
ಬೆಂಗಳೂರು (ಅ.22) ಐತಿಹಾಸಿಕ ಬಸವನಗುಡಿ ಕಡಲೇಕಾಯಿ ಪರೀಷೆ ದಿನಾಂಕ ನಿಗದಿ ಮಾಡಲಾಗಿದೆ. ಬೆಂಗಳೂರಿನ ಬಸವನಗುಡಿಯಲ್ಲಿ ನಡೆಯುವ ಅತ್ಯಂತ ಜನಪ್ರಿಯ ಈ ಕಡಲೇಕಾಯಿ ಪರಿಷೇ ಈ ಬಾರಿ ನವೆಂಬರ್ 17 ಹಾಗೂ 18 ರಂದು ನಡೆಯಲಿದೆ. ನಾಳೆ ಮುಜರಾಯಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಅಧಿಕೃತ ದಿನಾಂಕ ಘೋಷಣೆಯಾಗಲಿದೆ. ಐತಿಹಾಸಿಕ ಹಿನ್ನಲೆ ಹೊಂದಿರುವ ಕಡಲೇಕಾಯಿ ಪರಿಷೇ ಬಸವನಗುಡಿ ದೊಡ್ಡಗಣಪತಿ ದೇವಸ್ಥಾನದಲ್ಲಿ ನಡೆಯಲಿದೆ.
ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ಬಸವನಗುಡಿ ಕಡಲೇಕಾಯಿ ಪರಿಷೆ ನಡೆಯಲಿದೆ. ಈ ಬಾರಿ ಇದು ನವೆಂಬರ್ ನವೆಂಬರ್ 17 ರಂದು ಬರಲಿದೆ. ಎರಡು ದಿನಗಳ ಕಾಲ ನಡೆಯಲಿರುವ ಕಡಲೇಕಾಯಿ ಪರೀಷೆ ನವೆಂಬರ್ 17 ಹಾಗೂ 18ಕ್ಕೆ ಆಯೋಜಿಸಲಾಗುತ್ತದೆ.
ಅಕ್ಟೋಬರ್ 23ರಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿ, ಸ್ಥಳೀಯ ಶಾಸಕರು, ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು ಮಹತ್ವದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ಸಭೆಯಲ್ಲಿ ವ್ಯಾಪಾರಿಗಳಿಗೆ ಸುಂಕ ವಿಧಿಸುವ ಬಗ್ಗೆಯೂ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಬೆಂಗಳೂರಿನ ಹಲವು ಐತಿಹಾಸಿಕ ಉತ್ಸವಗಳ ಪೈಕಿ ಕಡಲೇಕಾಯಿ ಪರಿಷೇ ಕೂಡ ಒಂದು. ಬಸನವಗುಡಿ ದೇವಸ್ಥಾನ ಕೇಂದ್ರಿಕೃತವಾಗಿರುವ ಈ ಹಬ್ಬ, ಅತ್ಯಂತ ವಿಶೇಷವಾಗಿದೆ. ಬೆಂಗಳೂರು ಮಹಾನಗರ ಆಗುವ ಮೊದಲು ಅಂದರೆ 16ನೇ ಶತಮಾನಕ್ಕೂ ಮೊದಲು ಬೆಂಗಳೂರಿನ ಈಗಿನ ಬಸವನಗುಡಿ ಸೇರಿದಂತೆ ಸುತ್ತ ಮುತ್ತಲಿನ ಪ್ರದೇಶದಲ್ಲಿ ಅತೀ ಹೆಚ್ಚು ಕಡಲೇಕಾಯಿ ಬೆಳೆಯಲಾಗುತ್ತಿತ್ತು. ಆದರೆ ಬೆಳೆಗಳ ಗದ್ದೆಗಳಿಗೆ ಬಸವ ದಾಳಿ ಮಾಡುತ್ತಿತ್ತು. ಬೆಳೆಯನ್ನು ನಾಶ ಮಾಡುತ್ತಿತ್ತು. ಬಸವನ ಉಪಟಳ ತಡೆಯಲು ಅಂದು ಹಲವು ಪ್ರಯತ್ನಗಳು ನಡೆದಿತ್ತು. ರಾತ್ರಿ, ಬೆಳಗ್ಗೆ ಗದ್ದೆ ಕಾಯುವುದು ಸೇರಿದಂತೆ ಎಲ್ಲಾ ಪ್ರಯತ್ನ ಮಾಡಿ ಗ್ರಾಮಸ್ಥರು ಸೋತು ಹೋಗಿದ್ದರು. ಹೀಗಾಗಿ ರೈತರು ತಮ್ಮ ಬೆಳೆ ರಕ್ಷಿಸಿಕೊಳ್ಳಲು ಮೊದಲ ಬೆಳೆಯನ್ನು ನಂದಿಗೆ (ಬಸವ) ಅರ್ಪಿಸುವ ಸಂಕಲ್ಪ ಮಾಡಿದ್ದರು. ಇದರಂತೆ ಪ್ರತಿ ಮೊದಲ ಬೆಳೆಯನ್ನು ನಂದಿಗೆ ಅರ್ಪಿಸಿ ಪ್ರಾರ್ಥಿಸುವ ಪದ್ಧತಿ ಆರಂಭಗೊಂಡಿತು. ಬಳಿಕ ಬಸವನ ಉಪಟಳವೂ ಕಡಿಮೆಯಾಗಿತ್ತು ಅನ್ನೋದು ಇತಿಹಾಸ. ಬಳಿಕ ಇದೇ ಪ್ರದೇಶದಲ್ಲಿ ಬಸವನ ವಿಗ್ರಹವೊಂದು ಪತ್ತೆಯಾಗಿತ್ತು. ಈ ಮಾಹಿತಿ ಕಂಪೇಗೌಡರಿಗೂ ತಲುಪಿತ್ತು. ಹೀಗಾಗಿ ಕೇಂಪೇಗೌಡರು ನಂದಿ ವಿಗ್ರಹ ಪತ್ತೆಯಾದ ಜಾಗದಲ್ಲಿ ದೇವಾಲಯ ನಿರ್ಮಿಸಿದರು. ಇದೇ ಈಗನ ಬಸವನಗುಡಿ. ಇದೇ ಬಸನವಗುಡಿ ರೈತರು ತಮ್ಮ ಕಡಲೇಕಾಯಿ ಮೊದಲ ಬೆಳೆ ಅರ್ಪಿಸುವ ಪದ್ಧತಿ ಮುಂದುವರಿದಿತ್ತು. ಇದೀಗ ಮಹಾನಗರವಾದರೂ ಪದ್ದತಿ ಮುಂದುವರಿದಿದೆ. ಈಗ ವಿವಿದೆಡೆಗಳಲ್ಲಿ ಬೆಳೆದ ಕಡಲೇಕಾಯಿಗಳು ಈ ಪರಿಷೇಯಲ್ಲಿ ಪ್ರದರ್ಶನ, ಮಾರಾಟಕ್ಕೆ ಲಭ್ಯವಿರುತ್ತದೆ.