‘ಯಡಿಯೂರಪ್ಪನವರೇ ನಿಮಗೆ ಅಧಿಕಾರದಲ್ಲಿ ಉಳಿಯಲು ಯಾವ ನೈತಿಕತೆಯೂ ಇಲ್ಲ’

Published : Nov 12, 2019, 08:27 AM ISTUpdated : Nov 12, 2019, 08:28 AM IST
‘ಯಡಿಯೂರಪ್ಪನವರೇ ನಿಮಗೆ ಅಧಿಕಾರದಲ್ಲಿ ಉಳಿಯಲು ಯಾವ ನೈತಿಕತೆಯೂ ಇಲ್ಲ’

ಸಾರಾಂಶ

ಪಕ್ಷಾಂತರಿಗಳನ್ನು ಮತದಾರರು ಸಹಿಸಲ್ಲ ಎಂದ ಮಾಜಿ ಸಿಎಂ ಸಿದ್ದರಾಮಯ್ಯ|ಯಡಿಯೂರಪ್ಪನವರೇ, ಶಾಸಕರನ್ನು ಖರೀದಿ ಮಾಡಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿರುವ ನಿಮಗೆ ಅಧಿಕಾರದಲ್ಲಿಉಳಿಯಲು ಯಾವ ನೈತಿಕತೆಯೂ ಇಲ್ಲ|ರಾಜ್ಯದ ಜನತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳಿಂದ ಆಕ್ರೋಶಗೊಂಡಿದ್ದಾರೆ|

ಬೆಂಗಳೂರು[ನ.12]: ರಾಜ್ಯದ ಜನತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳಿಂದ ಆಕ್ರೋಶಗೊಂಡಿದ್ದಾರೆ. ಪಕ್ಷಾಂತರಿಗಳನ್ನು ಮತದಾರರು ಸಹಿಸುವುದಿಲ್ಲ ಎಂಬುದು ಇತ್ತೀಚಿನ ಎಲ್ಲಾ ಚುನಾವಣೆಯಲ್ಲೂ ಸಾಬೀತಾಗಿದೆ. ಹೀಗಾಗಿ ಮುಂಬರುವ ಉಪ ಚುನಾವಣೆಯಲ್ಲಿಎಲ್ಲ 15 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳೇ ಗೆದ್ದರೂ ಅಚ್ಚರಿಯಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೇಂದ್ರದ ಆರ್ಥಿಕ ನೀತಿಗಳ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ,ಗುಜರಾತ್, ಹರ್ಯಾಣ ಸೇರಿದಂತೆ ಪ್ರತಿ ಚುನಾವಣೆಯಲ್ಲೂ ಪಕ್ಷಾಂತರಿಗಳಿಗೆ ಮತದಾರರು ಪಾಠ ಕಲಿಸಿದ್ದಾರೆ. ಇದೀಗ ಹಿಂಬಾಗಿಲಿನಿಂದ ಅಧಿಕಾರ ಹಿಡಿದಿರುವ ಅನೈತಿಕ ಸರ್ಕಾರದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜನರ ಹಿತ ಮರೆತು ಕೆಲಸ ಮಾಡುತ್ತಿದ್ದಾರೆ. ಕೇಂದ್ರದ ತಪ್ಪು ನಿರ್ಧಾರಗಳಿಂದ ದೇಶದಲ್ಲಿಆರ್ಥಿಕ ಕುಸಿತ ಉಂಟಾಗಿ ಜನ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ.ಇವೆಲ್ಲವನ್ನೂ ಮತದಾರರು ಉಪ ಚುನಾವಣೆಯಲ್ಲಿಗಂಭೀರವಾಗಿ ಪರಿಗಣಿಸಲಿದ್ದಾರೆ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಯಡಿಯೂರಪ್ಪ ಸರ್ಕಾರ ಬಂದ ಮೇಲೆ ನೆರೆಯಿಂದ ಕಷ್ಟಕ್ಕೆ ಸಿಕ್ಕಿಹಾಕಿಕೊಂಡ ರೈತರು, ಬಡವರು, ಕೂಲಿ ಕಾರ್ಮಿಕರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಹೀಗಿದ್ದರೂ ಯಡಿಯೂರಪ್ಪ ಛಲಗಾರ, ರೈತ ಹೋರಾಟಗಾರ ಎಂದೆಲ್ಲ ಜಾಹಿರಾತು ನೀಡುತ್ತಿದ್ದಾರೆ.  ಯಡಿಯೂರಪ್ಪನವರೇ, ಶಾಸಕರನ್ನು ಖರೀದಿ ಮಾಡಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿರುವ ನಿಮಗೆ ಅಧಿಕಾರದಲ್ಲಿಉಳಿಯಲು ಯಾವ ನೈತಿಕತೆಯೂ ಇಲ್ಲ. ನನ್ನ ಪ್ರಕಾರ ಕಾಂಗ್ರೆಸ್‌ 12 ಕ್ಷೇತ್ರದಲ್ಲೇ ಗೆದ್ದೇ ಗೆಲ್ಲುತ್ತದೆ. ಜನರ ಆಕ್ರೋಶ ನೋಡಿದರೆ 15 ಕ್ಷೇತ್ರಗಳಲ್ಲಿ ಗೆದ್ದರೂ ಅಚ್ಚರಿಯಿಲ್ಲ ಎಂದರು ಹೇಳಿದರು. 

PREV
click me!

Recommended Stories

ಸದ್ದಿಲ್ಲದೇ ಓಪನ್ ಆದ 'ಬಿಗ್ ಬಾಸ್' ನಡೆಯುವ ಜಾಲಿವುಡ್ ಸ್ಟುಡಿಯೋ! KSPCB ಅನುಮತಿ
Video: ಚಲಿಸುವ BMTC ಬಸ್ಸಲ್ಲಿ ಸ್ಟೇರಿಂಗ್ ಹಿಡಿದು ಡ್ರೈವರ್‌ಗಳ ಕಿತ್ತಾಟ; ಪ್ರಯಾಣಿಕರಿಗೆ ಪ್ರಾಣ ಸಂಕಟ!