ್ಸವದಿಂದ ಅಧಿಕೃತ ಸಂಚಾರ ಶುರು
ಈಗಾಗಲೇ ಅರ್ಧ ಕಾಮಗಾರಿ ಮುಗಿದಿದ್ದು ಅಕ್ಟೋಬರ್ 20ರಿಂದ ಪ್ರಾಯೋಗಿಕ ಸಂಚಾರ ಆರಂಭಿಸಲಾಗುತ್ತಿದೆ. ರಾಜ್ಯೋತ್ಸವ ದಿನದಂದು ಅಧಿಕೃತವಾಗಿ ಇದಕ್ಕೆ ಚಾಲನೆ ದೊರೆಯುತ್ತಿದೆ. ಇದು ಸಕ್ಸಸ್ ಆಗಬೇಕಾದರೆ ಪ್ರಯಾಣಿಕರು ಸಹಕರಿಸಬೇಕು. ಈಗಾಗಲೇ ಚಾಲಕರು, ನಿರ್ವಾಹಕರಿಗೆ ತರಬೇತಿ ನೀಡಲಾಗಿದೆ ಅಂತಾರೆ ಬಿಎಂಟಿಸಿ ಎಂಡಿ ಸಿ. ಶಿಖಾ.

ಇದನ್ನೂ ಓದಿ: 12 ಕಡೆ ಪ್ರತ್ಯೇಕ ಬಸ್‌ ಮಾರ್ಗ ನಿರ್ಮಾಣ

ಇದು ಸಕ್ಸಸ್ ಆದ್ರೆ, ಬೆಂಗಳೂರಿನ 12 ಪ್ರಮುಖ ರಸ್ತೆಗಳಲ್ಲಿ ಇದು ಜಾರಿಗೆ ಬರಲಿದೆ. ಒಟ್ಟು 15 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆ ರೂಪುಗೊಳ್ತಾ ಇದೆ. ಟ್ರಾಫಿಕ್ ಜಾಮ್ ರಸ್ತೆಗಳಲ್ಲಿ ಬಿಎಂಟಿಸಿ ಬಸ್ಸುಗಳು ಮುಂದೆನೇ ಸಾಗಲ್ಲ ಅನ್ನೋ ಅಪವಾದ ಈ ಜಂಕ್ಷನ್‌ಗಳಿಂದ ಕೊಂಚ ತಗ್ಗಬಹುದು ಅನ್ನೋ ಆಶಾವಾದ ಪ್ರಯಾಣಿಕರಲ್ಲಿ ಮೂಡಿದೆ.
 

ವರದಿ: ರಕ್ಷಾ ಕಟ್ಟೆಬೆಳಗುಳಿ, ಸುವರ್ಣ ನ್ಯೂಸ್, ಬೆಂಗಳೂರು.

click me!
Last Updated Oct 14, 2019, 5:41 PM IST
click me!