ಕನ್ನಡಿಗರು ನಾಚುವಂತೆ ಕನ್ನಡ ಮಾತಾಡ್ತಿದ್ದಾರೆ ತೇಜಸ್ವಿ ಸೂರ್ಯ ಪತ್ನಿ: ಗಾಯಕಿ ಶಿವಶ್ರೀ ಕನ್ನಡ ಕಲಿತಿದ್ದು ಹೇಗೆ?

Published : Oct 27, 2025, 04:55 PM ISTUpdated : Oct 27, 2025, 05:02 PM IST
sivashree skanda prasad

ಸಾರಾಂಶ

ಸಂಸದ ತೇಜಸ್ವಿ ಸೂರ್ಯ ಅವರ ತಮಿಳು ಮೂಲದ ಪತ್ನಿ ಶಿವಶ್ರೀ, ಕೆಲವೇ ತಿಂಗಳುಗಳಲ್ಲಿ ನಿರರ್ಗಳವಾಗಿ ಕನ್ನಡ ಕಲಿತು ಅಚ್ಚರಿ ಮೂಡಿಸಿದ್ದಾರೆ. ಪತಿಯಿಂದ ಅವರು ಕನ್ನಡ ಕಲಿತಿರಬಹುದು ಎಂಬುದು ಅನೇಕರ ನಂಬಿಕೆ ಅದರೆ ಅಲ್ಲ, ಹಾಗಿದ್ರೆ ಸಿವಶ್ರೀ ಕನ್ನಡ ಕಲಿತಿದ್ದು ಹೇಗೆ?

ಮೂಲತಃ ತಮಿಳಿನವರಾದರೂ ನಿರರ್ಗಳವಾಗಿ ಕನ್ನಡ ಮಾತನಾಡುವ ತೇಜಸ್ವಿ ಸೂರ್ಯ ಪತ್ನಿ

ಸಂಸದ ತೇಜಸ್ವಿ ಸೂರ್ಯ ಪತ್ನಿ ಪ್ರಸಿದ್ಧ ಗಾಯಕಿ ಶಿವಶ್ರೀ ಅವರು ಮೂಲತಃ ತಮಿಳು ಹಿನ್ನೆಲೆಯವರು. ಆದರೆ ಮದುವೆಯಾಗಿ ಕೆಲ ತಿಂಗಳಷ್ಟೇ ಕಳೆದಿದೆ. ಆದರೆ ಅವರು ಬಹಳ ಸ್ಪಷ್ಟವಾಗಿ ಕನ್ನಡವನ್ನು ಮಾತನಾಡುತ್ತಿರುವುದು ಅನೇಕ ಕನ್ನಡಿಗರಿಗೆ ಖುಷಿ ನೀಡಿದೆ. ಬೆಂಗಳೂರಿನಲ್ಲೇ ನೆಲೆಸಿ ಕಾವೇರಿ ನೀರನ್ನೇ ಕುಡಿದರು ಅನೇಕ ಹೊರ ರಾಜ್ಯದ ಜನರು ಇಲ್ಲಿ ಕನ್ನಡ್ ಗೊತ್ತಿಲ್ಲ ಕನ್ನಡ ಬರಲ್ಲ, ಕನ್ನಡ ಕಲಿಯೋ ಅಗತ್ಯನೇ ಇಲ್ಲ ಎಂದು ದುರಾಂಕಾರ ಮಾತನಾಡುವವರ ಮಧ್ಯೆ ಶಿವಶ್ರೀ ಅವರು ಕೇವಲ ಕೆಲ ತಿಂಗಳುಗಳಲ್ಲೇ ಕನ್ನಡಿಗರಂತೆ ಬಹಳ ನಿರರ್ಗಳವಾಗಿ ಕನ್ನಡ ಕಲಿತಿರುವುದನ್ನು ನೋಡಿ ಅನೇಕರು ಅಚ್ಚರಿ ಪಟ್ಟಿದ್ದರು. ಬಹುಶಹ ಪ್ರೀತಿಯಲ್ಲಿ ಎಲ್ಲವೂ ಸಾಧ್ಯ, ತೇಜಸ್ವಿ ಸೂರ್ಯ ಹಾಗೂ ಗಾಯಕಿ ಶಿವಶ್ರೀ ಪ್ರೀತಿಸಿ ಮದ್ವೆಯಾದವರು. ಬಹುಶಃ ತೇಜಸ್ವಿ ಜೊತೆ ಮಾತನಾಡ್ತಾ ಮಾತನಾಡ್ತಾ ಅವರು ಕನ್ನಡ ಕಲಿತಿರಬಹುದು ಎಂದು ಅನೇಕರು ಭಾವಿಸಿರಬಹುದು. ಆದರೆ ಇದು ನಿಜ ಅಲ್ಲ ಹಾಗಿದ್ರೆ ಶಿವಶ್ರೀ ಅವರು ಕನ್ನಡ ಕಲಿತಿದ್ದು ಹೇಗೆ ಇದನ್ನ ಸಂದರ್ಶನವೊಂದರಲ್ಲಿ ಅವರೇ ಹೇಳಿದ್ದು, ಆ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ.

ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಕನ್ನಡಕ್ಕೆ ಅನೇಕರ ಮೆಚ್ಚುಗೆ

ಕೆಲ ದಿನಗಳ ಹಿಂದೆ ಪತ್ರಕರ್ತ ಮಹೇಶ್ ಪುಚಪಾಡಿಯವರು ಶಿವಶ್ರೀ ಅವರು ಕನ್ನಡ ಭಕ್ತಿಗೀತೆ ಹಾಡುವುದನ್ನು ನೋಡಿ ಅದರ ವೀಡಿಯೋವನ್ನು ಹಂಚಿಕೊಳ್ಳುತ್ತಾ ಶಿವಶ್ರೀ ಇಷ್ಟು ಬೇಗ ಕನ್ನಡ ಕಲಿತಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸೋಶಿಯಲ್ ಮೀಡಿಯಾ ಥ್ರೆಡ್‌ನಲ್ಲಿ ಅವರು ಹೀಗೆ ಬರೆದಿದ್ದರು. ದೀಪಾವಳಿಯ ಸಂದರ್ಭ ಬೆಂಗಳೂರಿನ ಗಿರಿನಗರದ ರಾಮಚಂದ್ರಾಪುರ ಮಠದಲ್ಲಿ ಗೋದೀಪ -ದೀಪಾವಳಿ ವಿಶೇಷ ಗೋಪೂಜೆಯ ಸಂದರ್ಭ ಗೋ ಗಾನಾಮೃತವು ಶಿವಶ್ರೀ ಸ್ಕಂದ ಪ್ರಸಾದ್‌ ಅವರಿಂದ ನಡೆದಿತ್ತು.

ಕಳೆದ ವರ್ಷ ಸರಿಸುಮಾರು ಇದೇ ಅವಧಿಯಲ್ಲಿ ಶಿವಶ್ರೀ ಅವರ ಇಂಗ್ಲಿಷ್‌ ಮಾತುಗಳನ್ನು ಕೇಳಿದ್ದೆ. ಇಂದು ಕನ್ನಡದಲ್ಲಿ ಅವರ ಮಾತುಗಳನ್ನು ಕೇಳಿದೆ. ಭಾಷೆಯ ಪ್ರೀತಿ, ಭಾಷೆಯ ಸಂಬಂಧ, ಭಾಷೆಯ ವಿಸ್ತಾರ ಹೀಗೇ.. ಯಾವುದೇ ಭಾಷೆಯ ಮೇಲೆ ದ್ವೇಷ ಇದ್ದರೆ ಕಲಿಯುವುದು ಕಷ್ಟ, ಪ್ರೀತಿ ಇದ್ದರೆ ಅದಾಗಿಯೇ ಒಲಿಯುತ್ತದೆ ಎಂದು ಅವರು ಬರೆದುಕೊಂಡಿದ್ದರು. ಈ ವೀಡಿಯೋದಲ್ಲಿ ಶಿವಶ್ರೀ ಕನ್ನಡ ಭಕ್ತಿಗೀತೆಯನ್ನು ಹಾಡಿ ಕಾರ್ಯಕ್ರಮವನ್ನು ಕೊನೆಗೊಳಿಸುವ ಮೊದಲು ಕನ್ನಡದಲ್ಲೇ ಅಲ್ಲಿ ಅವರಿಗೆ ಹಾಡಲು ಅನುಮತಿ ನೀಡಿದವರಿಗೆ ಧನ್ಯವಾದ ಹೇಳಿದ್ದರು.

ಆದರೆ ಶಿವಶ್ರೀ ಕೇವಲ ಕಡಿಮೆ ಅವಧಿಯಲ್ಲಿ ಕನ್ನಡ ಕಲಿತಿದ್ದು ಹೇಗೆ?

ತಾನು ಸುಲಭವಾಗಿ ಕನ್ನಡ ಕಲಿತಿದ್ದು ಹೇಗೆ ಎಂಬುದನ್ನು ಸ್ವತಃ ಶಿವಶ್ರೀ ಅವರೇ ಸಂದರ್ಶನದಲ್ಲಿ ಹೇಳಿದ್ದಾರೆ. ಶಿವಶ್ರೀ ಅವರು ಸತೀಶ್ ಎಂಬುವವರ ವೀಡಿಯೋ ನೋಡಿ ಕನ್ನಡವನ್ನು ಕಲಿತಿದ್ದಾರಂತೆ. ವೀಡಿಯೋವೊಂದರಲ್ಲಿ ಇದ್ದ ಅವರ ಫೋನ್ ನಂಬರ್‌ಗೆ ಶಿವಶ್ರೀ ಅವರು ಕರೆ ಮಾಡಿ ತನಗೆ ಕನ್ನಡ ಕಲಿಯುವುದಕ್ಕೆ ಆಸಕ್ತಿ ಇದೆ ಎಂದು ತಿಳಿಸಿದರಂತೆ. ಈ ವೇಳೆ ಅವರು ತಮ್ಮ ಕನ್ನಡ ಆನ್‌ಲೈನ್‌ ಕೋರ್ಸ್‌ಗಳು ಇರುವ ಬಗ್ಗೆ ಹೇಳಿ ಅದಕ್ಕೆ ಸೇರುವಂತೆ ಹೇಳಿದರಂತೆ, ಅದರಲ್ಲಿಅವರು ವಾಟ್ಸಾಪ್ ಮೂಲಕ ಗೂಗಲ್ ಮೀಟ್ ಲಿಂಕ್ ಕಳಿಸ್ತಿದ್ದರು. ಅದರ ಮೂಲಕ ಕನ್ನಡ ಕಲಿತೆ, ಭೂತಕಾಲ ಭವಿಷ್ಯಕಾಲದ ವರ್ತಮಾನ ಕಾಲದ ಬಗ್ಗೆ ಅವರು ಸಂಪೂರ್ಣ ವಿವರವಾಗಿ ಪಾಠ ಮಾಡುತ್ತಿದ್ದರು ಎಂದು ಶಿವಶ್ರೀ ಹೇಳಿದ್ದಾರೆ. ಇದೆಲ್ಲದಕ್ಕೂ ಚಾರ್ಟ್ ಸಿದ್ಧಪಡಿಸಿರುತ್ತಾರೆ. ಆ ಚಾರ್ಟ್ ಮಾತ್ರ ಸ್ಕ್ರೀನ್‌ನಲ್ಲಿ ಇರುತ್ತಿತ್ತು. ಅದು ನನಗೆ ತುಂಬಾ ಸಹಾಯ ಮಾಡಿತ್ತು. ಹೀಗಾಗಿಯೇ ನಾನು ಇಷ್ಟು ಬೇಗ ಕನ್ನಡ ಕಲಿತಿದ್ದಾಗಿ ಶಿವಶ್ರೀ ಹೇಳಿದ್ದಾರೆ. ಇಲ್ಲದೇ ಹೋಗಿದ್ದರೆ ನಾನು ಇಷ್ಟು ಬೇಗ ಕನ್ನಡ ಕಲಿಯುವುದಕ್ಕೆ ಸಾಧ್ಯವಾಗ್ತಿರಲಿಲ್ಲ ಎಂದು ಹೇಳಿದ್ದಾರೆ.

ಶಿವಶ್ರೀ ಮಾತಿಗೆ ಸಂದರ್ಶಕರು ಅಚ್ಚರಿಪಟ್ಟಿದ್ದಾರೆ, ನಮ್ಮ ಬೆಂಗಳೂರಿನಲ್ಲಿ ಇಷ್ಟೊಂದು ಜನರಿದ್ದಾರೆ ಯಾರು ಕೂಡ ಕನ್ನಡ ಕಲಿಯಲು ಇಷ್ಟೊಂದು ಆಸಕ್ತಿ ತೋರಿಸಲಿಲ್ಲ, ನಿಮಗೆ ಕನ್ನಡ ಕಲಿಯಬೇಕು ಎಂಬ ಒತ್ತಾಯ ಮನೆಯಲ್ಲಿ ಇತ್ತ ಅಥವಾ ಸ್ವ ಇಚ್ಛೆಯಿಂದ ಕಲಿತಿರೆ ಎಂದು ಕೇಳಿದ್ದಾರೆ. ಅದಕ್ಕೆ ಶಿವಶ್ರೀ ಸ್ವಿಚ್ಛೆಯಿಂದ ಕಲಿತಿದ್ದಾಗಿ ಹೇಳಿದ್ದಾರೆ. ಮನೆಯಲ್ಲಿ ಮಾತನಾಡುವುದಕ್ಕೆ ಸ್ವಲ್ಪ ಸುಲಭವಾಗುತ್ತದೆ. ಅತ್ತೆ ಮಾವನಿಗೆ ಇಂಗ್ಲೀಷ್‌ನಲ್ಲಿ ಮಾತನಾಡಿ ಎಂದು ಹೇಳುವುದಕ್ಕೆ ಆಗುವುದಿಲ್ಲ, ಇಂಗ್ಲೀಷ್‌ನಲ್ಲಿ ಮಾತನಾಡಿದರೆ ಫೀಲಿಂಗ್ ಬರಲ್ಲ ಹೀಗಾಗಿ ಕನ್ನಡ ಕಲಿತಿದ್ದಾಗಿ ಶಿವಶ್ರೀ ಹೇಳಿದ್ದಾರೆ.

ಕನ್ನಡ ಭಾಷೆಯ ಬಗ್ಗೆ ನಿಮಗೇನನಿಸುತ್ತದೆ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಶಿವಶ್ರೀ ಸಂಗೀತಕ್ಕೆ ಬಹಳ ಸ್ಪಷ್ಟವಾದ ಸರಿಯಾದ ಭಾಷೆ ಎಂದರೆ ಅದು ಕನ್ನಡ ಎಂದು ಹೇಳಿದ್ದಾರೆ. ಭಾಷೆ ಅರಿತ ಮೇಲೆ ಕನ್ನಡ ಹಾಡುಗಳೆಲ್ಲಾ ಅರ್ಥ ಆಗ್ತಾ ಇದೆ. ಅದರ ಅರ್ಥ ತಿಳಿಯುತ್ತಿದೆ ಎಂದು ಶಿವಶ್ರೀ ಹೇಳಿದ್ದಾರೆ. ಒಟ್ಟಿನಲ್ಲಿ ಒಂದು ಪದ ಕನ್ನಡ ಮಾತನಾಡಿದರೆ ತಲೆ ಮೇಲೆ ಎತ್ತಿ ಸುತ್ತುವ ಕನ್ನಡಿಗರು ಈಗ ಪ್ರೀತಿಯಿಂದ ಕನ್ನಡ ಕಲಿತ ಶಿವಶ್ರೀ ಅವರನ್ನು ಮೆಚ್ಚದೇ ಇರಲು ಸಾಧ್ಯವೇ ಇಲ್ಲ ಬಿಡಿ.

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಅನೇಕರಿಗೆ ಕನ್ನಡ ಗೊತ್ತಿಲ್ಲ ಹೀಗಿರುವಾಗ ಬೇರೆ ರಾಜ್ಯದಿಂದ ಬಂದು ಕನ್ನಡವನ್ನು ಕನ್ನಡಿಗರಿಗಿಂತ ಸ್ಪಷ್ಟವಾಗಿ ಮಾತನಾಡುತ್ತಿರುವುದು ಅನೇಕರನ್ನು ಖುಷಿಪಡಿಸಿದೆ.

 

 

 

PREV
Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
'63% ಭ್ರಷ್ಟಾಚಾರ' ಹೇಳಿಕೆ ವಿವಾದ: 'ನನ್ನ ಹೇಳಿಕೆ ತಿರುಚಲಾಗಿದೆ' ಉಪಲೋಕಾಯುಕ್ತ ನ್ಯಾ. ವೀರಪ್ಪ ಸ್ಪಷ್ಟನೆ