ಸೈಬರ್ ಆತಂಕವನ್ನು ಎದುರಿಸಲು ಸಜ್ಜಾಗಿ: ಆರ್.ಕೆ. ಸಿನ್ಹಾ!

By Web DeskFirst Published Nov 14, 2019, 5:57 PM IST
Highlights

'ಭವಿಷ್ಯದಲ್ಲಿ ಸೈಬರ್ ಅಪರಾಧದ ಹೆಚ್ಚಳದ ಆತಂಕ'| ರಾಜ್ಯಸಭಾ ಸದಸ್ಯ ಆರ್.ಕೆ. ಸಿನ್ಹಾ ಕಳವಳ| 'ಸೈಬರ್ ಅಪರಾಧ ದೇಶದ ಭದ್ರತೆಗೆ ಬೆದರಿಕೆಯೊಡ್ಡುವುದು ನಿಶ್ಚಿತ'| ಐಐಎಸ್ಎಸ್ಎಂ 29 ನೇ ಅಂತರರಾಷ್ಟ್ರೀಯ ಸಮಾವೇಶ| 'ಹೊಸ ಸವಾಲುಗಳನ್ನು ಸ್ವೀಕರಿಸಲು  ಹಾಗೂ ಸೈಬರ್ ಆತಂಕವನ್ನು ಎದುರಿಸಲು ಸಜ್ಜಾಗಿ'|

ಬೆಂಗಳೂರು(ನ.14): ಭವಿಷ್ಯದಲ್ಲಿ ಸೈಬರ್ ಅಪರಾಧದ ಹೆಚ್ಚಳದ ಕುರಿತು ರಾಜ್ಯಸಭಾ ಸದಸ್ಯ ಆರ್.ಕೆ. ಸಿನ್ಹಾ ಕಳವಳ ವ್ಯಕ್ತಪಡಿಸಿದ್ದಾರೆ. ಸೈಬರ್ ಅಪರಾಧ ದೇಶದ ಭದ್ರತೆಗೆ ಬೆದರಿಕೆಯೊಡ್ಡುವುದು ನಿಶ್ಚಿತ ಎಂದು ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.

ಕೂಡಂಕುಲಂ ಜತೆಗೆ ಇಸ್ರೋ ಕಂಪ್ಯೂಟರ್‌ ಕೂಡ ಹ್ಯಾಕ್‌?

ಅಂತರರಾಷ್ಟ್ರೀಯ ಭದ್ರತಾ ಮತ್ತು ಸುರಕ್ಷತೆ ನಿರ್ವಹಣಾ ಸಂಸ್ಥೆ (ಐಐಎಸ್ಎಸ್ಎಂ)ಯ 29 ನೇ ಸಮಾವೇಶದದಲ್ಲಿ ಉದ್ಘಾಟನಾ ಭಾಷಣ ಮಾಡಿದ ಸಿನ್ಹಾ, ಸೈಬರ್ ಆತಂಕವನ್ನು ಎದುರಿಸಲು ದೇಶ ಸಜ್ಜಾಗಬೇಕಿದ್ದು, ಈ ನಿಟ್ಟಿನಲ್ಲಿ ಆರಂಭದಿಂದಲೇ ಎಚ್ಚರಿಕೆಯಿಂದ ಇರುವುದು ಒಳಿತು ಎಂದು ಸಲಹೆ ನೀಡಿದರು.

ಸೈಬರ್ ಕ್ಷೇತ್ರದಲ್ಲಿನ ಹೊಸ ಸವಾಲುಗಳನ್ನು ಸ್ವೀಕರಿಸಲು  ಹಾಗೂ ಸೈಬರ್ ಆತಂಕವನ್ನು ಎದುರಿಸಲು ಸಜ್ಜಾಗುವಂತೆ ಸೈಬರ್ ಭದ್ರತಾ ವೃತ್ತಿಪರರಿಗೆ ಸಿನ್ಹಾ ಕರೆ ನೀಡಿದ್ದಾರೆ. 

ಕೂಡಂಕುಳಂ ಅಣು ವಿದ್ಯುತ್‌ ಘಟಕದ ಮೇಲೆ ಸೈಬರ್‌ ದಾಳಿ ವದಂತಿ, ಆತಂಕ

ಈ ವೇಳೆ ಮಾತನಾಡಿದ ಐಐಎಸ್ಎಸ್ಎಂ ಸಂಸ್ಥಾಪಕ ಅಧ್ಯಕ್ಷ, ಭದ್ರತೆ ವಿಷಯದಲ್ಲಿ ಸೈಬರ್ ಅಪರಾಧವನ್ನು ನಿಯಂತ್ರಿಸುವ ತುರ್ತು ಅಗತ್ಯತೆಯನ್ನು ಒತ್ತಿ ಹೇಳಿದರು.

click me!