ವೋಡ್ಕಾ ಕುಡಿಸಿ ಕಾರಿನಲ್ಲೇ ಅತ್ಯಾಚಾರ ಮಾಡಿದ ವೈದ್ಯ..!

By Kannadaprabha News  |  First Published Nov 14, 2019, 9:53 AM IST

ಖಾಸಗಿ ಆಸ್ಪತ್ರೆಯ ವೈದ್ಯ ಮೇಲ್ವಿಚಾರಕನೊಬ್ಬ ವೈದ್ಯೆಯನ್ನು ಫ್ಲಾಟ್‌ಗೆ ಕರೆಸಿಕೊಂಡು ಬಲವಂತವಾಗಿ ವೋಡ್ಕಾ ಕುಡಿಸಿ ಅತ್ಯಾಚಾರ ನಡೆಸಿರುವ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಜೆ.ಪಿ.ನಗರದಲ್ಲಿರುವ ಖಾಸಗಿ ಆಸ್ಪತ್ರೆಯ ವೈದ್ಯ ಮೇಲ್ವಿಚಾರಕ ಶ್ರೀಧರ್ ಶ್ರೀನಿವಾಸನ್ ಅವರ ವಿರುದ್ಧ ದೂರು ದಾಖಲಾಗಿದೆ.


ಬೆಂಗಳೂರು(ನ.14): ವಿವಾಹವಾಗುವುದಾಗಿ ನಂಬಿಸಿ ಖಾಸಗಿ ಆಸ್ಪತ್ರೆಯ ಮೇಲ್ವಿಚಾರಕ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಿ ವೈದ್ಯೆಯೊಬ್ಬರು ಕೋಣನಕುಂಟೆ ಪೊಲೀಸರಿಗೆ ದೂರು ನೀಡಿದ್ದಾರೆ.ಜೆ.ಪಿ.ನಗರದಲ್ಲಿರುವ ಖಾಸಗಿ ಆಸ್ಪತ್ರೆಯ ವೈದ್ಯ ಮೇಲ್ವಿಚಾರಕ ಶ್ರೀಧರ್ ಶ್ರೀನಿವಾಸನ್ ಅವರ ವಿರುದ್ಧ ದೂರು ದಾಖಲಾಗಿದೆ.

ಜೆ.ಪಿ.ನಗರದ ನಿವಾಸಿ ವೈದ್ಯೆ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದ ಎಂದು ಪೊಲೀಸರು ಹೇಳಿದ್ದಾರೆ. ಶ್ರೀಧರ್ ಶ್ರೀನಿವಾಸನ್ 2018ರ ಆ.8ರಂದು ಅಂಜನಾಪುರದ ಆನಂದ ಸೋಮು ಪ್ರೆಸ್ಟೀನ್ ಅಪಾರ್ಟ್‌ಮೆಂಟ್‌ನಲ್ಲಿರುವ ತಮ್ಮ ಫ್ಲ್ಯಾಟ್‌ಗೆ ಮೆಡಿಸಿನ್ ವಿಚಾರ
ವಾಗಿ ಚರ್ಚಿಸಬೇಕು ಎಂದು ಕರೆಸಿಕೊಂಡಿದ್ದರು.

Tap to resize

Latest Videos

undefined

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ : ಮತ ಎಣಿಕೆ ಆರಂಭ.

ಬಳಿಕ ಬಲವಂತವಾಗಿ ವೋಡ್ಕಾ ಕುಡಿಸಿ ಅತ್ಯಾಚಾರ ಎಸಗಿದರು. ನ.೧೨ರಂದು ಮಧ್ಯಾಹ್ನ ೧೨ರ ಸುಮಾರಿಗೆ ತಮ್ಮ ಮನೆ ಎದುರಿಗೇ ಅವರದ್ದೇ ಕಾರಿನಲ್ಲಿ ಕೂರಿಸಿ
ಕೊಂಡು ಅತ್ಯಾಚಾರ ಎಸಗಿದ್ದಾರೆ ಎಂದು ದೂರಿದ್ದಾರೆ.

'15 ದಿನದಲ್ಲಿ ತನಗೆ ಪ್ರಮೋಶನ್ ಸಿಕ್ಕರೂ ಅಚ್ಚರಿಯಿಲ್ಲ'

click me!