'ಬುದ್ಧ, ಅಂಬೇಡ್ಕರ್‌ ಹೆಸರಲ್ಲಿ ಲೂಟಿ ಮಾಡಿದ ಬಲಿತ ದಲಿತ ನೀನು..' ಪ್ರಿಯಾಂಕ್‌ ಖರ್ಗೆ ವಿರುದ್ಧ ಟ್ವೀಟ್‌ ಗುದ್ದಿದ ಕುಮಾರಸ್ವಾಮಿ

Published : Oct 15, 2026, 04:55 PM IST
hd kumaraswamy and priyank kharge

ಸಾರಾಂಶ

ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ನಡುವೆ ಎಕ್ಸ್ ಜಾಲತಾಣದಲ್ಲಿ ತೀವ್ರ ವಾಗ್ದಾಳಿ ನಡೆದಿದೆ. ಮೀಸಲಾತಿ ಕ್ಷೇತ್ರ ಬಿಟ್ಟು ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಖರ್ಗೆಗೆ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಬೆಂಗಳೂರು (ಅ.15): ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಡುವಿನ ರಾಜಕೀಯ ವಾಗ್ದಾಳಿ ಇದೀಗ ಸಾಮಾಜಿಕ ಜಾಲತಾಣ 'ಎಕ್ಸ್' (ಟ್ವಿಟರ್) ಅಂಗಳದಲ್ಲೂ ಭಾರಿ ಸಂಚಲನ ಸೃಷ್ಟಿಸಿದೆ. ಪ್ರಿಯಾಂಕ್ ಖರ್ಗೆ ನೀಡಿದ್ದ ಹೇಳಿಕೆಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಅತ್ಯಂತ ಕಟು ಶಬ್ದಗಳಲ್ಲಿ ತಿರುಗೇಟು ನೀಡಿರುವ ಕುಮಾರಸ್ವಾಮಿ, ಸಚಿವರ ವಿರುದ್ಧ ಸರಣಿ ಆಪಾದನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನಡೆದ ಸ್ಟಿಂಗ್ ಸಂಚಿನಲ್ಲಿ ಶಾಮೀಲಾಗಿ, ಅವರ ಪದಚ್ಯುತಿಗೆ ಕಾರಣವಾದ ನೀಲಿಕಣ್ಣಿನ ಮಂತ್ರಿಗಳೇ, ಸ್ಟಿಂಗ್ ಮಾಡಿದ ಅಸಲಿ ಕಿರಾತಕನನ್ನು ಬಿಟ್ಟು ಅಮಾಯಕರ ಬೆನ್ನತ್ತಿರುವ ನೀವು ಗೃಹಮಂತ್ರಿ ಹುದ್ದೆಗೆ ಸಂಪೂರ್ಣ ನಾಲಾಯಕ್ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

'ಬಲಿತ ದಲಿತ' ನೀನು - ಮೀಸಲು ಕ್ಷೇತ್ರ ಬಿಟ್ಟು ಸಾಮಾನ್ಯ ಕ್ಷೇತ್ರದಲ್ಲಿ ಗೆದ್ದು ಬನ್ನಿ!

ಪ್ರಿಯಾಂಕ್ ಖರ್ಗೆ ಹಾಗೂ ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಗುರಿಯಾಗಿಸಿಕೊಂಡು ಟ್ವೀಟ್ ಮಾಡಿರುವ ಕುಮಾರಸ್ವಾಮಿ, "ಸಿದ್ಧಾರ್ಥ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ಲೂಟಿ ಮೇಲೆ ಲೂಟಿ ಮಾಡಿದ 'ಬಲಿತ ದಲಿತ' ನೀನು! ನಿಮಗೆ ಮತ್ತು ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು? ಇನ್ನೆಷ್ಟು ವರ್ಷ ದಲಿತರ ಹೆಸರಿನಲ್ಲಿ ಅಧಿಕಾರ ಅನುಭವಿಸುತ್ತೀರಾ? ನಿಮ್ಮ ಮೀಸಲು ಕ್ಷೇತ್ರವನ್ನು ಕಷ್ಟದಲ್ಲಿರುವ ದುರ್ಬಲ ದಲಿತನಿಗೆ ಬಿಟ್ಟುಕೊಟ್ಟು, ಧೈರ್ಯವಿದ್ದರೆ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಬನ್ನಿ. ಅಸಲಿ ದಲಿತರಿಗೆ ಅಧಿಕಾರ ಕೊಡಿ ಎಂದು ಪ್ರಿಯಾಂಕ್ ಖರ್ಗೆಗೆ ನೇರ ಸವಾಲೆಸೆದಿದ್ದಾರೆ.

ನನ್ನ ಹುಡುಗರನ್ನು ರಕ್ಷಿಸಿಕೊಳ್ಳುವುದು ನನಗೆ ಗೊತ್ತು, ಓಡುವುದು ನನ್ನ ಜಾಯಮಾನವಲ್ಲ!

ಪೊಲೀಸ್ ತನಿಖೆ ಹಾಗೂ ತಮ್ಮ ಬೆಂಬಲಿಗರ ಮೇಲಿನ ಕ್ರಮದ ಕುರಿತು ಪ್ರಸ್ತಾಪಿಸಿರುವ ಅವರು, ನನ್ನ ಹುಡುಗರನ್ನು ರಕ್ಷಿಸಿಕೊಳ್ಳುವುದು ನನಗೆ ಚೆನ್ನಾಗಿ ಗೊತ್ತು. ರಾಜಕೀಯ ಅಖಾಡದಿಂದ ಓಡುವುದು ನನ್ನ ಜಾಯಮಾನವೇ ಅಲ್ಲ! ನಾನು ಕೆಪಿಎಸ್‌ಸಿ ಅಕ್ರಮ ಮತ್ತು ಸ್ಟಿಂಗ್ ಆಪರೇಷನ್ ವಿಷಯಗಳನ್ನು ಪ್ರಸ್ತಾಪಿಸಿದ ಕೂಡಲೇ ನೀವು ಎಷ್ಟೆಷ್ಟು ಕಡೆ ರನ್ನಿಂಗ್ ರೇಸ್ ಮಾಡಿದ್ದೀರಿ ಎಂಬುದು ನನಗೆ ಸ್ಪಷ್ಟವಾಗಿ ಗೊತ್ತಿದೆ. ಈ ಕುಮಾರಸ್ವಾಮಿ ಯಾರ ಮುಂದೆಯೂ ಅಂಗಲಾಚುವವನಲ್ಲ. ನಿಮ್ಮ ಪೊಲೀಸ್ ಕಮಿಷನರ್ ಬಳಿ ನಾನು ಏನು ಹೇಳಿದ್ದೇನೆ ಎಂಬುದನ್ನು ಮೊದಲು ತಿಳಿದುಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ.

ಸ್ಟಿಂಗ್ ಸಾಮ್ರಾಟನ ಸಿಂಡಿಕೇಟ್‌ನಲ್ಲಿ ಗೃಹ ಸಚಿವರೂ ಭಾಗಿ!

ವರದಿಯಲ್ಲಿ ಪ್ರಸ್ತಾಪಿಸಲಾಗಿರುವ ಸ್ಟಿಂಗ್ ಆಪರೇಷನ್ ಮಾಸ್ಟರ್‌ಮೈಂಡ್ ಕುರಿತು ಕಠಿಣ ಆರೋಪ ಮಾಡಿರುವ ಕುಮಾರಸ್ವಾಮಿ, "ನಿಮ್ಮದೇ ಆಡಳಿತ ಪಕ್ಷದ ಹಿರಿಯ ನಾಯಕನನ್ನು ಸ್ಟಿಂಗ್ ಮಾಡಿದ ಆ ನಟೋರಿಯಸ್ 'ಸ್ಟಿಂಗ್‌ಪಿನ್' ಅನ್ನೇ ಬಂಧಿಸಲು ನಿಮಗೆ ಯೋಗ್ಯತೆ ಇಲ್ಲ. ಅವನು ಬಂದು ನಿಮ್ಮ ಡಿಸಿಪಿ ಕಚೇರಿಯಲ್ಲಿ ಅವರ ಮುಂದೆಯೇ ಕಾಲು ಮೇಲೆ ಕಾಲು ಹಾಕಿ ಕೂರುತ್ತಾನೆ. ನಿಮ್ಮ ಇಲಾಖೆಯ ನಿವೃತ್ತ ಐಪಿಎಸ್ (IPS) ಅಧಿಕಾರಿಗೆ ಕೊಲೆ ಬೆದರಿಕೆ ಹಾಕುತ್ತಾನೆ, ಅಷ್ಟೇ ಅಲ್ಲದೆ ನಿಮ್ಮ ಪೊಲೀಸ್ ಅಧಿಕಾರಿಗಳನ್ನೇ ಸ್ಟಿಂಗ್ ಮಾಡಿ ಹಫ್ತಾ ವಸೂಲಿ ಮಾಡುತ್ತಾನೆ ಎಂದು ಆಪಾದಿಸಿದ್ದಾರೆ.

"ಇಂತಹ ಸಮಾಜಘಾತುಕನನ್ನು ಹಿಡಿದು ಸೆದೆಬಡಿಯುವುದು ಬಿಟ್ಟು ಮಾಧ್ಯಮಗಳ ಮುಂದೆ ಪುಂಗಿ ಊದುತ್ತಿದ್ದೀರಿ. ಆ ಸ್ಟಿಂಗ್ ಸಾಮ್ರಾಟನ ಸಿಂಡಿಕೇಟ್‌ನಲ್ಲಿ ಸ್ವತಃ ಗೃಹ ಸಚಿವರಾದ ನೀವೂ ಒಂದು ಭಾಗ ಎಂಬುದು ನನಗೆ ಸಂಪೂರ್ಣ ಗ್ಯಾರಂಟಿಯಾಗಿದೆ" ಎಂದು ಕುಮಾರಸ್ವಾಮಿ ತಮ್ಮ ಟ್ವೀಟ್ ಮೂಲಕ ಗುದ್ದು ನೀಡಿದ್ದಾರೆ.

PREV
Read more Articles on
click me!

Recommended Stories

ಉದ್ಘಾಟನೆಗೆ ಸಿದ್ಧವಾಗಿರುವ ನಮ್ಮ ಮೆಟ್ರೋ ಗುಲಾಬಿ ಮಾರ್ಗದಲ್ಲಿ ತಪಾಸಣೆ ವೇಳೆ 36 ಲೋಪಗಳು ಪತ್ತೆ!
'ರಿಂಗ್ ರೋಡ್ ಶುಭಾ ಕ್ಷಮಾದಾನ ಅರ್ಜಿ ಸಚಿವ ಸಂಪುಟದಿಂದ ರಿಜೆಕ್ಟ್: ಜೀವಾವಧಿ ಶಿಕ್ಷೆಯಿಂದ ಪಾರಾಗುವ ಯತ್ನಕ್ಕೆ ಭಾರಿ ಹಿನ್ನಡೆ