ಪೀಕ್ ಅವರ್‌ನಲ್ಲಿ ಬೆಂಗಳೂರು ಟ್ರಾಫಿಕ್ ಜಾಮ್ ತಪ್ಪಿಸಲು ಪೊಲೀಸರ ಮಾಸ್ಟರ್‌ ಪ್ಲ್ಯಾನ್‌..!

By BK AshwinFirst Published Nov 24, 2022, 2:48 PM IST
Highlights

ಪೀಕ್‌ ಅವರ್‌ನಲ್ಲಿ ಭಾರಿ ವಾಹನಗಳಿಗೆ ನಗರ ಪ್ರವೇಶ ನಿಷೇಧವನ್ನು ನವೆಂಬರ್‌ 23, 2022 ರಿಂದಲೇ ಜಾರಿ ಮಾಡಲಾಗಿದೆ. ಈ ನಿಯಮ ಮೀರಿ ಎಂಟ್ರಿ ಆದ್ರೆ, ವಾಹನಗಳನ್ನು ತಡೆದು ಅವಧಿ ಮುಗಿಯುವವರೆಗೆ ರಸ್ತೆಯ ಬದಿಯಲ್ಲಿ ನಿಲ್ಲಿಸಲು ಸಂಚಾರ ಪೊಲೀಸರು ಪ್ಲ್ಯಾನ್‌ ಮಾಡಿದ್ದಾರೆ.  

ಬೆಂಗಳೂರಿನ (Bengaluru) ಟ್ರಾಫಿಕ್‌ ಜಾಮ್‌ (Traffic Jam) ಸಮಸ್ಯೆ ನಿಮಗೆಲ್ಲ ಗೊತ್ತಿರೋದೆ ಅಲ್ವ. ನೀವು ಬೆಂಗಳೂರಿನಲ್ಲಿ 1 - 2 ದಿನ ಭೇಟಿ ಕೊಟ್ಟಿದ್ರೂ ಇಲ್ಲಿನ ಟ್ರಾಫಿಕ್‌ ಜಾಮ್‌ ಹೇಗಿರುತ್ತೆ ಎನ್ನುವುದನ್ನು ನೀವು ಅನುಭವಿಸಿರುತ್ತೀರಾ ಹಾಗೂ ಕಿರಿಕಿರಿಯೂ ಹೆಚ್ಚಿರುತ್ತದೆ. ಕೋವಿಡ್ (COVID - 19) ಹೆಚ್ಚಿದ್ದ ಅವಧಿಯಲ್ಲಿ ಸ್ವಲ್ಪ ಟ್ರಾಫಿಕ್‌ ಸಮಸ್ಯೆ ಕಡಿಮೆಯಾಗಿತ್ತು. ಆದರೀಗ, ಸಂಚಾರ ದಟ್ಟಣೆ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಪ್ರಧಾನಿ ಮೋದಿ (PM Narendra Modi) ಸಹ ಬೆಂಗಳೂರಿನಲ್ಲಿ ಟ್ರಾಫಿಕ್‌ ಜಾಮ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದು ಸೂಚಿಸಿದ್ದರು. ಈಗ, ಎಚ್ಚೆತ್ತುಕೊಂಡಿರುವ ಪೊಲೀಸರು ಪೀಕ್ ಅವರ್‌ನಲ್ಲಿ ಟ್ರಾಫಿಕ್ ಜಾಮ್ ತಪ್ಪಿಸಲು ಮಾಸ್ಟರ್‌ ಪ್ಲ್ಯಾನ್‌ ಮಾಡಿದ್ದಾರೆ. 

ಬೆಂಗಳೂರಿನ ಹೆಬ್ಬಾಳ ಮೇಲ್ಸೇತುವೆ (Hebbal Flyover) ಮೇಲೆ ಸರಕು, ಸಾಗಾಣಿಕೆ ವಾಹನಗಳ ನಿಷೇಧ ಯಶಸ್ವಿ ಹಿನ್ನೆಲೆ ರಾಜ್ಯ ರಾಜಧಾನಿಯ ಇನ್ನಷ್ಟು ಕಡೆ ಪೀಕ್ ಅವರ್‌ನಲ್ಲಿ ಭಾರಿ ವಾಹನಗಳ ನಿಷೇಧ ಮಾಡಲಾಗಿದೆ. ಹೌದು, ನಗರದಲ್ಲಿ ಬೆಳಗ್ಗೆ ಹಾಗೂ ಸಂಜೆ ಪೀಕ್ ಅವರ್‌ನಲ್ಲಿ ಭಾರಿ ವಾಹನಗಳ ನಿಷೇಧವನ್ನ ಪರಿಣಾಮಕಾರಿಯಾಗಿ ಜಾರಿಗೆ ತರಲು ಸಂಚಾರ ವಿಭಾಗದ ಪೊಲೀಸರು ಮುಂದಾಗಿದ್ದಾರೆ. 

ಇದನ್ನು ಓದಿ: ಸರಕು ಸಾಗಣೆ ವಾಹನ ನಿಷೇಧ: ತಗ್ಗಿತು ಹೆಬ್ಬಾಳ ಫ್ಲೈಓವರ್‌ ಜಾಂ

ಪೀಕ್‌ ಅವರ್‌ನಲ್ಲಿ ಅಂದರೆ ಹೆಚ್ಚಿನ ಪ್ರಮಾಣದ ಸಂಚಾರ ದಟ್ಟಣೆ ಹೊಂದಿರುವ ಕಡೆ ಭಾರಿ ವಾಹನಗಳಿಗೆ ನಗರ ಪ್ರವೇಶ ನಿಷೇಧವನ್ನು ನಿನ್ನೆಯಿಂದಲೇ ಅಂದರೆ ನವೆಂಬರ್‌ 23, 2022 ರಿಂದಲೇ ಜಾರಿ ಮಾಡಲಾಗಿದೆ. ಈ ನಿಯಮ ಮೀರಿ ಎಂಟ್ರಿ ಆದ್ರೆ, ವಾಹನಗಳನ್ನು ತಡೆದು ಅವಧಿ ಮುಗಿಯುವವರೆಗೆ ರಸ್ತೆಯ ಬದಿಯಲ್ಲಿ ನಿಲ್ಲಿಸಲು ಸಂಚಾರ ಪೊಲೀಸರು ಪ್ಲ್ಯಾನ್‌ ಮಾಡಿದ್ದಾರೆ.  

ಹಲವು ವರ್ಷಗಳಿಂದ ಪೀಕ್‌ ಅವರ್‌ನಲ್ಲಿ ಭಾರಿ ವಾಹನಗಳ ನಿಷೇಧ ಮಾಡಲಾಗಿದೆ. ಆದರೂ, ನಿಯಮ ಉಲ್ಲಂಘನೆ ಮಾಡಿ ನಗರಕ್ಕೆ ಭಾರಿ ವಾಹನಗಳು ಎಂಟ್ರಿ ಕೊಡುತ್ತಿದ್ದು, ಇದರಿಂದ ಬೆಂಗಳೂರು ಸಿಟಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.  ಹೀಗಾಗಿ, ನಗರಕ್ಕೆ ಎಂಟ್ರಿ ಕೊಡುವ ಗಡಿ ಭಾಗಗಳಲ್ಲಿ ಸಂಚಾರ ವಿಭಾಗದ ಪೊಲೀಸರು ಹೆಚ್ಚು ಎಚ್ಚರಿಕೆ ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: Bengaluru: ಹೆಬ್ಬಾಳ ಮೇಲ್ಸೇತುವೆ ಮೇಲೆ ಬೆಳಗ್ಗೆ ಸರಕು ಸಾಗಿಸುವ ವಾಹನಗಳ ನಿಷೇಧ

ಇನ್ಮುಂದೆ ಹೊಸೂರು, ಕನಕಪುರ, ಮಾಗಡಿ, ತುಮಕೂರು, ಹೊಸಕೋಟೆ, ಕೆ.ಆರ್ ಪುರ, ಬನ್ನೇರುಘಟ್ಟ, ಮೈಸೂರುರಸ್ತೆ ಸೇರಿದಂತೆ ಹಲವು ಕಡೆ ಭಾರಿ ವಾಹನಗಳನ್ನು ನಿರ್ಬಂಧಿಸಲಾಗಿದೆ. ನಿಯಮ ಉಲ್ಲಂಘನೆ ಮಾಡಿದ ಭಾರಿ ವಾಹನಗಳನ್ನು ನೈಸ್‌ ರಸ್ತೆ ಜಂಕ್ಷನ್ ಹಾಗೂ ಸುಂಕದಕಟ್ಟೆಯಲ್ಲಿ ನಿಲುಗಡೆ ಮಾಡಲಾಗುತ್ತೆ ಎಂದೂ ಬೆಂಗಳೂರು ಸಂಚಾರ ವಿಭಾಗದ ಪೊಲೀಸರು ಮಾಹಿತಿ ನೀಡಿದ್ದಾರೆ. 

ಹೆಬ್ಬಾಳ ಮೇಲ್ಸೇತುವೆಯಲ್ಲಿ ಬೆಳಗ್ಗೆ ಪೀಕ್‌ ಅವರ್‌ನಲ್ಲಿ ಸರಕು ಸಾಗಾಣಿಕೆ ವಾಹನಗಳ ಸಂಚಾರ ನಿರ್ಬಂಧಿಸಿದ ಬಳಿಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ವಾಹನ ದಟ್ಟಣೆ ತುಸು ಇಳಿಕೆಯಾಗಿರುವ ಮಾಹಿತಿ ತಿಳಿದುಬಂದಿದೆ. ಹೆಬ್ಬಾಳ ಮೇಲ್ಸೇತುವೆಯಲ್ಲಿ ಬೆಳಗ್ಗೆ 8.30 ರಿಂದ 10.30 ವರೆಗೆ ಸರಕು ಸಾಗಾಣಿಕೆ ವಾಹನಗಳ ಸಂಚಾರ ನಿಷೇಧಿಸಿದ ಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಈಗ ಆ ರಸ್ತೆಯಲ್ಲಿ ಸಂಚಾರ ದಟ್ಟಣೆ ಇಳಿಕೆ ಮುಖವಾಗಿ ವಾಹನಗಳ ಸುಗಮ ಓಡಾಟಕ್ಕೆ ಅವಕಾಶವಾಗಿದೆ ಎಂದು ವಿಶೇಷ ಪೊಲೀಸ್‌ ಆಯುಕ್ತ (ಸಂಚಾರ) ಡಾ.ಎಂ.ಎ.ಸಲೀಂ ಇತ್ತೀಚೆಗೆ ಟ್ವೀಟ್‌ ಮಾಡಿದ್ದರು.

ಇದನ್ನೂ ಓದಿ: ಹೆಬ್ಬಾಳ ಜಂಕ್ಷನ್‌ ಸಮೀಪ ಪಾದಚಾರಿ ಸುರಂಗ ಮಾರ್ಗ ನಿರ್ಮಾಣಕ್ಕೆ ಸೂಚನೆ

ಟ್ರಾಫಿಕ್‌ ಸಮಸ್ಯೆ ಹಿನ್ನಲೆಯಲ್ಲಿ ಬೆಂಗಳೂರಿನ  ಹೆಬ್ಬಾಳ ಮೇಲ್ಸೇತುವೆಯಲ್ಲಿ ಒಂದು ತಿಂಗಳ ಕಾಲ ಪ್ರಾಯೋಗಿಕವಾಗಿ ಬೆಳಗ್ಗೆ ಎರಡು ಗಂಟೆಗಳ ಕಾಲ ಸರಕು ಸಾಗಾಣೆ ವಾಹನಗಳ ಸಂಚಾರವನ್ನು ನವೆಂಬರ್‌ 18 ರಿಂದ ವಿಶೇಷ ಆಯುಕ್ತರು ನಿರ್ಬಂಧಿಸಿ ಆದೇಶ ಹೊರಡಿಸಿದ್ದರು. ಈ ನಿಯಮ ಜಾರಿಗೆ ಬಂದ 5 - 6 ದಿನಗಳ ಬಳಿಕ ಸಕಾರಾತಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಒಟ್ಟಾರೆ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್‌ ಕಡಿಮೆ ಮಾಡಲು ಈಗಲಾದರೂ ನಗರದ ಸಂಚಾರಿ ಪೊಲೀಸಸರು ಮುಂದಾಘಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದರಿಂದ ವಾಹನ ಸವಾರರಿಗೆ ಟ್ರಾಫಿಕ್‌ ಸಮಸ್ಯೆ ನಿವಾರಣೆಯಾದರೆ ನಿಜಕ್ಕೂ ನಗರ ಪೊಲೀಸರ ಕ್ರಮ ಶ್ಲಾಘನೀಯವಾಗುತ್ತದೆ. 

click me!