ಬೆಂಗಳೂರು ವಿದ್ಯಾರ್ಥಿಗಳಿಗೆ 'ಕಾಕ್ರೋಚ್ ಜನತಾ ಪಾರ್ಟಿ - ಕಾಂಗ್ರೆಸ್ ಎರಡೂ ಒಂದೇ' ಎಂದ ಪ್ರಿಯಾಂಕ್ ಖರ್ಗೆ!

Published : Oct 15, 2026, 05:28 PM IST
Priyank Kharge

ಸಾರಾಂಶ

ಬೆಂಗಳೂರಿನಲ್ಲಿ ನೂತನ ಟ್ರಾಫಿಕ್ ಪಾರ್ಕ್ ಗುದ್ದಲಿ ಪೂಜೆ ವೇಳೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಸಚಿವ ಪ್ರಿಯಾಂಕ್ ಖರ್ಗೆ, ಕಾಕ್ರೋಚ್ ಜನತಾ ಪಾರ್ಟಿ ಮತ್ತು ಕಾಂಗ್ರೆಸ್ ಎರಡೂ ಒಂದೇ ಎಂದು ಅಚ್ಚರಿ ಮೂಡಿಸಿದರು. ಇದೇ ವೇಳೆ ರಸ್ತೆ ಸುರಕ್ಷತೆಗಾಗಿ 20 ಹೋಂಡಾ ಗಸ್ತು ಬೈಕ್‌ಗಳಿಗೆ ಹಸಿರು ನಿಶಾನೆ ತೋರಲಾಯಿತು.

ಬೆಂಗಳೂರು (ಅ.15): ಕಾಕ್ರೋಚ್, ಕಾಕ್ರೋಚ್ ಎಂದು ಕೂಗಿದ ವಿದ್ಯಾರ್ಥಿಗಳಿಗೆ, 'ಕಾಕ್ರೋಚ್ ಜನತಾ ಪಾರ್ಟಿ ಮತ್ತು ಕಾಂಗ್ರೇಸ್ ಎರಡೂ ಒಂದೇ' ಎಂದು ಗೃಹ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ನಡೆದ ಟ್ರಾಫಿಕ್ ಪಾರ್ಕ್ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, 'ವಿಧ್ಯಾರ್ಥಿಗಳಿಗೆ ನೀವೆಲ್ಲ ಜೆನ್ ಝಿ (Gen-Z) ಗಳಿದ್ದೀರಾ' ಎಂದು ಎಂದು ಯುವ ಸಮೂಹವನ್ನು ಹುರಿದುಂಬಿಸಿದರು. ಇದೇ ವೇಳೆ ಕಾಂಗ್ರೇಸ್ ಜನತಾ ಪಾರ್ಟಿ ನಾ ಅಥವಾ ಕಾಕ್ರೋಚ್ ಜನತಾ ಪಾರ್ಟಿನಾ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಯಾವುದೇ ವಿದ್ಯಾರ್ಥಿಗಳು ಉತ್ತರ ಕೊಡದೇ ಸುಮ್ಮನಿದ್ದಾಗ, 'ಹೆದರಬೇಡಿ ನೀಮ್ಮನ್ಯಾರು ಇಲ್ಲಿ ಅರೆಸ್ಟ್‌ ಮಾಡಲ್ಲ' ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಈ ವೇಳೆ ಅಲ್ಲೆ ನೆರೆದಿದ್ದ ಬಹುತೇಕ ವಿಧ್ಯಾರ್ಥಿಗಳು ಕಾಕ್ರೋಚ್.., ಕಾಕ್ರೋಚ್.. ಎಂದು ಕೂಗಿದರು. ಇನ್ನು ಕೆಲವು ವಿದ್ಯಾರ್ಥಿಗಳು ಕಾಂಗ್ರೆಸ್.., ಕಾಂಗ್ರೆಸ್ ಎಂದು ಘೋಷಣೆಗಳನ್ನು ಕೂಗಿದ್ದರು. ಇದೇ ವೇಳೆ ನೀವ್ಯಾರೂ ಇಲ್ಲಿ ಇಬ್ಭಾಗವಾಗಿ ಕೂಬೇಡಿ, "ಕಾಕ್ರೋಚ್ ಜನತಾ ಪಾರ್ಟಿ ಮತ್ತು ಕಾಂಗ್ರೇಸ್ ಜನತಾ ಪಾರ್ಟಿ ಎರಡೂ ಒಂದೆ" ಎಂದು ಹೇಳಿದರು.

20 ಹೋಂಡಾ ಗಸ್ತು ಮೋಟಾರ್‌ಸೈಕಲ್‌ಗಳಿಗೆ ಹಸಿರು ನಿಶಾನೆ

ಬೆಂಗಳೂರು ನಗರದ ಸಂಚಾರ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಲು ಥಣಿಸಂದ್ರದಲ್ಲಿರುವ ಸಂಚಾರ ತರಬೇತಿ ಮತ್ತು ರಸ್ತೆ ಸುರಕ್ಷತಾ ಸಂಸ್ಥೆಯಲ್ಲಿ (Traffic Training and Road Safety Institute) ಹೊಸ ಟ್ರಾಫಿಕ್ ಪಾರ್ಕ್ ನಿರ್ಮಾಣಕ್ಕೆ ಅಧಿಕೃತವಾಗಿ ಶಂಕುಸ್ಥಾಪನೆ ನೆರವೇರಿಸಲಾಯಿತು. ಹೋಂಡಾ ಇಂಡಿಯಾ ಫೌಂಡೇಶನ್ (Honda India Foundation) ಸಹಯೋಗದೊಂದಿಗೆ ಈ ನೂತನ ಟ್ರಾಫಿಕ್ ಪಾರ್ಕ್ ನಿರ್ಮಾಣಗೊಳ್ಳುತ್ತಿದ್ದು, ಇದರೊಂದಿಗೆ ಬೆಂಗಳೂರು ಸಂಚಾರ ಪೊಲೀಸರ (Bengaluru Traffic Police) ಆನ್-ಗ್ರೌಂಡ್ ಮೊಬಿಲಿಟಿ ಮತ್ತು ತುರ್ತು ಪ್ರತಿಕ್ರಿಯೆಯನ್ನು ಬಲಪಡಿಸಲು ಫೌಂಡೇಶನ್ ಕೊಡುಗೆಯಾಗಿ ನೀಡಿದ 20 ಹೋಂಡಾ ಗಸ್ತು ಮೋಟಾರ್‌ಸೈಕಲ್‌ಗಳಿಗೆ ಹಸಿರು ನಿಶಾನೆ ತೋರಿಸಲಾಯಿತು.

ಮಕ್ಕಳಿಗೆ ರಸ್ತೆ ಸುರಕ್ಷತಾ ಪಾಠ:

ಈ ಹೊಸ ಟ್ರಾಫಿಕ್ ಪಾರ್ಕ್ ಮಕ್ಕಳು ಮತ್ತು ಸಾರ್ವಜನಿಕರಿಗೆ ಪ್ರಾಯೋಗಿಕವಾಗಿ ರಸ್ತೆ ಸುರಕ್ಷತೆಯನ್ನು ಕಲಿಸುವ ಕಲಿಕಾ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಮಾದರಿ ರಸ್ತೆಗಳು, ಸಿಗ್ನಲ್‌ಗಳು, ಸೂಚನಾ ಫಲಕಗಳು ಮತ್ತು ಜೀಬ್ರಾ ಕ್ರಾಸಿಂಗ್‌ಗಳನ್ನು ಬಳಸಿಕೊಂಡು ಮಕ್ಕಳಿಗೆ ಮತ್ತು ನಾಗರಿಕರಿಗೆ ಸುರಕ್ಷಿತ ರಸ್ತೆ ನಡವಳಿಕೆಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಈ ಕಾರ್ಯಕ್ರಮದ ವೇಳೆ ರಸ್ತೆ ಸುರಕ್ಷತೆಗಾಗಿ ವಿದ್ಯಾರ್ಥಿಗಳ ಸಂಘದ (SARS) ಯುವ ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರೊಂದಿಗೆ ಸಂವಾದ ನಡೆಸಲಾಯಿತು. ಉತ್ತಮ ರಸ್ತೆ ಶಿಷ್ಟಾಚಾರಗಳು ಮತ್ತು ಬೆಂಗಳೂರಿನ ರಸ್ತೆಗಳನ್ನು ಹೆಚ್ಚು ಸುರಕ್ಷಿತವಾಗಿಸುವಲ್ಲಿ ನಮ್ಮಲ್ಲಿ ಪ್ರತಿಯೊಬ್ಬರ ಪಾತ್ರವೇನು ಎಂಬುದರ ಕುರಿತು ಚರ್ಚಿಸಲಾಯಿತು.

ನಾಗರಿಕರು ಹಾಗೂ ಉದ್ಯಮಗಳ ಸಹಕಾರ ಅಗತ್ಯ:

ಬೆಂಗಳೂರಿನ ಸಂಚಾರ ಸವಾಲುಗಳನ್ನು ಎದುರಿಸಲು ಸರ್ಕಾರ, ಉದ್ಯಮಗಳು ಮತ್ತು ನಾಗರಿಕರ ನಡುವೆ ಆಳವಾದ ಸಹಕಾರದ ಅಗತ್ಯವಿದೆ. ಈ ನಿಟ್ಟಿನಲ್ಲಿ ನಗರ ಚಲನಶೀಲತೆ ಮಿಷನ್ (Urban Mobility Mission) ಅಡಿಯಲ್ಲಿ ಕೈಜೋಡಿಸಲು ಹೋಂಡಾ ಹಾಗೂ ಇತರ ಪಾಲುದಾರರಿಗೆ ಆಹ್ವಾನ ನೀಡಲಾಗಿದೆ. 'ಬೆಂಗಳೂರು ಟ್ರಾಫಿಕ್ ಪೊಲೀಸ್ ಇಲಾಖೆಯು ದೀರ್ಘಕಾಲದಿಂದ 'ಬ್ರಾಂಡ್ ಬೆಂಗಳೂರು' ನಿರ್ಮಾಣಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಸುರಕ್ಷಿತ, ಚುರುಕಾದ ಮತ್ತು ಉತ್ತಮ ಸಂಚಾರ ವ್ಯವಸ್ಥೆಯುಳ್ಳ ನಗರವನ್ನು ನಿರ್ಮಿಸುವ ನಿಟ್ಟಿನಲ್ಲಿ ಉದ್ಯಮಗಳು ನಮ್ಮೊಂದಿಗೆ ಪ್ರಗತಿಯ ಪಾಲುದಾರರಾಗಿ ಕೈಜೋಡಿಸಬೇಕೆಂದು ನಾವು ಬಯಸುತ್ತೇವೆ' ಎಂದು ಈ ಸಂದರ್ಭದಲ್ಲಿ ಅಭಿಪ್ರಾಯಪಡಲಾಯಿತು.

PREV
Read more Articles on
click me!

Recommended Stories

Bengaluru Rains: ಬೇಗ ಮನೆ ಸೇರಿಕೊಳ್ಳಿ, ಮುಂದಿನ 3 ಗಂಟೆ ಬೆಂಗಳೂರಿನಲ್ಲಿ 30-40KM ವೇಗದಲ್ಲಿ ಗಾಳಿ ಮಳೆ ಅಲರ್ಟ್
'ಬುದ್ಧ, ಅಂಬೇಡ್ಕರ್‌ ಹೆಸರಲ್ಲಿ ಲೂಟಿ ಮಾಡಿದ ಬಲಿತ ದಲಿತ ನೀನು..' ಪ್ರಿಯಾಂಕ್‌ ಖರ್ಗೆ ವಿರುದ್ಧ ಟ್ವೀಟ್‌ ಗುದ್ದಿದ ಕುಮಾರಸ್ವಾಮಿ