ಗೆಳತಿಯ ಬಾತ್‌ರೂಮ್‌ನಲ್ಲೇ ಹಿಡನ್ ಕ್ಯಾಮರಾ ಇಟ್ಟ ಮೇಕಪ್ ಮ್ಯಾನ್..!

By Kannadaprabha News  |  First Published Nov 11, 2019, 8:06 AM IST

ಗೆಳತಿಯ ನಿವಾಸದ ಸ್ನಾನಗೃಹದಲ್ಲೇ ರಹಸ್ಯ ಕ್ಯಾಮರಾ ಇಟ್ಟು ಆಶ್ಲೀಲ ವಿಡಿಯೋ ಚಿ ತ್ರೀಕರಿಸಿ ಸ್ನೇಹಿತೆಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಚಲನಚಿತ್ರದ ಮೇಕಪ್‌ಮ್ಯಾನ್‌ವೊಬ್ಬ ಬಾಗಲಗುಂಟೆ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.


ಬೆಂಗಳೂರು(ನ.11): ಗೆಳತಿಯ ನಿವಾಸದ ಸ್ನಾನಗೃಹದಲ್ಲೇ ರಹಸ್ಯ ಕ್ಯಾಮರಾ ಇಟ್ಟು ಆಶ್ಲೀಲ ವಿಡಿಯೋ ಚಿ ತ್ರೀಕರಿಸಿ ಸ್ನೇಹಿತೆಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಚಲನಚಿತ್ರದ ಮೇಕಪ್‌ಮ್ಯಾನ್‌ವೊಬ್ಬ ಬಾಗಲಗುಂಟೆ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಬೀದರ್ ಜಿಲ್ಲೆಯ ಸೂರಜ್‌ಗೌಡ ಅಲಿಯಾಸ್ ಶಿವು ಪಾಟೀ ಲ್ ಬಂಧಿತ. ಹೆರೋಹಳ್ಳಿಯಲ್ಲಿ ನೆಲೆಸಿದ್ದ. ಎರಡು ವರ್ಷಗಳ ಹಿಂದೆ ‘ಕವಚ’ ಚಿತ್ರೀಕರಣದ ವೇಳೆ ಸಂತ್ರಸ್ತೆಯ ಪರಿಚಯವಾಗಿತ್ತು. ಪೀಣ್ಯ ಸಮೀಪ ನಡೆದಿದ್ದ ಚಿತ್ರೀಕರಣವನ್ನು ನೋಡಲು ಹೋಗಿದ್ದ ಸಂತ್ರಸ್ತೆ, ನಟ ಶಿವರಾಜ್ ಕುಮಾರ್ ಜೊತೆ ಫೋಟೋ ತೆಗೆಸಿಕೊಳ್ಳಲು ಆರೋಪಿಗೆ ಮೊಬೈಲ್ ಕೊಟ್ಟಿದ್ದರು.

Tap to resize

Latest Videos

undefined

ಜಲ ಮಂಡಳಿಗೆ 25 ಸಾವಿರ ದಂಡ ವಿಧಿಸಿದ BBMP

ಆಗ ಆಕೆಯ ಮೊಬೈಲ್ ನಂಬರ್ ಪಡೆದ ಆರೋಪಿ, ನಂತರ ಕರೆ ಮತ್ತು ಮೆಸೇಜ್ ಮಾಡುತ್ತ ತನ್ನ ಸ್ನೇಹದ ಬಲೆಗೆ ಬೀಳಿಸಿಕೊಂಡಿದ್ದ. ಸ್ನಾನದ ಗೃಹದಲ್ಲಿ ಕ್ಯಾಮರಾ ಇಟ್ಟಿದ್ದ. ಆ ಕ್ಯಾಮೆ ರಾ ತೆಗೆದುಕೊಂಡು ಬಂದ ಶಿವು, ಕೆಲ ದಿನಗಳ ಬಳಿಕ ಆಶ್ಲೀಲ ವಿಡಿಯೋ ತೋರಿಸಿ ಸಂತ್ರಸ್ತೆಗೆ ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಸುಪ್ರೀಂ ತೀರ್ಪಿನ ಬಳಿಕ ಹೇಗಿದೆ ಅಯೋಧ್ಯೆ ಜನಜೀವನ

click me!