Tenant Rights: ಬಾಡಿಗೆ ಮನೆಯಲ್ಲಿ ವಾಸಿಸುವಾಗ ಬಾಡಿಗೆದಾರರು ಹಲವು ಹಕ್ಕುಗಳನ್ನು ಹೊಂದಿರುತ್ತಾರೆ. ಈ ಲೇಖನದಲ್ಲಿ, ಖಾಸಗಿತನದ ಹಕ್ಕು, ಅನಧಿಕೃತ ಪ್ರವೇಶದಿಂದ ರಕ್ಷಣೆ, ಬಾಡಿಗೆ ಹೆಚ್ಚಳದ ಮೇಲಿನ ನಿಯಂತ್ರಣ ಮತ್ತು ಇತರ ಪ್ರಮುಖ ಹಕ್ಕುಗಳ ಕುರಿತು ತಿಳಿಸಲಾಗಿದೆ.
ಬೆಂಗಳೂರು: ಭಾರತದಲ್ಲಿ ಬಹುತೇಕ ಜನರು ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ. ಮನೆಯನ್ನು ಬಾಡಿಗೆಗೆ ನೀಡುವ ಮೊದಲೇ ಮಾಲೀಕರು ನೂರಾರು ಷರತ್ತುಗಳನ್ನು ವಿಧಿಸುತ್ತಾರೆ. ಬಾಡಿಗೆಗೆ ಬಂದ ನಂತರೂ ಮಾಲೀಕರು, ಅದನ್ನ ಮಾಡಬೇಡಿ, ಇದನ್ನ ತಿನ್ನಬೇಡಿ ಅಂತ ಹೇಳುತ್ತಲೇ ಇರುತ್ತಾರೆ. ಬಾಡಿಗೆ ಒಪ್ಪಂದ ಪತ್ರದಲ್ಲಿ ನಮೂದಿಸಿದ ನಿಯಮಗಳನ್ನು ಹೊರತುಪಡಿಸಿಯೂ ಹೆಚ್ಚುವರಿ ಷರತ್ತುಗಳನ್ನು ಹಾಕುತ್ತಾರೆ. ಮಹಾನಗರಗಳಲ್ಲಿ ಬಾಡಿಗೆ ಒಪ್ಪಂದ ಪತ್ರ ಕಡ್ಡಾಯವಾಗಿದ್ದು, ಅದರಲ್ಲಿರುವ ನಿಯಮಗಳನ್ನು ಬಾಡಿಗೆದಾರ ಮತ್ತು ಮನೆ ಮಾಲೀಕ ಕಡ್ಡಾಯವಾಗಿ ಪಾಲಿಸಬೇಕು. ಬಾಡಿಗೆದಾರನ ಸಂಪೂರ್ಣ ಮಾಹಿತಿಯನ್ನು ಮನೆ ಮಾಲೀಕ ಪಡೆದುಕೊಳ್ಳಬೇಕಾಗುತ್ತದೆ. ಇದೆಲ್ಲದರ ಜೊತೆ ಬಾಡಿಗೆದಾರು ಸಹ ಕೆಲವೊಂದು ಅಧಿಕಾರಗಳನ್ನು ಹೊಂದಿರುತ್ತಾರೆ. ಆ ಅಧಿಕಾರಗಳು ಏನು ಎಂಬುದರ ಮಾಹಿತಿ ಈ ಲೇಖನದಲ್ಲಿದೆ.
1.ಖಾಸಗಿತನದ ಅಧಿಕಾರ
ಮನೆ ಬಾಡಿಗೆ ಪಡೆದುಕೊಂಡ ನಂತರ ಅದು ಬಾಡಿಗೆದಾರನ ವಾಸಸ್ಥಾನವಾಗಿರುತ್ತದೆ. ಮನೆಯ ಮಾಲೀಕರು, ಬಾಡಿಗೆದಾರನ ಖಾಸಗಿತನಕ್ಕೆ ಧಕ್ಕಯನ್ನುಂಟು ಮಾಡಬಾರದು. ನಿಮ್ಮ ದಿನನಿತ್ಯದ ಕೆಲಸಗಳ ಮೇಲೆ ನಿರ್ಬಂಧ ಹೇರುವಂತಿಲ್ಲ. ಅಪ್ಪಣೆ ಇಲ್ಲದೇ ಮನೆಯೊಳಗೆ ಬಂದು ನಿಮಗೆ ಯಾವುದೇ ತೊಂದರೆ ಮಾಡಬಾರದು.
2.ಅನಧಿಕೃತ ಪ್ರವೇಶ
ಪದೇ ಪದೇ ಮನೆಯೊಳಗೆ ನುಗ್ಗಿ ತೊಂದರೆಯನ್ನುಂಟು ಮಾಡಬಾರದು. ಮನೆಯೊಳಗೆ ಪ್ರವೇಶಕ್ಕೂ ಮುನ್ನ ಬಾಡಿಗೆದಾರನ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಹಾಗೆಯೇ ದಿಢೀರ್ ಅಂತ ಮನೆ ಖಾಲಿ ಮಾಡುವಂತೆ ಹೇಳುವಂತಿಲ್ಲ. ಮನೆ ಖಾಲಿ ಮಾಡುವಂತೆ ಕನಿಷ್ಠ 15 ದಿನದ ನೋಟಿಸ್ ನೀಡಬೇಕು. ಬಾಡಿಗೆದಾರ ಹಲವು ತಿಂಗಳಿನಿಂದ ಬಾಡಿಗೆ ಹಣ ಪಾವತಿ ಮಾಡದಿದ್ದರೆ ಆ ಸಂದರ್ಭದಲ್ಲಿ ಮಾಲೀಕ ನಿಮ್ಮನ್ನು ಮನೆಯಿಂದ ಹೊರಗೆ ಹಾಕಬಹುದು.
3.ಬಾಡಿಗೆ ದರ ಹೆಚ್ಚಳ
ಮನೆಯ ಮಾಲೀಕ ಮನಸೋಯಿಚ್ಛೆ ಬಾಡಿಗೆ ದರ ಹೆಚ್ಚಳ ಮಾಡುವಂತಿಲ್ಲ. ಬಾಡಿಗೆದಾರರ ಜೊತೆ ಚರ್ಚಿಸಿಯೇ ದರ ಏರಿಕೆ ಮಾಡಬೇಕು. ಮಾರುಕಟ್ಟೆ ದರದಲ್ಲಿಯೇ ಬಾಡಿಗೆ ಬೆಲೆ ನಿಗಧಿಪಡಿಸಬೇಕು. ಮನೆ ಮಾಲೀಕ ಬಾಡಿಗೆ ದರ ಹೆಚ್ಚಳ ಮಾಡುವ ಮೊದಲು ಬಾಡಿಗೆದಾರನಿಗೆ ಮೂರು ತಿಂಗಳ ನೋಟಿಸ್ ನೀಡಬೇಕು.
4.ಬಾಡಿಗೆ ನಿಯಂತ್ರಣ ಅಧಿನಿಯಮ, 1948
ಭಾರತ ಸರ್ಕಾರ 1948ರ ಬಾಡಿಗೆ ನಿಯಂತ್ರಣ ಅಧಿನಿಯಮ ಪಾಸ್ ಮಾಡಿದೆ. ಈ ನಿಯಮದಲ್ಲಿ ಮಾಲೀಕ ಮತ್ತು ಬಾಡಿಗೆದಾರನ ಹಕ್ಕುಗಳ ಬಗ್ಗೆ ವಿವರಿಸಲಾಗಿದೆ. ಇಬ್ಬರಲ್ಲಿ ಯಾರು ಶೋಷಣೆಗೆ ಒಳಗಾಗದಂತೆ ನೋಡಿಕೊಳ್ಳುವುದು ಈ ಅಧಿನಿಯಮದ ಉದ್ದೇಶವಾಗಿದೆ. ಈ ಕಾಯಿದೆ ರಾಜ್ಯದಿಂದ ರಾಜ್ಯಕ್ಕೆ ಕೊಂಚ ವಿಭಿನ್ನವಾಗಿದ್ದು, ಮೂಲ ರಚನೆ ಒಂದೇ ಆಗಿರುತ್ತದೆ. ಇದರಲ್ಲಿ ಮಾಲೀಕ ಮತ್ತು ಬಾಡಿಗೆದಾರನಿಗೆ ಕೆಲವು ನಿಯಮಗಳನ್ನು ನಿಗಧಿಪಡಿಸಲಾಗಿದೆ. ಈ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮನೆ ಬಾಡಿಗೆ ಪಡೆಯುವ ಮುನ್ನ ಲಿಖಿತ ಒಪ್ಪಂದಕ್ಕೆ ಸಹಿ ಹಾಕಬೇಕು.
ಟೆಕ್ಕಿಗಳು ಬೆಂಗಳೂರು ಬಿಡುತ್ತಿರೋದ್ಯಾಕೆ? ಬೇಸರವಾಯ್ತಾ ಗಾರ್ಡನ್ ಸಿಟಿ!
5. ಮೂಲಭೂತ ಸೌಕರ್ಯಗಳ ಹಕ್ಕು
ಬಾಡಿಗೆದಾರನಿಗೆ ಮಾಲೀಕ ಮೂಲಭೂತ ಸೌಕರ್ಯಗಳನ್ನು ಕಡ್ಡಾಯವಾಗಿ ಒದಗಿಸಬೇಕು. ಮನೆಯನ್ನು ಬಾಡಿಗೆಗೆ ಪಡೆದಾಗ, ಮನೆ ಮಾಲೀಕರಿಂದ ನೀರು, ವಿದ್ಯುತ್, ಪಾರ್ಕಿಂಗ್ ಮುಂತಾದ ಸೌಲಭ್ಯಗಳನ್ನು ಕೇಳುವ ಹಕ್ಕನ್ನು ಬಾಡಿಗೆದಾರ ಹೊಂದಿರುತ್ತಾನೆ. ಈ ಸೌಲಭ್ಯಗಳನ್ನು ಒದಗಿಸಲು ಮಾಲೀಕ ನಿರಾಕರಿಸುವಂತಿಲ್ಲ. ಬಾಡಿಗೆ ನೀಡಿದ ಬಳಿಕ ಸೌಲಭ್ಯ ಕಡಿತಗೊಳಿಸಿದರೆ ಬಾಡಿಗೆದಾರ ಕಾನೂನಿನ ಸಹಾಯ ಪಡೆದುಕೊಳ್ಳಬಹುದು.
6.ನಿರ್ವಹಣೆ ಮತ್ತು ಭದ್ರತಾ ಠೇವಣಿ
ಬಾಡಿಗೆದಾರರಾಗಿ ಮನೆಯ ನಿರ್ವಹಣೆ ಜವಾಬ್ದಾರಿ ಮಾಲೀಕನದ್ದು ಆಗಿರುತ್ತದೆ ಮನೆಯ ದುರಸ್ತಿ ಮತ್ತು ನಿರ್ವಹಣೆಯ ವೆಚ್ಚವನ್ನು ಮನೆಯ ಮಾಲೀಕರು ಸ್ವತಃ ಭರಿಸಬೇಕಾಗುತ್ತದೆ. ಬಾಡಿಗೆಗೂ ಮುನ್ನ ನೀಡಿದ ಠೇವಣಿಯನ್ನು ಮಾಲೀಕ ಸಂಪೂರ್ಣವಾಗಿ ಹಿಂದಿರುಗಿಸಬೇಕು. ಒಂದು ವೇಳೆ ಅದರಲ್ಲಿ ಹಣ ಕಡಿತಗೊಳಿಸದ್ರೆ ಸೂಕ್ತ ಕಾರಣ ನೀಡಬೇಕು.
7.ಲಿಖಿತ ಒಪ್ಪಂದ
ಬಾಡಿಗೆಗೆ ಮನೆಯನ್ನು ತೆಗೆದುಕೊಳ್ಳುವಾಗ ಲಿಖಿತ ಒಪ್ಪಂದ ಮಾಡಿಕೊಳ್ಳೋದು ಬಹುಮುಖ್ಯವಾಗಿದೆ. ಒಪ್ಪಂದ ಪತ್ರ ಇಬ್ಬರ ಮಾತುಗಳಿಗೆ ಪುರಾವೆ ಆಗಿರುತ್ತದೆ. ಬಾಡಿಗೆ, ಠೇವಣಿ, ನಿರ್ವಹಣೆ ಸೇರಿದಂತೆ ಎಲ್ಲಾ ನಿಯಮಗಳನ್ನು ಒಪ್ಪಂದ ಪತ್ರದಲ್ಲಿ ದಾಖಲಿಸಬೇಕು.
ಅಮೆರಿಕಕ್ಕಿಂತ ಸ್ವಿಜರ್ಲೆಂಡ್‌ನಲ್ಲಿಯೇ ಹೆಚ್ಚು ಮಿಲಿಯನೇರ್‌ಗಳೇಕೆ? ಇಲ್ಲಿದೆ ರಹಸ್ಯ!