ಬೆಂಗಳೂರಿನಿಂದ ಸಂಚರಿಸಲಿದೆ ಮತ್ತೊಂದು ಹೊಸ ರೈಲು

By Kannadaprabha NewsFirst Published Nov 12, 2019, 8:31 AM IST
Highlights

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಬಂಗಾರಪೇಟೆಗೆ ಸೋಮವಾರದಿಂದ ಮೆಮು ವಿಶೇಷ ರೈಲು ಸೇವೆ ಆರಂಭಿಸಿದೆ.

ಬೆಂಗಳೂರು (ನ.12): ನೈಋತ್ಯ ರೈಲ್ವೆ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಬಂಗಾರಪೇಟೆಗೆ ಸೋಮವಾರದಿಂದ ಮೆಮು ವಿಶೇಷ ರೈಲು ಸೇವೆ ಆರಂಭಿಸಿದೆ.

ಈ ರೈಲು ಭಾನುವಾರ ಹೊರತು ಪಡಿಸಿ ವಾರದ 6 ದಿನ ಸಂಚರಿಸಲಿದೆ. ಪ್ರತಿ ದಿನ ಬೆಳಗ್ಗೆ 5ಕ್ಕೆ ಕೆಎಸ್‌ಆರ್ ರೈಲು ನಿಲ್ದಾಣದಿಂದ ಹೊರಟು (ರೈಲು ಸಂಖ್ಯೆ 065445 ) ಬೆಳಗ್ಗೆ 6.03ಕ್ಕೆ ಬಂಗಾರಪೇಟೆ ರೈಲು ನಿಲ್ದಾಣ ತಲುಪಲಿದೆ. ಬಂಗಾರಪೇಟೆಯಿಂದ ರಾತ್ರಿ 10.15ಕ್ಕೆ ಹೊರಟು (ರೈಲು ಸಂಖ್ಯೆ 06546) ರಾತ್ರಿ 11.45ಕ್ಕೆ ಕೆಎಸ್‌ಆರ್ ರೈಲು ನಿಲ್ದಾಣ ತಲುಪಲಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ರೈಲು 2 ಕಡೆಯಿಂದ ಬೆಂಗ್ಳೂರು ಕಂಟೋನ್ಮೆಂಟ್, ಬೈಯ ಪ್ಪನಹಳ್ಳಿ, ಕೃಷ್ಣರಾಜಪುರಂ, ಹೂಡಿ ಹಾಲ್ಟ್, ವೈಟ್‌ಫೀಲ್ಡ್, ದೇವನಗೊಂತಿ, ಮಾಲೂರು ಮತ್ತು ಟೀಕಾಲ್ ರೈಲು ನಿಲ್ದಾಣಗಳಲ್ಲಿ ನಿಂತು ಹೊರಡಲಿದೆ. ಮೆಮು ರೈಲು ಸಂಚಾರದಿಂದ ಬಂಗಾರಪೇಟೆ- ಕುಪ್ಪಂ ಮೆಮು ರೈಲು, ಬಂಗಾರ ಪೇಟೆ- ಕೆಎಸ್‌ಆರ್ ರೈಲು ಸಂಚಾರದ ಸಮಯ ಬದಲಾವಣೆ ಮಾಡಲಾಗಿದೆ.

click me!