ಏರ್ಪೋರ್ಟ್ ಗೆ ಮೆಟ್ರೋ ಕಾಮಗಾರಿ ಶೀಘ್ರ ಶುರು

By Kannadaprabha NewsFirst Published Oct 14, 2019, 8:49 AM IST
Highlights

ಕೆ.ಆರ್.ಪುರಂ- ಕೆಂಪೇ ಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಕಾಮಗಾರಿ ಶೀಘ್ರವೇ  ಪ್ರಾರಂಭ ಗೊಳ್ಳಲಿದ್ದು, ಈ ನಿಟ್ಟಿನಲ್ಲಿ ವಿವಿಧ ಕಾರ್ಯಗಳ ಆರಂಭವಾಗಿದೆ. 

ಬೆಂಗಳೂರು [ಅ.14]:  ಕೆ.ಆರ್.ಪುರಂ- ಕೆಂಪೇ ಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಕಾಮಗಾರಿ ಶೀಘ್ರವೇ  ಪ್ರಾರಂಭ ಗೊಳ್ಳಲಿದ್ದು, ಈ ಮಾರ್ಗದ ಬೀದಿ ದೀಪಗಳನ್ನು ಸ್ಥಳಾಂತರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ(ಬಿಎಂಆರ್ ಸಿಎಲ್) ಟೆಂಡರ್ ಕರೆದಿದೆ.

ಕೆ.ಆರ್.ಪುರಂನಿಂದ ಹೆಬ್ಬಾಳ ಮೂಲಕ ಕೆಂಪೇಗೌಡ ವಿಮಾನ ನಿಲ್ದಾಣದ ವರೆಗೂ ಸುಮಾರು 37 ಕಿ.ಮೀ. ಮೆಟ್ರೋ ಮಾರ್ಗ ನಿರ್ಮಾಣ ಗೊಳ್ಳಲಿದೆ. ಈ ಯೋಜನೆಗೆ 10,584 ಕೋಟಿ ವೆಚ್ಚ ವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಮೆಟ್ರೋ ಮಾರ್ಗದಲ್ಲಿ ಬರುವ ಬೀದಿ ದೀಪಗಳನ್ನು ಸ್ಥಳಾಂತರಿಸಿ ಹೊಸ ಬೀದಿ ದೀಪಗಳ ವ್ಯವಸ್ಥೆ ಮಾಡಲು ಬಿಎಂಆರ್‌ಸಿಎಲ್ ಟೆಂಡರ್ ಕರೆದಿದೆ. 

ಅರ್ಜಿ ಸಲ್ಲಿಸಲು ನ.4 ಕಡೆಯ ದಿನ. ಕಾಮಗಾರಿ ಮೊತ್ತ 93.14 ಲಕ್ಷ ರು. ಎಂದು ಅಂದಾಜಿಸಲಾಗಿದ್ದು, ಆರು ತಿಂಗಳಲ್ಲಿ (180 ದಿನಗಳು) ಕಾಮಗಾರಿ ಪೂರ್ಣಗೊಳಿಸಬೇಕೆಂದು ಷರತ್ತು ವಿಧಿಸಲಾಗಿದೆ. ಟೆಂಡ ರ್‌ ದಾರರು 1.86 ಲಕ್ಷ ರು. ಭದ್ರತೆಯನ್ನು ಇಡಬೇಕಿದೆ. ನಿಗಮದ ವೆಬ್‌ಸೈಟ್‌ನಲ್ಲಿ 5, 600 ರು. ಪಾವತಿಸಿ ಟೆಂಡರ್ ಅರ್ಜಿ ಪಡೆಯ ಬಹುದಾಗಿದೆ. ನ.12ರಂದು ಸ್ಪಷ್ಟೀಕರಣ ಪಡೆಯಲು ಕಡೆಯ ದಿನವಾಗಿದ್ದು, ನ. 19 ರಂದು 3.30 ಕ್ಕೆ ಶಾಂತಿನಗರದ ಬಿಎಂಆರ್‌ಸಿಎಲ್ ಕಚೇರಿಯಲ್ಲಿ ಟೆಂಡರ್ ತೆರೆಯಲಾಗು ವುದು ಎಂದು ಮೆಟ್ರೋ ನಿಗಮ ವೆಬ್‌ ಸೈಟ್‌ನಲ್ಲಿ ಮಾಹಿತಿ ನೀಡಿದೆ.

ಈ ಹಿಂದೆ ಕೆ.ಆರ್.ಪುರಂ ಮೂಲಕ ನಾಗವಾರದಿಂದ ಆರ್.ಕೆ.ಹೆಗಡೆ ನಗರದ ಮಾರ್ಗವಾಗಿ ಏರ್‌ಪೋರ್ಟ್‌ಗೆ ಮೆಟ್ರೋ ರೈಲು ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಲಾಗಿತ್ತು. ಈ ಮಾರ್ಗವಾಗಿ ಏರ್ ಪೋರ್ಟ್ ತಲುಪಲು ಕೇವಲ 29 ಕಿ.ಮೀ ಇತ್ತು. ಆದರೆ ಇದೇ ಮಾರ್ಗದಲ್ಲಿ ಜಲಮಂಡಳಿಯ ಎರಡು ಬೃಹತ್ ಪೈಪ್‌ಲೈನ್ ಇದ್ದು, ಆರ್.ಕೆ.ಹೆಗಡೆ ನಗರದಿಂದ ಜಕ್ಕೂರು ರಸ್ತೆ ಮಧ್ಯೆ ಬೃಹತ್ ಗ್ಯಾಸ್‌ಪೈಪ್ ಅಳವಡಿಕೆ ಯಾಗಿದೆ. ನೀರಿನ ಪೈಪ್‌ಲೈನ್ ಬಿಟ್ಟು ರಸ್ತೆಯ ಉತ್ತ ರ ಅಥವಾ ದಕ್ಷಿಣ ಭಾಗದಲ್ಲಿ ಮೆಟ್ರೋ ಲೈನ್ ಮಾಡುವುದಕ್ಕೆ ಹೊರ ಟರೆ  4.6 ಕಿ.ಮೀ. ಮಾರ್ಗದಲ್ಲಿ ವಸತಿ ಪ್ರದೇಶವಿದ್ದು, ಭೂ ಸ್ವಾಧೀನ ಅನಿವಾರ್ಯವಾಗಿತ್ತು. ಆದ್ದರಿಂದ ಮಾರ್ಗ ಬದಲಾಯಿಸಿ ದ್ದರಿಂದ 37 ಕಿ.ಮೀ ಮಾರ್ಗ ನಿರ್ಮಾಣ ಮಾಡಬೇಕಿದೆ.

17 ಮೆಟ್ರೋ ನಿಲ್ದಾಣಗಳು: ಮೆಟ್ರೋ ಹೊಸ ಸಂಪರ್ಕ ಮಾರ್ಗದ ಅನ್ವಯ ಕೆ. ಆರ್.ಪುರಂ, ಚನ್ನಸಂದ್ರ, ಹೊರಮಾವು, ಕಲ್ಯಾಣ ನಗರ(ಬಾಬು ಸಾಹೇಬ್ ಪಾಳ್ಯ), ಎಚ್‌ಆರ್‌ಬಿಆರ್ ಲೇಔಟ್, ನಾಗವಾರ, ವೀರಣ್ಣಪಾಳ್ಯ, ಕೆಂಪಾಪುರ ಕ್ರಾಸ್, ಹೆಬ್ಬಾಳ, ಕೊಡಿ ಗೆಹಳ್ಳಿ, ಜಕ್ಕೂರು, ಕೋಗಿಲು ಕ್ರಾಸ್, ಪೆರಿಫೆರಲ್ ರಿಂಗ್ ರಸ್ತೆ (ಬಾಗಲೂರು), ಟ್ರಂಪೆಟ್ ಇಂಟರ್‌ಸೆಕ್ಷನ್ ಮತ್ತು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಎರಡು ನಿಲ್ದಾಣಗಳು ಸೇರಿ 17 ಮೆಟ್ರೋ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವೇಗವೂ ಹೆಚ್ಚು: ಮೆಟ್ರೋ 1 ನೇ ಹಂತದಲ್ಲಿ 80 ಕೆಎಂಪಿಎಚ್ (ಕಿಲೋಮೀಟರ್ ಪರ್ ಅವರ್) ವೇಗದ ಸಾಮರ್ಥ್ಯಕ್ಕೆ ಅನುಗುಣವಾಗಿ ಮೆಟ್ರೋ ಮಾರ್ಗ ನಿರ್ಮಿಸಲಾಗಿದೆ.

ಆದರೂ ಮೆಟ್ರೋ ರೈಲುಗಳು ಸರಾಸರಿ 34 ಕೆಎಂಪಿಎಚ್ ವೇಗದಲ್ಲಿ ಸಂಚರಿಸುತ್ತಿವೆ. ಕೆಂಪೇಗೌಡ ವಿಮಾನ ನಿಲ್ದಾಣ- ಕೆಆರ್ ಪುರಂ ಮಾರ್ಗದ ಸಾಮರ್ಥ್ಯ 90 ರಿಂದ 95 ಕೆಎಂಪಿಎಚ್ ಇರಲಿದ್ದು, ಮೆಟ್ರೋ ರೈಲುಗಳ ಸಂಚಾರ ಪ್ರತಿ ಗಂಟೆಗೆ 60 ಕಿ.ಮೀ. ವೇಗ ಇರಲಿವೆ. ಇದರಿಂದ ವಿಮಾನ ನಿಲ್ದಾಣಕ್ಕೆ ಶೀಘ್ರವಾಗಿ ಪ್ರಯಾಣಿಕರು ತಲುಪಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!