ಜಲ ಮಂಡಳಿಗೆ 25 ಸಾವಿರ ದಂಡ ವಿಧಿಸಿದ BBMP

By Kannadaprabha NewsFirst Published Nov 11, 2019, 7:53 AM IST
Highlights

ಬಿಬಿಎಂಪಿಯ ಪೂರ್ವಾನುಮತಿ ಪಡೆಯ ದೆ ರಸ್ತೆ ಅಗೆದ ‘ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ’ಗೆ (ಬಿಡಬ್ಲ್ಯೂಎಸ್‌ಎಸ್‌ಬಿ) ₹25 ಸಾವಿರ ದಂಡ ವಿಧಿಸಿ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿ ಲ್ ಕುಮಾರ್ ಆದೇಶಿಸಿದ್ದಾರೆ.

ಬೆಂಗಳೂರು(ನ.11): ಬಿಬಿಎಂಪಿಯ ಪೂರ್ವಾನುಮತಿ ಪಡೆಯ ದೆ ರಸ್ತೆ ಅಗೆದ ‘ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ’ಗೆ (ಬಿಡಬ್ಲ್ಯೂಎಸ್‌ಎಸ್‌ಬಿ) ₹25 ಸಾವಿರ ದಂಡ ವಿಧಿಸಿ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿ ಲ್ ಕುಮಾರ್ ಆದೇಶಿಸಿದ್ದಾರೆ.

ಭಾನುವಾರ ಬೆಳಗ್ಗೆ ಇನ್ ಫ್ಯಾಂಟರಿ ರಸ್ತೆಯಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಕಟ್ಟಡದ ಮುಂಭಾಗದ ಮ್ಯಾನ್ ಹೋಲ್ ರಿಪೇರಿಗೆ ಜಲಮಂಡಳಿ ಜೆಸಿಬಿ ಯಂತ್ರದಿಂದ ರಸ್ತೆಯ ಅಗೆಯುವುದನ್ನು ಆಯು ಕ್ತ ಬಿ.ಎಚ್.ಅನಿಲ್‌ಕುಮಾರ್ ಖುದ್ದು ನೋಡಿದ್ದರು. ಈ ವೇಳೆ ಜಲಮಂಡಳಿ ಅಧಿಕಾರಿಗಳು ಪಾಲಿಕೆಯಿಂದ ಅನು ಮತಿ ಪಡೆಯದಿರುವುದು ಪತ್ತೆಯಾಯಿತು. ಈ ಹಿನ್ನೆಲೆ ಯಲ್ಲಿ ಜೆಸಿಬಿ ಯಂತ್ರವನ್ನು ವಶಕ್ಕೆ ಪಡೆದು ಮಂಡಳಿಗೆ ₹25ಸಾವಿರ ದಂಡ ವಿಧಿಸಿದ್ದಾರೆ.

ಅನರ್ಹರ ಕ್ಷೇತ್ರಗಳಿಗೆ ಉಪ ಕದನ ಶುರು

ಬಳಿಕ ಮಂಡಳಿ ಅಧಿಕಾ ರಿಗಳು ಜೆಸಿಬಿ ಯಂತ್ರವನ್ನು ಬಿಡುಗಡೆಗೊಳಿಸುವಂತೆ ಹಲವು ಬಾರಿ ದೂರವಾಣಿ ಮೂಲಕ ಆಯುಕ್ತರಿಗೆ ಮನವಿ ಮಾಡಿದ್ದಾರೆ. ಆದರೆ, ಆಯುಕ್ತರು ರಸ್ತೆ ದುರಸ್ತಿಗೆ ದಂಡ ಪಾವತಿಸಿದ ನಂತರ ಜೆಸಿಬಿ ಯಂತ್ರ ಬಿಡುಗಡೆ ಗೊಳಿಸುವು ದಾಗಿ ಸೂಚಿಸಿದ್ದಾರೆ.

ಚುನಾವಣಾ ಆಯೋಗಕ್ಕೆ ಖಡಕ್ ಖದರು ತಂದಿದ್ದ ಟಿ.ಎನ್.ಶೇಷನ್ ನಿಧನ

ನಗರದಲ್ಲಿ ಪೂರ್ವಾನುಮತಿ ಪಡೆ ದೇ ರಸ್ತೆ ಅಗೆದ ಯಾವುದೇ ಸಂಸ್ಥೆಯಾದರೂ ನಿರ್ದಾಕ್ಷಿಣ್ಯ ವಾಗಿ ದಂಡ ವಿಧಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದು, ಈ ಕುರಿತು ಬಿಡಬ್ಲ್ಯೂಎಸ್‌ಎಸ್‌ಬಿ, ಬೆಸ್ಕಾಂ, ಕೆಪಿಟಿ ಸಿಎಲ್, ಬಿಎಸ್‌ಎನ್‌ಎಲ್ ಸೇರಿದಂತೆ ವಿವಿಧ ಟೆಲಿಕಾಂ ಸೇವಾ ಸಂಸ್ಥೆಗೆ ಪತ್ರ ಬರೆಯುವುದಾಗಿ ಆಯುಕ್ತ ಬಿ. ಎಚ್.ಅನಿಲ್‌ಕುಮಾರ್ ಮಾಹಿತಿ ನೀಡಿದ್ದಾರೆ.

ಸುಪ್ರೀಂ ತೀರ್ಪಿನ ಬಳಿಕ ಹೇಗಿದೆ ಅಯೋಧ್ಯೆ ಜನಜೀವನ

click me!