ಬೆಂಗಳೂರಿನ ಟೀ ವ್ಯಾಪಾರಿ ಖಾತೆಗೆ 999 ಕೋಟಿ ಜಮೆ; ಯಾಕಾದ್ರು ಹಣ ಬಂತೆಂದು ತಲೆ ಮೇಲೆ ಕೈ ಹೊತ್ತು ಕುಳಿತ ವ್ಯಕ್ತಿ

By Mahmad RafikFirst Published Oct 12, 2024, 12:24 PM IST
Highlights

ಬೆಂಗಳೂರಿನ ಟೀ ವ್ಯಾಪಾರಿಯೊಬ್ಬರ ಖಾತೆಗೆ ₹999 ಕೋಟಿ ಜಮೆಯಾಗಿದ್ದು, ಬ್ಯಾಂಕ್ ಸಿಬ್ಬಂದಿಯ ಎಡವಟ್ಟಿನಿಂದ ಈ ಘಟನೆ ಸಂಭವಿಸಿದೆ. ಹಣ ಜಮೆಯಾದ ಬಳಿಕ ಖಾತೆಯನ್ನು ಸ್ಥಗಿತಗೊಳಿಸಲಾಗಿದ್ದು, ವ್ಯಾಪಾರಿಯ ದೈನಂದಿನ ವ್ಯವಹಾರಗಳಿಗೆ ತೊಂದರೆಯಾಗಿದೆ.

ಬೆಂಗಳೂರು: ಸಿಲಿಕಾನ್ ಸಿಟಿಯ ಟೀ ವ್ಯಾಪಾರಿಯ ಖಾತೆಗೆ ಬರೋಬ್ಬರಿ 999 ಕೋಟಿ ರೂಪಾಯಿ ಜಮೆ ಆಗಿದೆ. ಇದೀಗ ಟೀ ವ್ಯಾಪಾರಿ ಖಾತೆಗೆ ಯಾಕಾದ್ರೂ ಇಷ್ಟು ಹಣ ಬಂತೆಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ದಿ 420 ಡಾಟ್ ಕಾಮ್  ವರದಿ ಪ್ರಕಾರ, ಬೆಂಗಳೂರಿನ ಇಂಡಿಯನ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ ಕ್ಯಾಂಪಸ್‌ನಲ್ಲಿ ಟೀ ವ್ಯಾಪಾರಿ ಎಸ್‌.ಪ್ರಭಾಕರ್ ಖಾತೆಗೆ ಹಣ ಜಮೆಯಾಗಿದೆ. ಹಣ ಜಮೆಯಾಗಿರುವ ಖಾತೆಯಿಂದಲೇ ಪ್ರಭಾಕರ್ ಪ್ರತಿನಿತ್ಯ ವ್ಯವಹಾರ ನಡೆಸುತ್ತಾರೆ. ತಮ್ಮ ಖಾತೆಗೆ 999 ಕೋಟಿ ರೂಪಾಯಿ ಹಣ ಜಮೆಯಾಗಿರುವ ಮೆಸೇಜ ಕಂಡು ಪ್ರಭಾಕರ್ ಒಂದು ಕ್ಷಣ ಶಾಕ್ ಆಗಿದ್ದರು. ಮೊದಲಿಗೆ ಯಾವುದೋ ಫೇಕ್ ಮೆಸೇಜ್ ಅಂತಾನೇ ತಿಳಿದಿದ್ದರು. ನಂತರ ಪರಿಶೀಲಿಸಿದಾಗ ಹಣ ಜಮೆಯಾಗಿರೋದು ದೃಢಪಟ್ಟಿತ್ತು. ಹಣ ಜಮೆಯಾದ ಮರುಕ್ಷಣದಿಂದಲೇ ಪ್ರಭಾಕರ್ ಅವರ ಬ್ಯಾಂಕ್ ಖಾತೆಯನ್ನು ಫ್ರೀಝ್ (ಸ್ಥಗಿತ) ಮಾಡಲಾಗಿದೆ. 

ಎಸ್‌.ಪ್ರಭಾಕರ್ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯನ್ನು ಹೊಂದಿದ್ದು, ಹಣ ಜಮೆಯಾದ ಮರುಕ್ಷಣದಿಂದಲೇ ಯಾವುದೇ ಬ್ಯಾಂಕಿಂಗ್ ವ್ಯವಹಾರ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರಿದೆ ಎಂದು ಪ್ರಭಾಕರ್ ಹೇಳುತ್ತಾರೆ. ವರದಿ ಪ್ರಕಾರ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿಯ ಎಡವಟ್ಟಿನಿಂದ ಪ್ರಭಾಕರ್ ಖಾತೆಗೆ 999 ಕೋಟಿ ರೂ. ಜಮೆಯಾಗಿದೆ. ತಮ್ಮ ತಪ್ಪು ಅರಿವಾಗುತ್ತಿದ್ದಂತೆ ಪ್ರಭಾಕರ್ ಖಾತೆ ಫ್ರೀಝ್ ಮಾಡಲಾಗಿದೆ. 

Latest Videos

200 ರೂಪಾಯಿ ನೋಟ್ ಬ್ಯಾನ್ ಆಗುತ್ತಾ? ಮಾರುಕಟ್ಟೆಯಿಂದ 137 ಕೋಟಿ ಹಿಂಪಡೆದ ಆರ್‌ಬಿಐ

ಎಸ್‌ ಪ್ರಭಾಕರ್ ಇದೇ ಖಾತಯನ್ನು ಪ್ರತಿನಿತ್ಯದ ವ್ಯವಹಾರಕ್ಕೆ ಬಳಸಿಕೊಂಡಿದ್ದಾರೆ. ಗ್ರಾಹಕರು ಪಾವತಿಸುವಮ ಹಣವೆಲ್ಲಾ ಇದೇ ಖಾತೆಗೆ ಜಮೆಯಾಗುತ್ತದೆ. ಇದರಿಂದ ಪ್ರಭಾಕರ್ ವ್ಯಾಪಾರದ ಮೇಲೆ ಪರಿಣಾಮ ಬೀರಿದೆ. ಬ್ಯಾಂಕ್ ಸಿಬ್ಬಂದಿ ಎಲ್ಲಿ ತಪ್ಪಾಗಿದೆ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಪ್ರಭಾಕರ್ ಅವರನ್ನು ಸಹ ಪದೇ ಪದೇ ಬ್ಯಾಂಕ್‌ಗೆ ಅಲೆದಾಡಿಸುತ್ತಿದೆ. ವ್ಯಾಪಾರ ಬಿಟ್ಟು ಬ್ಯಾಂಕ್‌ಗೆ ಅಲೆದಾಡುವ ಪರಿಸ್ಥಿತಿ ಬಂದಿರೋ ಕಾರಣ ಹಣ ಯಾಕಾದರೂ ಬಂತು ಎಂದು ಪ್ರಭಾಕರ್ ತಲೆಮೇಲೆ ಕೈ ಹೊತ್ತು ಕುಳಿತಿದ್ದಾರೆ.  ಇದೀಗ ಬ್ಯಾಂಕ್ ಸಿಬ್ಬಂದಿ ಪ್ರಭಾಕರ್ ಅವರ ಬಳಿ ಆಧಾರ್ ಕಾರ್ಡ್ ಸೇರಿದಂತೆ ಹಲವು ದಾಖಲೆಗಳನ್ನು ಕೇಳುತ್ತಿದ್ದಾರೆ.

ಘಟನೆ ನಡೆದ ಮೂರು ದಿನ ಕಳೆದರೂ ಬ್ಯಾಂಕ್ ನಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ. ಈ ವಿಷಯವನ್ನು ಪ್ರಭಾಕರ್, ಆರ್ಥಿಕ ತಜ್ಞರೊಬ್ಬರ ಗಮನಕ್ಕೆ ತಂದಾಗ ನೇರವಾಗಿ ರಿಸರ್ವ್ ಬ್ಯಾಂಕ್‌ ಸಿಬ್ಬಂದಿಯನ್ನು ಸಂಪರ್ಕಿಸಬೇಕು. ಸದ್ಯ ದಸರಾ ಹಾಗೂ ಶನಿವಾರ-ಭಾನುವಾರ ರಜೆ ಇರೋ ಕಾರಣ ಸೋಮವಾರ ರಿಸರ್ವ್ ಬ್ಯಾಂಕಿಗೆ ಮೇಲ್ ಕಳುಹಿಸಲು ಪ್ರಭಾಕರ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. 

ಒಂದೇ ಅಂಗಡಿಯಲ್ಲಿ ಈ 5 ಬ್ಯುಸಿನೆಸ್‌ ಆರಂಭಿಸಿದ್ರೆ ನಷ್ಟ ನಿಮ್ಮ ಹತ್ರವೂ ಸುಳಿಯಲ್ಲ, ಪ್ರತಿದಿನ ಝಣಝಣ ಕಾಂಚಾಣ

click me!