ಬಿಬಿಎಂಪಿ ವತಿಯಿಂದ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಮುಂದಿನ ಗುಬ್ಬಿ ತೋಟದಪ್ಪ ರಸ್ತೆಯಲ್ಲಿ ವಾಹನ ಸಂಚಾರವನ್ನು ಒಂದು ತಿಂಗಳ ಕಾಲ ಬಂದ್ ಮಾಡಲಾಗುತ್ತಿದೆ.
ಬೆಂಗಳೂರು (ನ.18): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಯೋಜನೆ ಕೇಂದ್ರ-1 ವಿಭಾಗದ ವತಿಯಿಂದ ನಗರದ ಗುಬ್ಬಿ ತೋಟದಪ್ಪ ರಸ್ತೆಯನ್ನು ಶಾಂತಲಾ ಸರ್ಕಲ್ ನಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ (ರೈಲ್ವೆ ನಿಲ್ದಾಣದ ಕಡೆ) ನ.19 ರಿಂದ ಡಿ.18 ರವರೆಗೆ ಸುಮಾರು 580 ಮೀಟರ್ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗುತ್ತಿದೆ.
ಗುಬ್ಬಿ ತೋಟದಪ್ಪ (Gubbi totadappa) ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವ ಕಾರಣ ನ.19 ರಿಂದ ರಿಂದ ಡಿ.18 ರವರೆಗೆ ಶಾಂತಲಾ ಸರ್ಕಲ್ (Shantala circle) ನಿಂದ ಸಂಗೊಳ್ಳಿ ರಾಯಣ್ಣ ವೃತ್ತ (Sangolli Rayanna Circle)ದವರೆಗೆ (ರೈಲ್ವೆ ನಿಲ್ದಾಣದ ಕಡೆ) ಸಂಚಾರವನ್ನು ನಿರ್ಬಂಧಿ (Restriction)ಸಲಾಗುವುದು. ಈ ಅವಧಿಯಲ್ಲಿ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಆಗುವ ಅನಾನುಕೂಲವನ್ನು ತಪ್ಪಿಸಲು ಪರ್ಯಾಯ (Alternative) ರಸ್ತೆಗಳಲ್ಲಿ ಸಂಚರಿಸಬಹುದಾಗಿರುತ್ತದೆ. ಈ ಸಂಬಂಧ ಸಾರ್ವಜನಿಕರು ಹಾಗೂ ವಾಹನ ಸವಾರರು ಸಹಕರಿಸಬೇಕೆಂದು ಕಾರ್ಯಪಾಲಕ ಇಂಜಿನಿಯರ್ ಕೋರಿರುತ್ತಾರೆ.
ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಶಾಂತಲಾ ವೃತ್ತದಿಂದ ಟ್ಯಾಂಕ್ ಬಂಡ್ (Tankbund Road) ರಸ್ತೆ ಮೂಲಕ ಉಪ್ಪಾರಪೇಟೆ ಪೊಲೀಸ್ ಠಾಣೆ ಪಕ್ಕದ ರಸ್ತೆಯಿಂದ ಧನ್ವಂತರಿ ರಸ್ತೆಗೆ (Dhanvantari Road) ಸೇರಬೇಕು. ಈ ಧನ್ವಂತರಿ ರಸ್ತೆ ಮೂಲಕವಾಗಿ ಮೆಜೆಸ್ಟಿಕ್ ಬಸ್ ನಿಲ್ದಾಣ, ರೈಲು ನಿಲ್ದಾಣಕ್ಕೆ ಹೋಗಬಹುದು. ಇನ್ನು ಈಗ ಸಂಚಾರ ಬಂದ್ ಮಾಡಿರುವ ರಸ್ತೆಯು ಏಕಮುಖ (One Way) ಸಂಚಾರ ಆಗಿದ್ದರಿಂದ ಬೇರೆ ಮಾರ್ಗಗಳಲ್ಲಿ ಸುಲಭವಾಗಿ ಸಂಚಾರ ಮಾಡಬಹುದು. ಆದರೆ, ಮೈಸೂರು ರಸ್ತೆಯಿಂದ ನಗರದ ವಿಧಾನಸೌಧ, ಮಲ್ಲೇಶ್ವರ, ಶೇಷಾದ್ರಿಪುರ, ಸ್ವಾತಂತ್ರ ಉದ್ಯಾನವನ, ಹೆಬ್ಬಾಳ ಸೇರಿ ವಿವಿಧ ಮಾರ್ಗಗಳಿಗೆ ಹೋಗುವವರಿಗೆ ಅನಾನುಕೂಲ ಉಂಟಾಗಲಿದೆ. ಧನ್ವಂತರಿ ರಸ್ತೆಯಲ್ಲಿ ಹೆಚ್ಚಿನ ಟ್ರಾಫಿಕ್‌ಜಾಮ್ (Trafsic jam) ಉಂಟಾಲಿದೆ.